Government Employees: ಸರ್ಕಾರಿ ನೌಕರರಿಗೆ ಬಡ್ತಿಯಲ್ಲಿ ಮೀಸಲಾತಿ : ಸರ್ಕಾರದಿಂದ ಮಹತ್ವದ ಆದೇಶ
ಬೆಂಗಳೂರು, ಸೆಪ್ಟೆಂಬರ್ 27: ಎದ್ದು ಕಾಣುವ ಅಂಗವೈಕಲ್ಯವನ್ನುಳ್ಳ ಸರ್ಕಾರಿ ನೌಕರರಿಗೆ ಗ್ರೂಪ್-ಬಿ ಮತ್ತು ಗ್ರೂಪ್-ಎ (ಕಿರಿಯ ಶ್ರೇಣಿ) ವೃಂದಗಳಿಗೆ ನೀಡುವ ಬಡ್ತಿಯಲ್ಲಿ ಮೀಸಲಾತಿಯನ್ನು ಕಲ್ಪಿಸುವ ಕುರಿತು ಕರ್ನಾಟಕ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.
ಈ ಕುರಿತು ಆದೇಶ ಹೊರಡಿಸಿರುವ ರಾಜ್ಯ ಸರ್ಕಾರ, ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ, ಉಲ್ಲೇಖ (1)ರ ಸರ್ಕಾರದ ಆದೇಶ ಸಂಖ್ಯೆ:ಸಿಆಸುಇ 121 ಸೆನನಿ 2020ರಲ್ಲಿ ರಾಜ್ಯ ಸಿವಿಲ್ ಸೇವೆಗಳಲ್ಲಿನ ಗ್ರೂಪ್ 'ಡಿ' ಯಿಂದ ಗ್ರೂಪ್ 'ಸಿ' ಮತ್ತು ಗ್ರೂಪ್ 'ಸಿ' ಯಿಂದ ಗ್ರೂಪ್ 'ಬಿ' ವೃಂದದ ಹುದ್ದೆಗಳಿಗೆ ನೀಡುವ ಮುಂಬಡ್ತಿಯಲ್ಲಿ ಎದ್ದುಕಾಣುವ ಅಂವೈಕಲ್ಯವುಳ್ಳ ಸರ್ಕಾರಿ ನೌಕರರಿಗೆ ಕಲ್ಪಿಸಲಾಗಿರುವ ಶೇಕಡ 4ರಷ್ಟು ಮೀಸಲಾತಿ ಆಸ್ಪದವನ್ನು ದಿನಾಂಕ:28/03/2023ರ ಆದೇಶದಲ್ಲಿನ ಎಲ್ಲಾ ಷರತ್ತು ಮತ್ತು ಉಪಬಂಧಗಳಲ್ಲಿ ಯಾವುದೇ ಬದಲಾವಣೇ ಇಲ್ಲದೆ ಗ್ರೂಪ್ 'ಸಿ' ಯಿಂದ ಗ್ರೂಪ್ 'ಬಿ' ಮತ್ತು ಗ್ರೂಪ್ 'ಬಿ' ಯಿಂದ ಗ್ರೂಪ್ 'ಎ' (ಕಿರಿಯ ಶ್ರೇಣಿ) ವೃಂದದ ಹುದ್ದೆಗಳಿಗೂ ಸಹ ವಿಸ್ತರಿಸಿ ಆದೇಶಿಸಿ ಅವಕಾಶ ಕಲ್ಪಿಸಲಾಗಿರುತ್ತದೆ.

ಅದರನ್ವಯ ಜಲಸಂಪನ್ಮೂಲ ಇಲಾಖೆಯಲ್ಲಿ ನೇಮಕಾತಿಗೊಂಡು ಕಾರ್ಯನಿರ್ವಹಿಸುತ್ತಿರುವ ಸಹಾಯಕ ಇಂಜಿನಿಯರರ ಗ್ರೂಪ್ 'ಬಿ' ಯಿಂದ ಗ್ರೂಪ್ 'ಎ' (ಕಿರಿಯ ಶ್ರೇಣಿ) ವೃಂದದ ಹುದ್ದೆಗಳಿಗೆ ಅಂಗವಿಕಲ ಅಭ್ಯರ್ಥಿ ಮೀಸಲಾತಿಯಡಿಯಲ್ಲಿ ಅರ್ಹ ದಿನಾಂಕದಿಂದ ಮುಂಬಡ್ತಿಗೆ ಪರಿಗಣಿಸಬೇಕೆಂದು ಉಲ್ಲೇಖ (2)ರ ಸರ್ಕಾರದ ಪತ್ರದನ್ವಯ ಅಂಗವೈಕಲ್ಯಕ್ಕೆ ಸಂಬಂಧಿಸಿದಂತೆ ಪ್ರಮಾಣ ಪತ್ರ ಹಾಗೂ ಮೀಸಲಾತಿ ಪರಿಗಣಿಸಬಹುದಾದ ಎಲ್ಲಾ ನೌಕರರ ಇತರೆ ವಿವರಗಳನ್ನು ಜೈಷ್ಮತೆಯನುಸಾರ ಸೂಕ್ತ ಪ್ರಸ್ತಾವನೆಯೊಂದಿಗೆ ಸರ್ಕಾರಕ್ಕೆ ಸಲ್ಲಿಸಬೇಕಾಗಿರುತ್ತದೆ.
ಆದ್ದರಿಂದ ಜಲಸಂಪನ್ಮೂಲ ಇಲಾಖೆಯ ಜೇಷ್ಠತೆಯಲ್ಲಿರುವ ಎದ್ದುಕಾಣುವ ಅಂವೈಕಲ್ಯವುಳ್ಳ ಸಹಾಯಕ ಇಂಜಿನಿಯರರ ಸೇವಾ ವಿವರಗಳನ್ನು ಹಾಗೂ ಪ್ರಮಾಣ ಪತ್ರಗಳನ್ನು ದೃಢೀಕರಿಸಿ ಈ ಕಛೇರಿಗೆ ಸಲ್ಲಿಸಲು ಈ ಮೂಲಕ ಕೋರಲಾಗಿದೆ ಎಂದು ರಾಜ್ಯ ಸರ್ಕಾರ ಆದೇಶದಲ್ಲಿ ತಿಳಿಸಿದೆ.
ಎದ್ದು ಕಾಣುವ ಅಂಗವೈಕಲ್ಯವನ್ನುಳ್ಳ ಸರ್ಕಾರಿ ನೌಕರರಿಗೆ ಸಹಾಯಕ ಇಂಜಿನಿಯರ್ (ವಿಭಾಗ-1&2) ಗ್ರೂಪ್-ಬಿ ವೃಂದದಿಂದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ (ವಿಭಾಗ-1&2) ಗ್ರೂಪ್-ಎ (ಕಿರಿಯ ಶ್ರೇಣಿ) ವೃಂದಗಳಿಗೆ ನೀಡುವ ಮುಂಬಡ್ತಿಯಲ್ಲಿ ಮೀಸಲಾತಿಯನ್ನು ಕಲ್ಪಿಸಲು ಸರ್ಕಾರ ಆದೇಶ ಹೊರಡಿಸಿದೆ.
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಉಲ್ಲೇಖ(1)ರಲ್ಲಿ ಸಲ್ಲಿಸಿರುವ ಪ್ರಸ್ತಾವನೆಯನ್ನು ಪರಿಶೀಲಿಸಲಾಯಿತು ಹಾಗೂ ಸದರಿ ವಿಷಯಕ್ಕೆ ಸಂಬಂಧಿಸಿದ ಮೂಲ ಮನವಿ ಪತ್ರಗಳನ್ನು ಹಾಗೂ ಅರ್ಜಿಗಳನ್ನು ಇದರೊಂದಿಗೆ ಲಗತ್ತಿಸಿದ. ಸದರಿ ಮನವಿಯಲ್ಲಿ ಎದ್ದು ಕಾಣುವ ಅಂಗವೈಕಲ್ಯವನ್ನುಳ್ಳ ಸರ್ಕಾರಿ ನೌಕರರಿಗೆ ಸಹಾಯಕ ಇಂಜಿನಿಯರ್ (ವಿಭಾಗ-1&2) ಗ್ರೂಪ್ ಬಿ ವೃಂದದಿಂದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ (ವಿಭಾಗ-1&2) ಗ್ರೂಪ್-ಎ ಕಿರಿಯ ಶ್ರೇಣಿ) ವೃಂದಗಳಿಗೆ ನೀಡುವ ಮುಂಬಡ್ತಿಯಲ್ಲಿ ಮೀಸಲಾತಿಯನ್ನು ಕಲ್ಪಿಸಲು ದಿನಾಂಕ:17.5.2025ರ ಸರ್ಕಾರದ ಆದೇಶದಂತೆ ಕ್ರಮ ವಹಿಸುವ ಸಲುವಾಗಿ ಸಹಾಯಕ ಇಂಜಿನಿಯರ್ ವೃಂದದಲ್ಲಿ ನೇಮಕಾತಿ ಹೊಂದಿರುವ ಎದ್ದು ಕಾಣುವ ಅಂಗವೈಕಲ್ಯವುಳ್ಳ ನೌಕರರ ನೇಮಕಾತಿ ಆದೇಶ, ಅಂಗ ವೈಕಲ್ಯಕ್ಕೆ ಸಂಬಂಧಿಸಿದ ಪ್ರಮಾಣ ಪತ್ರ ಹಾಗೂ ಮೀಸಲಾತಿಗೆ ಪರಿಗಣಿಸಬಹುದಾದ ಎಲ್ಲಾ ನೌಕರರ ಇತರೆ ವಿವರಗಳನ್ನು ಜೇಷ್ಠತೆಯನುಸಾರ ಸೂಕ್ತ ಪ್ರಸ್ತಾವನೆಯೊಂದಿಗೆ ಸರ್ಕಾರಕ್ಕೆ ಸಲ್ಲಿಸುವಂತೆ ತಮ್ಮನ್ನು ಕೋರಲು ನಿರ್ದೇಶಿತನಾಗಿದ್ದೇನೆ.












Click it and Unblock the Notifications