ಸಾರಿಗೆ ಮುಷ್ಕರ; ಜನರ ತೊಂದರೆ ನಿವಾರಿಸಲು ಮೂರು ಕ್ರಮ

ಬೆಂಗಳೂರು, ಏಪ್ರಿಲ್ 9; ಸಾರಿಗೆ ನೌಕರರ ಮುಷ್ಕರ 3ನೇ ದಿನಕ್ಕೆ ಕಾಲಿಟ್ಟಿದೆ. ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಮತ್ತು ಸಾರಿಗೆ ಸಚಿವ ಲಕ್ಷ್ಮಣ ಸವದಿ ನೌಕರರು ಮುಷ್ಕರವನ್ನು ನಿಲ್ಲಿಸಿ ಕೆಲಸಕ್ಕೆ ಹಾಜರಾಗಬೇಕು ಎಂದು ಕರೆ ನೀಡಿದ್ದಾರೆ.

ಸಾರಿಗೆ ನೌಕರರ 9 ಬೇಡಿಕೆಗಳಲ್ಲಿ ಈಗಾಗಲೇ 8 ಬೇಡಿಕೆಗಳನ್ನು ಈಡೇರಿಸಲಾಗಿದೆ. 6ನೇ ವೇತನ ಆಯೋಗದ ಶಿಫಾರಸು ಪರಿಗಣಿಸುವಂತೆ ಕೋರಿರುವುದು 9ನೇ ಬೇಡಿಕೆಯಾಗಿದೆ. ಈ ಬಗ್ಗೆ ಸರ್ಕಾರ ಆರ್ಥಿಕ ಅಂಶವನ್ನು ಪರಿಗಣಿಸಿ ತೀರ್ಮಾನ ಕೈಗೊಳ್ಳಲಿದೆ.

ಸಾರಿಗೆ ನೌಕರರ ಮುಷ್ಕರದಿಂದಾಗಿ ಜನರಿಗೆ ತೊಂದರೆ ಆಗಬಾರದೆಂದು ಕೆಳಕಂಡ ಕ್ರಮಗಳನ್ನು ಕೈಗೊಳ್ಳಲಾಗಿದೆ. ನೆರೆ ರಾಜ್ಯಗಳಿಗೆ ಸಹ ಹೆಚ್ಚುವರಿ ಬಸ್‌ಗಳನ್ನು ಓಡಿಸಲಾಗುತ್ತಿದ್ದು, ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗಿದೆ. ಖಾಸಗಿ ಬಸ್‌ಗಳ ಸಂಚಾರಕ್ಕೆ ಸರ್ಕಾರವೇ ದರವನ್ನು ನಿಗದಿ ಮಾಡಿದೆ.

ಸಾರಿಗೆ ನೌಕರರ ಅನಿರ್ಧಿಷ್ಟಾವಧಿ ಮುಷ್ಕರದ ಹಿನ್ನಲೆಯಲ್ಲಿ ಜನರಿಗೆ ತೊಂದರೆಯಾಗುವುದನ್ನು ತಪ್ಪಿಸಲು ಸರ್ಕಾರ ರೈಲ್ವೆ ಇಲಾಖೆಗೆ ಮನವಿ ಮಾಡಿತ್ತು. ವಿಶೇಷ ರೈಲುಗಳನ್ನು ಓಡಿಸುವಂತೆ ಪತ್ರದಲ್ಲಿ ಮನವಿ ಮಾಡಲಾಗಿತ್ತು. ಏಪ್ರಿಲ್ 9 ಮತ್ತು 10ರಂದು ವಿಶೇಷ ರೈಲುಗಳು ಸಂಚಾರವನ್ನು ನಡೆಸುತ್ತಿವೆ.

ಹೊರ ರಾಜ್ಯಗಳಿಗೂ ಹೆಚ್ಚುವರಿ ಬಸ್

ಹೊರ ರಾಜ್ಯಗಳಿಗೂ ಹೆಚ್ಚುವರಿ ಬಸ್

ನೆರೆ ರಾಜ್ಯಗಳಾದ ತೆಲಂಗಾಣ, ಆಂಧ್ರ ಪ್ರದೇಶ ಮತ್ತು ತಮಿಳುನಾಡು ರಾಜ್ಯ ಸರ್ಕಾರಗಳಿಗೆ 7/4/2021ರಂದು ಪತ್ರ ಬರೆದು ಹೆಚ್ಚುವರಿ ಬಸ್‌ಗಳನ್ನು ಕರ್ನಾಟಕಕ್ಕೆ ಓಡಿಸುವಂತೆ ಕೋರಲಾಗಿದೆ. ಇದಕ್ಕೆ ರಾಜ್ಯ ಸರ್ಕಾರಗಳು ಸಕಾರಾತ್ಮಕವಾಗಿ ಸ್ಪಂದಿಸಿವೆ.

ನೆರೆ ರಾಜ್ಯದ ಖಾಸಗಿ ಪ್ರವರ್ತಕರು ಕರ್ನಾಟಕದ ಗಡಿ ಜಿಲ್ಲೆಗಳಲ್ಲಿ ಆಚರಣೆ ಮಾಡಲು ಸಿದ್ಧವಿದ್ದಲ್ಲಿ ಅಂತಹ ಖಾಸಗಿ ವಾಹನಗಳ ಸೇವೆಯನ್ನು ಪಡೆಯುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಹೆಚ್ಚುವರಿ ರೈಲುಗಳ ಸಂಚಾರ

ಹೆಚ್ಚುವರಿ ರೈಲುಗಳ ಸಂಚಾರ

ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ನೈಋತ್ಯ ರೈಲ್ವೆಯ ಜನರಲ್ ಮ್ಯಾನೇಜರ್‌ಗೆ ಪತ್ರವನ್ನು ಬರೆದು ವಿಶೇಷ ಹೆಚ್ಚುವರಿ ರೈಲುಗಳನ್ನು ಏ.9 ಮತ್ತು 10ರಂದು ಬೆಂಗಳೂರಿನಿಂದ ಬೆಳಗಾವಿ, ಕಲಬುರಗಿ, ಬೀದರ್, ಕಾರವಾರ, ವಿಜಯಪುರ, ಶಿವಮೊಗ್ಗ ಹಾಗೂ ಮೈಸೂರಿಗೆ ಓಡಿಸುವಂತೆ ಕೋರಿದ್ದಾರೆ. ಈಗಾಗಲೇ ಹೆಚ್ಚುವರಿ ರೈಲು ವ್ಯವಸ್ಥೆ ಮಾಡಲಾಗಿದೆ.

18 ವಿಶೇಷ ರೈಲುಗಳ ಸಂಚಾರ

18 ವಿಶೇಷ ರೈಲುಗಳ ಸಂಚಾರ

ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಕೋರಿಕೆಯಂತೆ ರೈಲ್ವೆ ಮಂಡಳಿಯು ಏಪ್ರಿಲ್ 8 ರಿಂದ 14ರ ತನಕ ಒಟ್ಟು 18 ಹೆಚ್ಚುವರಿ ರೈಲುಗಳನ್ನು ರಾಜ್ಯದ ವಿವಿಧ ಮಾರ್ಗಗಳಲ್ಲಿ ಓಡಿಸಲು ಅನುಮೋದನೆ ನೀಡಿದೆ.

Recommended Video

    #Covid19Update : ದೇಶದಲ್ಲಿ 24 ಗಂಟೆಗಳಲ್ಲಿ 1,31,968 ಜನರಿಗೆ ಕೊರೊನಾ ಪಾಸಿಟಿವ್ | Oneindia Kannada
    ಹೆಚ್ಚುವರಿ ಮೆಟ್ರೋ ರೈಲುಗಳ ಸಂಚಾರ

    ಹೆಚ್ಚುವರಿ ಮೆಟ್ರೋ ರೈಲುಗಳ ಸಂಚಾರ

    ಬೆಂಗಳೂರು ನಗರದಲ್ಲಿ ಹೆಚ್ಚುವರಿ ಮೆಟ್ರೋ ರೈಲುಗಳ ಕಾರ್ಯಾಚರಣೆ ಮಾಡಲಾಗುತ್ತಿದೆ. ಪೀಕ್ ಅವರ್‌ನಲ್ಲಿ ಪ್ರತಿ 10 ನಿಮಿಷದ ಬದಲಾಗಿ 4.50 ನಿಮಿಷಕ್ಕೊಂದು ಹಾಗೂ ನಾನ್ ಪೀಕ್ ಅವರ್‌ನಲ್ಲಿ 7 ನಿಮಿಷಕ್ಕೆ ಒಂದು ರೈಲುಗಳು ಸಂಚಾರ ನಡೆಸಲಿವೆ.

    Notifications
    Settings
    Clear Notifications
    Notifications
    Use the toggle to switch on notifications
    • Block for 8 hours
    • Block for 12 hours
    • Block for 24 hours
    • Don't block
    Gender
    Select your Gender
    • Male
    • Female
    • Others
    Age
    Select your Age Range
    • Under 18
    • 18 to 25
    • 26 to 35
    • 36 to 45
    • 45 to 55
    • 55+