Siddaramaiah: ಸಿಎಂ ಬದಲಾವಣೆ: ಸಚಿವ ಸಂಪುಟ ಸಭೆಯಲ್ಲಿ ಸಚಿವರ ನಿಲುವೇನು?
ಹುಬ್ಬಳ್ಳಿ, ಅಕ್ಟೋಬರ್ 11: ರಾಜ್ಯದಲ್ಲಿ ಮುಡಾ ಹಗರಣದ ಹಿನ್ನೆಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆಗೆ ತೀವ್ರ ಒತ್ತಡ ಕೇಳಿ ಬಂದಿದೆ. ವಿಪಕ್ಷಗಳು ಸೇರಿದಂತೆ ಕಾಂಗ್ರೆಸ್ ಶಾಸಕರು ಸಹ ರಾಜೀನಾಮೆಗೆ ಒತ್ತಾಯಿಸಿದ್ದಾರೆ.
ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆದಿದ್ದು, ಸಚಿವ ಸಂಪುಟ ಸಭೆಯಲ್ಲಿ ಯಾವುದೇ ರೀತಿಯ ಸಿಎಂ ಬದಲಾವಣೆ ವಿಷಯ ಚರ್ಚೆ ಆಗಿಲ್ಲ. ಸಿಎಂ ಸಿದ್ಧರಾಮಯ್ಯಾನವರೇ ಮುಖ್ಯಮಂತ್ರಿ ಆಗಿ ಮುಂದುವರೆಯಬೇಕು ಈ ಹಿನ್ನೆಲೆಯಲ್ಲಿ ಎಲ್ಲ ಸಚಿವ ಸಂಪುಟದ ಸದಸ್ಯರು ತಮ್ನ ಜೊತೆಗೆ ಇದ್ದೇವೆ ಅಂತಾ ಸಂದೇಹ ರವಾನೆ ಮಾಡಲಾಯಿತು ಎಂದು ಕಾನೂನು ಸಚಿವ ಎಚ್ ಕೆ ಪಾಟೀಲ್ ಹೇಳಿದರು.

ಯಾವುದೇ ರೀತಿಯ ಭಿನ್ನಾಭಿಪ್ರಾಯ ಬರದಂತೆ ನೋಡಿಕೊಳ್ಳಲು ಸಹ ಚರ್ಚೆ ಆಯಿತು ಎಂದ ಅವರು ಸಿಎಂ ಬದಲಾವಣೆ ಕುರಿತು ಮಾಜಿ ಸಚಿವ ಕೆ. ಬಿ.ಕೋಳಿವಾಡ ಹೇಳಿಕೆ ವಿಚಾರವಾಗಿ ಕ್ರಮ ವಿಚಾರಈ ಕುರಿತು ಪ್ರತಿಕ್ರಿಯೆ ನೀಡಲು ನಿರಾಕರಣೆ ಮಾಡಿದ್ದು, ಈ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ ಎಂದರು.
ಮಾಜಿ ಸಚಿವ ಮುಣಿರತ್ನ ಮೇಲೆ ಆರೋಪ ಬಂದಾಗ ಬಂಧನ ಮಾಡಲಾಯಿತು ಕುಲಕರ್ಣಿ ಮೇಲೆ ಏಕಿಲ್ಲ ಎಂಬ ಬಿಜೆಪಿ ನಾಯಕರ ಆರೋಪ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಕಾನೂನು ಮುಂದೆ ಎಲ್ಲರೂ ಒಂದೇ ಆಗಿದ್ದು, ಶಾಸಕ ವಿನಯ ಕುಲಕರ್ಣಿ ಪ್ರಕರಣ ಈಗ ಬಂದಿದೆ ಎಂದು ಕಾನೂನು ಸಚಿವ ಹೆಚ್ ಕೆ ಪಾಟೀಲ್ ಹೇಳಿದರು.
ಕೋವೀಡ್ ಸಂದರ್ಭದಲ್ಲಿ ಭಾರತೀಯ ಜನತಾ ಪಕ್ಷದ ಅಂದಿನ ಸರಕಾರ ಮಾಡಿದ ಹಗರಣವನ್ನ ಸರಕಾರ ಗಂಭೀರವಾಗಿ ಪರಿಗಣಿಸಿದ್ದು ಈ ಪ್ರಕರಣ ವಿಶೇಷ ತನಿಖಾ ತಂಡಕ್ಕೆ ನೀಡಿ ಉಸ್ತುವಾರಿಗಾಗಿ ಸಚಿವ ಸಂಪುಟದ ಉಪ ಸಮಿತಿ ರಚನೆಗೆ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಎಚ್ ಕೆ ಪಾಟೀಲ್ ಹೇಳಿದರು.
ಕೋವೀಡ್ ಹಗರಣ ಕುರಿತು ಸಚಿವ ಸಂಪುಟದ ಉಪ ಸಮಿತಿ ರಚನೆ ಮಾಡಲು ಸಲಹೆ ಇತ್ತು. ಕೋವೀಡ್ ದಂತಹ ಸಮಸ್ಯೆ ಮಾನವ ಕುಲಕ್ಕೆ ಗಂಡಾಂತರ ತಂದಿತ್ತು ಆದ್ದರಿಂದ ಇಂತಹ ಸಂದರ್ಭಗಳಲ್ಲಿ ಅಕ್ರಮ, ಅವವ್ಯಹಾರ ನಡೆದಿದ್ದು ಸಹಜವಾಗಿ ಯೇ ಆಕ್ರೋಶ ಮೂಡಿಸುತ್ತಿದೆ. ಕೋವೀಡ್ ಸಂದರ್ಭದಲ್ಲಿ ನಡೆದ ಭ್ರಷ್ಟಾಚಾರ ಕುರಿತು ನಿವೃತ್ತ ನ್ಯಾಯಮೂರ್ತಿ ಮೈಕಲ್ ಡಿ ಕುನ್ಹಾ ಅವರಿಗೆ ವಹಿಸಿ ಕೊಡಲಾಗಿತ್ತು.
ಮೈಕೆಲ್ ಡಿ ಕುನ್ಹಾ ಮಧ್ಯಂತರ ವರದಿ ಕೊಟ್ಟಿದ್ದುಇದು ಮೊದಲ ಹಂತದ ವರದಿ ಆಗಿದೆ. ಈವರದಿಯಲ್ಲಿ 7023 ಕೋಟಿಯಷ್ಟು ಅವ್ಯವಹಾರದಷ್ಟು ಭ್ರಷ್ಟಾಚಾರ ಆಗಿದ್ದುಅಕ್ರಮ ಹಾಗೂ ಭ್ರಷ್ಟಾಚಾರಕ್ಕೆ ಎಡೆ ಮಾಡಿಕೊಡುವ ಭ್ರಷ್ಟಾಚಾರ ಆಗಿರಬಹುದು ಅಂತಾ ವರದಿ ಇದೆ ಕಾರಣದೊಡ್ಡ ಶಂಕೆ ಉಂಟಾಗಿದೆ. ಮೈಕಲ್ ಡಿ ಕುನ್ಹಾ ಅವರು ಈಗಾಗಲೇ 55 ಸಾವಿರ ಕಡಿತ ಪರಿಶೀಲನೆ ಮಾಡಿದ್ದಾರೆ ಈ ಪ್ರಕರಣದಲ್ಲಿ500 ಕೋಟಿ ವಸೂಲಿ ಮಾಡಲಿಕ್ಕೆ ಸೂಚನೆ ಕೊಟ್ಟಿದ್ದಾರೆ. ಇದರ ಜೊತೆಗೆ ಹಲವಾರು ಕಡಿತ ವಿಲೇವಾರಿ, ಭ್ರಷ್ಟಾಚಾರ ಆದ ಬಗ್ಗೆ ಮಾಹಿತಿ ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ಇಡೀ ಪ್ರಕರಣದ ತನಿಖೆ ಎಸ್ ಐಟಿ ರಚನೆ ಮಾಡಲು ತೀರ್ಮಾನ ಆಗಿದೆ. ರಾಜ್ಯ ಸಚಿವ ಸಂಪುಟದಲ್ಲಿ ಸುದೀರ್ಘವಾದ ಚರ್ಚೆ ನಡೆಸಲಾಯಿತು. ಚರ್ಚೆ ನಂತರ ವಿಶೇಷ ತನಿಖಾ ದಳಕ್ಕೆ ತನಿಖೆಗೆ ವಹಿಸಿಕೊಡಲು ತೀರ್ಮಾನ ತೆಗೆದುಕೊಳ್ಳಲಾಯಿತು ಇನ್ನು ಶೀಘ್ರವೇ ತಪ್ಪಿಸ್ಥರ ಮೇಲೆ ಕ್ರಮಕ್ಕೆ ಸಚಿವ ಸಂಪುಟ ಉಪ ಸಮಿತಿ ಈ ತನಿಖೆ ಮೇಲುಸ್ತುವಾರಿ ನೋಡಿಕೊಳ್ಳಲು ತೀರ್ಮಾನ ತೆಗೆದುಕೊಳ್ಳಲಾಯಿತು
ತನಿಖೆಯನ್ನು ತೀವ್ರ ಸ್ವರೂಪಕ್ಕೆ ಹೋಗುತ್ತದೆ ಎಂದರು.












Click it and Unblock the Notifications