ಸ್ವಾಮೀಜಿಗೆ ಬೆದರಿಕೆ, ದಂಪತಿಗೆ ನ್ಯಾಯಾಂಗ ಬಂಧನ

ಉತ್ತರಕನ್ನಡ, ಆ.28 : ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಗಳು ನಡೆಸುವ ರಾಮಕಥಾ ಕಾರ್ಯಕ್ರಮಕ್ಕೆ ತೆರಳಬಾರದು ಎಂದು ಕಲಾವಿದರಿಗೆ ಬೆದರಿಕೆ ಹಾಕಿರುವ ಪ್ರಕರಣದ ಆರೋಪಿಗಳಾದ ಗಾಯಕಿ ಪ್ರೇಮಲತಾ ದಿವಾಕರ್ ದಂಪತಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಗುರುವಾರ ಆರೋಪಿಗಳನ್ನು ಹೊನ್ನಾವರ ಪೊಲೀಸರು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ದಂಪತಿಗಳು ಸಹ ನ್ಯಾಯಾಲಯದ ಮುಂದೆ ಜಾಮೀನು ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಹೊನ್ನಾವರದ ಜೆಎಂಎಫ್‌ಸಿ ನ್ಯಾಯಾಲಯ ಸೆ.10ರವರೆಗೆ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಗೆ ಆದೇಶ ನೀಡಿದೆ.

Couple sent to judicial custody

ಬುಧವಾರ ಸಹ ಆರೋಪಿಗಳಾದ ಪ್ರೇಮಲತಾ ದಿವಾಕರ್ ಅವರನ್ನು ಕೋರ್ಟ್ ಮುಂದೆ ಹಾಜರುಪಡಿಸಲಾಗಿತ್ತು. ದಿವಾಕರ್ ಅವರನ್ನು ಒಂದು ದಿನದ ಪೊಲೀಸ್ ವಶಕ್ಕೆ ಮತ್ತು ಪ್ರೇಮಲತಾ ಅವರನ್ನು ಒಂದು ದಿನದ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಕೋರ್ಟ್, ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿತ್ತು. [ವಿವಾದದ ಬಗ್ಗೆ ರಾಘವೇಶ್ವರ ಶ್ರೀಗಳು ಹೇಳುವುದೇನು?]

ರಾಘವೇಶ್ವರ ಭಾರತೀ ಸ್ವಾಮಿಗಳ ರಾಮಕಥಾ ಮತ್ತು ಚಾತುರ್ಮಾಸ್ಯ ಕಾರ್ಯಕ್ರಮ ಹೊನ್ನಾವರ ತಾಲೂಕು ಕೆಕ್ಕಾರು ಮಠದಲ್ಲಿ ನಡೆಯುತ್ತಿದೆ. ಕಾರ್ಯಕ್ರಮದಲ್ಲಿ ಭಾಗವಹಿಸದಂತೆ ಗೀತಕಾರರಾದ ಡಾ. ಗಜಾನನ ಶರ್ಮಾ, ಗಾಯಕಿ ಶಂಕರಿ ಮೂರ್ತಿ ಬಾಳಿಲ ಮತ್ತು ಗಾಯಕಿ ದೀಪಿಕಾ ಅವರಿಗೆ ಆರೋಪಿಗಳು ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. [ರಾಘವೇಶ್ವರ ಸ್ವಾಮಿಗಳಿಗೆ ಬ್ಲಾಕ್ ಮೇಲ್]

ರಾಮಕಥಾ ನಡೆಯಲು ಬಿಡುವುದಿಲ್ಲ ಎಂದು ಮಠದ ವ್ಯವಸ್ಥಾಪಕರಿಗೂ ಬೆದರಿಕೆ ಕರೆ ಮಾಡಲಾಗಿತ್ತು. ಈ ಕುರಿತು ಮಠದ ಆಡಳಿತ ಮಂಡಳಿ ದಿವಾಕರ ಶಾಸ್ತ್ರೀ, ಪೇಮಲತಾ ದಂಪತಿಗಳ ವಿರುದ್ಧ ಹೊನ್ನಾವರದ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನ ಅನ್ವಯ ಬೆಂಗಳೂರಿನ ಬನಶಂಕರಿಯಿಂದ ದಂಪತಿಗಳನ್ನು ಹೊನ್ನಾವರ ಪೊಲೀಸರು ಮಂಗಳವಾರ ಬಂಧಿಸಿದ್ದರು. [ಸ್ವಾಮೀಜಿಗಳ ವಿರುದ್ಧದ ದೂರಿನಲ್ಲೇನಿದೆ?]

ಪ್ರತಿ ದೂರು : ಬಂಧಿತ ಪ್ರೇಮಲತಾ ದಿವಾಕರ್ ಪುತ್ರಿ ಅವರ ಮಠದ ಶ್ರೀಗಳ ವಿರುದ್ಧ ಬನಶಂಕರಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ರಾಘವೇಶ್ವರ ಸ್ವಾಮೀಜಿಗಳು ಪ್ರೇಮಲತಾ ಅವರಿಗೆ ಲೈಂಗಿಕ ಕಿರುಕುಳ ನೀಡಿದ್ದರು. ಈ ಬಗ್ಗೆ ದೂರು ನೀಡಲು ಪ್ರೇಮಲತಾ ನಿರ್ಧರಿಸಿದ್ದರು ಇದರಿಂದ ಸಿಟ್ಟಿಗೆದ್ದ ಸ್ವಾಮೀಜಿಗಳು ಸೇಡಿನ ಉದ್ದೇಶದಿಂದಾಗಿ ನಮ್ಮ ವಿರುದ್ಧ ದೂರು ನೀಡಿದ್ದಾರೆ ಎಂದು ತಿಳಿಸಿದ್ದಾರೆ. ಈ ದೂರಿನ ಅನ್ವಯ ಎಫ್‌ಐಆರ್ ದಾಖಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+