ಕುಮಾರಸ್ವಾಮಿ ವಿಶ್ವಾಸಮತಯಾಚನೆ: ಯಡಿಯೂರಪ್ಪ ಹೇಳಿದ್ದೇನು?

ಬೆಂಗಳೂರು, ಜುಲೈ 12: ಸುಪ್ರಿಂ ಕೋರ್ಟ್ ನೀಡಿರುವ ತೀರ್ಪು ಅತೃಪ್ತ ಶಾಸಕರಿಗೆ ನೈತಿಕ ಶಕ್ತಿ ತುಂಬಿದೆ ಎಂದು ವಿರೋಧ ಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಹೇಳಿದರು.

ವಿಧಾನಸಭೆ ಅಧಿವೇಶನದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ, ಸುಪ್ರಿಂ ತೀರ್ಪಿನ ಅನ್ವಯ ಶಾಸಕರ ರಾಜೀನಾಮೆ ಆಗಲಿ ಅನರ್ಹತೆಯಾಗಲಿ ಇನ್ನಾವುದೇ ನಿರ್ಣಯವನ್ನು ಸ್ಪೀಕರ್ ತೆಗೆದುಕೊಳ್ಳುವಂತಿಲ್ಲ ಎಂದು ಯಡಿಯೂರಪ್ಪ ಹೇಳಿದರು. ಆದರೆ ಈ ಬಗ್ಗೆ ಇನ್ನಷ್ಟು ಸ್ಪಷ್ಟತೆ ಸಿಗಬೇಕಿದೆ.

ಕುಮಾರಸ್ವಾಮಿ ಅವರ ವಿಶ್ವಾಸಮತ ಯಾಚನೆ ನಿರ್ಣಯದ ಬಗ್ಗೆ ಮಾತನಾಡಲು ಒಪ್ಪದ ಯಡಿಯೂರಪ್ಪ, ವಿಶ್ವಾಸ ಮತ ಯಾಚನೆ ಬಗ್ಗೆ ಈಗ ಏನೂ ಮಾತನಾಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದರು.

Supreme Court order gives strength to us: Yeddyurappa

ಇಂದು ಬಿಜೆಪಿ ಶಾಸಕರು ರೆಸಾರ್ಟ್‌ಗೆ ತೆರಳುತ್ತಿದ್ದಾರೆಂದು ಮಾಹಿತಿ ನೀಡಿದ ಯಡಿಯೂರಪ್ಪ, ಸಂದಿಗ್ಧ ಪರಿಸ್ಥಿತಿ ಇರುವ ಕಾರಣ, ಎಲ್ಲರೂ ಒಟ್ಟಿಗೆ ಇರುತ್ತೇವೆಂಬ ಬೇಡಿಕೆಯನ್ನು ನಮ್ಮ ಶಾಸಕರು ಇರಿಸಿದ್ದಾರೆ ಹಾಗಾಗಿ ಎಲ್ಲರೂ ರೆಸಾರ್ಟ್‌ಗೆ ಹೋಗುತ್ತಿದ್ದೇವೆ ಎಂದರು.

ಮಂಗಳವಾರ ಸುಪ್ರಿಂ ಕೋರ್ಟ್ ತೀರ್ಪು ಬಂದಮೇಲೆ ಅದರ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಯಡಿಯೂರಪ್ಪ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+