SWR: ಮೆಮು ರೈಲುಗಳ ಭಾಗಶಃ ಸಂಚಾರ ರದ್ದು, ಬೆಂಗಳೂರು ಎಕ್ಸ್‌ಪ್ರೆಸ್ ರೈಲುಗಳ ಸೇವೆ ವಿಳಂಬ, ವೇಳಾಪಟ್ಟಿ
ಬೆಂಗಳೂರು: ದಕ್ಷಿಣ ರೈಲ್ವೆ ವಲಯ ವ್ಯಾಪ್ತಿಯ ಚೆನ್ನೈ ವಿಭಾಗದಲ್ಲಿ ರೈಲು ಹಳಿಗಳ ನಿರ್ವಹಣಾ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಈ ಸಂಬಂಧ ಬೆಂಗಳೂರಿನ SMVT, ಯಶವಂತಪುರ, KSR ಬೆಂಗಳೂರು ನಿಲ್ದಾಣಳಿಂದ ಬೇರೆ ಬೇರೆ ಭಾಗಗಳಲ್ಲಿ ಸಂಚಾರ ಮಾಡುವ ಕೆಲವು ಎಕ್ಸ್‌ಪ್ರೆಸ್ ರೈಲುಗಳು ಹಾಗೂ ಮೆಮು ರೈಲುಗಳನ್ನು ಭಾಗಶಃ ರದ್ದುಗೊಳಿಸಲಾಗಿದೆ. ಕೆಲವು ರೈಲುಗಳನ್ನು ನಿಯಂತ್ರಿಸಲಾಗುತ್ತಿದೆ. ಪ್ರಯಾಣಿಕರು ಗಮನಿಸಿ ಸಂಚಾರ ಯೋಜಿಸಿಕೊಳ್ಳುವಂತೆ ಅಧಿಕಾರಿಗಳು ತಿಳಿಸಿದ್ದಾರೆ.
ಭಾಗಶಃ ರದ್ದಾದ ರೈಲುಗಳ ಪಟ್ಟಿ
* 2026 ಆಗಸ್ಟ್ 11 ಮತ್ತು ಆಗಸ್ಟ್ 11 ರಂದು ಹೊರಡುವ 'ಕೆಎಸ್ಆರ್ ಬೆಂಗಳೂರು-ಜೋಲಾರ್ ಪೇಟೈ' ಮೆಮು ರೈಲು (66550) ಸೋಮನಾಯಕನಪಟ್ಟಿ ಮತ್ತು ಜೋಲಾರ್ ಪೇಟೈ ನಡುವೆ ಭಾಗಶಃ ರದ್ದುಗೊಳಿಸಳಾಗಿದೆ. ಹೀಗಾಗಿ ಈ ರೈಲು ಜೋಲಾರ್ ಪೇಟೈ ಬದಲಿಗೆ ಸೋಮನಾಯಕನಪಟ್ಟಿ ನಿಲ್ದಾಣದಲ್ಲಿ ತನ್ನ ತನ್ನ ಪ್ರಯಾಣ ಕೊನೆಗೊಳಿಸಲಿದೆ.

* 2026 ಆಗಸ್ಟ್ 11 ಮತ್ತು ಆಗಸ್ಟ್ 26ರಂದು ಸಂಚರಿಸುವ ಜೋಲಾರ್'ಪೇಟೈ-ಕೆಎಸ್ಆರ್ ಬೆಂಗಳೂರು ಮೆಮು ರೈಲು (66549) ಸಂಚಾರವು ಜೋಲಾರ್ ಪೇಟೈ ಮತ್ತು ಸೋಮನಾಯಕನಪಟ್ಟಿ ನಡುವೆ ಭಾಗಶಃ ರದ್ದುಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರೈಲುಗಳ ಸಂಚಾರ ನಿಯಂತ್ರಣ
* 2026 ಆಗಸ್ಟ್ 12 ರಂದು SMVT ಬೆಂಗಳೂರು ನಿಲ್ದಾಣದಿಂದ ಹೊರಡುವ ಬೆಂಗಳೂರು-ದಾನಾಪುರ ಸಂಘಮಿತ್ರ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ರೈಲು (12295 SMVT) ಮಾರ್ಗ ಮಧ್ಯೆ 20 ನಿಮಿಷಗಳ ಕಾಲ ನಿಯಂತ್ರಣಕ್ಕೆ ಒಳಪಡಲಿದೆ.
* 2026 ಆಗಸ್ಟ್ 25 ರಂದು ದಾನಾಪುರ ನಿಲ್ದಾಣದಿಂದ ಹೊರಡುವ ಗುವಾಹಾಟಿ-SMVT ಬೆಂಗಳೂರು ಟ್ರೈ-ವೀಕ್ಲಿ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ರೈಲನ್ನು (12510) ಮಾರ್ಗಮಧ್ಯೆ 40 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ
* ಸೆಂಟ್ರಲ್ ರೈಲ್ವೆ ವಲಯದ ಭೂಸಾವಲ್ ವಿಭಾಗದಲ್ಲಿ ಇಗತ್ಪುರಿ-ಭೂಸಾವಲ್ ನಡುವಿನ 5 ನೇ ಮಾರ್ಗದ ಕಾರ್ಯಾರಂಭಕ್ಕಾಗಿ ಇಂಟರ್‌ಲಾಕಿಂಗ್ ಮತ್ತು ನಾನ್-ಇಂಟರ್‌ಲಾಕಿಂಗ್ ಕಾಮಗಾರಿ ನಡೆಸಲಾಗುತ್ತಿದೆ. ಹೀಗಾಗಿ ಬೆಂಗಳೂರು-ದೆಹಲಿ, ಹಜರತ್ ನಿಜಾಮುದ್ಧೀನ ಸಂಪರ್ಕ ಕ್ರಾಂತಿ ರೈಲುಗಳ ಸಂಚಾರದಲ್ಲಿ ವಿಳಂಬವಾಗಲಿದೆ. ಈ ರೈಲುಗಳನ್ನು ನಿಯಂತ್ರಿಸಲಾಗುತ್ತಿದೆ.
* 2026 ಆಗಸ್ಟ್ 11 ರಂದು ಪ್ರಾರಂಭವಾಗುವ ಕೆಎಸ್‌ಆರ್ ಬೆಂಗಳೂರು-ನವದೆಹಲಿ ಕರ್ನಾಟಕ ದೈನಂದಿನ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು (12627) ಮನ್ಮಾಡ್-ಜಲ್ಗಾಂವ್ ವಿಭಾಗದಲ್ಲಿ 1 ಗಂಟೆ 35 ನಿಮಿಷಗಳ ಕಾಲ ನಿಯಂತ್ರಿಸಲ್ಪಡುತ್ತದೆ.
* 2026 ಆಗಸ್ಟ್ 11ರಂದು ಪ್ರಾರಂಭವಾಗುವ ಯಶವಂತಪುರ-ಹಜರತ್ ನಿಜಾಮುದ್ದೀನ್ ಸಂಪರ್ಕ ಕ್ರಾಂತಿ ದ್ವೈವಾರದ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು (12629) ಪ್ರಯಾಣವನ್ನು ಮನ್ಮಾಡ್-ಜಲ್ಗಾಂವ್ ವಿಭಾಗದಲ್ಲಿ 1 ಗಂಟೆ 30 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ ಎಂದು ನೈಋತ್ಯ ರೈಲ್ವೆ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Click it and Unblock the Notifications
