ಬನಶಂಕರಿ ಕೊಲೆ : 24 ಗಂಟೆಯಲ್ಲಿ ಆರೋಪಿ ಸೆರೆ
ಬೆಂಗಳೂರು, ಜ.3: ಕುಮಾರಸ್ವಾಮಿ ಬಡಾವಣೆ ನಿವಾಸಿ ಸಯಿದಾ(47) ಅವರ ಕೊಲೆ ಪ್ರಕರಣವನ್ನು ಘಟನೆ ನಡೆದ 24ಗಂಟೆಯೊಳಗೆ ಬೆಂಗಳೂರು ನಗರ ದಕ್ಷಿಣ ವಿಭಾಗದ ಉಪ ಪೊಲೀಸ್ ಕಮೀಷನರ್ ಎಚ್.ಎಸ್.ರೇವಣ್ಣ ಮಾರ್ಗದರ್ಶನದಲ್ಲಿ ಬನಶಂಕರಿ ಉಪ-ವಿಭಾಗದ ಸಹಾಯಕ ಪೊಲೀಸ್ ಕಮೀಷನರ್ ಸುರೇಶ್ ಬಾಬು ರವರ ನೇತೃತ್ವದ ತಂಡ ಭೇದಿಸಿದೆ.
ಸಯಿದಾ ಅವರು ಬೇರೆಯವರ ಜೊತೆ ಸಂಭಂದ ಇಟ್ಟುಕೊಂಡಿರುತ್ತಾರೆ ಎಂದು ಅನುಮಾನಿಸಿ ಮನೆ ಮಾರಿ ಹಣ ಕೊಡುವಂತೆ ಪೀಡಿಸಿ ಬೆದರಿಸಿದ್ದ ಜಿಯಾವುಲ್ಲಾ ಹಾಗೂ ಆತನ ಮಿತ್ರರು ಸಯಿದಾ ಅವರನ್ನು ಕೊಲೆಗೈದಿರುವುದಕ್ಕೆ ಸಾಕಷ್ಟು ಪುರಾವೆಗಳು ಸಿಕ್ಕಿವೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸೈಯದ್ ಜಿಯಾವುಲ್ಲಾಷಾ(57), ಹಯಾಜ್ ಪಾಷ (24), ಮೆಹಬೂಬ್ ಪಾಷ(27) ಅವರನ್ನು ಬಂಧಿಸಲಾಗಿದ್ದು, ಕೃತ್ಯಕ್ಕೆ ಬಳಸಿದ ಚಾಕು, ದ್ವಿಚಕ್ರವಾಹನ ಆಟೋರಿಕ್ಷಾ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ಎಲ್ಲಾ ಅರೋಪಿಗಳು ಹಾಲಿ ಪೊಲೀಸ್ ಬಂಧನದಲ್ಲಿರುತ್ತಾರೆ.
01-01-2014 ರಂದು ಸಂಜೆ ಸುಮಾರು 08-15 ರಿಂದ 06-00 ಗಂಟೆಯ ಸಮಯದಲ್ಲಿ ಬನಶಂಕರಿ 2ನೇ ಹಂತದ, 9ನೇ ಮೈನ್ ರೋಡ್, ಬಿಎಸ್ ಎನ್ ಎಲ್ ಆಫೀಸ್ ಮುಂಭಾಗ, ಪುಟ್ ಪಾತ್ ಮೇಲೆ ಯಾರಾಬ್ ನಗರದ ಭೀಫ್ ಅಂಗಡಿ ಇಟ್ಟುಕೊಂಡಿರುವ ಎ1 ಆರೋಪಿ ಜಿಯಾವುಲ್ಲಾ ಈಗ್ಗೆ 15 ವರ್ಷಗಳಿಂದ ಸಂಭಂದ ಇಟ್ಟುಕೊಂಡಿದ್ದ ಕುಮಾರಸ್ವಾಮಿ ಬಡಾವಣೆಯಲ್ಲಿ ವಾಸವಾಗಿದ್ದ ಶ್ರೀ ಮತಿ ಸಯಿದಾ 47 ವರ್ಷ, ರವರು ಬೇರೆಯವರ ಜೊತೆ ಸಂಭಂದ ಇಟ್ಟುಕೊಂಡಿರುತ್ತಾರೆ ಎಂದು ಅನುಮಾನಿಸಿ ಮನೆ ಮಾರಿ ಹಣ ಕೊಡುವಂತೆ ಇಲ್ಲದಿದ್ದರೆ ಕೊಲೆ ಮಾಡುವುದಾಗಿ ಹೆದರಿಸುತ್ತಾನೆ. ಕೊಲೆ ಬಗ್ಗೆ ಇನ್ನಷ್ಟು ವಿವರ ಮುಂದೆ ಓದಿ...

24 ಗಂಟೆಯಲ್ಲಿ ಆರೋಪಿ ಸೆರೆ
ದಿನಾಂಕ:01-01-2014ರ ರಾತ್ರಿ 08-15 ಗಂಟೆ ಸಮಯದಲ್ಲಿ ಎ1 ಆರೋಪಿ ಸಯಿದಾಳನ್ನು ಯಾರಾಬ್ ನಗರದ ಬಿಎಸ್‍ಎನ್‍ಎಲ್‍ಆಫೀಸ್ ಬಳಿ ಕರೆತಂದು ಜಗಳ ಮಾಡಿ, ಜೊತೆಗೆ ಎ2 ಮತೀನ್, ಎ3 ಹಯಾಜ್ ಪಾಷಾ, ಎ4 ಮೆಹಬೂಬ್ ರವರನ್ನು ಕರೆಯಿಸಿಕೊಂಡು ಸಯಿದಾಳನ್ನು ಕೊಲೆ ಮಾಡಲು ತಿರ್ಮಾನಿಸಿ ಹಗ್ಗದಿಂದ ಕುತ್ತಿಗೆಯನ್ನು ಬಿಗಿದು, ಚಾಕುವಿನಿಂದ ಕುತ್ತಿಗೆಯನ್ನು ಕುಯ್ದು, ಕರುಳು ಹೊರಬರುವಂತೆ ಹೊಟ್ಟೆಯನ್ನು ಕುಯ್ದು ಕೊಲೆ ಮಾಡಿ ಪರಾರಿಯಾಗಿರುತ್ತಾರೆ. ಅವರುಗಳನ್ನು ಪತ್ತೆ ಮಾಡಿ ಕ್ರಮಕೈಗೊಳ್ಳಲು ಸಯಿದಾಳ ಮಗಳಾದ ಶ್ರೀಮತಿ ಮಾಹಿಯಾ ಕೊಂ ಮಸೂದ್ ಅಹಮದ್ 27ವರ್ಷ ಎಂಬುವವರ ದೂರಿನ ಮೇರೆಗೆ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಮೊ.ಸಂ.02/2014 ಕಲಂ 302 ರೆ/ವಿ 34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಕೈಗೊಳ್ಳಲಾಗಿತ್ತು.

ಆನೇಕಲ್
ಶಿಥಿಲಗೊಂಡಿದ್ದ ಮನೆಯ ಗೋಡೆ ಕುಸಿದು ಐದು ವರ್ಷದ ಬಾಲಕಿ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ತಾಲೂಕಿನ ಆಯೋಧ್ಯ ನಗರದಲ್ಲಿ ನಡೆದಿದೆ.
ತಮಿಳುನಾಡಿನ ಡೆಂಕಣಿಕೋಟೆಯ ಮೂಲದ ರಕ್ಷಿತಾ (5) ಸಾವನ್ನಪ್ಪಿದ ಬಾಲಕಿ. ಈ ಬಾಲಕಿ ಪಟ್ಟಣದ ಅಯೋಧ್ಯ ನಗರದ ಹೆಂಚಿನ ಮನೆಯ ಪಕ್ಕದಲ್ಲಿ ನಡೆದು ಹೋಗುತ್ತಿದ್ದಾಗ ಆಕಸ್ಮಿಕವಾಗಿ ಗೋಡೆ ಕುಸಿದು, ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ಆನೇಕಲ್ ಎಸೈ ರಾಘವೇಂದ್ರ ಸ್ಥಳಕ್ಕೆ ಆಗಮಿಸಿ, ಪ್ರಕರಣ ದಾಖಲಿಸಿ ಕೊಂಡಿದ್ದಾರೆ.

ಹೊಸಪೇಟೆ
ಸಾಮಾಜಿಕ ಜಾಲ ತಾಣ ಫೇಸ್ ಬುಕ್ ನಲ್ಲಿ ಪ್ರಚೋದನಾಕಾರಿ ಸಂದೇಶ ನೀಡಿದ ಸ್ವೀಟ್ಸ್ ಅಂಗಡಿ ಮಾಲೀಕನನ್ನು ಹೊಸಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಹೊಸಪೇಟೆ ಹಳೇ ಬಸ್ ನಿಲ್ದಾಣದ ಸಮೀಪ ಇರುವ ಕಾಮಧೇನು ಸ್ವೀಟ್ಸ್ ಅಂಗಡಿ ಮಾಲೀಕ ಗೋಪಾಲ್ ಪುರೋಹಿತ್ (23) ಬಂಧಿತನಾಗಿದ್ದಾನೆ.
ರಾತ್ರಿ ಈತನನ್ನು ಬಂಧಿಸಿದ ಪೊಲೀಸರು ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ್ದು ಜ.16ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಕೋಮು ಸಂಘರ್ಷಕ್ಕೆ ಕಾರಣವಾಗುವಂಥ ಸಂದೇಶವನ್ನು ತನ್ನ ಫೇಸ್ ಬುಕ್ ನಲ್ಲಿ ಹಾಕಿದ್ದಲ್ಲದೆ ಉಪನ್ಯಾಸಕರೊಬ್ಬರಿಗೆ ಸಂದೇಶ ರವಾನಿಸಿದ್ದಾನೆ. ಇಂಥ ಹಲವು ಸಂದೇಶಗಳನ್ನು ಬೇರೆಯವರಿಗೆ ರವಾನಿಸಿದ್ದ ಎಂಬುದು ಪೊಲೀಸರ ತನಿಖೆಯಿಂದ ಬಯಲಾಗಿದೆ. ಹಲವು ಮಂದಿ ಫೇಸ್ ಬುಕ್ ನಲ್ಲಿ ಸಂದೇಶಗಳನ್ನು ನೋಡಿ ರೊಚ್ಚಿಗೆದ್ದು ಸ್ವೀಟ್ಸ್ ಅಂಗಡಿ ಬಳಿ ಧರಣಿ ನಡೆಸಿದ್ದರು.

ಕಿರುಕುಳ ಪ್ರಕರಣ
ಅಜೆಕಾರು:ಪಿರ್ಯಾದಿ ರಾಧಿಕಾ (24) ಗಂಡ:ಗಣೇಶ ಆಚಾರ್ಯ ವಾಸ:ಹೆರದಾರಿ ಕಟ್ಟೆ, ಗಣೇಶ ನಿವಾಸ, ಶಿರ್ಲಾಲುರವರಿಗೆ ಆರೋಪಿ ಗಣೇಶ ಆಚಾರ್ಯ (33) ರೊಂದಿಗೆ ನಾಲ್ಕು ವರ್ಷದ ಹಿಂದೆ ವಿವಾಹವಾಗಿದ್ದು ಕೆಲವು ವರ್ಷ ದಂಪತಿಗಳು ಅನೋನ್ಯವಾಗಿದ್ದು ನಂತರ ಗಣೇಶ ಆಚಾರ್ಯ ತನ್ನ ಪತ್ನಿ ರಾಧಿಕಾರವರಿಗೆ ವಿನಾಕಾರಣ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡುತ್ತಾ ಬಂದಿದ್ದು, ದಿನಾಂಕ ಜ.2 ಅಪರಾಹ್ನ 03:00 ಗಂಟೆಗೆ ಶಿರ್ಲಾಲು ಗ್ರಾಮದ ಹರದಾರಿಕಟ್ಟೆ ಎಂಬಲ್ಲಿರುವ ಮನೆಯಲ್ಲಿ ರಾಧಿಕಾಗೆ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹೊಡೆದು ಕಾಲಿನಿಂದ ತುಳಿದು, ತಡೆಯಲು ಬಂದ ರಾಧಿಕಾರವರ ಅತ್ತೆಗೂ ಕೈಯಿಂದ ಹೊಡೆದು ಹಿಂಸಿಸಿರುತ್ತಾರೆ. ಈ ಬಗ್ಗೆ ರಾಧಿಕಾ ನೀಡಿದ ದೂರಿನಂತೆ ಅಜೆಕಾರು ಠಾಣಾ ಅಪರಾಧ ಕ್ರಮಾಂಕ 01/14 ಕಲಂ 498 (ಎ), 504, 323 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಕೋಳಿ ಪಂದ್ಯ ಜೂಜಾಟದ ಮೇಲೆ ದಾಳಿ
ಶಿವಪ್ರಸಾದ್, ಸಿ.ಪಿ.ಐ ಶ್ರೀನಿವಾಸಪುರ ವೃತ್ತ ರವರಿಗೆ ಬಂದ ಖಚಿತ ಮಾಹಿತಿಯ ಮೇರೆಗೆ ಶ್ರೀನಿವಾಸಪುರ ತಾಲ್ಲೂಕು, ನಂಬಿಹಳ್ಳಿ ಗ್ರಾಮದ ಕೆರೆಯ ಅಂಗಳದಲ್ಲಿ ಕೋಳಿಗಳನ್ನು ಪಂದ್ಯಕ್ಕೆ ಬಿಟ್ಟು ಹಣವನ್ನು ಪಣವಾಗಿಟ್ಟು ಜೂಜಾಟದಲ್ಲಿ ನಿರತರಾಗಿದ್ದ 11 ಜನರನ್ನು ಸಿ.ಪಿ.ಐ, ಪಿ.ಎಸ್.ಐ ಮತ್ತು ಸಿಬ್ಬಂದಿಯವರು ದಾಳಿ ಮಾಡಿ, ವಶಕ್ಕೆ ಪಡೆದುಕೊಂಡು ಬಂದು ಕರ್ನಾಟಕ ಪೊಲೀಸ್ ಕಾಯ್ದೆಯ ರೀತ್ಯಾ ಪ್ರಕರಣವನ್ನು ದಾಖಲಿಸಿಕೊಂಡಿರುತ್ತಾರೆ.
ಮೆಲ್ವೀನ್ ಪ್ರಾನ್ಸೀಸ್, ಪಿ.ಎಸ್.ಐ ಮುಳಬಾಗಿಲು ಪೊಲೀಸ್ ಠಾಣೆ ರವರಿಗೆ ಬಂದ ಖಚಿತ ಮಾಹಿತಿಯ ಮೇರೆಗೆ ಮುಳಬಾಗಿಲು ತಾಲ್ಲೂಕು, ಅಸಲಿ ಅತ್ತಿಕುಂಟೆ ಗ್ರಾಮದ ನಾರಾಯಣಪ್ಪ ರವರ ಜಮೀನಿನಲ್ಲಿ ಕೋಳಿಗಳನ್ನು ಪಂದ್ಯಕ್ಕೆ ಬಿಟ್ಟು ಹಣವನ್ನು ಪಣವಾಗಿಟ್ಟು ಜೂಜಾಟದಲ್ಲಿ ನಿರತರಾಗಿದ್ದ 8 ಜನರನ್ನು ಪಿ.ಎಸ್.ಐ ಮತ್ತು ಸಿಬ್ಬಂದಿಯವರು ದಾಳಿ ಮಾಡಿ, ವಶಕ್ಕೆ ಪಡೆದುಕೊಂಡು ಬಂದು ಕರ್ನಾಟಕ ಪೊಲೀಸ್ ಕಾಯ್ದೆಯ ರೀತ್ಯಾ ಪ್ರಕರಣವನ್ನು ದಾಖಲಿಸಿಕೊಂಡಿರುತ್ತಾರೆ.

ಭದ್ರಾವತಿ ಪೇಪರ್ ಟೌನ್ ಕೊಲೆ ಪ್ರಕರಣ
ಪಿರ್ಯಾದಿ ಚೇತನ್ ಕುಮಾರ್ ತಂದೆ ಮರೀಗಡೌಡ ವಾಸ ಪೇಪರ್ ಟೌನ್ ಮರೀಗೌಡ 50 ವರ್ಷ ಎಂ ಪಿ ಎಂ ನೌಕರ ಭದ್ರಾವತಿ ರವರು ಆರೋಪಿಗಳೂಂದಿಗೆ ಹಣಕಾಸಿನ ವ್ಯವಹಾರವನ್ನು ಮಾಡಿದ್ದು ಈ ವಿಚಾರದಲ್ಲಿ ಆರೋಪಿಗಳು ಪಿರ್ಯಾದಿ ತಂದೆ ಮರೀಗೌಡ 50 ವರ್ಷ ಮೇಲೆ ಖಾಸಗಿ ದೂರನ್ನು ಹೂಡಿದ್ದು
ಆರೋಪಿಗಳು ಪಿರ್ಯಾದಿ ತಂದೆ ಮನೆಯಲ್ಲಿ ಒಬ್ಬರೆ ಇದ್ದಾಗ ಆರೋಪಿಗಳು ಮನೆಗೆ ಬಂದು ಯಾವುದೋ ಆಯುಧದಿಂದ ಹೊಡೆದು ಕೊಲೆ ಮಾಡಿ ನಂತರ ಆರೋಪಿಗಳು ಸಾಕ್ಷಿಯನ್ನು ಮರೆಮಾಚುವ ಉದ್ದೇಶದಿಂದ ಪಿರ್ಯಾದಿ ಬೈಕ್ ನಂ ಕೆಎ 14 ಕೆ 3436 ಬೈಕಿನಲ್ಲಿ ಪಿರ್ಯಾದಿ ತಂದೆಯ ಬಾಡಿಯನ್ನು ತಗೆದುಕೊಂಡು ಹೋಗಿ ಎನ್ ಹೆಚ್ 206 ರಸ್ತೆ ಬದಿಯಲ್ಲಿ ಹಾಕಿರುತ್ತಾರೆ ಎಂದು ಆರೋಪಿಗಳ ಮೇಲೆ ಅನುಮಾನವಿರುತ್ತದೆ ಎಂದು ಪ್ರಕರಣ ದಾಖಲಿಸಿರುತ್ತಾರೆ
-
ರಾಜ್ಯದ 5000ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಕಲುಷಿತ ನೀರು: ಗ್ಯಾರಂಟಿ ಗುಂಗಿನಲ್ಲಿರುವ ಕಾಂಗ್ರೆಸ್ ವಿರುದ್ಧ ಆರ್. ಅಶೋಕ್ ಕಿಡಿ -
ಏಪ್ರಿಲ್ 14ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ಏಪ್ರಿಲ್ 13ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
CRPF Recruitment 2026: 9,000ಕ್ಕೂ ಹೆಚ್ಚು ಕಾನ್ಸ್ಟೇಬಲ್ ಹುದ್ದೆಗಳಿಗೆ ನೇಮಕಾತಿ; ಕನ್ನಡಿಗರಿಗೂ ಇದೆ ಮೀಸಲಾತಿ -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
Bengaluru Mumbai Vande Bharat: ಬೆಂಗಳೂರು - ಮುಂಬೈ ಹೊಸ ರೈಲು: ಮಹಾ ಸಿಎಂ ಮಹತ್ವದ ಟ್ವೀಟ್, ಯಾವಾಗ ಪ್ರಾರಂಭ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ












Click it and Unblock the Notifications