ರಾಜ್ಯ ಸರ್ಕಾರವು ಆಡಳಿತದ ಮೇಲಿನ ಹಿಡಿತ ತಪ್ಪಿಸಿಕೊಂಡಿದೆ: ಜೆಡಿಎಸ್
ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಿಗಾಗಿಯೇ ಮೀಸಲಿಡುವ ವಿಶೇಷ ಅನುದಾನದ ಅಡಿಯಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳು ಆಮೆಗತಿಯಲ್ಲಿ ಸಾಗುತ್ತಿರುವುದಕ್ಕೆ ಮೂಲ ಕಾರಣ ಸರ್ಕಾರದ ಅಲಕ್ಷ್ಯ. ಬದ್ದತೆ ಇಲ್ಲದ ಉದಾಸೀನ ನಡೆ. ಕೇವಲ ದುಡ್ಡು ಮೀಸಲಿಟ್ಟರೆ ಸಾಲದು. ಅದು ಅನ
ಬೆಂಗಳೂರು, ಜನವರಿ24: ಹಿಂದುಳಿದ ಜಿಲ್ಲೆಗಳು ಎಂಬ ಹಣೆಪಟ್ಟಿಗೆ ಗುರಿಯಾಗಿ, ಅಮೂಲಾಗ್ರ ಅಭಿವೃದ್ಧಿಗೆ ಹಾತೊರೆಯುತ್ತಿರುವ ಕಲ್ಯಾಣ ಕರ್ನಾಟಕದ ಏಳ್ಗೆಗೆ ಮೀಸಲಿರಿಸಿದ್ದ ಸುಮಾರು 3,800 ಕೋಟಿಯಲ್ಲಿ ಕೇವಲ 1,037 ಕೋಟಿಯಷ್ಟೆ ವೆಚ್ಚವಾಗಿದೆ. ರಾಜ್ಯ ಆಡಳಿತ ಹಳಿತಪ್ಪಿರುವುದರ ಸಂಕೇತವಿದು ಎಂದು ಜೆಡಿಎಸ್ ರಾಜ್ಯ ಘಟಕ ಕಿಡಿಕಾರಿದೆ.
ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಿಗಾಗಿಯೇ ಮೀಸಲಿಡುವ ವಿಶೇಷ ಅನುದಾನದ ಅಡಿಯಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳು ಆಮೆಗತಿಯಲ್ಲಿ ಸಾಗುತ್ತಿರುವುದಕ್ಕೆ ಮೂಲ ಕಾರಣ ಸರ್ಕಾರದ ಅಲಕ್ಷ್ಯ. ಬದ್ದತೆ ಇಲ್ಲದ ಉದಾಸೀನ ನಡೆ. ಕೇವಲ ದುಡ್ಡು ಮೀಸಲಿಟ್ಟರೆ ಸಾಲದು. ಅದು ಅನುಷ್ಠಾನವಾದರೆ ಮಾತ್ರ ಈ ಭಾಗವು ಮುನ್ನಲೆಗೆ ಬರಲು ಸಾಧ್ಯ ಎಂದು ಜೆಡಿಎಸ್ ಟ್ವೀಟ್ ಮಾಡಿದೆ.
ಮಂಜೂರಾದ 2,277 ಕಾಮಗಾರಿಗಳಲ್ಲಿ, ಪೂರ್ಣಗೊಂಡಿರುವುದು ಕೇವಲ 93. ಸರ್ಕಾರದ ಕೆಲಸ ಬಿಟ್ಟಿ ಪ್ರಚಾರಕ್ಕೆ ಮಾತ್ರ ಸಿಮೀತವಾದಾಗ, ಇಂತಹ ಅನಾದರ ನಡೆಯು ಸಂಭವಿಸುತ್ತದೆ. ಅಧಿಕಾರಿ ವರ್ಗ ಗಾಢ ನಿದ್ದೆಯಲ್ಲಿದ್ದಾಗ, ಅದಕ್ಕೆ ಛಾಟಿ ಬೀಸಿ ಎಚ್ಚರವಾಗಿಸುವ ಹೊಣೆಗಾರಿಕೆ ಸರ್ಕಾರದ್ದು. ಆದರೆ, ಸರ್ಕಾರವು ಆಡಳಿತದ ಮೇಲಿನ ಹಿಡಿತ ತಪ್ಪಿಸಿಕೊಂಡಿದೆ.

ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ಅನುದಾನ ಕೊಡುವುದರ ಜತೆ, ಅದರ ಆಡಳಿತ ಬಲಗೊಳಿಸಬೇಕಾದ ಅನಿವಾರ್ಯತೆ ಇದೆ. ಆ ಮೂಲಕ ಮೀಸಲಿಟ್ಟ ಅನುದಾನ ಸಮರ್ಪಕ ರೀತಿಯಲ್ಲಿ ವ್ಯಯಿಸುವ ಸಾಮರ್ಥ್ಯ ವೃದ್ಧಿಯಾಗುತ್ತದೆ. ಇದು ರಾಜಕೀಯ ಇಚ್ಛಾಶಕ್ತಿ ಬೇಡುವಂತದ್ದು. ರಾಜ್ಯ ಸರ್ಕಾರಕ್ಕೆ ಅದೂ ಇಲ್ಲದಿರುವ ಸಂಗತಿ ಹೊಸದೇನಲ್ಲ ಎಂದು ಜೆಡಿಎಸ್ ಹೇಳಿದೆ.
ಹಿಂದುಳಿದ ಜಿಲ್ಲೆಗಳು ಎಂಬ ಹಣೆಪಟ್ಟಿಗೆ ಗುರಿಯಾಗಿ, ಅಮೂಲಾಗ್ರ ಅಭಿವೃದ್ಧಿಗೆ ಹಾತೊರೆಯುತ್ತಿರುವ ಕಲ್ಯಾಣ ಕರ್ನಾಟಕದ ಏಳ್ಗೆಗೆ ಮೀಸಲಿರಿಸಿದ್ದ ಸುಮಾರು 3,800 ಕೋಟಿಯಲ್ಲಿ ಕೇವಲ 1,037 ಕೋಟಿಯಷ್ಟೆ ವೆಚ್ಚವಾಗಿದೆ. ಪ್ರಜಾವಾಣಿಯ ವರದಿಯಲ್ಲಿ ಇದು ಬಹಿರಂಗವಾಗಿದೆ. ರಾಜ್ಯ @BJP4Karnataka ಆಡಳಿತ ಹಳಿತಪ್ಪಿರುವುದರ ಸಂಕೇತವಿದು.
— Janata Dal Secular (@JanataDal_S) January 24, 2023
1/4 pic.twitter.com/UINJKBaBVj
ಅಧಿಕಾರ ಹಿಡಿಯಲು ಸುಳ್ಳು, ಅಪಪ್ರಚಾರ, ಊಸರವಳ್ಳಿಯಂತೆ ಬಣ್ಣ ಬದಲಾಯಿಸುವುದನ್ನೇ ಕರಗತ ಮಾಡಿಕೊಂಡಿರುವ ಕಾಂಗ್ರೆಸ್ ಪಕ್ಷದ 'ಪ್ರಜಾಧ್ವನಿ' ಸಮಾವೇಶಗಳು ಜನರಿಲ್ಲದೆ ಎಷ್ಟು ಪೇಲವವಾಗಿವೆ ಎಂಬುದಕ್ಕೆ ಕೋಲಾರದಲ್ಲಿ ನಿನ್ನೆ ನಡೆದ ಕಾರ್ಯಕ್ರಮ ಸಾಕ್ಷಿ. ಕಾಂಗ್ರೆಸ್ ನವರು ಜನತೆಯ ನಿರುತ್ಸಾಹದಿಂದಾಗಿ ಭಯಗೊಂಡಿರಬೇಕಷ್ಟೆ! ಎಂದು ಜೆಡಿಎಸ್ ಹೇಳಿದೆ.
ಸಂತೆಭಾಷಣದಲ್ಲಿ 'ಸಿದ್ದ ಹಸ್ತ'ರಾಗಿರುವ ವ್ಯಕ್ತಿಯು ಕೋಲಾರ ಮತಕ್ಷೇತ್ರದಿಂದ ಚುನಾವಣೆಗೆ ನಿಲ್ಲಲು ಸಜ್ಜಾಗಿರುವ ವೇಳೆ ಕನಿಷ್ಠ ಜನರು ಕೂಡ ಸಮಾವೇಶಕ್ಕೆ ಸೇರದಿರುವುದನ್ನು ಕಂಡು ದಿಗಿಲಾಗಿರುವುದು ಖಚಿತ. ಐದು ವರ್ಷಗಳ ಕಾಲ ಅಧಿಕಾರ ನಡೆಸಿದ ಮುಖ್ಯಮಂತ್ರಿ ಎಂದು ಬೀಗುವವರೆ, ಜನರು ನಿಮ್ಮ ಮೇಲೆ ನಂಬಿಕೆ ಕಳೆದುಕೊಂಡಿದ್ದಾರೆ.
ಕಪಟತನದಿಂದ ಅಧಿಕಾರ ನಡೆಸಿ, ಬೊಬ್ಬಿರಿದಿದ್ದು ಬಿಟ್ಟರೆ ಸಾಧಿಸಿದ್ದೇನು ಎಂಬುದಕ್ಕೆ ನಿಮ್ಮ ಬಳಿ ಉತ್ತರವಿಲ್ಲ. ಈಗ ಮತ್ತೆ ಕಿವಿಮೇಲೆ ಹೂವಿಡುವ ಆಶ್ವಾಸನೆಗಳನ್ನು ಕೊಡುತ್ತಿದ್ದೀರಿ. ಜನರು ಮೂರ್ಖರಲ್ಲ. ನಮ್ಮ ಪಕ್ಷದ 'ಪಂಚರತ್ನ' ಯೋಜನೆಯನ್ನು ಟೀಕಿಸುವ ನಿಮಗೆ, ಅದರಲ್ಲಿನ ಕಾರ್ಯಕ್ರಮಗಳ ಮಹತ್ವದ ಅರಿವಿದೆಯೆ? ಎಂದು ಪ್ರಶ್ನಿಸಿದೆ.












Click it and Unblock the Notifications