Get Updates
Get notified of breaking news, exclusive insights, and must-see stories!

ಕರ್ನಾಟಕದಲ್ಲಿ ಲೋಕ ಸಮರ: ಚುನಾವಣಾ ಆಯುಕ್ತರಿಂದ ಸುದ್ದಿಗೋಷ್ಠಿ

ಬೆಂಗಳೂರು, ಮಾರ್ಚ್ 10: ಲೋಕಸಭೆ ಚುನಾವಣೆ 7 ಹಂತದಲ್ಲಿ ನಡೆಯಲಿದ್ದು, ಈ ಕುರಿತಂತೆ ದೆಹಲಿಯ ವಿಜ್ಞಾನ ಭವನದಲ್ಲಿ ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಸುನಿಲ್ ಅರೋರಾ ಅವರು ಭಾನುವಾರ ಸಂಜೆ ಸುದ್ದಿಗೋಷ್ಠಿ ನಡೆಸಿ, ವಿವರ ನೀಡಿದರು. ಇದಾದ ಬಳಿಕ, ಕರ್ನಾಟಕದ ಚುನಾವಣಾ ಆಯುಕ್ತರಾದ ಸಂಜೀವ್ ಕುಮಾರ್ ಅವರು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದರು.

ಎರಡು ಹಂತದ ಚುನಾವಣೆ ಬಗ್ಗೆ ವಿವರಣೆ. ಕರ್ನಾಟಕದ ಕ್ಷೇತ್ರವಾರು ಮತದಾನ ದಿನಾಂಕಗಳನ್ನು ಸಂಜೀವ್ ಕುಮಾರ್ ಅವರು ಘೋಷಿಸಿದರು.

ಆದರೆ, ಮೊದಲ ಹಂತದಲ್ಲಿ ಯಾವ 14 ಕ್ಷೇತ್ರಗಳು ಹಾಗೂ ಎರಡನೇ ಹಂತದಲ್ಲಿ ಯಾವ 14 ಕ್ಷೇತ್ರಗಳಲ್ಲಿ ಮತದಾನ ನಡೆಯಲಿವೆ ಎಂಬ ವಿವರ ಇನ್ನು ಲಭ್ಯವಿಲ್ಲ. ಈ ಬಗ್ಗೆ ಅಪ್ಡೇಟ್ ಮಾಡಲಾಗುವುದು ಎಂದು ಹೇಳಿದರು.

State Election Commissioner Sanjeev Kumar Press Meet Silent features

ಮಿಕ್ಕಂತೆ ಸುದ್ದಿಗೋಷ್ಠಿಯ ಮುಖ್ಯಾಂಶಗಳು ಇಲ್ಲಿವೆ:
* ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿದ್ದರೆ, ಮತದಾನ ಮಾಡಲು 11 ಗುರುತಿನ ಚೀಟಿಗಳು ಸಾಕು, ಎಪಿಕ್ ಕಾರ್ಡ್ ಇಲ್ಲದಿದ್ದರೆ ಪರ್ವಾಗಿಲ್ಲ.
* 28 ಕ್ಷೇತ್ರಗಳಲ್ಲಿ 7 ಮೀಸಲು ಕ್ಷೇತ್ರಗಳನ್ನು ಕರ್ನಾಟಕ ಹೊಂದಿವೆ

* ಕರ್ನಾಟಕದ 7 ಮೀಸಲು ಕ್ಷೇತ್ರಗಳು: 5 ಎಸ್ ಸಿ(ಕೋಲಾರ, ಚಿತ್ರದುರ್ಗ, ಕಲಬುರಗಿ, ಚಾಮರಾಜನಗರ, ಚಿತ್ರದುರ್ಗ) 2 ಎಸ್ ಟಿ ಕ್ಷೇತ್ರಗಳು(ರಾಯಚೂರು ಬಳ್ಳಾರಿ)
* 5 ಕೋಟಿ, 3 ಲಕ್ಷ,46 ಸಾವಿರದ 721 ಮತದಾರರಿದ್ದಾರೆ. ಈ ಪೈಕಿ 2.54 ಕೋಟಿ ಪುರುಷರು ಹಾಗೂ 2.48 ಮಹಿಳಾ ಮತದಾರರು ಹಾಗೂ 4718 ಇತರೆ ಮತದಾರರಿದ್ದಾರೆ.
* 600 ಮಹಿಳೆಯರೆ ಇರುವ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಒಟ್ಟು ಮತಗಟ್ಟೆಗಳು 58, 186 ಸ್ಥಾಪಿಸಲಾಗುತ್ತದೆ. ಕಳೆದ ಬಾರಿಗೆ ಹೋಲಿಸಿದರೆ ಶೇ 7ರಷ್ಟು ಹೆಚ್ಚಳ.
* ಇವಿಎಂ, ವಿವಿಪ್ಯಾಟ್, ಅಭ್ಯರ್ಥಿಗಳ ಭಾವಚಿತ್ರ ಇರಲಿದೆ. ನೋಟಾ ಆಯ್ಕೆಯನ್ನು ನೀಡಲಾಗಿದೆ
* ಸೈನಿಕರಿಗಾಗಿ ಮತದಾನ ಮಾಡಲು ಇ ಮತದಾನದ ಅವಕಾಶ ನೀಡಲಾಗುತ್ತದೆ.
* ಫಾರ್ಮ್ 26ರಲ್ಲಿ ಕೆಲವು ಬದಲಾವಣೆಗಳಾಗಿವೆ. ಸುಪ್ರೀಂಕೋರ್ಟ್ ನಿರ್ದೇಶನದ ಪ್ರಕಾರ, ಎಲ್ಲಾ ಅಭ್ಯರ್ಥಿ ಹಾಗೂ ಪಕ್ಷಗಳು ತಮ್ಮ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಬಗ್ಗೆ ಸಿ(1) ಕಲಂ ಅಡಿಯಲ್ಲಿ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟಣೆ ಹೊರಡಿಸಬೇಕು.
* ಕರ್ನಾಟಕದಲ್ಲಿ ನೀತಿ ಸಂಹಿತೆ ಇಂದಿನಿಂದ ಜಾರಿಗೊಂಡಿದ್ದು, ಜಿಲ್ಲಾಧಿಕಾರಿಗಳು ಸಂಹಿತೆ ಅನುಷ್ಠಾನಗೊಳಿಸಲು ಬೇಕಾದ ಕ್ರಮಗಳ ಬಗ್ಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ನಿರ್ದೇಶನ ನೀಡಲಾಗಿದೆ.
* ಚುನಾವಣಾ ಅಕ್ರಮಗಳ ಬಗ್ಗೆ ಆಡಿಯೋ, ವಿಡಿಯೋ ಸಾಕ್ಷಿ ಮೂಲಕ ವರದಿ ಮಾಡಲು ಸಿ-ವಿಜಿಲ್ ಅಪ್ಲಿಕೇಷನ್ ಬಳಸಬಹುದು. 100 ನಿಮಿಷಗಳಲ್ಲಿ ಈ ಬಗ್ಗೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ. ಇದು ಕರ್ನಾಟಕದಲ್ಲಿ ಮೊದಲ ಬಾರಿಗೆ ಬಳಕೆಯಾಗಿದ್ದು ಎಂಬುದು ವಿಶೇಷ.
* 1950- ಇದು ಚುನಾವಣೆಗೆ ಸಂಬಂಧಿಸಿದ ಸಲಹೆ, ದೂರು, ಮಾಹಿತಿ ಪಡೆಯಲು ಬಳಸಬಹುದಾದ ಸಹಾಯವಾಣಿ

ಕರ್ನಾಟಕದಲ್ಲಿ ಚುನಾವಣೆ ವೇಳಾಪಟ್ಟಿ
ಮೊದಲ ಹಂತ:
ನಾಮಪತ್ರ ಸಲ್ಲಿಕೆಗೆ ಆರಂಭ : ಮಾರ್ಚ್ 19
ನಾಮಪತ್ರ ಸಲ್ಲಿಸಲು ಕೊನೆ ದಿನಾಂಕ: ಮಾರ್ಚ್ 26
ನಾಮಪತ್ರ ಪರಿಶೀಲನೆ ಕೊನೆ ದಿನಾಂಕ : ಮಾರ್ಚ್ 27
ಮತದಾನದ ದಿನಾಂಕ : ಏಪ್ರಿಲ್ 18
ಫಲಿತಾಂಶ : ಮೇ 23, 2019

2ನೇ ಹಂತದ ಮತದಾನ (14 ಕ್ಷೇತ್ರಗಳು)
* ಮಾರ್ಚ್ 28 ನಾಮಪತ್ರ ಸಲ್ಲಿಕೆ ಆರಂಭ
* ಏಪ್ರಿಲ್ 4 ನಾಮಪತ್ರ ಸಲ್ಲಿಕೆಗೆ ಕೊನೆ ದಿನ
* ಏಪ್ರಿಲ್ 5 ನಾಮಪತ್ರ ಪರಿಶೀಲನೆಗೆ ಕೊನೆ ದಿನ
* ಏಪ್ರಿಲ್ 8 ನಾಮಪತ್ರ ವಾಪಸ್ ಪಡೆಯಲು ಕೊನೆ ದಿನ
* ಏಪ್ರಿಲ್ 23 ಮತದಾನ
* ಮೇ 23 ಫಲಿತಾಂಶ

18 ಏಪ್ರಿಲ್ 2ನೇ ಹಂತ

ಬೆಂಗಳೂರು ದಕ್ಷಿಣ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ, ಬೆಂಗಳೂರು ಸೆಂಟ್ರಲ್, ಮಂಡ್ಯ, ತುಮಕೂರು, ಚಿತ್ರದುರ್ಗ,ದಕ್ಷಿಣ ಕನ್ನಡ, ಹಾಸನ, ಉಡುಪಿ, ಮೈಸೂರು, ಚಾಮರಾಜನಗರ, ಕೋಲಾರ, ಚಿಕ್ಕಬಳ್ಳಾಪುರ,

23ಏಪ್ರಿಲ್ 3ನೇ ಹಂತ
ಚಿಕ್ಕೋಡಿ, ಬೆಳಗಾವಿ, ಬಾಗಲಕೋಟೆ, ಬಿಜಾಪುರ, ರಾಯಚೂರು, ಗುಲ್ಬರ್ಗ, ಬೀದರ್, ಕೊಪ್ಪಳ, ಹಾವೇರಿ, ದಾರವಾಡ, ಉತ್ತರ ಕನ್ನಡ, ದಾವಣಗೆರೆ, ಶಿವಮೊಗ್ಗ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+