ಮಳೆಯಿಂದ ಹಾನಿ: ತುರ್ತು ಪರಿಹಾರಕ್ಕೆ 200 ಕೋಟಿ ಬಿಡುಗಡೆ

ಬೆಂಗಳೂರು, ಆಗಸ್ಟ್‌ 28: ಮಳೆಯಿಂದ ರಾಜ್ಯದ ಹಲವು ಜಿಲ್ಲೆಗಳು ತೊಂದರೆಗೀಡಾಗಿದ್ದು, ತುರ್ತು ಪರಿಹಾರ ಕಾಮಗಾರಿಗಾಗಿ ರಾಜ್ಯ ಸರ್ಕಾರವು 82 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ.

ಸುದ್ದಿಗೋಷ್ಠಿ ನಡೆಸಿ ಈ ಬಗ್ಗೆ ಮಾಹಿತಿ ನೀಡಿದ ಕಂದಾಯ ಸಚಿವ ಆರ್‌.ವಿ.ದೇಶಪಾಂಡೆ, ಇದು ತುರ್ತು ಕಾಮಗಾರಿಗೆಂದು ಬಿಡುಗಡೆ ಮಾಡಿರುವ ಮೊತ್ತವಾಗಿದ್ದು, ಹಾನಿ ಸಮೀಕ್ಷೆ ಅಂತಿಮವಾದ ಬಳಿಕ ಒಟ್ಟು ಪರಿಹಾರ ಬಿಡುಗಡೆ ಮಾಡಲಾಗುತ್ತದೆ ಎಂದಿದ್ದಾರೆ.

State government released 200 crore for emergency relief for rain affected districts

ಮಳೆಯಿಂದ ಅತಿ ಹೆಚ್ಚು ಹಾನಿಗೊಳಗಾಗಿರುವ ಕೊಡಗಿಗೆ ಹೆಚ್ಚಿನ ಮೊತ್ತ ನೀಡಲಾಗಿದ್ದು, ಕೊಡಗಿಗೆ 85 ಕೋಟಿ ಮೀಸಲಿಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಗೆ 20.88 ಕೋಟಿ, ಉಡುಪಿಗೆ 14.54 ಕೋಟಿ, ಚಿಕ್ಕಮಗಳೂರಿಗೆ 25.13 ಕೋಟಿ, ಹಾಸನಕ್ಕೆ 27.13 ಕೋಟಿ, ಉತ್ತರ ಕನ್ನಡಕ್ಕೆ 11.51 ಕೋಟಿ, ಶಿವಮೊಗ್ಗಕ್ಕೆ 15 ಕೋಟಿ ನೀಡಲಾಗಿದೆ.

ಕೊಡಗಿನಲ್ಲಿ ಪ್ರವಾಹ ಹಾಗೂ ಭೂಕುಸಿತದಿಂದಾಗಿ ಭಾರಿ ಹಾನಿ ಸಂಭವಿಸಿದೆ. ಗುರುವಾರದಿಂದ ನಷ್ಟದ ಸಮೀಕ್ಷೆ ನಡೆಯಲಿದ್ದು, ಗುರುವಾರ ಕೇಂದ್ರ ಗೃಹ ಸಚಿವರನ್ನು ಭೇಟಿ ಮಾಡಿ ನೆರವಿಗೆ ಮನವಿ ಮಾಡಲಾಗುವುದು ಎಂದು ಅವರು ಮಾಹಿತಿ ನೀಡಿದರು.

ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಈ ಮೊತ್ತವು ಕೇವಲ ತುರ್ತು ಪರಿಹಾರ ಕಾರ್ಯಕ್ಕೆ ಮಾತ್ರವೇ ಆಗಿದ್ದು, ನಷ್ಟ ಪರಿಹಾರ ಅಲ್ಲ. ಮನೆ ಹಾನಿ, ಬೆಳೆ ಹಾನಿ, ಜೀವ ಹಾನಿ ಆದವರಿಗೆ ಇನ್ನಷ್ಟೆ ಪರಿಹಾರ ಘೋಷಿಸಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+