Suvarna survey: ಹಳೇ ಮೈಸೂರು ಭಾಗದಲ್ಲಿ 'ತೆನೆ' ಇಳಿಸಿ 'ಕೈ' ಹಿಡಿದರೇ ಮತದಾರ?

ಬೆಂಗಳೂರು, ಮೇ. 04: ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನು 6 ದಿನಗಳು ಇದ್ದು, ಈ ವೇಳೆ ಪಕ್ಷಗಳು ತಮ್ಮ ಚುನಾವಣಾ ಪ್ರಚಾರವನ್ನು ದುಪ್ಪಟ್ಟುಗೊಳಿಸಿವೆ. ಇದರ ಜೊತೆಗೆ ಹಲವು ಮಾಧ್ಯಮಗಳು, ಸಂಸ್ಥೆಗಳು ಚುನಾವಣಾ ಪೂರ್ವ ಸಮೀಕ್ಷೆ ನಡೆಸುತ್ತಿವೆ. ಗುರುವಾರ ಜನ್ ಕಿ ಬಾತ್ - ಸುವರ್ಣ ನ್ಯೂಸ್ ಸಮೀಕ್ಷೆ ಪ್ರಕಟಿಸಿದ್ದು, ಬಿಜೆಪಿಗೆ ಬಹುಮತ ನೀಡಿದೆ.

ಜನ್ ಕಿ ಬಾತ್ - ಸುವರ್ಣ ನ್ಯೂಸ್ ಸಮೀಕ್ಷೆಯಲ್ಲಿ ಹಳೇ ಮೈಸೂರು ಭಾಗ, ಮಲೆನಾಡು, ಮಧ್ಯ ಕರ್ನಾಟಕ ಹಾಗೂ ಕಿತ್ತೂರು ಕರ್ನಾಟಕ, ಬೆಂಗಳೂರಿನ ಪ್ರದೇಶವಾರು ಸಮೀಕ್ಷೆ ಫಲಿತಾಂಶವನ್ನು ಪ್ರಕಟಿಸಲಾಗಿದೆ. ಹಳೇ ಮೈಸೂರು ಭಾಗದ ಮೇಲೆ ಮೊದಲಿನಿಂದಲೂ ಜಾತ್ಯಾತೀತ ಜನತಾದಳದ ಹಿಡಿತವಿದ್ದು, ಹಲವು ಸಮೀಕ್ಷೆಗಳು ಈ ಬಾರಿಯೂ ಜೆಡಿಎಸ್ ಇಲ್ಲಿ ಹಿಡಿತ ಸಾಧಿಸಲಿದೆ ಎಂದಿದೆ. ಆದರೆ, ಸುವರ್ಣ ಟಿವಿಯ ಹೊಸ ಸಮೀಕ್ಷೆ ವಿಭಿನ್ನ ಫಲಿತಾಂಶ ನೀಡಿದೆ.

Suvarna News survey: Congress holds control in Old Mysuru region

ಹಳೇ ಮೈಸೂರು ಭಾಗದ 57 ಕ್ಷೇತ್ರಗಳನ್ನು ಸಮೀಕ್ಷೆ ನಡೆಸಿ ಫಲಿತಾಂಶ ಪ್ರಕಟಿಸಿರುವ ಸುವರ್ಣ ಟಿವಿ, ಈ ಬಾರಿಯೂ ಇಲ್ಲಿ ಜೆಡಿಎಸ್‌ ಬಿಟ್ಟು ಜನ ಕೈ ಹಿಡಿಯಲಿದ್ದಾರೆ ಎಂದು ಹೇಳಿದೆ. ಆಡಳಿತರೂಢ ಬಿಜೆಪಿ ಈ ಬಾರಿ (ಮೇ. 4 ) 14 ಸ್ಥಾನಗಳನ್ನು ಗಳಿಸಲಿದೆ ಎಂದಿದೆ. ಇದೇ ಜನ್‌ಕಿ ಬಾತ್ ಸಮೀಕ್ಷೆ ಏಪ್ರಿಲ್‌ 14ರಂದು ಫಲಿತಾಂಶ ಬಿಟ್ಟಿದ್ದು, ಅಂದು 12 ಸ್ಥಾನ ಗೆಲ್ಲಲಿದೆ ಎಂದು ಹೇಳಿತತ್ತು. ಕಳೆದ 2018 ರ ಚುನಾವಣೆಯಲ್ಲಿ ಬಿಜೆಪಿ ಈ ಭಾಗದಲ್ಲಿ 11 ಸ್ಥಾನಗಳಲ್ಲಿ ಜಯಗಳಿಸಿತ್ತು.

ಇನ್ನು, ಮೇ. 4 ರಂದು ಬಿಡುಗಡೆ ಮಾಡಿರುವ ಸಮೀಕ್ಷೆ ಪ್ರಕಾರ ಕಾಂಗ್ರೆಸ್ ಈ ಬಾರಿ 26 ಸ್ಥಾನಗಳನ್ನು ಗಳಿಸಲಿದೆ ಎಂದಿದೆ. ಇದೇ ಜನ್‌ಕಿ ಬಾತ್ ಸಮೀಕ್ಷೆ ಏಪ್ರಿಲ್‌ 14 ನಲ್ಲಿಯೂ ಫಲಿತಾಂಶ ಬಿಟ್ಟಿದ್ದು, ಅಂದು 23 ಸ್ಥಾನ ಗೆಲ್ಲಲಿದೆ ಎಂದು ಹೇಳಿತ್ತು. ಕಳೆದ 2018 ರ ಚುನಾವಣೆಯಲ್ಲಿ ಕಾಂಗ್ರೆಸ್ ಈ ಭಾಗದಲ್ಲಿ 17 ಸ್ಥಾನಗಳಲ್ಲಿ ಜಯಗಳಿಸಿತ್ತು.

Suvarna News survey: Congress holds control in Old Mysuru region

ಮೊದಲಿನಿಂದಲೂ ಈ ಭಾಗದ ಮೇಲೆ ಹಿಡಿತ ಹೊಂದಿದ್ದ ಜೆಡಿಎಸ್‌ಗೆ ಈ ಬಾರಿ ಭಾರಿ ಮುಖಭಂಗವಾಗಲಿದೆ ಎಂದು ಸಮೀಕ್ಷೆ ಹೇಳಿದೆ. ಮೇ. 4 ರಂದು ಬಿಡುಗಡೆ ಮಾಡಿರುವ ಸಮೀಕ್ಷೆ ಪ್ರಕಾರ ಜಾತ್ಯಾತೀತ ಜನತಾದಳ 17 ಸ್ಥಾನಗಳನ್ನು ಹೊಂದಲಿದೆ. ಏಪ್ರಿಲ್‌ 14 ರಂದು 22 ಸ್ಥಾನಗಳನ್ನು ಗೆಲ್ಲಲಿದೆ ಎಂದು ಸಮೀಕ್ಷೆ ತಿಳಿಸಿತ್ತು. ಜೆಡಿಎಸ್ 2018 ರ ಚುನಾವಣೆಯಲ್ಲಿ ಈ ಭಾಗದಲ್ಲಿ 27 ಸ್ಥಾನಗಳನ್ನು ಬಾಚಿಕೊಂಡಿತ್ತು. ಇದರ ಜೊತೆಗೆ ಇತರರು 1 ಸ್ಥಾನವನ್ನು ಪಡೆಯುವುದಿಲ್ಲ ಎಂದು ಸಮೀಕ್ಷೆ ತಿಳಿಸಿದೆ.

ಈ ಹಿಂದೆ ಟಿವಿ 9 ಹಾಗೂ ಸಿ ವೋಟರ್‌ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿಯೂ ಹಳೇ ಮೈಸೂರು ಭಾಗದಲ್ಲಿ ಈ ಬಾರಿ ಕಾಂಗ್ರೆಸ್‌ 21 ರಿಂದ 25 ಸ್ಥಾನಗಳು ಗೆಲ್ಲಬಹುದು ಎಂದು ತಿಳಿಸಿದರೆ ಬಿಜೆಪಿ 4 ರಿಂದ 8 ಸ್ಥಾನಗಳನ್ನು ಗೆಲ್ಲಬಹುದು, ಜೆಡಿಎಸ್‌ 24 ರಿಂದ 28 ಸ್ಥಾನಗಳನ್ನು ಗೆಲ್ಲಲಿದೆ. ಇತರರು 1 ಸ್ಥಾನವನ್ನು ಪಡೆಯಬಹುದು ಎಂದು ತಿಳಿಸಿತ್ತು.

2ನೇ ಹಂತದ ಸುವರ್ಣನ್ಯೂಸ್ ಸಮೀಕ್ಷೆಯು ಆಡಳಿತರೂಢ ಬಿಜೆಪಿ 100 ರಿಂದ 114 ಸ್ಥಾನಗಳನ್ನು ಗೆಲ್ಲಲಿದೆ ಎಂದು ಭವಿಷ್ಯ ನುಡಿದಿದೆ. ವಿಪಕ್ಷ ಕಾಂಗ್ರೆಸ್‌ 86 ರಿಂದ 98 ಸ್ಥಾನಗಳಲ್ಲಿ ಜಯ ಗಳಿಸಲಿದೆ. ಪ್ರಾದೇಶಿಕ ಪಕ್ಷ ಜೆಡಿಎಸ್ 20 ರಿಂದ 26 ಸ್ಥಾನಗಳಲ್ಲಿಯೂ, ಪಕ್ಷೇತರ ಅಭ್ಯರ್ಥಿಗಳು ಗರಿಷ್ಠ 5 ಸ್ಥಾನಗಳಲ್ಲಿ ಗೆಲ್ಲಬಹುದು ಎಂದು ಅಂದಾಜಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+