SWR: ಬೆಂಗಳೂರು ಪ್ರಯಾಣಿಕರ ಗಮನಕ್ಕೆ! ಸೆ.23-27 ರವರೆಗೆ, ಈ ನಿಲ್ದಾಣದಲ್ಲಿ ರೈಲುಗಳ ತಾತ್ಕಾಲಿಕ ನಿಲುಗಡೆ

ಬೆಂಗಳೂರು: ಜಾವಗಲ್'ನಲ್ಲಿ ನಡೆಯಲಿರುವ ವಾರ್ಷಿಕ ಉರುಸ್ ಮಹೋತ್ಸವಕ್ಕೆ ತೆರಳುವ ಭಕ್ತಾದಿಗಳು ಮತ್ತು ಪ್ರಯಾಣಿಕರ ಅನುಕೂಲಕ್ಕಾಗಿ ರೈಲುಗಳ ಹೆಚ್ಚುವರಿ ನಿಲುಗಡೆಗೆ ಅವಕಾಶ ನೀಡಲಾಗಿದೆ. ಈ ಕೆಳಗಿನ ವಿಶೇಷ, ಎಕ್ಸ್‌ಪ್ರೆಸ್ ರೈಲುಗಳು ಬಾಣಾವರ ರೈಲು ನಿಲ್ದಾಣದಲ್ಲಿ ಸೆಪ್ಟೆಂಬರ್ 23 ರಿಂದ 27ರವರೆಗೆ ತಾತ್ಕಾಲಿಕ ನಿಲುಗಡೆ ನೀಡಲಿವೆ. ಈ ಅವಧಿಯಲ್ಲಿ ರೈಲುಗಳು ಬಾಣಾವರ ನಿಲ್ದಾಣಕ್ಕೆ ಆಗಮಿಸುವ ಮತ್ತು ನಿರ್ಗಮಿಸುವ ಸಮಯದ ವಿವರಗಳು ಮುಂದಿದೆ.

ನಿಲುಗಡೆ ನೀಡುವ ರೈಲುಗಳು, ಸಮಯ

* ಕೆಎಸ್ಆರ್ ಬೆಂಗಳೂರು-ಹೊಸಪೇಟೆ ಡೈಲಿ ಪ್ಯಾಸೆಂಜರ್ ರೈಲು (56519) ಬಾಣಾವರ ನಿಲ್ದಾಣಕ್ಕೆ 08:35 ಗಂಟೆಗೆ ಆಗಮಿಸಿ, 08:36 ಗಂಟೆಗೆ ನಿರ್ಗಮಿಸಲಿದೆ.

* ಮೈಸೂರು-ತಾಳಗುಪ್ಪ ಡೈಲಿ ಎಕ್ಸ್'ಪ್ರೆಸ್ ರೈಲು (ಸಂಖ್ಯೆ 16206) ಬಾಣಾವರ ನಿಲ್ದಾಣಕ್ಕೆ 09:07 ಗಂಟೆಗೆ ಆಗಮಿಸಲಿದ್ದು, ಬಳಿಕ ಅಲ್ಲಿಂದ 09:08 ಗಂಟೆಗೆ ತೆರಳುತ್ತದೆ.

SWR Train Update

* 12725 ಸಂಖ್ಯೆಯ ಕೆಎಸ್ಆರ್ ಬೆಂಗಳೂರು-ಧಾರವಾಡ ಸಿದ್ಧಗಂಗಾ ಡೈಲಿ ಎಕ್ಸ್'ಪ್ರೆಸ್ ರೈಲು ಬಾಣಾವರ ನಿಲ್ದಾಣಕ್ಕೆ 15:20 ಗಂಟೆಗೆ ಬಂದು, ಒಂದು ನಿಮಿಷದ ಅಂತರದಲ್ಲಿ ಅಂದರೆ 15:21 ನಿಲ್ದಾಣದಿಂದ ಸಂಚರಿಸುತ್ತದೆ.

* ಕೆಎಸ್ಆರ್ ಬೆಂಗಳೂರು-ತಾಳಗುಪ್ಪ ಡೈಲಿ ಎಕ್ಸ್'ಪ್ರೆಸ್ ರೈಲು (20651) ಬಾಣಾವರ ನಿಲ್ದಾಣಕ್ಕೆ 17:27 ಗಂಟೆಗೆ ಆಗಮಿಸಿ, 17:28 ಗಂಟೆಗೆ ನಿರ್ಗಮಿಸಲಿದೆ.

* ಅದೇ ರೀತಿ ತಾಳಗುಪ್ಪ-ಕೆಎಸ್ಆರ್ ಬೆಂಗಳೂರು ಡೈಲಿ ಎಕ್ಸ್'ಪ್ರೆಸ್ ರೈಲು (ಸಂಖ್ಯೆ 20652) ಬಾಣಾವರ ನಿಲ್ದಾಣಕ್ಕೆ 08:40 ಗಂಟೆಗೆ ಆಗಮಿಸಿ, 08:41 ಗಂಟೆಗೆ ನಿರ್ಗಮಿಸಲಿದೆ.

* ಇನ್ನೂ ಸಂಖ್ಯೆ 12726 ಧಾರವಾಡ-ಕೆಎಸ್ಆರ್ ಬೆಂಗಳೂರು ಸಿದ್ಧಗಂಗಾ ಡೈಲಿ ಎಕ್ಸ್'ಪ್ರೆಸ್ ರೈಲು ಬಾಣಾವರ ನಿಲ್ದಾಣಕ್ಕೆ 10:30 ಗಂಟೆಗೆ ಆಗಮಿಸಿ, 10:31 ಗಂಟೆಗೆ ಅಲ್ಲಿಂದ ಮುಂದೆ ಸಾಗುತ್ತದೆ.

* ತಾಳಗುಪ್ಪ-ಮೈಸೂರು ಡೈಲಿ ಎಕ್ಸ್'ಪ್ರೆಸ್ ರೈಲು (16205) ಬಾಣಾವರ ನಿಲ್ದಾಣಕ್ಕೆ 18:23 ಗಂಟೆಗೆ ಆಗಮಿಸಿ, 18:24 ಗಂಟೆಗೆ ನಿರ್ಗಮಿಸಲಿದೆ.

* ಹೊಸಪೇಟೆ-ಕೆಎಸ್ಆರ್ ಬೆಂಗಳೂರು ಡೈಲಿ ಪ್ಯಾಸೆಂಜರ್ ರೈಲು (ಸಂಖ್ಯೆ 56520) ನಿಗದಿತ ಬಾಣಾವರ ನಿಲ್ದಾಣಕ್ಕೆ 18:43 ಗಂಟೆಗೆ ಆಗಮಿಸಿ, 18:44 ಗಂಟೆಗೆ ನಿರ್ಗಮಿಸಲಿದೆ ಎಂದು ನೈಋತ್ಯ ರೈಲ್ವೆ ವಲಯದ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ರೈಲುಗಳ ಸಂಚಾರ ರದ್ದು

ತುಮಕೂರು-ದಾವಣಗೆರೆ ಹೊಸ ಬ್ರಾಡ್ ಗೇಜ್ ಮಾರ್ಗಕ್ಕೆ ಸಂಬಂಧಿಸಿದಂತೆ ತೊಳಹುಣಸೆಯಲ್ಲಿ ಯಾರ್ಡ್ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ವಿವಿಧ ದಿನಗಳಲ್ಲಿ ಎಕ್ಸ್‌ಪ್ರೆಸ್ ರೈಲುಗಳ ಸಂಚಾರ ರದ್ದುಗೊಳಿಸಲಾಗಿದೆ. ಅವುಗಳ ಮಾಹಿತಿ ಮುಂದಿದೆ.

* 07341 ಸಂಖ್ಯೆಯ ಎಸ್ಎಸ್ಎಸ್ ಹುಬ್ಬಳ್ಳಿ-ಚಿಕ್ಕಮಗಳೂರು ಎಕ್ಸ್'ಪ್ರೆಸ್ ವಿಶೇಷ ರೈಲು ಅಕ್ಟೋಬರ್ 03, 04 ಮತ್ತು 10 ರಂದು ಸಂಚಾರ ಮಾಡುವುದಿಲ್ಲ.

* 07342 ಸಂಖ್ಯೆಯ ಚಿಕ್ಕಮಗಳೂರು-ಎಸ್ಎಸ್ಎಸ್ ಹುಬ್ಬಳ್ಳಿ ಎಕ್ಸ್'ಪ್ರೆಸ್ ವಿಶೇಷ ರೈಲಿನ ಸಂಚಾರವನ್ನು ಅಕ್ಟೋಬರ್ 03, 04 ಮತ್ತು 10 ರಂದು ರದ್ದುಗೊಳಿಸಲಾಗಿದೆ.

* ಎಸ್ಎಸ್ಎಸ್ ಹುಬ್ಬಳ್ಳಿ-ಅರಸೀಕೆರೆ ಡೈಲಿ ಎಕ್ಸ್'ಪ್ರೆಸ್ ರೈಲು (16214) ಸೇವೆಯನ್ನು ಅಕ್ಟೋಬರ್ 08 ಮತ್ತು 09 ರದ್ದುಗೊಳಿಸಲಾಗಿದೆ.

* 16213 ಸಂಖ್ಯೆಯ ಅರಸೀಕೆರೆ-ಎಸ್ಎಸ್ಎಸ್ ಹುಬ್ಬಳ್ಳಿ ಡೈಲಿ ಎಕ್ಸ್'ಪ್ರೆಸ್ ರೈಲು ಅಕ್ಟೋಬರ್ 09 ಮತ್ತು 10 ರಂದು ರದ್ದುಗೊಳಿಸಲಾಗಿದೆ ಎಂದು ರೈಲ್ವೆ ಪ್ರಕಟಣೆಯು ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+