ವಿದ್ಯಾರ್ಥಿಗಳನ್ನು ಕರೆತರಲು ರಷ್ಯಾದೊಂದಿಗಿನ ಸ್ನೇಹ ಬಳಸಿಕೊಳ್ಳಿ, ಮೋದಿಗೆ ಸಲಹೆ
ಬೆಂಗಳೂರು, ಮಾರ್ಚ್ 02:ಉಕ್ರೇನ್‌ನಲ್ಲಿ ನಡೆಯುತ್ತಿರುವ ದಾಳಿಯಲ್ಲಿ ಕರ್ನಾಟಕದ ವಿದ್ಯಾರ್ಥಿಯೊಬ್ಬ ಪ್ರಾಣ ಕಳೆದುಕೊಂಡಿದ್ದು, ಇದೀಗ ಎಲ್ಲಾ ಪೋಷಕರಲ್ಲಿ ಆತಂಕ ಮನೆ ಮಾಡಿದೆ.
ಹೀಗಾಗಿ ಅಲ್ಲಿರುವ ವಿದ್ಯಾರ್ಥಿಗಳನ್ನು ಭಾರತಕ್ಕೆ ಕರೆ ತರಲು ಮೋದಿ ರಷ್ಯಾ ಜತೆಗಿನ ಸ್ನೇಹವನ್ನು ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.
ರಾಣೆಬೆನ್ನೂರಿನ ಚಳಗೇರಿ ಗ್ರಾಮದ ಒಟ್ಟು ಮೂವರು ವಿದ್ಯಾರ್ಥಿಗಳು ಖಾರ್ಕಿವ್ ನಗರದಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದು, ಯುದ್ಧ ಪೀಡಿತ ಉಕ್ರೇನ್ ನಲ್ಲಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮೂವರ ಪೈಕಿ ಓರ್ವ ವಿದ್ಯಾರ್ಥಿ ನವೀನ್ ಜ್ಞಾನಗೌಡರ್ (21) ಅವರು ರಷ್ಯಾ ನಡೆಸಿದ ಶೆಲ್ ದಾಳಿಯಲ್ಲಿ ಮೃತಪಟ್ಟಿದ್ದಾರೆ.

ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಹಾವೇರಿ ಸಂಸದ ಶಿವಕುಮಾರ ಉದಾಸಿ ಹಾಗೂ ಇತರ ಮುಖಂಡರನ್ನು ಭೇಟಿ ಮಾಡಿ, ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲು ಕೂಡಲೇ ಕ್ರಮಕೈಗೊಳ್ಳುವಂತೆ ಮನವಿ ಪತ್ರ ಸಲ್ಲಿಸಿದ್ದೇನೆ. ಆದರೆ, ಇದರಿಂದ ಯಾವುದೇ ಪ್ರಯೋಜನೆಗಳಾಗಿಲ್ಲ. ಈಗಾಗಲೇ ಓರ್ವ ವಿದ್ಯಾರ್ಥಿ ಸಾವನ್ನಪ್ಪಿದ್ದಾರೆಂದು ತಿಳಿಸಿದ್ದಾರೆ.
ಇದೀಗ ಇತರೆ ಇಬ್ಬರು ವಿದ್ಯಾರ್ಥಿಗಳಾದ ಸುಮನ್ ಶ್ರೀಧರ್ ವೈಶ್ಯರ್ ಮತ್ತು ಅಮಿತ್ ವೆಂಕಟೇಶ್ ವೈಶ್ಯರ್ ಸಂಕಷ್ಟದಲ್ಲಿರುವ ಹಿನ್ನೆಲೆಯಲ್ಲಿ ಇವರ ಪೋಷಕರು ರಷ್ಯಾದೊಂದಿಗಿನ ಸ್ನೇಹವನ್ನು ಬಳಸಿಕೊಂಡು ಪ್ರಧಾನಿ ಮೋದಿ ವಿದ್ಯಾರ್ಥಿಗಳನ್ನು ಭಾರತಕ್ಕೆ ಕರೆ ತರಬೇಕೆಂದು ಆಗ್ರಹಿಸುತ್ತಿದ್ದಾರೆ.
ವಿದ್ಯಾರ್ಥಿ ಸುಮನ್ ಅವರ ತಂದ ಶ್ರೀಧರ್ ವೈಶ್ಯರ್ ಮಾತನಾಡಿ, ಕಳೆದ ಕೆಲವು ದಿನಗಳಿಂದ ನೂರಾರು ಭಾರತೀಯ ವಿದ್ಯಾರ್ಥಿಗಳು ಖಾರ್ಕಿವ್‌ನಲ್ಲಿ ಸಿಲುಕಿಕೊಂಡಿದ್ದಾರೆ, ಆದರೆ ಭಾರತೀಯ ರಾಯಭಾರ ಕಚೇರಿಗೆ ಅವರನ್ನು ಸ್ಥಳಾಂತರಿಸಲು ಸಾಧ್ಯವಾಗುತ್ತಿಲ್ಲ.
ಖಾರ್ಕಿವ್ ನಗರದಿಂದ ಸುಮಾರು 35 ಕಿ.ಮೀ ದೂರದಲ್ಲಿರುವ ರಷ್ಯಾದ ಗಡಿ ತೆರೆಯುವಂತೆ ಪ್ರಧಾನಿ ಮೋದಿಯವರು ರಷ್ಯಾ ಅಧ್ಯಕ್ಷ ಪುಟಿನ್ ಮೇಲೆ ಒತ್ತಡ ಹೇರಬೇಕು ಎಂದು ಹೇಳಿದ್ದಾರೆ.
ಆತ ವರ್ಷಕೊಮ್ಮೆ ಎರಡು ತಿಂಗಳ ರಜೆ ಬರುತ್ತದೆ, ಆ ಸಮಯದಲ್ಲಿ ಮನೆಗೆ ಬರುತ್ತಿದ್ದ. ಏಕೆಂದರೆ ಬೇರೆ ಸಮಯದಲ್ಲಿ ಅಲ್ಲಿನ ಕಾಲೇಜಿನವರು ರಜೆ ಕೊಡುವುದಿಲ್ಲ ಎಂದು ನವೀನ್ನ ತಂದೆ ಶೇಖರಪ್ಪ ಹೇಳಿದರು.
ಬಹಳ ವರ್ಷಗಳಿಂದ ರಷ್ಯಾ ಮತ್ತು ಉಕ್ರೇನ್ ನಡುವೆ ಈ ಬಿಕ್ಕಟ್ಟಿದೆ, ಯುದ್ಧ ಆರಂಭವಾಗಲ್ಲ ಎಂದು ಕಾಲೇಜಿನವರ ಹೇಳಿದ್ದಕ್ಕೆ ಅವನು ಅಲ್ಲೇ ಇರಬೇಕಾಯಿತು. ಕಾಲೇಜಿನವರು ಹಾಗೆ ಹೇಳಲು ಕಾರಣವೇನು ಗೊತ್ತಿಲ್ಲ ಎಂದರು.
ಪ್ರತಿಭೆ ಇದ್ದರೂ ಮೀಸಲಾತಿ ಸಮಸ್ಯೆಯಿಂದ ನಮ್ಮ ಮಗ ಇಲ್ಲಿ ಓದಲು ಆಗಲಿಲ್ಲ. ಈ ಕಾರಣಕ್ಕೆ ಅನಿವಾರ್ಯವಾಗಿ ಅಲ್ಲಿಗೆ ಕಳಿಸಬೇಕಾಯಿತು. ಓದಬೇಕು ಎಂಬ ಛಲ ಅವನಲ್ಲಿತ್ತು ಎಂದು ಹೇಳಿದರು.
ಆದಷ್ಟು ಬೇಗ ಅಲ್ಲಿರುವ ಮಕ್ಕಳನ್ನು ಕರೆ ತನ್ನಿ, ನನ್ನ ಮಗನಿಗಾದಂತೆ ಯಾರಿಗೂ ಆಗುವುದು ಬೇಡ ಎಂದು ಅವರು ಇದೇ ವೇಳೆ ಸರ್ಕಾರಕ್ಕೆ ಮನವಿ ಮಾಡಿದರು.












Click it and Unblock the Notifications