ರಾಜ್ಯದಲ್ಲಿ ದೇವಸ್ಥಾನಗಳ ಜಮೀನಿನ ಒತ್ತುವರಿ ತೆರೆಯಲು ಕಠಿಣ ಕ್ರಮ: ಸಚಿವೆ ಶಶಿಕಲಾ ಜೊಲ್ಲೆ

ಬೆಂಗಳೂರು ಡಿಸೆಂಬರ್‌ 17: ರಾಜ್ಯದಲ್ಲಿ ದೇವಸ್ಥಾನಗಳ ಜಮೀನು ಒತ್ತುವರಿ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.

ಈ ಕುರಿತು ಮಾತನಾಡಿದ ಅವರು, ಬೆಂಗಳೂರು ನಗರ ತಿಗಳರಪೇಟೆಯಲ್ಲಿರುವ ಶ್ರೀ ಧರ್ಮರಾಯಸ್ವಾಮಿ ದೇವಾಲಯಕ್ಕೆ ಸೇರಿದ 15 ಎಕರೆ 12 ಗುಂಟೆ ಜಮೀನು ಒತ್ತುವರಿ ತೆರವು ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಶೀಘ್ರದಲ್ಲಿ ಕಾರ್ಯಾಚರಣೆ ನಡೆಸಲಾಗುವುದು ಎಂದು ಶಶಿಕಲಾ ಜೊಲ್ಲೆ ಹೇಳಿದರು.

ಇಂದು ನಗರದ ವಿವೇಕನಗರದಲ್ಲಿರುವ ನೀಲಸಂದ್ರ ಗ್ರಾಮದ ಸರ್ವೇ ನಂ 79 ರಲ್ಲಿ 15 ಎಕರೆ 12 ಗುಂಟೆ ಜಮೀನಿನ ಒತ್ತುವರಿಯ ಬಗ್ಗೆ ಪರಿವೀಕ್ಷಣೆ ನಡೆಸಿದರು. ಬೆಂಗಳೂರು ನಗರದ ಪ್ರಮುಖ ದೇವಸ್ಥಾನಗಳಲ್ಲಿ ಒಂದಾಗಿರುವ ಶ್ರೀ ಧರ್ಮರಾಯಸ್ವಾಮಿ ದೇವಾಲಯಕ್ಕೆ ಸೇರಿದ ಆಸ್ತಿಗಳು ಒತ್ತುವರಿ ಆಗಿರುವ ಬಗ್ಗೆ ಸಾಕಷ್ಟು ಚರ್ಚೆಗಳು ಆಗಿವೆ. 1965 ರಿಂದಲೂ ಈ ಜಮೀನಿನ ಬಗ್ಗೆ ನ್ಯಾಯಾಲಯದಲ್ಲಿ ಸಾಕಷ್ಟು ದಾವೆಗಳು ನಡೆದಿವೆ. ಈ ಎಲ್ಲಾ ದಾವೆಗಳಲ್ಲೂ ನಮ್ಮ ಪರ ಆದೇಶ ಬಂದಿದೆ. ಆದರೂ ಕೂಡಾ ಇದುವರೆಗೂ ದೇವಸ್ಥಾನಕ್ಕೆ ಸೇರಿದ ಜಮೀನನ್ನ ಸರಕಾರ ತನ್ನ ವಶಕ್ಕೆ ತಗೆದುಕೊಳ್ಳಲು ಸಾಧ್ಯವಾಗಿಲ್ಲ. ಈಗ ಈ ಪ್ರಕರಣವನ್ನು ಸರಕಾರ ಗಂಭೀರವಾಗಿ ತಗೆದುಕೊಂಡಿದೆ. ಇಂದು ಮಾನ್ಯ ವಿಧಾನಪರಿಷತ್ತಿನ ಸದಸ್ಯರಾದ ರವಿಕುಮಾರ್‌ ಅವರ ಜೊತೆಯಲ್ಲಿ ಒತ್ತುವರಿ ಜಮೀನಿನ ಪರಿವೀಕ್ಷಣೆ ನಡೆಸಿದ್ದು, ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಶೀಘ್ರದಲ್ಲಿ ಒತ್ತುವರಿ ತೆರವುಗೊಳಿಸಲಾಗುವುದು ಎಂದು ಸಚಿವರು ತಿಳಿಸಿದರು.

ಮೊದಲ ಹಂತದಲ್ಲಿ ಖಾಲಿ ಜಾಗಕ್ಕೆ ಕಾಂಪೌಂಡ್‌

ಎಂ ಮುನಿಸ್ವಾಮಿ ಎಂಬುವವರು ಕಳೆದ ಹಲವಾರು ದಶಕಗಳಿಂದ ಈ ಭೂಮಿಯ ಬಗ್ಗೆ ಹಲವಾರು ನ್ಯಾಯಾಲಯಗಳಲ್ಲಿ ದೂರಗಳನ್ನ ದಾಲಿಸಿದ್ದಾರೆ. ಸುಮಾರು 7 ಬಾರಿ ವಿವಿಧ ನ್ಯಾಯಾಲಯ ಈ ಜಮೀನು ದೇವಸ್ಥಾನಕ್ಕೆ ಸೇರಿದ್ದು ಎಂಬ ಆದೇಶಗಳು ಸಿಕ್ಕಿವೆ. ಆದರೆ ಅದರ ಮೇಲೆ ಮತ್ತೆ ಇನ್ನೊಂದು ದಾವೆಯನ್ನ ಹೂಡುವ ಮೂಲಕ ಈ ವಿಷಯವನ್ನು ಮತ್ತಷ್ಟು ಎಳೆಯುವ ಪ್ರಯತ್ನ ಮಾಡಲಾಗುತ್ತಿದೆ. ಈ ಪ್ರಕರಣಕ್ಕೆ ಒಂದು ತಾರ್ಕಿಕ ಅಂತ್ಯ ನೀಡುವ ನಿಟ್ಟಿನಲ್ಲಿ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಇಂದೇ ಬೆಂಗಳೂರು ನಗರ ಜಿಲ್ಲಾಧಿಕಾರಿಗಳಿಗೆ ಹಾಗೂ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ಪತ್ರ ಬರೆದು, ಪ್ರಸ್ತುತ ಖಾಲಿ ಇರುವ ಜಮೀನಿಗೆ ಕಾಂಪೌಂಡ್‌ ನಿರ್ಮಿಸಲು ಕ್ರಮಗಳನ್ನು ತಗೆದುಕೊಳ್ಳಲಾಗುವುದು ಎಂದರು.

Strict action to open encroachment of temple land in state says shashikala jolle

ದೇವಸ್ಥಾನಗಳಿಗೆ ಸೇರಿದ ಜಮೀನಿನ ಒತ್ತುವರಿ ಪ್ರಕರಣಗಳನ್ನು ರಾಜ್ಯ ಸರಕಾರ ಗಂಭೀರವಾಗಿ ಪರಿಗಣಿಸಿದೆ. ಈ ಒತ್ತುವರಿಗಳನ್ನು ತೆರವುಗೊಳಿಸಲು ಕಠಿಣ ಕ್ರಮ ಕೈಗೊಳ್ಳಲಾಗುವುದು. ಯಾವುದೇ ಕಾರಣಕ್ಕೂ ದೇವಸ್ಥಾನಗಳಿಗೆ ಸೇರಿದ ಜಮೀನುಗಳನ್ನ ಒತ್ತುವರಿ ಪಡಿಸಿಕೊಂಡಿರುವರನ್ನು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಧರ್ಮರಾಯಸ್ವಾಮಿ ದೇವಸ್ಥಾನ ಜಮೀನು ಅನಧಿಕೃತ ಪರಭಾರೆ ಅಧಿಕಾರಿಗಳ ವಿರುದ್ದವೂ ಕ್ರಮ

ಕಳೆದ 30 ವರ್ಷಗಳಿಂದ ಸುಮಾರು 229 ಕಟ್ಟಡಗಳು ನಿರ್ಮಾಣವಾಗಿವೆ. ಈ ಕಟ್ಟಡಗಳಿಗೆ ವಿದ್ಯುತ್‌, ನೀರು ಸರಬರಾಜು ಹೀಗೆ ಹಲವು ಸೌಲಭ್ಯಗಳನ್ನು ಒದಗಿಸಲಾಗಿದೆ. ಅನಧಿಕೃತವಾಗಿ ಕಟ್ಟಲಾಗಿರುವ ಕಟ್ಟಡಗಳಿಗೆ ಸೌಲಭ್ಯಗಳನ್ನು ನೀಡಿರುವ ಹಾಗೂ ಕಟ್ಟಡಗಳನ್ನು ನಿರ್ಮಾಣಕ್ಕೆ ಅವಕಾಶ ನೀಡಿರುವ ಅಧಿಕಾರಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.

Strict action to open encroachment of temple land in state says shashikala jolle

ಒತ್ತುವರಿ ತೆರವಿಗೆ ಒತ್ತುವರಿ ಇಲಾಖಾ ಮುಖ್ಯಸ್ಥರುಗಳ ನೇತೃತ್ವದ ಸಮಿತಿ

ಧರ್ಮರಾಯ ಸ್ವಾಮಿ ದೇವಸ್ಥಾನದ ಜಮೀನು ಒತ್ತುವರಿ ತೆರವಿಗೆ ಬಿಬಿಎಂಪಿ, ಬಿಡಬ್ಲೂಎಸ್‌ಎಸ್‌ಬಿ, ಪೊಲೀಸ್‌, ಕಂದಾಯ ಹೀಗೆ ಹಲವಾರು ಇಲಾಖೆಗಳ ಸಮನ್ವಯದ ಅಗತ್ಯತೆ ಇದೆ. ಸಮನ್ವಯಕ್ಕಾಗಿ ಇಲಾಖಾ ಮುಖ್ಯಸ್ಥರುಗಳ ಸಮಿತಿಯನ್ನು ರಚಿಸುವ ಬಗ್ಗೆ ಚಿಂತಿಸಲಾಗುವುದು. ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಈ ಬಗ್ಗೆ ತೀರ್ಮಾನ ಕೈಗೊಳ್ಳುವುದಾಗಿ ಸಚಿವರು ತಿಳಿಸಿದರು.

ಖಾಸಗಿ ವ್ಯಕ್ತಿಗಳ ಕಾಂಪೌಂಡ್‌ ಅಧಿಕಾರಿಗಳ ಮೇಲೆ ಸಚಿವರ ಗರಂ

ದೇವಸ್ಥಾನಕ್ಕೆ ಸೇರಿದ ಜಮೀನಿನಲ್ಲಿ ಖಾಸಗಿ ವ್ಯಕ್ತಿಗಳು ಕಾಂಪೌಂಡ್‌ ನಿರ್ಮಿಸಿ ತಮ್ಮ ಹೆಸರಿನ ಬೋರ್ಡ್‌ ಹಾಕಿರುವುದನ್ನ ಕಂಡು ಸಚಿವರು ಅಧಿಕಾರಿಗಳ ಮೇಲೆ ಗರಂ ಆದರು. ನ್ಯಾಯಾಲಯದ ಆದೇಶವಿದ್ದರೂ ಕೂಡಾ ಇಂತಹ ಬೋರ್ಡ್‌ಗಳ ಅಳವಡಿಕೆಗೆ ಅವಕಾಶ ನೀಡಿರುವುದು ಸರಿಯಲ್ಲ, ಕೂಡಲೇ ಬೋರ್ಡ್‌ಗಳನ್ನು ತೆರವುಗೊಳಿಸಿ ಎಂದು ಸೂಚನೆ ನೀಡಿದರು.

ಪರಿವೀಕ್ಷಣೆಯಲ್ಲಿ ವಿಧಾನಪರಿಷತ್‌ ಸದಸ್ಯರಾದ ರವಿಕುಮಾರ್‌, ಇಲಾಖೆಯ ಪ್ರಮುಖ ಅಧಿಕಾರಿಗಳು ಉಪಸ್ಥಿತರಿದ್ದರು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+