ಎಲ್ಲೆ ಮೀರಿದ ಕಾಮುಕರ ವರ್ತನೆ, ಹುಬ್ಬಳ್ಳಿಯಲ್ಲಿ 3 ಅತ್ಯಾಚಾರ

ಹುಬ್ಬಳ್ಳಿ, ನವೆಂಬರ್, 12 : ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯೊಬ್ಬಳು ಯುವಕನ ಲೈಂಗಿಕ ಕಿರುಕುಳಕ್ಕೆ ಬೇಸತ್ತು ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಭಾನುವಾರ ನವಲಗುಂದ ತಾಲೂಕಿನ ಅಣ್ಣಿಗೇರಿಯಲ್ಲಿ ನಡೆದಿದೆ.

ಮಹೇಶ ಬಿಷ್ಟಣ್ಣವರ (22) ಎಂಬಾತ ನಿತ್ಯ ಕಿರುಕುಳ ನೀಡುತ್ತಿದ್ದ ಯುವಕ. ಈತನ ಹೆಸರಿನಲ್ಲಿ ಡೆತ್ ನೋಟ್ ಬರೆದಿಟ್ಟ ವಿದ್ಯಾರ್ಥಿನಿ ಕೀಟ ನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಈಕೆಯ ನರಳಾಟ ಗಮನಿಸಿದ ಪಾಲಕರು ತಕ್ಷಣವೇ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಈ ಪ್ರಕರಣದ ಕುರಿತಾಗಿ ಪೋಷಕರು ದೂರು ದಾಖಲಿಸಲು ಹಿಂದೇಟು ಹಾಕುತ್ತಿದ್ದು, ಬಾಲಕಿ ಚೇತರಿಸಿಕೊಂಡ ತಕ್ಷಣ ಆಕೆಯಿಂದ ಮಾಹಿತಿ ಪಡೆದು ಆರೋಪಿಯನ್ನು ಬಂಧಿಸಿ ಕ್ರಮ ಕೈಗೊಳ್ಳುವುದಾಗಿ ಅಣ್ಣಿಗೇರಿ ಪಿಎಸ್ಐ ರವಿ ಕಪಟನವರ ಹೇಳಿದ್ದಾರೆ.

ಡೆತ್ ನೋಟ್ ನಲ್ಲಿ ಏನಿದೆ ?

ಬಾಲಕಿ ಬರೆದ ಡೆತ್ ನೋಟ್ ನಲ್ಲಿ ಆರೋಪಿ ನೀಡಿರುವ ಕಿರುಕುಳವನ್ನು ವಿವರಿಸಿದ್ದಾಳೆ. ಈ ಬಗ್ಗೆ ಪೋಷಕರು ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಡೆತ್ ನೋಟ್ ತಲುಪಿಸಿದ್ದಾರೆ.
"ನಾನೇನೂ ತಪ್ಪು ಮಾಡಿಲ್ಲ, ಆದರೂ ಆತ ನನಗೆ ಕಿರುಕುಳ ನೀಡುತ್ತಾನೆ. ನನ್ನೊಂದಿಗೆ ಅಸಹ್ಯವಾಗಿ ವರ್ತಿಸುತ್ತಾನೆ. ಗೆಳತಿಯರೊಂದಿಗೆ ಇದ್ದಾಗ ಅವಮಾನ ಮಾಡುತ್ತಾನೆ. ಮನೆಯಲ್ಲಿ ವಿಷಯ ತಿಳಿಸಿದ್ದಕ್ಕೆ ಪಾಲಕರು ಶಾಲೆಗೆ ಹೋಗುವುದೇ ಬೇಡ ಎಂದು ಹೇಳುತ್ತಾರೆ. ಇದರಿಂದಲೇ ನಾನು ಎರಡು ದಿನ ಶಾಲೆಯನ್ನು ತಪ್ಪಿಸಿದ್ದೆ. ಇದರಿಂದ ನನಗೆ ಅವಮಾನ ಆಗುತ್ತಿದೆ. ಬದುಕಲು ಮನಸ್ಸಾಗುತ್ತಿಲ್ಲ. ನನ್ನ ಸಾವಿಗೆ ಮಹೇಶನೇ ಕಾರಣ" ಎಂದು ಡೆತ್ ನೋಟ್ ಬರೆದಿದ್ದಾಳೆ.[ದೇಶವನ್ನೇ ಅಲುಗಾಡಿಸಿದ್ದ ಲೈಂಗಿಕ ದೌರ್ಜನ್ಯ ಪ್ರಕರಣಗಳು]

Three rape attempt case has filed at Hubballi

ವೃದ್ಧನಿಂದ ಅತ್ಯಾಚಾರ:

ವೃದ್ಧನೋರ್ವ 5 ವರ್ಷದ ಬಾಲಕಿಯನ್ನು ಅತ್ಯಾಚಾರ ಮಾಡಿದ ಘಟನೆ ಗದಗ ಜಿಲ್ಲೆಯ ಮುಳಗುಂದ ಬಳಿಯ ಕಣವಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ.

ಗ್ರಾ.ಪಂ. ಮಾಜಿ ಸದಸ್ಯ ಹನುಮಪ್ಪ ಹುಲಗುಪ್ಪ ಬಂಡಿವಡ್ಡರ (66) ಎಂಬಾತ ಅತ್ಯಾಚಾರ ಎಸಗಿದ ಆರೋಪಿ. ಈತ ಆ ಪುಟ್ಟ ಬಾಲಕಿಯನ್ನು ಶೇಂಗಾ ಕೊಡುತ್ತೇನೆ ಎಂದು ನಂಬಿಸಿ ಮನೆಗೆ ಕರೆದೊಯ್ದು ಅತ್ಯಾಚಾರವೆಸಗಿದ್ದಾನೆ.

ಬಾಲಕಿಯ ಆರೋಗ್ಯದಲ್ಲಿ ವ್ಯತ್ಯಾಸ ನೋಡಿದ ಪಾಲಕರು ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಮುಳಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.[ಡ್ರಾಪ್ ಕೊಡುವ ನೆಪದಲ್ಲಿ ಪಕ್ಕದ ಮನೆ ವಿದ್ಯಾರ್ಥಿನಿ ಮೇಲೆ ರೇಪ್]

ಶಿಗ್ಗಾವಿಯಲ್ಲೊಂದು ರೇಪ್ :

ಬಾಲಕಿಯನ್ನು ಹಣ ಕೊಡುವುದಾಗಿ ನಂಬಿಸಿ ಅತ್ಯಾಚಾರ ಎಸಗಿದ ಘಟನೆ ನವೆಂಬರ್ ೮ರ ಭಾನುವಾರದಂದು ನಡೆದಿದೆ. 10 ವರ್ಷದ ಬಾಲಕಿ ಹಜರೇಸಾಬ್ ಹಜ್ಜಣ್ಣಿ ಟಪಾಲವಾಲೆ (೫೨) ಎಂಬಾತ ಅತ್ಯಾಚಾರ ಎಸಗಿದ ಆರೋಪಿ.

ಬಾಲಕಿಯ ಆರೋಗ್ಯ ಹದಗೆಟ್ಟಾಗ ಪೋಷಕರಿಗೆ ವಿಷಯ ತಿಳಿದಿದ್ದು, ಆಕೆಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಿಗ್ಗಾವಿ ಪಿಎಸ್ಐ ಶಶಿಧರ ಜಿ. ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿದ್ದಾರೆ.[ದಾವಣಗೆರೆಯಲ್ಲಿ 64ವರ್ಷದ ವೃದ್ಧೆ ಮೇಲೆ ಗ್ಯಾಂಗ್ ರೇಪ್ ]

ಪ್ರಾಂಶುಪಾಲರಿಂದ ಕಿರುಕುಳ :

ಪ್ರಿನ್ಸಿಪಾಲ್ ರು ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಭಟ್ಕಳದ ಖಾಸಗಿ ಪದವಿ ಕಾಲೇಜಿನ ಉಪನ್ಯಾಸಕಿಯೋರ್ವರು ಭಟ್ಟಳದ ನಗರ ಪೊಲೀಸ್ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.

ಪ್ರಿನ್ಸಿಪಾಲ್ ವೀರೇಂದ್ರ ಶಾನಭಾಗರು, ಮೊಬೈಲ್ ನಲ್ಲಿ ಅಸಭ್ಯ ಸಂದೇಶ ಕಳಿಸುತ್ತ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ, ಕಾಲೇಜಿನ ಕಾರ್ಯಕ್ರಮವೊಂದರಲ್ಲಿ ವೇದಿಕೆ ಮೇಲೆ ಎಲ್ಲರ ಮುಂದೆಯೇ ನನ್ನ ಮೈಮುಟ್ಟಿ ಅವಮಾನಿಸಿದ್ದಾರೆ. ಬರ್ತ್ ಡೇ ಸ್ವೀಟ್ಸ್ ಕೊಡಲು ಹೋದಾಗ ಸ್ಟಾಫ್ ರೂಮ್ ನಲ್ಲಿ ಎಲ್ಲರೆದುದು ನನ್ನ ಅಸಭ್ಯ ರೀತಿಯಲ್ಲಿ ನಡೆಸಿಕೊಂಡಿದ್ದಾರೆ ಎಂದು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+