ಕರ್ನಾಟಕಕ್ಕೆ ಕೇಂದ್ರದಿಂದ 4,314 ಕೋಟಿ ರಿಲೀಸ್: ಕನ್ನಡಿಗರ ಆಕ್ರೋಶ!

ಬೆಂಗಳೂರು: ಕರ್ನಾಟಕಕ್ಕೆ ಕೇಂದ್ರ ಸರ್ಕಾರ ಕೊಡುವ ತೆರಿಗೆ ಪಾಲಿನಲ್ಲಿ ಭಾರಿ ಅನ್ಯಾಯ ಆಗುತ್ತಿದೆ ಅನ್ನೋ ಆರೋಪವಿದೆ. ಈ ನಡುವೆ ರಾಜ್ಯ ಬಿಜೆಪಿ ಘಟಕ ಮಾಡಿರುವ ಟ್ವೀಟ್ ಅವರಿಗೇ ತಿರುಗುಬಾಣವಾಗಿ ಪರಿಣಮಿಸಿದೆ. ಉತ್ತರ ಪ್ರದೇಶ, ಬಿಹಾರಕ್ಕೆ ಹೆಚ್ಚಿನ ಪಾಲು ನೀಡಿ ಕನ್ನಡಿಗರಿಗೆ ಅನ್ಯಾಯ ಮಾಡಿದ್ದಾರೆ ಅಂತಾ ನೆಟ್ಟಿಗರು ಆರೋಪ ಮಾಡುತ್ತಿದ್ದಾರೆ.

ರಾಜ್ಯಗಳಿಗೆ ₹1.18 ಲಕ್ಷ ಕೋಟಿ ತೆರಿಗೆ ಬಿಡುಗಡೆ ಮಾಡಿರುವ ಕೇಂದ್ರ, ಕರ್ನಾಟಕಕ್ಕೆ ₹4,314 ಕೋಟಿ ನೀಡಿದೆ. ಆದರೆ ದೇಶದ ತೆರಿಗೆ ಪಾಲಿನಲ್ಲಿ ಕನಿಷ್ಠ ಪಾಲನ್ನ ಹೊಂದಿರುವ ಉತ್ತರ ಪ್ರದೇಶ, ಬಿಹಾರ ಹಾಗೂ ಮಧ್ಯಪ್ರದೇಶ ಮತ್ತಿತರ ರಾಜ್ಯಗಳಿಗೆ ಹೆಚ್ಚಿನ ಹಣ ನೀಡುತ್ತಿದೆ ಅನ್ನೋ ಆರೋಪ ಕೇಳಿಬಂದಿದೆ. ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಬಿಜೆಪಿಯ ಟ್ವೀಟ್‌ಗೆ ಆಕ್ರೋಶ ಕೂಡ ವ್ಯಕ್ತವಾಗುತ್ತಿದೆ. ಹಾಗಾದ್ರೆ ಯಾವ ಯಾವ ರಾಜ್ಯಕ್ಕೆ ಎಷ್ಟೆಷ್ಟು ತೆರಿಗೆ ಪಾಲು ಕೊಟ್ಟಿದೆ ಕೇಂದ್ರ ಸರ್ಕಾರ? ಬಿಜೆಪಿ ಮಾಡಿರುವ ಟ್ವೀಟ್ ಬಗ್ಗೆ ಏನಂತಿದ್ದಾರೆ ಜನ? ಸಂಪೂರ್ಣ ಮಾಹಿತಿ ಇಲ್ಲಿ ತಿಳಿಯಿರಿ.

Strong reply to Karnataka BJP tweet over Tax allocation

ಉತ್ತರ ಪ್ರದೇಶಕ್ಕೆ 21,218 ಕೋಟಿ!

ಹೌದು, ಈಗ ಕೇಂದ್ರ ಸರ್ಕಾರ ಹಂಚಿಕೆ ಮಾಡಿರುವ ತೆರಿಗೆ ಪಾಲಿನಲ್ಲಿ ಉತ್ತರ ಪ್ರದೇಶಕ್ಕೇ ಅತಿಹೆಚ್ಚು ತೆರಿಗೆ ಹಣ ಸಿಕ್ಕಿದೆ. ಉತ್ತರ ಪ್ರದೇಶಕ್ಕೆ 21,218 ಕೋಟಿ ನೀಡಿದ್ದರೆ, ಬಿಹಾರಕ್ಕೆ 11,897 ಕೋಟಿ, ಮಧ್ಯಪ್ರದೇಶಕ್ಕೆ 9,285 ಕೋಟಿ, ಪಶ್ಚಿಮ ಬಂಗಾಳಕ್ಕೆ 8,898 ಕೋಟಿ, ಮಹಾರಾಷ್ಟ್ರಕ್ಕೆ 7,472 ಕೋಟಿ, ರಾಜಸ್ಥಾನಕ್ಕೆ 7,128 ಕೋಟಿ, ಒಡಿಶಾಗೆ 5,356 ಕೋಟಿ ರೂಪಾಯಿ ನೀಡಲಾಗಿದೆ. ಆದರೆ ಕರ್ನಾಟಕಕ್ಕೆ ಕೇಂದ್ರ ಸರ್ಕಾರದಿಂದ ₹4,314 ಕೋಟಿ ರಿಲೀಸ್ ಆಗಿರುವುದಕ್ಕೆ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಅತಿಹೆಚ್ಚು ತೆರಿಗೆಯನ್ನ ಕಟ್ಟಿದರೂ ಕರ್ನಾಟಕಕ್ಕೆ ಕೇವಲ ₹4,314 ಕೋಟಿ ಕೊಟ್ಟಿದ್ದಾರೆ ಅಂತಿದ್ದಾರೆ.

ಬಿಜೆಪಿ ಟ್ವೀಟ್‌ಗೆ ರಿಯಾಕ್ಷನ್ ಹೇಗಿತ್ತು?

ಹಾಗೇ ಕೇಂದ್ರ ಸರ್ಕಾರ ಕೊಟ್ಟಿರುವ ರಾಜ್ಯದ ಪಾಲಿನ ತೆರಿಗೆ ಹಣದ ಬಗ್ಗೆ ಬಿಜೆಪಿ ಟ್ವೀಟ್ ಮಾಡಿ, 'ಅಭಿವೃದ್ಧಿ ಕಾರ್ಯಗಳಿಗೆ ಹೂಡಿಕೆ ಮಾಡಲು ಕೇಂದ್ರ ಸರ್ಕಾರ ರಾಜ್ಯಗಳಿಗೆ 1.18 ಲಕ್ಷ ಕೋಟಿ ರೂ. ಒಂದು ತಿಂಗಳ ಮುಂಗಡದೊಂದಿಗೆ ಜಿಎಸ್‌ಟಿ ಹಣವನ್ನು ಬಿಡುಗಡೆ ಮಾಡಿದೆ. ಕರ್ನಾಟಕಕ್ಕೆ ಒಂದು ತಿಂಗಳ ಮುಂಗಡ ಸೇರಿದಂತೆ 4,314 ಕೋಟಿ ರೂ.ಗಳನ್ನು ನೀಡಿದೆ. ಅಭಿವೃದ್ಧಿಯೊಂದನ್ನೇ ಮಂತ್ರವಾಗಿಸಿಕೊಂಡಿರುವ ದಿಟ್ಟ ದೂರಗಾಮಿ ಹೆಜ್ಜೆಗಳನ್ನು ಇಟ್ಟಿರುವ ಪ್ರಧಾನಿ ಶ್ರೀ @narendramodi ಅವರಿಗೆ ಹಾಗೂ ವಿತ್ತ ಸಚಿವರಾದ ಶ್ರೀಮತಿ @nsitharaman ಅವರಿಗೆ ಧನ್ಯವಾದಗಳು.' ಎಂದಿತ್ತು ಬಿಜೆಪಿ. ಆದರೆ ಬಿಜೆಪಿ ಮಾಡಿದ್ದ ಟ್ವೀಟ್ ಈಗ ತಿರುಗು ಬಾಣವಾಗಿದೆ.

ತೆರಿಗೆ ಮೋಸ ಅಂತಿದ್ದಾರೆ ಕನ್ನಡಿಗರು!

ಹೌದು, ಕೇಂದ್ರ ಸರ್ಕಾರ ಕರ್ನಾಟಕದ ಪಾಲಿನ ತೆರಿಗೆ ಹಣ ವಾಪಸ್ ನೀಡಿದ ಕುರಿತಾಗಿ ಬಿಜೆಪಿ ಮಾಡಿದ ಟ್ವೀಟ್‌ಗೆ ಆಕ್ರೋಶ ವ್ಯಕ್ತವಾಗುತ್ತಿದೆ. ನಮ್ಮ ಹಣ ನಮಗೆ ಕೊಟ್ಟಿದ್ದಾರೆ, ಅದರಲ್ಲೂ ಮೋಸ ಆಗಿದೆ ಅಂತಾ ಕನ್ನಡಿಗರು ಆಕ್ರೋಶ ಹೊರಹಾಕುತ್ತಿದ್ದಾರೆ. ಬಿಜೆಪಿಯ ಟ್ವೀಟ್‌ಗೆ ಜನರ ರೀಪ್ಲೇ ಹೇಗಿದೆ ಅಂದ್ರೆ, '14000 ಕೋಟಿ ಕೊಟ್ಟ ರಾಜ್ಯಕ್ಕೆ 4000 ಕೋಟಿ ಕೊಡೋದು ದೊಡ್ಡ ಸಾಧನೆಯೇ ಬಿಡಿ. 10,000+ ಕೋಟಿಯಷ್ಟು ಹಣ ರಾಜ್ಯಕ್ಕೆ ನಷ್ಟ ಪ್ರತಿ ತಿಂಗಳು. ಇ ಹಣವು ರಾಜ್ಯದಲ್ಲೇ ಉಳಿಯುವಂತಾಗಿದ್ದರೆ ರಾಜ್ಯವು ಸಾಲ ಮಾಡೋ ಪ್ರಮಯವೇ ಬರುತ್ತಿರಲಿಲ್ಲ. Devolution ಹೆಸರಿನಲ್ಲಿ ಬೇರೆ ರಾಜ್ಯಗಳಿಗೆ ಬಿಟ್ಟಿ ಭಾಗ್ಯ ಕೊಡೋದೇ ಆಯ್ತು!' ಅಂತಾ ಸಾಗರ್ ರವಿನಾಥ್ ಅನ್ನೋರು ರೀಪ್ಲೇ ಕೊಟ್ಟಿದ್ದಾರೆ.

ಹೀಗೆ ಬಿಜೆಪಿ ಮಾಡಿದ ಟ್ವೀಟ್‌ಗೆ ಹಲವರು ರೀಪ್ಲೇ ಕೊಟ್ಟು, ಕರ್ನಾಟಕಕ್ಕೆ ತೆರಿಗೆ ಹಂಚಿಕೆ ವಿಚಾರದಲ್ಲಿ ಮೋಸವಾಗಿದೆ ಅಂತಿದ್ದಾರೆ. ಇನ್ನೋಂದ್ಕಡೆ ಉತ್ತರ ಪ್ರದೇಶ, ಬಿಹಾರ ಸೇರಿ ಮಧ್ಯಪ್ರದೇಶ ಮತ್ತಿತರ ರಾಜ್ಯಗಳಿಗೆ ಹೋಗುತ್ತಿರುವ ಅತಿಹೆಚ್ಚಿನ ತೆರಿಗೆ ಪಾಲಿನ ಕುರಿತಾಗಿ ನೀವು ಲೆಕ್ಕ ಹೇಳಿ ಮೊದಲು ಅಂತಾ ಬಿಜೆಪಿಗೆ ಸವಾಲು ಹಾಕಿದ್ದಾರೆ. ಹೀಗೆ ಗ್ಯಾರಂಟಿಗಳ ವಿಚಾರಕ್ಕೆ ನಡೆಯುತ್ತಿದ್ದ ಗುದ್ದಾಟ ತೆರಿಗೆ ಹಂಚಿಕೆ ವಿಚಾರಕ್ಕೆ ಬಂದು ನಿಂತಿದೆ. ಕೇಂದ್ರದ ನರೇಂದ್ರ ಮೋದಿ ಅವರ ಸರ್ಕಾರ ತೆರಿಗೆ ಹಂಚಿಕೆಯಲ್ಲಿ ಕರ್ನಾಟಕಕ್ಕೆ ಭಾರಿ ಅನ್ಯಾಯ ಮಾಡುತ್ತಿದೆ ಅಂತಾ ಕನ್ನಡಿಗರು ಆರೋಪ ಮಾಡುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+