ಸಿಎಂ ಸಿದ್ದರಾಮಯ್ಯ ಬೆನ್ನಿಗೆ ನಿಂತ ಅಹಿಂದ ನಾಯಕರು, ಕಿಂಗ್ ಆಗೋದು ಯಾರು?
ಸಿಎಂ ಪಟ್ಟಕ್ಕಾಗಿ ಕರ್ನಾಟಕ ರಾಜ್ಯದಲ್ಲಿ ಭಾರಿ ದೊಡ್ಡ ತಿಕ್ಕಾಟ ಶುರುವಾಗಿದ್ದು, ಮುಖ್ಯಮಂತ್ರಿ ಸ್ಥಾನ ಬೇಕೆ ಬೇಕು ಅಂತಾ ಒಂದು ಕಡೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಪಟ್ಟು ಹಿಡಿದು ಕೂತಿದ್ದಾರೆ. ಇನ್ನೊಂದು ಕಡೆ ಸಿಎಂ ಪಟ್ಟ ಬಿಡಲ್ಲ ಅಂತಾ ಸಿದ್ದರಾಮಯ್ಯ ಬಣ ಕೂಡ ಪಟ್ಟು ಹಿಡಿದಿದೆ. ಕರ್ನಾಟಕದಲ್ಲಿ ಶುರುವಾಗಿರುವ ಈ ತಿಕ್ಕಾಟದ ಪರಿಣಾಮ ಕೇಂದ್ರ ಕಾಂಗ್ರೆಸ್ ನಾಯಕರು ಕೂಡ ಒದ್ದಾಡಿ ಹೋಗಿದ್ದಾರೆ. ಏನು ಮಾಡೋದು? ಅನ್ನೋ ಚಿಂತೆಯಲ್ಲಿ ಕಾಂಗ್ರೆಸ್ ವರಿಷ್ಠರು ಇರುವಾಗಲೇ, ಸಿಎಂ ಸಿದ್ದರಾಮಯ್ಯ ಬೆನ್ನಿಗೆ ನಿಂತ ಅಹಿಂದ ನಾಯಕರು ಹೊಸ ದಾಳ ಇದೀಗ ಉರುಳಿಸಿದ್ದಾರೆ.
ಹೌದು, ಕರ್ನಾಟಕದಲ್ಲಿ ಮುಖ್ಯಮಂತ್ರಿ ಪಟ್ಟಕ್ಕಾಗಿ ಭರ್ಜರಿ ಸರ್ಕಸ್ ನಡೆಯುತ್ತಿದೆ. ಕಾಂಗ್ರೆಸ್‌ನ ವರಿಷ್ಠರು ಈಗ ಇಕ್ಕಟ್ಟಿಗೆ ಸಿಲುಕಿದ್ದು, ಹೇಗಾದರೂ ಮಾಡಿ ಈ ಸಮಸ್ಯೆ ಬಗೆಹರಿಸಿಕೊಂಡು ದಕ್ಷಿಣ ಭಾರತದ ಪ್ರಮುಖ ರಾಜ್ಯದಲ್ಲಿ ಅಧಿಕಾರ ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ. ಇಂತಹ ಪರಿಸ್ಥಿತಿ ಇದ್ದಾಗಲೇ ಜಾತಿ ಲೆಕ್ಕಾಚಾರ ಕೂಡ ಜೋರಾಗಿದ್ದು, ಸಿಎಂ ಸಿದ್ದರಾಮಯ್ಯ ಅವರ ಪರವಾಗಿ ಈಗ ಅಹಿಂದ ನಾಯಕರ ಎಂಟ್ರಿಯಾಗಿದೆ. ಹಿಂದುಳಿದ ವರ್ಗಗಳ ನಾಯಕ ಎಂದೇ ಹೆಸರು ಮಾಡಿರುವ ಸಿದ್ದರಾಮಯ್ಯ ಅವರು ಸಂಕಷ್ಟಕ್ಕೆ ಸಿಲುಕಿದ ಸಮಯದಲ್ಲಿ ಇದೇ ಅಹಿಂದ ನಾಯಕರು ಒಗ್ಗಟ್ಟಾಗಿ ಬಂದು ಬೆನ್ನಿಗೆ ನಿಂತಿದ್ದರು. ಈಗಲೂ ಸಿದ್ದರಾಮಯ್ಯ ಅವರಿಗೆ ಅಹಿಂದ ನಾಯಕರು ಬಲು ತುಂಬಿ ಬೆನ್ನಿಗೆ ನಿಲ್ಲಲು ಮುಂದಾಗಿದ್ದಾರೆ.

ಸಿಎಂ ಸಿದ್ದರಾಮಯ್ಯ ಪರ ಅಹಿಂದ ಬಲ!
ಅದರಲ್ಲೂ ಪ್ರಮುಖವಾಗಿ ಇದೀಗ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಸಿಎಂ ಸಿದ್ದರಾಮಯ್ಯ ಪರವಾಗಿ ನಿಂತಿದ್ದು, ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಿ ಮುಂದುವರಿಯಬೇಕು ಎಂಬ ಬೇಡಿಕೆ ಮುಂದಿಟ್ಟಿದ್ದಾರೆ. ಈ ಮೂಲಕ ಕಾಂಗ್ರೆಸ್ ವರಿಷ್ಠರಿಗೆ ಕರ್ನಾಟಕದ ಪರಿಸ್ಥಿತಿ ನುಂಗಲು ಆಗದ ಮತ್ತು ಸುಮ್ಮನೆ ಇರಲೂ ಆಗದ ಬಿಸಿತುಪ್ಪ ಬಾಯಿಗೆ ಬಿದ್ದಂತಹ ಪರಿಸ್ಥಿತಿ ಆಗಿದೆ. ಹೀಗೆ ಕರ್ನಾಟಕ ರಾಜಕೀಯದಲ್ಲಿ ತಿಕ್ಕಾಟ ಜೋರಾಗಿದೆ. ಇನ್ನೊಂದು ಕಡೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಬೆನ್ನಿಗೆ ಒಕ್ಕಲಿಗ ಸಮುದಾಯದ ನಾಯಕರು ಗಟ್ಟಿಯಾಗಿ ನಿಂತಿದ್ದು, ಕದನ ಜೋರಾಗಿದೆ.
ಒಕ್ಕಲಿಗ ನಾಯಕರಿಂದ ಡಿಸಿಎಂ ಪರ ಹೇಳಿಕೆ
ಇನ್ನೊಂದು ಕಡೆ, ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಕರ್ನಾಟಕದ ನೂತನ ಮುಖ್ಯಮಂತ್ರಿ ಆಗಬೇಕು ಎಂಬ ಬೇಡಿಕೆಯನ್ನು ಒಕ್ಕಲಿಗ ನಾಯಕರು ಮುಂದಿಟ್ಟಿದ್ದಾರೆ. ಇಂದು ಕೂಡ ಈ ಬಗ್ಗೆ ಹಲವು ರೀತಿ ಚರ್ಚೆಗಳು ನಡೆದಿದ್ದು, ಕರ್ನಾಟಕದಲ್ಲಿ ಅದರಲ್ಲೂ ದಕ್ಷಿಣ ಕರ್ನಾಟಕ ಭಾಗದಲ್ಲಿ ಪ್ರಬಲವಾಗಿ ಇರುವ ಒಕ್ಕಲಿಗ ಸಮುದಾಯ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಬೆನ್ನಿಗೆ ನಿಂತು ಬೆಂಬಲ ಕೊಡುತ್ತಿದೆ. ಒಕ್ಕಲಿಗ ಸಮುದಾಯದ ಸ್ವಾಮೀಜಿಗಳು ಕೂಡ ಈ ಬಗ್ಗೆ ಮಹತ್ವದ ಹೇಳಿಕೆ ನೀಡಿರುವುದು ಗಮನ ಸೆಳೆದಿದೆ.












Click it and Unblock the Notifications