Teacher Suicide: ಪಿಂಚಣಿಗೆ ಆಗ್ರಹಿಸಿ ಪ್ರತಿಭಟನೆಗೆ ಬಂದಿದ್ದ ಶಿಕ್ಷಕ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ
ಈಗಾಗಲೇ ನಿವೃತ್ತಿ ಹಾಗೂ ನಿಧನ ಹೊಂದಿರುವ ಶಿಕ್ಷಕರ ಕುಟುಂಬಗಳಿಗೆ ಸೌಲಭ್ಯಗಳನ್ನ ಜಾರಿಗೆ ಮಾಡಬೇಕು. ಸರ್ಕಾರಿ ನೌಕರರಿಗೆ ನೀಡುತ್ತಿರುವ ಸೌಲಭ್ಯ೦ಗಳನ್ನ ತಾರತಮ್ಮ ಇಲ್ಲದೆ ನೀಡಬೇಕು ಎಂದು ಬೇಡಿಕೆಯನ್ನ ಸಲ್ಲಿಸಿದ್ದಾರೆ.
ಬೆಂಗಳೂರು,ಫೆಬ್ರವರಿ23: ಕರ್ನಾಕಟ ರಾಜ್ಯ ಅನುದಾನಿತ ಶಾಲಾ ಶಿಕ್ಷಕರಿಂದ ಪಿಂಚಣಿಗಾಗಿ ಅನಿರ್ದಿಷ್ಟಾವಧಿ ಪ್ರತಿಭಟನೆಗೆ ಬಂದಿದ್ದ ಶಿಕ್ಷಕರೊಬ್ಬರು ಬುಧವಾರ ಮಧ್ಯರಾತ್ರಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೃತಪಟ್ಟಿರುವ ಶಂಕರಪ್ಪ ಬೋರಡ್ಡಿ ಎಂಬುವವರು ಮೂಲತಃ ರಾಯಚೂರು ಜಿಲ್ಲೆ ಸಿಂಧನೂರು ಪಟ್ಟಣದ ಶಿಕ್ಷಕರಾಗಿದ್ದು, ಮಂಗಳವಾರ ಫ್ರೀಡಂ ಪಾರ್ಕ್ ನಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ. ಶಂಕರಪ್ಪ ಬೋರಡ್ಡಿ ಬುಧವಾರ ರಾತ್ರಿ ವೇಳೆ ರೈಲ್ವೆ ನಿಲ್ದಾಣಕ್ಕೆ ಹೋಗಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.

ಇನ್ನೂ ಬುಧವಾರ ಮಧ್ಯರಾತ್ರಿ ಈ ಘಟನೆ ನಡೆದಿದ್ದು, ತಡರಾತ್ರಿಯಲ್ಲೇ ಮೃತ ದೇಹವನ್ನು ರಾಯಚೂರಿಗೆ ರವಾನಿಸಲಾಗಿದೆ. ಇನ್ನೂ ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತಿರುವ ಶಿಕ್ಷಕರ ಪ್ರತಿಭಟನೆ ನಿರತ ಶಿಕ್ಷಕರಿಂದ ಮಾಹಿತಿ ಸಿಕ್ಕಿದ್ದು, ಶಂಕರಪ್ಪ ಬೋರಡ್ಡಿ ಅವರ ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ.
ಪಿಂಚಣಿ ಜಾರಿಗಾಗಿ ಪ್ರತಿಭಟನೆ; ಶಿಕ್ಷಕರು ಅಸ್ವಸ್ಥ
ಪಿಂಚಣಿ ಜಾರಿಗೆ ಆಗ್ರಹಿಸಿ ನಗರದ ಫ್ರೀಡಂಪಾರ್ಕ್ನಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಅನುದಾನಿತ ಶಾಲಾ-ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘದ ಹಲವು ಜನ ನಿವೃತ್ತ ಶಿಕ್ಷಕರು ಅಸ್ವಸ್ಥಗೊಂಡಿದ್ದದು, ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪಿಂಚಣಿ ಜಾರಿಗೆ ಆಗ್ರಹಿಸಿ ನಿವೃತ್ತ ಶಿಕ್ಷಕರ, ಅನುದಾನಿತ ಶಾಲಾ-ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘ ಕಳೆದ 138 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದೆ.
ಫೆಬ್ರವರಿ 17 ರಂದದು ಮಂಡನೆಯಾದ ರಾಜ್ಯ ಬಜೆಟ್ ನಲ್ಲಿ ಬೇಡಿಕೆ ಸರ್ಕಾರ ಈಡೇರಿಸುತ್ತದೆ ಎಂಬ ನಿರೀಕ್ಷೆಯನ್ನ ಅನುದಾನತ ಶಿಕ್ಷಕರು ಇಟ್ಟುಕೊಂಡಿದ್ದರು. ನಮ್ಮ ಹೋರಾಟ, ಮನವಿಯನ್ನ ಸರ್ಕಾರ ಕಿಂಚಿತ್ತೂ ಮನ್ನಣೆ ನೀಡಿಲ್ಲ ನಮ್ಮ ಬೇಡಿಕೆಯನ್ನ ಸರ್ಕಾರ ಈಡೇರಿಸಿಲ್ಲ ಎಂದು ಶಿಕ್ಷಕರು ಅಸಮಾಧಾನ ಹೊರಹಾಕಿದ್ದರು.
ಈಗಾಗಲೇ ನಿವೃತ್ತಿ ಹಾಗೂ ನಿಧನ ಹೊಂದಿರುವ ಶಿಕ್ಷಕರ ಕುಟುಂಬಗಳಿಗೆ ಸೌಲಭ್ಯಗಳನ್ನ ಜಾರಿಗೆ ಮಾಡಬೇಕು. ಸರ್ಕಾರಿ ನೌಕರರಿಗೆ ನೀಡುತ್ತಿರುವ ಸೌಲಭ್ಯಗಳನ್ನ ತಾರತಮ್ಮ ಇಲ್ಲದೆ ನೀಡಬೇಕು ಎಂದು ಬೇಡಿಕೆಯನ್ನ ಸಲ್ಲಿಸಿದ್ದಾರೆ.
ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಬೆಂಗಳೂರಿನಲ್ಲಿ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ SAHAI ಸಹಾಯವಾಣಿ ಇಂತಿದೆ: 080 - 25497777











Click it and Unblock the Notifications