ಕ್ರೈಂ: ಕೋತಿ ಓಡಿಸಲು ಹೋದವ ಆತ್ಮಹತ್ಯೆ ಮಾಡ್ಕೊಂಡ

ಬೆಂಗಳೂರು, ನ.7: ಕೋತಿ ಓಡಿಸುವುದಾಗಿ ಹೇಳಿ ತೋಟಕ್ಕೆ ಹೋದ ಯುವಕನೊಬ್ಬ ನಾಡ ಬಂದೂಕಿನಿಂದ ಗುಂಡು ಹಾರಿಸಿಕೊಂಡು ಸಾವನ್ನಪ್ಪಿರುವ ಘಟನೆ ಗುರುವಾರ ನಡೆದಿದೆ.

ಉಡುಪಿಯ ಕರ್ಜೆ ಗ್ರಾಮದಲ್ಲಿ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿರುವ ಯುವಕನನ್ನು 17 ವರ್ಷದ ಶ್ರೇಯಸ್ ಶೆಟ್ಟಿ ಎಂದು ಗುರುತಿಸಲಾಗಿದೆ. ಮನೆ ತೋಟಕ್ಕೆ ಕೋತಿಗಳ ಕಾಟ ಹೆಚ್ಚಾಗಿದ್ದರಿಂದ ಕೋತಿ ಓಡಿಸಲು ನಾಡ ಬಂದೂಕು ತೆಗೆದುಕೊಂಡು ಹೋಗಿದ್ದಾನೆ. ಅದರೆ, ತೋಟಕ್ಕೆ ಹೋಗಿ ಗುಂಡು ಹಾರಿಸಿಕೊಂಡು ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ.

ಈ ಹಿಂದೆಯೂ ಎರಡು ಸಲ ಮನೆ ಬಿಟ್ಟು ಹೋಗಿದ್ದ ಶ್ರೇಯಸ್ ಮತ್ತೆ ವಾಪಾಸ್ಸಾಗಿದ್ದ. ಆದರೆ, ಆಗಾಗ ಮಾನಸಿಕವಾಗಿ ಖಿನ್ನನಾಗಿದ್ದ ಶ್ರೇಯಸ್ ಇಂದೇಕೆ ಆತ್ಮಹತ್ಯೆ ನಿರ್ಧಾರಕ್ಕೆ ಬಂದ ಎಂಬುದರ ಬಗ್ಗೆ ತಿಳಿದು ಬಂದಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ, ಕೋಲಾರ ಮುಂತಾದ ಕಡೆಗಳಿಂದ ಬಂದಿರುವ ಕ್ರೈಂ ಸುದ್ದಿಗಳ ವರದಿ ಇಲ್ಲಿದೆ ತಪ್ಪದೇ ಓದಿ

ಮಾರಾಣಾಂತಿಕ ರಸ್ತೆ ಅಪಘಾತ

ಮಾರಾಣಾಂತಿಕ ರಸ್ತೆ ಅಪಘಾತ

ಮಾಲೂರು ಪೊಲೀಸ್ ಠಾಣೆಯಲ್ಲಿ ಮಾರಾಣಾಂತಿಕ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತೆ. ಕೋಲಾರ-ಮಾಲೂರು ರಸ್ತೆ, ಅಗ್ರಹಾರ ಹೊಸಹಳ್ಳಿ ಗೇಟ್ ಬಳಿ ಸಂಭವಿಸಿರುತ್ತದೆ. ದಿನಾಂಕ 05-11-2013 ರಂದು ಸಂಜೆ 7.30 ಗಂಟೆಯಲ್ಲಿ ಸೀತಮ್ಮ ರವರು ರಸ್ತೆ ದಾಟುತ್ತಿದ್ದು. ಈ ಸಮಯದಲ್ಲಿ ಯಾವುದೋ ಒಂದು ವಾಹನ ಡಿಕ್ಕಿ ಹೊಡೆಸಿದ್ದರ ಪರಿಣಾಮ ಸ್ಥಳದಲ್ಲಿಯೆ ಮೃತಪಟ್ಟಿರುತ್ತಾರೆ.

ಕೋಟೆ ಠಾಣೆ : ಕಳ್ಳತನ ಪ್ರಕರಣ

ಕೋಟೆ ಠಾಣೆ : ಕಳ್ಳತನ ಪ್ರಕರಣ

ಶಿವಮೊಗ್ಗ : ಸಿದ್ದೇಶ 39 ವರ್ಷ ವಾಸ ವಿದ್ಯಾನಗರ ರವರು ತನ್ನ ಬೈಕ ಕೆ.ಎ 14 ಡಬ್ಯ್ಲು 3061 ಟಿ.ವಿ.ಎಸ್ ಎಕ್ಸ್ ಎಲ್ ಅನ್ನು ತೆಗೆದುಕೊಂಡು ಪಟಾಕಿ ತರಲು ಮೀನಾಕ್ಷಿ ಭವನದ ಎದುರು ಲಾಕ್ ಮಾಡಿ ನಿಲ್ಲಿಸಿದ್ದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಇದರ ಬೇಲೆ ರೂ 10,000/-ಗಾಗಿರುತ್ತದೆ.

ಹರಿಹರ (ಗ್ರಾ) ಪೊಲೀಸ್ ಠಾಣೆ

ಹರಿಹರ (ಗ್ರಾ) ಪೊಲೀಸ್ ಠಾಣೆ

ಗುನ್ನೆ ನಂ: 40/2013, ಕಲಂ: 174 ಸಿ.ಆರ್.ಪಿ.ಸಿ.

ಪಿರ್ಯಾದಿ ಶಾರದಮ್ಮ ಕೋಂ ಲೇಟ್ ಬಸಪ್ಪ ಪಿರ್ಯಾದಿಯ ಮಗನಾದ ಬಿ.ರಾಜೇಂದ್ರನು ಎಡಗಾಲು ಊನವಾಗಿ ಅಂಗವಿಕಲನಾಗಿದ್ದು, ಅಲ್ಲದೇ ವಿಪರೀತ ಮದ್ಯವ್ಯಸನಿಯಾಗಿದ್ದು, ಈತನ ಹೆಂಡತಿ ಸಹಾ ಈತನನ್ನು ಬಿಟ್ಟು ಹೋಗಿದ್ದು, ತನ್ನ ಜಮೀನಿಗೆ ನೀರು ಬಿಡಲೆಂತಾ ಹೋಗಿದ್ದು, ಈ ದಿನ ಬೆಳಗ್ಗೆ ಹರಿಹರ-ಹರಪನಹಳ್ಳಿ ರಸ್ತೆ ಪಕ್ಕದ ಒಂದು ಮೋರಿಯಲ್ಲಿ ರಾಜೇಂದ್ರ ಬಿದ್ದು ಮೃತಪಟ್ಟಿರುವುದಾಗಿ ಮಾಹಿತಿ ಬಂದಿದ್ದರಿಂದ ಅಲ್ಲಿಗೆ ಹೋಗಿ ನೋಡಲಾಗಿ, ರಾಜೇಂದ್ರನು ರಸ್ತೆ ಪಕ್ಕದ ಮೋರಿಯ ಕಟ್ಟೆ ಮೇಲೆ ಕುಳಿತುಕೊಂಡು ತನ್ನ ಜಮೀನಿಗೆ ನೀರು ಹೋಗುವ ಏರ್‌ವಾಲ್ ಅನ್ನು ನೋಡಲು ಹೋಗಿ,ಅಲ್ಲಿಯೇ ಮದ್ಯಪಾನ ಮಾಡಿದ್ದು, ಆಕಸ್ಮಿಕವಾಗಿ ಯಾವಾಗಲೋ ಕೆಳಕ್ಕೆ ಬಿದ್ದು, ಸ್ವಲ್ಪ ಆಳವಿರುವ ನೀರಿನಲ್ಲಿ ಏಳಲಾರದೇ ಉಸಿರುಗಟ್ಟಿ ಮೃತಪಟ್ಟಿರುವಂತೆ ತೋರುತ್ತದೆ.

ಚಿಕ್ಕಮಗಳೂರು ಜಿಲ್ಲೆ

ಚಿಕ್ಕಮಗಳೂರು ಜಿಲ್ಲೆ

ಬೀರೂರು ಪೊಲೀಸ್‌ ಠಾಣೆ ಮೊ.ಸಂ. 139/2013 - ಕಲಂ: 457 380 ಐಪಿಸಿ - ಪಿರ್ಯಾದುದಾರರು ಶಂಕರಮ್ಮ ದೇವರಹಳ್ಳಿ ಸಹಿಪ್ರಾಶಾಲೆ ಇವರು ಬೆಳಿಗ್ಗೆ ಶಾಲೆಗೆ ಕರ್ತವ್ಯಕ್ಕೆ ಹೋಗಿದ್ದು ಯಾರೋ ಕಳ್ಳರು ಶಾಲಾ ಮಕ್ಕಳಿಗೆ ಮದ್ಯಾಹ್ನದ ಬಿಸಿಯೂಟ ತಯಾರಿಸಲು ನಿರ್ಮಿಸಿಕೊಟ್ಟಿದ್ದ ಕೊಟ್ಟಡಿಯ ಬಾಗಿಲಿಗೆ ಹಾಕಿದ್ದ ಬೀಗವನ್ನು ಯಾವುದೋ ಆಯುಧದಿಂದ ಮೀಟಿ ಮುರಿದು ಒಳಗೆ ನುಗ್ಗಿ ಒಳಗಡೆ ಇದ್ದ ಬಾರತ್ ಕಂಪನಿಯ 02 ಗ್ಯಾಸ್ ಸಿಲಿಂಡರ್ ಗಳು ಮತ್ತು ಒಂದು ಕಬ್ಬಿಣದ ಗ್ಯಾಸ್ ಸ್ಟೌವ್ ನ್ನು ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ, ಕಳ್ಳತನ ಮಾಡಿಕೊಂಡು ಹೋಗಿರುವ ಮೇಲ್ಕಂಡ ವಸ್ತುಗಳ ಬೆಲೆ ಅಂದಾಜು 5000/- ರೂ ಗಳಾಗಬಹುದು.

ಹಲ್ಲೆ ನಡೆಸಿ ಜೀವ ಬೆದರಿಕೆ

ಹಲ್ಲೆ ನಡೆಸಿ ಜೀವ ಬೆದರಿಕೆ

ಪಿರ್ಯಾದಿ ಶ್ರೀಮತಿ ನಸೀಮಾ ಅಖ್ತರ್ ಪ್ರಾಯ 35 ವರ್ಷ ಗಂಡ ಸಯ್ಯದ್ ಆಲಿ ವಾಸ: ಅಬೀಬ್ ಮಂಜಿಲ್ ಸ್ಟಡಿ ಸರ್ಕಲ್ ಹತ್ತಿರ ಬೆಳಪು ಗ್ರಾಮ ಎಂಬವರ ನೆರೆ ಮನೆಯ ಆರೋಪಿ ಸಾದಿಕ್ ಪಿರ್ಯಾದಿದಾರರ ಮನೆಯ ಒಳಗೆ ಅಕ್ರಮ ಪ್ರವೇಶ ಮಾಡಿ ಅವರ ಗಂಡನವರಲ್ಲಿ ಮಾತನಾಡುತಿದ್ದು ಅವರೊಳಗೆ ಮಾತಿಗೆ ಮಾತು ಬೆಳೆದು ಜಗಳವಾಗುವಾಗ ಪಿರ್ಯಾದಿ ಸಾದಿಕ್‌ಗೆ ನಿನಗೆ ಅದೆಲ್ಲ ಯಾಕೆ ಎಂದು ಹೇಳಿದಾಗ ಆತನು ಪಿರ್ಯಾದಿದಾರರಿಗೆ ಕೆನ್ನೆಗೆ ಹೊಡೆದು, ಅವಾಚ್ಯ ಶಬ್ದಗಳಿಂದ ಬೈದು, ತನ್ನ ಮನೆಗೆ ಹೋಗಿ ಒಂದು ಕತ್ತಿ ತಂದು ನಿಮ್ಮನ್ನು ಕೊಲ್ಲದೇ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿರುವುದಾಗಿದೆ ಎಂಬುದಾಗಿ ನಸೀಮಾ ಅಖ್ತರ್ ರವರು ನೀಡಿದ ದೂರಿನಂತೆ ಶಿರ್ವಾ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 97/2013 ಕಲಂ 448, 323, 504, 506, 354 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+