ಕ್ರೈಂ: ಬೆಂಗಳೂರಲ್ಲಿ ಸರಣಿ ಆತ್ಮಹತ್ಯೆ, ಕೊಲೆ

ಬೆಂಗಳೂರು, ಅ. 22: ಸುಬ್ರಮಣ್ಯಪುರ, ಜೆಪಿ ನಗರ ಹಾಗೂ ಕುಂಬಳಗೋಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೂರು ಪ್ರತ್ಯೇಕ ಆತ್ಮಹತ್ಯಾ ಪ್ರಕರಣಗಳು ಹಾಗೂ ಬುಧವಾರ ಬೆಳ್ಳಂಬೆಳ್ಳಗೆ ಮಂಜುನಾಥ ನಗರದಲ್ಲಿ ಕೊಲೆ ಪ್ರಕರಣ ಬೆಂಗಳೂರಿಗರನ್ನು ಬೆಚ್ಚಿ ಬೀಳಿಸಿದೆ.

ನಗರದ ಮಂಜುನಾಥ ನಗರದಲ್ಲಿ 28 ವರ್ಷದ ಪ್ರೀತಾ ಎಂಬ ಮಹಿಳೆಯನ್ನು ಆಕೆ ಪತಿ ಸಂತೋಷ್ ಎಂಬಾತ ಕೊಚ್ಚಿ ಕೊಂದಿದ್ದಾನೆ. ಚಿಕ್ಕಮಗಳೂರು ಮೂಲದ ಸಂತೋಷ್ ಹಾಗೂ ಶಿವಮೊಗ್ಗ ಮೂಲದ ಪ್ರೀತಾ ಮನೆಯವರು ಒಪ್ಪಿ ಇತ್ತೀಚೆಗೆ ಮದುವೆಯಾಗಿದ್ದರು. ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಸಂತೋಷ್ ಉದ್ಯೋಗಿಯಾಗಿದ್ದಾನೆ.

ದಂಪತಿ ಅನ್ಯೋನ್ಯವಾಗಿದ್ದರು ಯಾವುದೇ ಜಗಳ ಗಲಾಟೆ ಅಷ್ಟಾಗಿ ಕೇಳಿಬರುತ್ತಿರಲಿಲ್ಲ ಎಂದು ನೆರೆ ಮನೆಯವರು ಹೇಳಿಕೆ ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.

ಗೃಹಿಣಿ ಆತ್ಮಹತ್ಯೆ: ಗೃಹಿಣಿಯೊಬ್ಬರು ನಿಗೂಢ ರೀತಿಯಲ್ಲಿ ಆತ್ಮಹತ್ಯೆಗೆ ಶರಣಾದ ಘಟನೆ ಇಲ್ಲಿನ ಜೆಪಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಜರಗನಹಳ್ಳಿಯಲ್ಲಿ ಮಂಗಳವಾರ ನಡೆದಿದೆ.

ಆತ್ಮಹತ್ಯೆಗೆ ಶರಣಾದ ಗೃಹಿಣಿಯನ್ನು ಪ್ರಭಾವತಿ (40) ಎಂದು ಗುರುತಿಸಲಾಗಿದೆ. ಮಹಿಳೆಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಮೂರು ದಿನಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದು ಮಂಗಳವಾರ ಆತ್ಮಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಜೆಪಿ ನಗರ ಠಾಣಾ ಪೊಲೀಸರು ಮೊಕದ್ದಮೆ ದಾಖಲು ಮಾಡಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.

ಶಿವಮೊಗ್ಗ, ಕೋಲಾರ ಮುಂತಾದ ಕಡೆಗಳಿಂದ ಬಂದಿರುವ ಕ್ರೈಂ ಸುದ್ದಿಗಳ ವರದಿ ಇಲ್ಲಿದೆ ತಪ್ಪದೇ ಓದಿ

ಬೆಂಗಳೂರು ನಗರ

ಬೆಂಗಳೂರು ನಗರ

ನವವಿವಾಹಿತೆಯೊಬ್ಬಳು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರು ಹೊರ ವಲಯದ ಕುಂಬಳಗೋಡು ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಮೃತ ಗೃಹಿಣಿಯನ್ನು ವಿದ್ಯಾಶ್ರೀ (19) ಎಂದು ಗುರುತಿಸಲಾಗಿದೆ.

ಮಂಡ್ಯ ಮೂಲದ ವಿದ್ಯಾಶ್ರೀ ಐದು ತಿಂಗಳ ಹಿಂದೆಯಷ್ಟೇ ನಗರದ ಸುಣ್ಣಕಲ್ಲು ಪಾಳ್ಯದ ನಿವಾಸಿ ನಾಗರಾಜ್ ಎಂಬವರನ್ನು ಮದುವೆಯಾಗಿದ್ದರು. ತವರು ಮನೆಯಿಂದ ಹೆಚ್ಚಿನ ವರದಕ್ಷಿಣೆ ತರುವಂತೆ ಗಂಡನ ಮನೆಯವರು ಪೀಡಿಸಿ ಕತ್ತು ಬಿಗಿದು ಕೊಲೆ ಮಾಡಿದ್ದಾರೆಂದು ವಿದ್ಯಾಶ್ರೀ ತಂದೆ ಶಿವಣ್ಣ ಆರೋಪಿಸಿದ್ದಾರೆ.ಕುಂಬಳಗೋಡು ಠಾಣಾ ಪೊಲೀಸರು ವೊಕದ್ದಮೆ ದಾಖಲು ಮಾಡಿಕೊಂಡಿದ್ದು ತನಿಖೆ ಕೈಗೊಂಡಿದ್ದಾರೆ.

ಬೆಂಗಳೂರು ನಗರ/ಮಂಡ್ಯ

ಬೆಂಗಳೂರು ನಗರ/ಮಂಡ್ಯ

ಸುಬ್ರಮಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆತ್ಮಹತ್ಯೆಗೆ ಶರಣಾದ ಗೃಹಿಣಿಯನ್ನು ಸುಪ್ರಜಾನಗರದ ನಿವಾಸಿ ಪ್ರತಿಮಾ (38) ಎಂದು ಗುರುತಿಸಲಾಗಿದೆ. ಮಂಡ್ಯ ಜಿಲ್ಲೆ, ಮದ್ದೂರು ಮೂಲದ ಪ್ರತಿಮಾರನ್ನು ತಿಂಗಳ ಹಿಂದೆಯೆಷ್ಟೇ ವಸಂತ ಕುಮಾರ್ ಎಂಬವನನ್ನು ವಿವಾಹವಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರತಿಮಾ, ಪತಿ ವಸಂತಕುಮಾರ್‌ಗಿಂತ ಒಂದು ವರ್ಷ ದೊಡ್ಡವಳಾಗಿದ್ದು, ಈ ವಿಷಯಕ್ಕೆ ಸಂಬಂಧಿಸಿದಂತೆ ನಿನ್ನೆ ದಂಪತಿಯ ಮಧ್ಯೆ ಜಗಳ ನಡೆದಿದ್ದು, ಮನನೊಂದು ತನ್ನ ಕೊಠಡಿಯಲ್ಲಿ ಸೀರೆಯಿಂದ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಶಿವಮೊಗ್ಗ

ಶಿವಮೊಗ್ಗ

ಕಳವು ಪ್ರಕರಣ ಕೋಟೆ ಠಾಣೆ: ಪಿರ್ಯಾದಿ ಡಾ. ಕುಮಾರಸ್ವಾಮಿ ಕೆ ಹೆಚ್ ಬಿನ್ ಹಾಲಯ್ಯ ಮಕ್ಕಳ ವಿದ್ಯಾ ಸಂಸ್ಥೆ ಶಿಕ್ಷಕಿಯರ ತರಬೇತಿ ಕೇಂದ್ರ ದಲ್ಲಿ ಪ್ರಿನ್ಸಿಪಾಲರು ವಾಸ ಎ ಎನ್ ಕೆ ರಸ್ತೆ ಶಿವಮೊಗ್ಗ ರವರು ತನ್ನ ಬೈಕನ್ನು ಮಕ್ಕಳ ವಿದ್ಯಾ ಸಂಸ್ಥೆ ಶಿಕ್ಷಕಿಯರ ತರಬೇತಿ ಕೇಂದ್ರ ದ ಮುಂಭಾಗದಲ್ಲಿ ರುವ ಬಿಎಸ್ ಎನ್ ಎಲ್ ಕಛೇರಿ ಪಕ್ಕದ ಪೋಸ್ಟ ಆಫಿಸ್ ಹಿಂಭಾಗದ ಲ್ಲಿ ನಿಲ್ಲಿಸಿದ್ದು ನಂ. ಕೆ ಎ 15 ಜೆ 8133 ಹಿರೋ ಹೊಂಡಾ ಬೈಕನ್ನು ಕಳ್ಳರು ಕಳ್ಳತ ಮಾಡಿಕೊಂಡು ಹೋಗಿರುವರು ಅಂದಾಜು ಬೆಲೆ 15,000/- ರೂ

ಕೋಲಾರ

ಕೋಲಾರ

ಮಾಸ್ತಿ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಮಾಲೂರು ತಾಲ್ಲೂಕು ಅನಿಕರಹಳ್ಳಿ ಗ್ರಾಮದ ವಾಸಿಯಾದ ರೂಪಾ ಎಂಬುವರು ತಮ್ಮ ಮನೆಯಲ್ಲಿ ಮೊಬೈಲ್ ನಲ್ಲಿ ಹಾಡುಗಳನ್ನು ಕೇಳುತ್ತಿದ್ದಾಗ ಅಲ್ಲಿಗೆ ಬಂದ ಅದೇ ಗ್ರಾಮದ ವಾಸಿಗಳು ಮತ್ತು ಅಕೆಯ ಸಂಬಂಧಿಕರಾದ ರವಿ ಮತ್ತು ಮುನಿಚಂದ್ರ ರವರು ಬಂದು ಅಕೆಯನ್ನು ಕುರಿತು ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ಮಾಡಿರುತ್ತಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+