BDA Property: ಬೆಂಗಳೂರು ಅಭಿವೃದ್ದಿ ಪ್ರಾಧಿಕಾರ; 3.24 ಕೋಟಿ ಆಸ್ತಿ ವಶ
ಬೆಂಗಳೂರು, ಸೆಪ್ಟೆಂಬರ್ 13: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಬೃಹತ್ ಕಾರ್ಯಾಚರಣೆ ನಡೆಸಿದ್ದು, ಎಚ್.ಎ.ಎಲ್. 2ನೇ ಹಂತದಲ್ಲಿ ₹3.24 ಕೋಟಿ ಮೌಲ್ಯದ ಆಸ್ತಿಯನ್ನು ವಶಪಡಿಸಿಕೊಂಡಿದೆ. ದೂಕನಹಳ್ಳಿ ಗ್ರಾಮದ ಸರ್ವೆ ನಂ. 51ರಲ್ಲಿನ ನಿವೇಶನ ಸಂಖ್ಯೆ 777/ಯುನಲ್ಲಿದ್ದ ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸಿ, 1080 ಚದರ ಅಡಿ ವಿಸ್ತೀರ್ಣದ ಕೋಟ್ಯಂತರ ಬೆಲೆ ಬಾಳುವ ಪ್ರದೇಶವನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ವಶಪಡಿಸಿಕೊಂಡಿದೆ.
ಪ್ಲಾಸ್ಟಿಕ್ ಬಳಕೆ; 38 ಲಕ್ಷ ರೂ. ದಂಡ ವಸೂಲಿ
ಬೆಂಗಳೂರು ನಗರವನ್ನು ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿಸುವ ನಿಟ್ಟಿನಲ್ಲಿ ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತದ ವತಿಯಿಂದ ಮಹತ್ವದ ಹೆಜ್ಜೆ ಇಟ್ಟಿದ್ದು, ಕಳೆದ ಅಕ್ಟೋಬರ್ ನಿಂದ ಈವರೆಗೆ 24.57 ಟನ್ ಏಕಬಳಕೆ ಪ್ಲಾಸ್ಟಿಕ್ ವಶಪಡಿಸಿಕೊಂಡು, 38 ಲಕ್ಷ ರೂ. ದಂಡ ವಿಧಿಸಲಾಗಿದೆ ಎಂದು ಸಿಇಒ ಕರೀಗೌಡ ರವರು ತಿಳಿಸಿದ್ದಾರೆ.

ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಯಮಿತವು ತೆಗೆದುಕೊಂಡಿರುವ ಕ್ರಮಗಳ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರು ನಗರವನ್ನು ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿ ರೂಪಿಸುವ ದಿಕ್ಕಿನಲ್ಲಿ ನಿರಂತರವಾಗಿ ಪ್ಲಾಸ್ಟಿಕ್ ದಾಳಿ ಕಾರ್ಯಾಚರಣೆಯು ಮಹತ್ವದ ಹೆಜ್ಜೆಯಾಗಿರುತ್ತದೆ. ಈ ನಿಟ್ಟಿನಲ್ಲಿ ಬೆಂ.ಘ.ನಿ ನಿಯಮಿತದ ಸಹಾಯಕ ಪ್ರಧಾನ ವ್ಯವಸ್ಥಾಪಕರ ನೇತೃತ್ವದಲ್ಲಿ 27 ತಂಡಗಳನ್ನು ರಚಿಸಲಾಗಿರುತ್ತದೆ. ಸದರಿ ತಂಡಗಳು ಕೇಂದ್ರ ಕಛೇರಿಯಿಂದ ಪ್ಲಾಸ್ಟಿಕ್ ತಯಾರಕರು, ಸಗಟು ಮಾರಾಟಗಾರರ ಸ್ಥಳಗಳಲ್ಲಿ 8-9-2025 ರಿಂದ ವಾರಕ್ಕೆ 5 ದಿನಗಳು ಕಾಲ ಪ್ಲಾಸ್ಟಿಕ್ ದಾಳಿ ಕಾರ್ಯಾಚರಣೆ ಕೈಗೊಳ್ಳಲಾಗುತ್ತಿದೆ.
ವಾರ್ಡ್ ಮಟ್ಟದಲ್ಲಿ ವಾರ್ಡ್ ಮಾರ್ಷಲ್ ಮತ್ತು ವಾರ್ಡ್ ಕಿರಿಯ ಆರೋಗ್ಯ ಪರಿವೀಕ್ಷಕರು ಪ್ರತಿದಿನ ಪ್ಲಾಸ್ಟಿಕ್ ರೈಡ್ ದಾಳಿಯನ್ನು ಕೈಗೊಂಡು ಕನಿಷ್ಟ 2,000 ರೂ.ಗಳ ದಂಡ ವಿಧಿಸುವಂತೆ ಆದೇಶಿಸಲಾಗಿದೆ ಎಂದರು. 3-9-2025 ರಿಂದ ಪ್ರಾರಂಭಗೊಂಡ ಪ್ಲಾಸ್ಟಿಕ್ ದಾಳಿ ಕಾರ್ಯಾಚರಣೆಯಲ್ಲಿ ಇದುವರೆಗೆ 281 ಸಗಟು ಮಾರಾಟಗಾರರಿಂದ ವಶಪಡಿಸಿಕೊಂಡ ದಂಡದ ಮೊತ್ತ ರೂ. 19.66 ಲಕ್ಷಗಳು ಹಾಗೂ 2,842 ಚಿಲ್ಲರೆ ವ್ಯಾಪಾರಗಾರರಿಂದ ವಶಪಡಿಸಿಕೊಂಡ ದಂಡದ ಮೊತ್ತ ರೂ. 18.41 ಲಕ್ಷಗಳು ಮತ್ತು ವಶಪಡಿಸಿಕೊಂಡ ಏಕ ಬಳಕೆಯ ಪ್ಲಾಸ್ಟಿಕ್ ಸುಮಾರು 24.57 ಟನ್ ಗಳಾಗಿದ್ದು, ಅದರ ಮೌಲ್ಯ ರೂ. 49.14 ಲಕ್ಷಗಳಾಗಿದ್ದು, ವಶಪಡಿಸಿಕೊಂಡಿರುವ ಪ್ಲಾಸ್ಟಿಕ್ ಗೆ ಒಟ್ಟು ರೂ.38.07 ಲಕ್ಷ ರೂ. ದಂಡ ವಿಧಿಸಲಾಗಿರುತ್ತದೆ ಎಂದು ಹೇಳಿದರು.
ನಗರದಲ್ಲಿ ಹಂತ-ಹಂತವಾಗಿ ಕಾರ್ಯಚರಣೆ ಕೈಗೊಂಡು ಇಡೀ ನಗರವನ್ನು ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿ ರೂಪಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಸದರಿ ಕಾರ್ಯವನ್ನು ಯಶಸ್ವಿಗೊಳಿಸಲು ಸಾರ್ವಜನಿಕರು ಮಾರುಕಟ್ಟೆಗೆ ಹೊರಡುವ ಮುನ್ನ ಕೈಚೀಲವನ್ನು ತೆಗೆದುಕೊಂಡು ಹೋಗುವ ಮೂಲಕ ಹಾಗೂ ಮಾರಾಟಗಾರರು ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ ಬದಲು ಬಟ್ಟೆ ಚೀಲ ಅಥವಾ ಪೇಪರ್ ಚೀಲವನ್ನು ಮಾರಾಟಕ್ಕೆ ಬಳಸುವ ಮೂಲಕ ಸಾರ್ವಜನಿಕ ಆರೋಗ್ಯ ಹಾಗೂ ಪರಿಸರ ಮಾಲಿನ್ಯ ತಡೆಗಟ್ಟುವಲ್ಲಿ ಸಹಕರಿಸಲು ಕೋರಿದೆ.
ಬೆಂಗಳೂರಿನ ನಾಗರಿಕರು ಘನತ್ಯಾಜ್ಯ ನಿರ್ವಹಣೆಗೆ ಸಂಬಂಧಪಟ್ಟಂತೆ ಹಲವಾರು ಕ್ರಮಗಳನ್ನು ತೆಗೆದುಕೊಂಡಿದ್ದು, ಡಿಜಿಟಲ್ ದೂರು ಪರಿಹಾರ ವೇದಿಕೆಯ ಮೂಲಕ ತಮ್ಮ ದೂರುಗಳನ್ನು ದಿನ 24 ಗಂಟೆಯೂ ನೇರವಾಗಿ ದಾಖಲಿಸುತ್ತಿರುತ್ತಾರೆ. ನಾಗರಿಕರ ದೂರುಗಳಿಗೆ ತ್ವರಿತವಾಗಿ ಸ್ಪಂದಿಸುವ ನಿಟ್ಟಿನಲ್ಲಿ ಇತ್ತೀಚೆಗೆ ಮಾನ್ಯ ಉಪ ಮುಖ್ಯಮಂತ್ರಿಗಳಿಂದ ವ್ಯಾಟ್ಸಪ್ ಚಾಟ್ ಬಾಟ್ ಸಂಖ್ಯೆ 9448197197 ಅನ್ನು ಬಿಡುಗಡೆಗೊಳಿಸಲಾಗಿದೆ. ಅದರ ಮೂಲಕ ಬರುವ ದೂರುಗಳಿಗೆ ತ್ವರಿತವಾಗಿ ಸ್ಪಂದಿಸಲಾಗುತ್ತಿದೆ.
ತ್ಯಾಜ್ಯ ಸಮಸ್ಯೆ ದೂರು ದಾಖಲಾತಿಯ ವ್ಯಾಟ್ಸಪ್ ಸಂಖ್ಯೆಗೆ ಸಂದೇಶದ ಮೂಲಕ ಆಗಸ್ಟ್ 2025 ರಲ್ಲಿ 1,483 ದೂರುಗಳನ್ನು ಸ್ವೀಕರಿಸಿದ್ದು, ಅದರಲ್ಲಿ 1,464 ಅಂದರೆ ಶೇ. 99 ರಷ್ಟು ದೂರುಗಳನ್ನು ಇತ್ಯರ್ಥಪಡಿಸಲಾಗಿರುತ್ತದೆ. ಸೆಪ್ಟೆಂಬರ್ 2025 ರಿಂದ ಈವರೆಗೆ 515 ದೂರುಗಳನ್ನು ಸ್ವೀಕರಿಸಿದ್ದು, ಅದರಲ್ಲಿ 423 ಅಂದರೆ ಶೇ. 82 ದೂರಗಳನ್ನು ಪರಿಹರಿಸಲಾಗಿದೆ.












Click it and Unblock the Notifications