ಮೋದಿ ಸಭೆ: ಉಡುಪಿ-ಪುತ್ತೂರು ಅಭಿಮಾನಿಗಳ ಸಿದ್ಧತೆ

Supporters from Udupi-Puttur getting ready for Modi Bangalore rally,
ಉಡುಪಿ/ ಪುತ್ತೂರು, ಅ.31: ಮುಂದಿನ ಲೋಕಸಭಾ ಚುನಾವಣೆ ನಿಮಿತ್ತ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೆಂದ್ರ ಮೋದಿ ಅವರು ಕರ್ನಾಟಕದ ಭೇಟಿಗಾಗಿ ಮುಂದಿನ ತಿಂಗಳು 17ರಂದು ರಾಜಧಾನಿ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ತನ್ನಿಮಿತ್ತ ರಾಜ್ಯದ ವಿವಿಧ ಜಿಲ್ಲೆಗಳಿಂದ ಮೋದಿ ಅಭಿಮಾನಿಗಳು ಬೆಂಗಳೂರು ಸಮಾವೇಶದಲ್ಲಿ ಪಾಲ್ಗೊಳ್ಳಲು ತುದಿಗಾಲಲ್ಲಿ ನಿಂತಿದ್ದು ಅದಾಗಲೇ ಸಿದ್ಧತೆ ಆರಂಭಿಸಿದ್ದಾರೆ.

ಉಡುಪಿಯಿಂದ 15,000 ಮಂದಿ ಮೋದಿ ಬೆಂಬಲಿಗರು ಮತ್ತು ಪುತ್ತೂರಿನಿಂದ 10,000 ಮಂದಿ ಬೆಂಗಳೂರಿನ ಸಮಾವೇಶದಲ್ಲಿ ಪಾಳ್ಗೊಳ್ಳುತ್ತಿರುವುದಾಗಿ ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಈ ನಿಟ್ಟಿನಲ್ಲಿ ಪೂರ್ವಭಾವಿಯಾಗಿ ಜಿಲ್ಲೆಯಲ್ಲಿ ಕಾರ್ಯಕ್ರಮ/ ಸಭೆಗಳನ್ನು ಆಯೋಜಿಸಲಾಗುವುದು ಎಂದು ಜಿಲ್ಲಾಧ್ಯಕ್ಷ ತಿಂಗಳೆ ವಿಕ್ರಮರಾಜು ಹೆಗ್ಡೆ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ. ಪ್ರಸ್ತುತ 44 ಗ್ರಾಮೀಣ ಮಟ್ಟದ ಸಮಿತಿಗಳು ಮತ್ತು 3 ಪಟ್ಟಣ ಪ್ರದೇಶ ಸಮಿತಿಗಳು ಈ ನಿಟ್ಟಿನಲ್ಲಿ ಕಾರ್ಯನಿರತವಾಗಿವೆ.

ಪೂರ್ವಭಾವಿಯಾಗಿ ಮನೆಮನೆಗೂ ಭೇಟಿ ನೀಡಿ ಪ್ರಚಾರಾಂದೋಲನ ಹಮ್ಮಿಕೊಳ್ಳಲಾಗುವುದು. ನಮೋ ಬ್ರಿಗೇಡ್ ಸೇರಿದಂತೆ ಸಮಾನ ಮನಸ್ಕ ಇತರೆ ಸಂಘ ಸಂಸ್ಥೆಗಳು ಬೆಂಗಳೂರು ಸಮಾವೇಶದ ಸಿದ್ಧತೆಯಲ್ಲಿ ಕೈಜೋಡಿಸುತ್ತಿವೆ ಎಂದು ಅವರು ತಿಳಿಸಿದ್ದಾರೆ.

ಪುತ್ತೂರಿನಿಂದಲೂ 10 ಸಾವಿರ ಮಂದಿ ಬೆಂಗಳೂರಿಗೆ ತೆರಳಿಲಿದ್ದೇವೆ ಎಂದು ಪುತ್ತೂರು ಬಿಜೆಪಿ ಘಟಕದ ಅಧ್ಯಕ್ಷ ಎಸ್ ಅಯ್ಯಪ್ಪ ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+