ಕರ್ನಾಟಕದಲ್ಲಿ ಕೊರೊನಾ ಅಟ್ಟಹಾಸ: ಈ 4 ಜಿಲ್ಲೆಗಳು ಅತಿ ಕಡಿಮೆ ಕೇಸ್

ಬೆಂಗಳೂರು, ಜುಲೈ 3: ಕರ್ನಾಟಕದಲ್ಲಿ ಕೊರೊನಾ ವೈರಸ್ ಅಟ್ಟಹಾಸ ಮೆರೆಯುತ್ತಿದೆ. ಕಳೆದ ಒಂದು ವಾರದಿಂದ ಸೋಂಕಿನ ಪ್ರಮಾಣ ದೊಡ್ಡ ಮಟ್ಟದಲ್ಲಿ ಏರಿಕೆಯಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 20 ಸಾವಿರದ ಗಡಿ ತಲುಪಿದೆ.

Recommended Video

      China reacts to Modi's surprise visit to galwan valley | Oneindia Kannada

      ಬೆಂಗಳೂರಿನಲ್ಲಿ ಕೊರೊನಾ ಸ್ಫೋಟಗೊಂಡಿದೆ. ಇಂದು ಸಿಲಿಕಾನ್ ಸಿಟಿಯಲ್ಲಿ 994 ಜನರಿಗೆ ಕೊವಿಡ್ ದೃಢವಾಗಿದ್ದು, ಒಟ್ಟು ಕೇಸ್‌ ಸಂಖ್ಯೆ 7173 ಆಗಿದೆ. ಬೆಂಗಳೂರು ನಂತರದ ಸ್ಥಾನದಲ್ಲಿ ಕಲಬುರಗಿ ಜಿಲ್ಲೆಯಿದ್ದು, 1560 ಸೋಂಕು ವರದಿಯಾಗಿದೆ.

      ಬಳ್ಳಾರಿ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಕೊರೊನಾ ಸೋಂಕಿನ ಸಂಖ್ಯೆ ಸಾವಿರ ದಾಟಿದೆ. ಇನ್ನು ಕರ್ನಾಟಕದ ಪೈಕಿ ಬಹುತೇಕ ಎಲ್ಲ ಜಿಲ್ಲೆಗಳು ಕೊರೊನಾ ಕೇಸ್ ವರದಿಯಾಗಿದ್ದು, ಸೋಂಕಿನ ಪ್ರಮಾಣ ನೂರಕ್ಕಿಂತ ಹೆಚ್ಚಿದೆ. ಆದರೆ, ನಾಲ್ಕು ಜಿಲ್ಲೆಗಳಲ್ಲಿ ಮಾತ್ರ ಕೊರೊನಾ ಕೇಸ್‌ಗಳು 100ರ ಗಡಿ ದಾಟಿಲ್ಲ. ಈ ಜಿಲ್ಲೆಗಳಲ್ಲಿ ತಕ್ಕ ಮಟ್ಟಿಗೆ ಕೊವಿಡ್ ನಿಯಂತ್ರಣದಲ್ಲಿದೆ. ಯಾವುದು ಆ ಜಿಲ್ಲೆಗಳು? ಮುಂದೆ ಓದಿ....

      ಕೊಡಗಿನಲ್ಲಿ ಅತಿ ಕಡಿಮೆ ಕೇಸ್

      ಕೊಡಗಿನಲ್ಲಿ ಅತಿ ಕಡಿಮೆ ಕೇಸ್

      ಕರ್ನಾಟಕದ ಪಾಲಿಗೆ ಅತಿ ಕಡಿಮೆ ಕೊರೊನಾ ವೈರಸ್ ಕೇಸ್ ಹೊಂದಿರುವುದು ಕೊಡಗು ಜಿಲ್ಲೆ. ಕೊಡಗಿನಲ್ಲಿ ಒಟ್ಟು 76 ಪ್ರಕರಣಗಳು ದಾಖಲಾಗಿದೆ. ಜುಲೈ 3ರಂದು 16 ಕೇಸ್ ವರದಿಯಾಗಿದೆ. ಈವರೆಗೂ 3 ಜನರು ಗುಣಮುಖರಾಗಿದ್ದು, 73 ಕೇಸ್‌ಗಳು ಸಕ್ರಿಯವಾಗಿದೆ.

      ಚಾಮರಾಜನಗರದಲ್ಲಿ ಕಡಿಮೆ ಸೋಂಕು

      ಚಾಮರಾಜನಗರದಲ್ಲಿ ಕಡಿಮೆ ಸೋಂಕು

      ಕೊಡಗು ನಂತರ ಅತಿ ಕಡಿಮೆ ಕೊವಿಡ್ ಸೋಂಕು ಹೊಂದಿರುವ ಜಿಲ್ಲೆ ಚಾಮರಾಜನಗರ. ಈ ಜಿಲ್ಲೆಯಲ್ಲಿ ಇಂದು 24 ಕೇಸ್ ದಾಖಲಾಗಿದ್ದು, ಒಟ್ಟು ಸೋಂಕಿನ ಸಂಖ್ಯೆ 78ಕ್ಕೆ ಏರಿದೆ. ಜಿಲ್ಲೆಯಲ್ಲಿ ಈವರೆಗೂ ಒಬ್ಬ ವ್ಯಕ್ತಿ ಮಾತ್ರ ಗುಣಮುಖರಾಗಿದ್ದು, 77 ಕೇಸ್‌ಗಳು ಸಕ್ರಿಯವಾಗಿದೆ.

      ಚಿತ್ರದುರ್ಗದಲ್ಲಿ ಎಷ್ಟು ಕೇಸ್?

      ಚಿತ್ರದುರ್ಗದಲ್ಲಿ ಎಷ್ಟು ಕೇಸ್?

      ಕೋಟೆನಾಡು ಚಿತ್ರದುರ್ಗದಲ್ಲಿ ಕಡಿಮೆ ಪ್ರಮಾಣದಲ್ಲಿ ಕೊರೊನಾ ವೈರಸ್ ಕೇಸ್‌ಗಳು ವರದಿಯಾಗಿದೆ. ಇಂದು ಚಿತ್ರದುರ್ಗದಲ್ಲಿ 3 ಕೇಸ್ ದಾಖಲಾಗಿದ್ದು, ಜಿಲ್ಲೆಯಲ್ಲಿ ಒಟ್ಟು ಸೋಂಕಿನ ಸಂಖ್ಯೆ 80ಕ್ಕೆ ಜಿಗಿದಿದೆ. ಅದಾಗಲೇ 43 ಜನರು ಚೇತರಿಸಿಕೊಂಡಿದ್ದು, 37 ಕೇಸ್ ಮಾತ್ರ ಸಕ್ರಿಯವಾಗಿದೆ.

      ಚಿಕ್ಕಮಗಳೂರಿನಲ್ಲಿ ಶತಕ ದಾಟಿಲ್ಲ

      ಚಿಕ್ಕಮಗಳೂರಿನಲ್ಲಿ ಶತಕ ದಾಟಿಲ್ಲ

      ಕಾಫಿನಾಡು ಚಿಕ್ಕಮಗಳೂರಿನಲ್ಲಿ ಇಂದು ಯಾವುದೇ ಹೊಸ ಕೇಸ್ ದಾಖಲಾಗಿಲ್ಲ. ಈವರೆಗೂ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 82ಕ್ಕೆ ಏರಿದೆ. ಈ ಪೈಕಿ 43 ಜನರು ಗುಣಮುಖರಾಗಿದ್ದಾರೆ. 38 ಮಂದಿ ಇನ್ನೂ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

      ಸೆಂಚುರಿ ದಾಟಿದ ಕೊಪ್ಪಳ

      ಸೆಂಚುರಿ ದಾಟಿದ ಕೊಪ್ಪಳ

      ಕೊಪ್ಪಳದಲ್ಲಿ ಒಂದು 4 ಜನರಿಗೆ ಕೊರೊನಾ ಖಚಿತವಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 105ಕ್ಕೆ ಏರಿದೆ. ಹಾವೇರಿಯಲ್ಲಿ ಒಟ್ಟು ಕೇಸ್ 124, ಕೋಲಾರದಲ್ಲಿ 150 ಪ್ರಕರಣ, ಗದಗ 199 ಹಾಗೂ ತುಮಕೂರಿನಲ್ಲಿ 196 ಕೇಸ್ ದಾಖಲಾಗಿದೆ. ಉಳಿದ ಎಲ್ಲ ಜಿಲ್ಲೆಗಳಲ್ಲಿ 200 ಪ್ರಕರಣಕ್ಕಿಂತ ಹೆಚ್ಚು ಕೇಸ್ ವರದಿಯಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+