Bengaluru Stampede: RCB ವಿಜಯೋತ್ಸವಕ್ಕೆ ರಾಜ್ಯ ಸರ್ಕಾರ ಅನುಮತಿ ಕೊಟ್ಟಿರಲಿಲ್ಲ: ಸದನದಲ್ಲಿ ಸಿದ್ದರಾಮಯ್ಯ ಸ್ಪಷ್ಟನೆ
ಬೆಂಗಳೂರು, ಆಗಸ್ಟ್ 22: RCB ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸದನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉತ್ತರಿಸಿದ್ದಾರೆ. ಆರ್.ಸಿ.ಬಿ, ಡಿ.ಎನ್.ಎ. ಮತ್ತು ಕೆ.ಎಸ್.ಸಿ.ಎ. ಅವರಿಗೆ ಸ್ಟೇಡಿಯಂನಲ್ಲಿ ಕಾರ್ಯಕ್ರಮ ಮಾಡಲು ಸರ್ಕಾರ ಅನುಮತಿ ಕೊಟ್ಟಿರಲಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪಷ್ಟಪಡಿಸಿದ್ದಾರೆ.
ಸದನದಲ್ಲಿ ಮಾತು ಮುಂದುವರೆಸಿದ ಸಿದ್ದರಾಮಯ್ಯ ಅವರು, ಆರ್. ಅಶೋಕ್ ಅವರು ಬಹುಶಃ ಜೂನ್ 4 ರಿಂದಲೆ ಹೇಗೆ ಮಾತನಾಡಬೇಕೆಂದು ತಯಾರಿ ಮಾಡಿಕೊಂಡ ಹಾಗೆ ಕಾಣುತ್ತದೆ. ಒಬ್ಬ ರಾಜಕಾರಣಿ ಹೇಗೆ ಮಾತನಾಡಬೇಕೊ ಹಾಗೆ ಮಾತನಾಡಿದ್ದಾರೆ. ತನ್ನ ವಾದ ಸರಣಿಗೆ ಪೂರಕವಾದ ವಿಚಾರಗಳನ್ನು ಪ್ರಸ್ತಾಪಿಸಿದರು. ಅಡ್ಡವಾಗುವ ಅನೇಕ ವಿಚಾರಗಳನ್ನು ಕೈ ಬಿಟ್ಟರು. ಪೊಲೀಸರು, ಆರ್‌ಸಿಬಿ ಮತ್ತು ಕೆಎಸ್‌ಸಿಎಗಳನ್ನು ಕ್ರಿಟಿಸೈಜ್ ಮಾಡಿದಂತೆ ಕಂಡರೂ ಅವರ ಪರವಾಗಿ ವಾದ ಮಾಡುವ ವಕೀಲರಂತೆಯೂ ಮಾತನಾಡಿದರು.

ಅಶೋಕ್ ವೈರ್ ಲೆಸ್ ಮಸೇಜ್ ಅಂತ ಏನು ಹೇಳಿದರೊ ಅದರ ಬಹುಪಾಲು ಅಂಶಗಳನ್ನು ಜಸ್ಟೀಸ್ ಮೈಖೇಲ್ ಕುನ್ಹಾ ವರದಿಯಲ್ಲಿ Mention ಮಾಡಿರುವ ಕ್ರೋನಾಲಜಿಯನ್ನು ಆಧರಿಸಿಯೇ ಮಾತನಾಡಿದ್ದಾರೆ. ನಾನು ಘಟನೆ ನಡೆದ ದಿನವೇ ತೀವ್ರ ವಿಷಾದ ವ್ಯಕ್ತಪಡಿಸಿದ್ದೇನೆ. ನಾನು ಮುಖ್ಯಮಂತ್ರಿಯಾಗುವ ಮೊದಲು ಮನುಷ್ಯ. ಮಕ್ಕಳನ್ನು ಕಳೆದುಕೊಂಡ ದುಃಖದ ಭಾರ ಏನು ಎಂಬ ಅರಿವು ನನಗಿದೆ. ನಾನು ಮುಖ್ಯಮಂತ್ರಿಯಾಗಿ ಕೆಲಸ ಮಾಡುತ್ತಿರುವ ಸಂದರ್ಭದಲ್ಲಿ ನಡೆದ ಈ ಘಟನೆ ನನ್ನನ್ನು ತೀವ್ರವಾಗಿ ಡಿಸ್ಟರ್ಬ್ ಮಾಡಿದೆ. ಮುಖ್ಯಮಂತ್ರಿಯಾಗದೇ ಇದ್ದಿದ್ದರೂ ಸಹ ಮನುಷ್ಯನಾದ ಕಾರಣಕ್ಕೆ ನನ್ನನ್ನು ದುಃಖಿತನನ್ನಾಗಿ ಮಾಡುತ್ತಿತ್ತು ಎಂಬುದನ್ನು ಅಂತಃಕರಣ ಪೂರ್ವಕವಾಗಿ ತಿಳಿಸಬಯಸುತ್ತೇನೆ.
ವ್ಯವಸ್ಥೆಯಲ್ಲಿನ ಲೋಪಗಳಿಂದ ವಿನಾಕಾರಣ ದುರಂತಕ್ಕೀಡಾದ ಮಕ್ಕಳಾಗಲಿ, ಕುಟುಂಬಗಳ ಸದಸ್ಯರಾಗಲಿ ಬದುಕಿರುವವನ್ನು ಶಾಶ್ವತ ದುಃಖದಲ್ಲಿ ಮುಳುಗಿಸುತ್ತವೆ. ಮಕ್ಕಳು ಬದುಕಿದ್ದರೆ ಯಾರ್ಯಾರು ಯಾವ ಯಾವ ಸಾಧನೆ ಮಾಡುತ್ತಿದ್ದರೋ ಯಾರಿಗೆ ಗೊತ್ತು? ಸುರೇಶ್‌ಕುಮಾರ್ ಅವರು ಸರ್ಕಾರವನ್ನು ಅಬೆಟರ್ ಎಂದು ಕರೆದರು. ಅವರು ಹಾಗೆ ಕರೆದದ್ದು ತಪ್ಪು ಸರಿಯೋ ಸದಸ್ಯರು ಮತ್ತು ಜನರು ತೀರ್ಮಾನಿಸುತ್ತಾರೆ. ನಾವು ಆಡಳಿತ ಪಕ್ಷದಲ್ಲಿ ಇರುವ ಕಾರಣ ನೀವು ಟೀಕೆ ಮಾಡುವುದು ಸಹಜ.
ನಾವು ಉತ್ತರ ಕೊಡಬೇಕಾಗಿದೆ. ಈಗಾಗಲೇ ಪರಮೇಶ್ವರ್ ಅವರು ಕೊಡಬೇಕಾದ ಉತ್ತರವನ್ನು ಕೊಟ್ಟಿದ್ದಾರೆ. ತುಂಬ ಟೆಕ್ನಿಕಲ್ಲಾದ ವಿವರಗಳನ್ನೂ ವಿವರಿಸಿದ್ದಾರೆ. ಹಾಗಾಗಿ ಆ ಆಯಾಮಗಳನ್ನು ನಾನು ಹೆಚ್ಚು ಟಚ್ ಮಾಡುವುದಿಲ್ಲ. ಈ ವಿಚಾರವನ್ನು ಆಡಳಿತ ಪಕ್ಷ-ವಿರೋಧ ಪಕ್ಷ, ಮಾಧ್ಯಮ, ಜನರು ಎಲ್ಲರೂ ಗಂಭೀರವಾಗಿ ಆಲೋಚಿಸಬೇಕಾದ ವಿಚಾರ ಎಂದು ನಾನು ಭಾವಿಸಿದ್ದೇನೆ. ಭಕ್ತಿ, ವ್ಯಕ್ತಿ ಆರಾಧನೆ ಎಂಬುದು ಈ ದೇಶದಲ್ಲಿ ಬಹಳ ಸುಲಭವಾಗಿ ಸಂಭವಿಸುವ ವಿಷಯ ಎಂದು ಬಾಬಾ ಸಾಹೇಬರು ನವೆಂಬರ್ 25, 1949 ರ ಭಾಷಣದಲ್ಲಿ ಪ್ರಸ್ತಾಪಿಸಿದ್ದಾರೆ.
ಕಳೆದ ಕೆಲವು ವರ್ಷಗಳಲ್ಲಿ ಸಂಭವಿಸಿದ ಘಟನೆಗಳನ್ನು ನೋಡಿದರೆ ಅನೇಕ ಸಾರಿ ಆತಂಕವಾಗುತ್ತದೆ. ಜನರ ಮನಸ್ಸನ್ನು ಉನ್ಮಾದಗ್ರಸ್ತ ಮನಸ್ಥಿತಿಗೆ ಕೊಂಡೊಯ್ಯುವವರೂ ಕೂಡ ಈ ದುರಂತಕ್ಕೆ ಕಾರಣ ಅಲ್ಲವೇ ಎಂದು ನಾನು ಕೇಳಬಯಸುತ್ತೇನೆ. ನಾನು ಯಾವ ಯಾವ ಸಂದರ್ಭದಲ್ಲಿ ಕಾಲ್ತುಳಿತ ಪ್ರಕರಣಗಳು ಸಂಭವಿಸಿವೆ ಎಂದು ನೋಡಿದೆ. ಸಾಮಾನ್ಯವಾಗಿ 3 ಸಂದರ್ಭಗಳಲ್ಲಿ ಈ ರೀತಿಯ ಘಟನೆಗಳು ನಡೆದಿವೆ. ಧಾರ್ಮಿಕ ಸ್ಥಳಗಳಲ್ಲಿ ಸೇರುವ ಜನಜಂಗುಳಿ, ಕ್ರೀಡೆ ಅಥವಾ ಇನ್ಯಾವುದೇ ರೀತಿಯ ಸೆಲಬ್ರೇಶನ್‌ಗಳು ಅಥವಾ ಶೋಕಾಚರಣೆಗಳ ಸಂದರ್ಭದಲ್ಲಿ ಮತ್ತು ಭಯದಿಂದ ತಪ್ಪಿಸಿಕೊಂಡು ಓಡುವಾಗ ಕಾಲ್ತುಳಿತಗಳಾಗಿವೆ.
ನಾನು ಮೊದಲೆ ಹೇಳಿದ ಹಾಗೆ, ಕ್ರೀಡೆ ಇನ್ನಿತರ ವಿಜಯೋತ್ಸವ ಕಾರ್ಯಕ್ರಮಗಳು, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಅತಿ ಹೆಚ್ಚು ಜನ ಮರಣ ಹೊಂದುತ್ತಿದ್ದಾರೆ. ಜೊತೆಯಲ್ಲಿ ಸೇತುವೆ ಕುಸಿತ ಮುಂತಾದ ಪ್ರಕರಣಗಳಲ್ಲಿ ಭಯದಿಂದ ಜೀವ ಉಳಿಸಿಕೊಳ್ಳಲು ಓಡುವಾಗ ಕಾಲ್ತುಳಿತ ಉಂಟಾಗಿ ಮರಣ ಹೊಂದುತ್ತಿದ್ದಾರೆ. ಆರ್. ಅಶೋಕ್ ಮತ್ತು ಸುರೇಶ್ ಕುಮಾರ್ ರವರು ಮಾತನಾಡುವಾಗ ಸಮೂಹ ಸನ್ನಿ ಎಂಬ ಪದವನ್ನು ಬಳಸಿದರು. ಅದನ್ನು ಇಂಗ್ಲೀಷಿನಲ್ಲಿ Mass Hysteria ಎನ್ನುತ್ತಾರೆ. ಈ ಸಮೂಹ ಸನ್ನಿ ಯಾಕಾಗುತ್ತದೆ. ಅದು ಬಡ ದೇಶ ಇರಲಿ, ಶ್ರೀಮಂತ ದೇಶ ಇರಲಿ ಎಲ್ಲಾ ಸಮಾಜಗಳಲ್ಲಿಯೂ ಸಂಭವಿಸುವ ಕಾಯಿಲೆ ಯಾಕಾಗಿದೆ? ಮತ್ತು ಅದಕ್ಕೆ ನೀಡಬೇಕಾದ ಚಿಕಿತ್ಸೆಗಳೇನು ಎನ್ನುವ ಬಗ್ಗೆ ನಾವುಗಳೆಲ್ಲರೂ ಗಂಭೀರವಾಗಿ ಯೋಚಿಸಬೇಕಾಗಿದೆ.
ಐಪಿಎಲ್ ಕ್ರಿಕೆಟ್ ಪಂದ್ಯಾವಳಿಗಳು ಪ್ರಾರಂಭವಾದ 18 ವರ್ಷಗಳಲ್ಲಿ ಆರ್.ಸಿ.ಬಿ. ಟ್ರೋಫಿ ಗೆದ್ದಿರಲಿಲ್ಲ. 2025 ರಲ್ಲಿ ನಡೆದ ಆವೃತ್ತಿಯಲ್ಲಿ ಮಾತ್ರ ಟ್ರೋಫಿ ಗೆದ್ದಿತ್ತು. ಆರ್.ಸಿ.ಬಿ. ಮಾಲೀರ‍್ಯಾರು ಎಂಬ ಸಂಗತಿ ನಗಣ್ಯವಾಗಿ ಬೆಂಗಳೂರು ಮತ್ತು ಕರ್ನಾಟಕ ವರ್ಸಸ್ ಪಂಜಾಬ್ ಎನ್ನುವ ಮನೋಭಾವನೆ ಉದ್ಭವವಾಗಿದೆ. ಕರ್ನಾಟಕದ ಬೆಂಗಳೂರಿನ ಹೆಸರನ್ನಿಟ್ಟುಕೊಂಡು ಆಟವಾಡುವ ತಂಡ, ಕರ್ನಾಟಕಕ್ಕೇ ಆಟವಾಡುತ್ತಿದೆ ಎಂಬ ಭಾವನಾತ್ಮಕವಾದ ಮನಸ್ಥಿತಿಯನ್ನು ಮಾಧ್ಯಮಗಳು ಹಾಗೂ ಸಮಾಜ ಜನರಲ್ಲಿ ಕಟ್ಟಿ ಬೆಳೆಸಿವೆ ಎಂದು ಹೇಳಿದರು.
-
ಹೊಸ 800 ಕೆಪಿಎಸ್ ಶಾಲೆ, ಇಂಗ್ಲಿಷ್ ಭಾಷಾ ತರಬೇತಿ: ಕರ್ನಾಟಕ ಬಜೆಟ್ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಭರಪೂರ ಘೋಷಣೆ -
ರಾಜ್ಯ ಬಜೆಟ್ನಲ್ಲಿ ಉದ್ಯೋಗಾಕಾಂಕ್ಷಿಗಳಿಗೆ ಸಿಹಿಸುದ್ದಿ: 56,432 ಹುದ್ದೆಗಳ ಭರ್ತಿಗೆ ಗ್ರೀನ್ ಸಿಗ್ನಲ್ -
Karnataka Budget 2026: 4.5 ಲಕ್ಷ ಕೋಟಿಯ ರಾಜ್ಯ ಬಜೆಟ್ನಲ್ಲಿ ಜನಸಾಮಾನ್ಯರಿಗೆ ಸಿಗುವುದೇ ಭರ್ಜರಿ ಕೊಡುಗೆ? -
ಕರ್ನಾಟಕದಲ್ಲಿ 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ಬಳಕೆ ನಿಷೇಧ: ಬಜೆಟ್ನಲ್ಲಿ ಘೋಷಣೆ -
Karnataka Budget 2026: ಮಾ.6 ಸಿದ್ದರಾಮಯ್ಯ 17ನೇ ಬಜೆಟ್ ಮಂಡನೆ, ಸಮಯ, ನೇರ ಪ್ರಸಾರ ಲಿಂಕ್, ವಿವರ -
''ತೆರಿಗೆ ಹೇರುವ ರಾಮಯ್ಯನಿಂದ ರಾಜ್ಯದಲ್ಲಿ 1.15 ಲಕ್ಷ ಕೋಟಿ ಸಾಲದ ಬಜೆಟ್ ಮಂಡನೆ'' -
ಮುಖ್ಯಮಂತ್ರಿಗಳಿಂದ ದಿಕ್ಕು-ದೆಸೆ ಇಲ್ಲದ ಅಭಿವೃದ್ಧಿ ಶೂನ್ಯ ಬಜೆಟ್ ಮಂಡನೆ: ಬಸವರಾಜ ಬೊಮ್ಮಾಯಿ -
45,000 ಕೋಟಿ ರೂಪಾಯಿ ಸಂಗ್ರಹ ಗುರಿ, ಮದ್ಯಪ್ರಿಯರಿಗೆ ದಿಢೀರ್ ಎದುರಾಯ್ತು ಆಘಾತ... Karnataka Budget 2026 -
Karnataka School Fee: ಪ್ರೈವೇಟ್ ಸ್ಕೂಲ್ ಫೀ ಮತ್ತೆ ದುಬಾರಿ: ಶುಲ್ಕ ಹೆಚ್ಚಿಸಲು ಸಜ್ಜಾದ ಖಾಸಗಿ ಶಾಲೆಗಳು, ಪೋಷಕರಲ್ಲಿ ಆತಂಕ -
ಶ್ರೀ ಮಾತಾ ವೈಷ್ಟೋದೇವಿ ಭಕ್ತರಿಗೆ ಕರ್ನಾಟಕ ಸರ್ಕಾರದ ವತಿಯಿಂದ ಭರ್ಜರಿ ಸುದ್ದಿ | Karnataka Budget 2026 -
5,00,00,000 ರೂಪಾಯಿ, ಕನ್ನಡ ನಾಡಿನ ಭಕ್ತರಿಗೆ ಭರ್ಜರಿ ಉಡುಗೊರೆ... Karnataka Budget 2026 -
ಸಿನಿಮಾ ಚಿತ್ರೀಕರಣ ಅನುಮತಿಗೆ "ಸಿನಿ ಮಿತ್ರ" ಆನ್ಲೈನ್ ವ್ಯವಸ್ಥೆ: ಸ್ಯಾಂಡಲ್ವುಡ್ಗೆ ಸಿದ್ದರಾಮಯ್ಯ ಬಜೆಟ್ ಕೊಟ್ಟಿದ್ದೇನು?












Click it and Unblock the Notifications