ಭರಣಿ ಮೆಡಿಕಲ್ಸ್ ನಲ್ಲಿ ಕೊಲೆ ನಡೆದಿದ್ದು ಏಕೆ?
ಬೆಂಗಳೂರು, ಜ. 13: ಶಿವಾಜಿನಗರ ಸಮೀಪದ ಮೊದಲಿಯಾರ್ ಸ್ಟ್ರೀಟ್ ನಲ್ಲಿರುವ ಭರಣಿ ಮೆಡಿಕಲ್ಸ್ ನ ಮಾಲೀಕರನ್ನು ಕೊಚ್ಚಿ ಕೊಲೆ ಮಾಡಲಾಗಿದೆ. ಈ ಬಗ್ಗೆ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆ ವಿವಿಧ ಐ.ಪಿ.ಸಿ ಸೆಕ್ಷನ್ ಅಡಿಯಲ್ಲಿ ಮೊಕದ್ದಮೆ ಸಂಖ್ಯೆ: 06/2014, ಕಲಂ.397.302 ದಾಖಲಿಸಿಕೊಂಡಿದೆ.
ದಿನಾಂಕ.12-01-2014 ರಂದು ರಾತ್ರಿ 9.30 ರಿಂದ 10.15 ಗಂಟೆಯ ನಡುವೆ ಪಿರ್ಯಾದಿ ಮಗನಾದ ಕುಮಾರವೇಲು @ಸಾಯಿಗುರು (45ವರ್ಷ) ಇವರು ಭರಣಿ ಮೆಡಿಕಲ್ಸ್ ಸ್ಟೋರ್ ನಲ್ಲಿ ವ್ಯಾಪರ ಮುಗಿಸಿ ಬಾಗಿಲು ಮುಚ್ಚುವ ಸಮಯದಲ್ಲಿ ಯಾರೋ ಅಪರಿಚಿತರು ಭರಣಿ ಮೆಡಿಕಲ್ಸ್ ಸ್ಟೋರ್ ಗೆ ಹೋಗಿ ಯಾವುದೋ ಆಯುಧದಿಂದ ಕುಮಾರವೇಲು @ ಸಾಯಿಗುರು ಇವರ ಕತ್ತು ಕೂಯ್ದು ಕೊಲೆಮಾಡಿ ಅವರ ಕತ್ತಿ ನಲ್ಲಿದ್ದ ಎರಡು ಚಿನ್ನದ ಚೈನ್ ಗಳು ಮತ್ತು ಎರಡು ಉಂಗುರಗಳನ್ನು ತೆಗೆದು ಕೊಂಡು ಪರಾರಿಯಾಗಿರುತ್ತಾರೆ. ಕೊಲೆ ಮಾಡಿರುವ ಆರೋಪಿಗಳನ್ನು ಪತ್ತೆ ಮಾಡಿ ಅವರುಗಳ ಮೇಲೆ ಸೂಕ್ತ ಕಾನೂನು ರೀತಿಕ್ರಮ ಜರುಗಿಸ ಬೇಕೆಂದು ಪಿರ್ಯಾದಿ ಜಗದೀಶ್ವರನ್ ಬಿನ್ ಲೇಟ್ ಜನಾರ್ದನ್‍ಮೊದಲಿಯರ್ (75 ವರ್ಷ) ದೂರು ನೀಡಿದ್ದಾರೆ.
ಮೇಲ್ನೋಟಕ್ಕೆ ಇದು ಹಣಕ್ಕಾಗಿ ನಡೆದಿರುವ ಕೊಲೆ ಎಂದು ಕಂಡು ಬಂದರೂ ಭರಣಿ ಮೆಡಿಕಲ್ಸ್ ಮಾಲೀಕರಿಗೂ ಸ್ಥಳೀಯರಿಗೂ ಈ ಹಿಂದೆ ಸಣ್ಣ ಪ್ರಮಾಣದ ಜಗಳ ನಡೆದಿತ್ತು ಎಂದು ತಿಳಿದು ಬಂದಿದೆ. ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

ಕೆ.ಆರ್.ಪೇಟೆ ವಿದ್ಯಾರ್ಥಿ ಆತ್ಮಹತ್ಯೆ
ಸಹಪಾಠಿಗಳ ಕಿರುಕುಳ, ಅವಮಾನ ತಾಳಲಾರದೆ ಪಿಯು ವಿದ್ಯಾರ್ಥಿ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೆಆರ್ ಎಸ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮೃತ ವಿದ್ಯಾರ್ಥಿಯನ್ನು ಕೆ.ಆರ್.ಪೇಟೆ ತಾಲೂಕಿನ ಕಟ್ಟೆಕ್ಯಾತನಹಳ್ಳಿ ಗ್ರಾಮದ ರಾಜೇಗೌಡ ಮತ್ತು ಮಂಜುಳಮ್ಮ ಪುತ್ರ ಕೆ.ಆರ್.ಅಭಿಷೇಕ್(17) ಎಂದು ಗುರುತಿಸಲಾಗಿದೆ.
ಅಭಿಷೇಕ್ ಬಲ್ಲೇನಹಳ್ಳಿಯ ಗ್ರಾಮದಲ್ಲಿನ ಅಜ್ಜಿ ಮನೆಯಲ್ಲಿ ವಾಸವಾಗಿದ್ದು, ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ(ಪಿಸಿಎಂಬಿ) ವ್ಯಾಸಂಗ ಮಾಡುತ್ತಿದ್ದನು. ಪ್ರತಿದಿನ ಗ್ರಾಮದಿಂದ ಕಾಲೇಜಿಗೆ ಬಂದುಹೋಗುತ್ತಿದ್ದ ಅಭಿಷೇಕ್ ಕೆಟ್ಟ ಗೆಳೆಯರ ಸಹವಾಸದಿಂದಾಗಿ ಗ್ರಾಮದ ಕೆಲವು ಯುವಕರಿಂದ ಕಿರುಕುಳಕ್ಕೆ ಒಳಗಾಗಿ ಬೂಕನಕೆರೆ ಯುವತಿಯೊಬ್ಬಳನ್ನು ಚುಡಾಯಿಸುತ್ತಿಯಾ ಎಂಬ ಆರೋಪದ ಹಣೆಪಟ್ಟಿಯನ್ನೂ ಕಟ್ಟಿ ಜಗಳವಾಡಿ ಅವಮಾನಿಸಿದ್ದರು ಎನ್ನಲಾಗಿದೆ.
ಸಹವಾಸ ದೋಷದಿಂದಾಗಿ ವಿನಾಕಾರಣ ಹುಡುಗಿಯನ್ನು ಚುಡಾಯಿಸಿದ ವಿಚಾರದಲ್ಲಿ ತನ್ನನ್ನು ಬಲಿಪಶು ಮಾಡಿ ಅವಮಾನಿಸಿದ್ದಾರೆಂದು ಬೇಸತ್ತು ಅಭಿಷೇಕ್ ಗ್ರಾಮದ ಸುಬ್ರಹ್ಮಣ್ಯ ದೇವಸ್ಥಾನದ ಗುಡ್ಡದ ಸಮೀಪ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
'ನಾನು ಯಾವುದೇ ತಪ್ಪು ಮಾಡಿಲ್ಲ. ನನ್ನ ಕೆಲವು ಸ್ನೇಹಿತರ ಕಿತಾಪತಿಯಿಂದಾಗಿ ಕೆಟ್ಟ ಹುಡುಗ ಎಂಬ ಹಣೆಪಟ್ಟಿ ಕಟ್ಟಿಕೊಳ್ಳಬೇಕಾಯಿತು. ಅಲ್ಲದೆ ತಪ್ಪು ಮಾಡದಿದ್ದರೂ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಅಭಿಷೇಕ್ ಆತ್ಮಹತ್ಯೆಗೂ ಮುನ್ನ ಬರೆದಿರುವ ಪತ್ರ ಪೊಲೀಸರಿಗೆ ದೊರೆತಿದೆ.ಕೆಆರ್ ಎಸ್ ಠಾಣೆ ಸಬ್ ಇನ್ ಸ್ಪೆಕ್ಟರ್ ಪುಟ್ಟಸ್ವಾಮಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕುಂದಾಪುರ : ಜೀವ ಬೆದರಿಕೆ ಪ್ರಕರಣ
ಕುಂದಾಪುರ: ಪಿರ್ಯಾದಿದಾರರಾದ ಲೋಹಿತ (30) ತಂದೆ:ಶೀನ ಖಾರ್ವಿ ವಾಸ:ಕೆಳ ಖಾರ್ವಿಕೇರಿ, ಕಸಬಾ ಗ್ರಾಮ, ಕುಂದಾಪುರ ತಾಲೂಕುರವರ ನೆರಮನೆಯವರಾದ ಆಪಾದಿತ ನಂದ ನಾಯ್ಕತಂದೆ:ಚಂದ್ರ ಶೇಖರ ನಾಯ್ಕ ವಾಸ:ಕೆಳ ಖಾರ್ವಿಕೇರಿ, ಕಸಬಾ ಗ್ರಾಮ, ಕುಂದಾಪುರ ತಾಲೂಕು ಹಾಗೂ ವಿಶ್ವನಾಥ ನಾಯ್ಕ ತಂದೆ:ನಂದ ನಾಯ್ಕ ವಾಸ:ಕೆಳ ಖಾರ್ವಿಕೇರಿ, ಕಸಬಾ ಗ್ರಾಮ, ಕುಂದಾಪುರ ತಾಲೂಕುರವರ ಜಾಗದಲ್ಲಿರುವ 2 ತೆಂಗಿನ ಮರಗಳು ಲೋಹಿತರವರ ಮನೆಯ ಮಾಡಿಗೆ ಅಪಾಯಕಾರಿಯಾಗಿ ಚಾಚಿಕೊಂಡಿದ್ದು ಅದನ್ನು ಕಡಿದು ತೆಗೆಸುವಂತೆ ಲೋಹಿತರವರು ವಿನಂತಿಸಿಕೊಂಡಿದ್ದರೂ ಸಹ ಆಪಾದಿತರು ಮಧ್ಯಾಹ್ನ 01:30 ಗಂಟೆ ಸುಮಾರಿಗೆ ಲೋಹಿತರವರ ಮನೆಯ ಬಳಿ ಬಂದು ಗಲಾಟೆ ಮಾಡಿ ಲೋಹಿತರವರನ್ನು ದೂಡಿ ಹಾಕಿ ಅವಾಚ್ಯ ಶಬ್ದಗಳಿಂದ ಬೈದು, ಚೂರಿಯಿಂದ ಹಲ್ಲೆ ಮಾಡಲು ಬಂದು ನಂತರ ಆರೋಪಿ ವಿಶ್ವನಾಥ ನಾಯ್ಕ ಎಂಬವರು ಲೋಹಿತರವರ ತಾಯಿಗೆ ಹಾಗೂ ತಮ್ಮನಿಗೆ ಹೊಡೆದು, ನಿಮ್ಮನ್ನು ಹೀಗೆಯೇ ಬಿಡುವುದಿಲ್ಲವೆಂದು ಜೀವ ಬೆದರಿಕೆ ಹಾಕಿರುತ್ತಾರೆ. ಈ ಬಗ್ಗೆ ಲೋಹಿತರವರು ನೀಡಿದ ದೂರಿನಂತೆ ಕುಂದಾಪುರ ಠಾಣಾ ಅಪರಾಧ ಕ್ರಮಾಂಕ 10/14 ಕಲಂ:323,504,506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಕೋಲಾರ : ದೊಂಬಿ ಮತ್ತು ಹಲ್ಲೆ ಪ್ರಕರಣ
ನಗರಪೊಲೀಸ್ ಠಾಣೆಯಲ್ಲಿ ದೊಂಬಿ ಮತ್ತು ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಕೋಲಾರ ನಗರ, ಕಠಾರಿಪಾಳ್ಯದಲ್ಲಿ ಸಂಭವಿಸಿರುತ್ತದೆ.
ಕಠಾರಿಪಾಳ್ಯದ ವಾಸಿ ಅಮರನಾಥ್ ರವರನ್ನು ಅದೇ ಬಡಾವಣೆಯ ವಾಸಿ ಕೃಷ್ಣ ಮತ್ತು ಇತರರು ಅಕ್ರಮ ಗುಂಪು ಕಟ್ಟಿಕೊಂಡು ಬಂದು ಕೇಬಲ್ ಹಣದ ವಿಚಾರದಲ್ಲಿ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈದು, ಕಲ್ಲು ಮತ್ತು ಇಟ್ಟಿಗೆ ಚೂರುಗಳಿಂದ ಹಲ್ಲೆ ಮಾಡಿ, ಪ್ರಾಣ ಬೆದರಿಕೆ ಹಾಕಿರುತ್ತಾರೆ.

ಬಾಳೆಹೊನ್ನುರು : ಕಳುವು ಪ್ರಕರಣ
ಬಾಳೆಹೊನ್ನುರು ಪೊಲೀಸ್ ಠಾಣೆ ಮೊ.ಸಂ.03/2014 - ಕಲಂ: 454 380 ಐಪಿಸಿ - ಪಿರ್ಯಾದಿ ಬೆನ್ನಿ ಅಲೆಕ್ಷಾಂಡರ್ ಮ್ಯಾನೇಜರ್ ದೇವದಾನಂ ಎಸ್ಟೇಟ್ ಕಾರೆಹಡ್ಲು ಗ್ರಾಮ ಇವರು ದಿನಾಂಕ 12/01/2014 ರಂದು ಬೆಳಿಗ್ಗೆ ತನ್ನ ಮನೆಗೆ ಬೀಗ ಹಾಕಿಕೊಂಡು ಚರ್ಚ್ ಗೆ ಹೋಗಿ ಪ್ರಾರ್ಥನೆ ಮುಗಿಸಿ ವಾಪಾಸ್ ಮನೆಗೆ ಬಂದು ಬೀಗ ತೆಗೆದು ಓಳಗೆ ಹೋದಾಗ ಮನೆಯ ಹಿಂಭಾಗದ ಸಿಟ್ ಹೌಟ್ ಬಾಗಿಲು ತೆಗೆದಿರುವುದನ್ನು ಕಂಡು ಯಾರೋ ಕಳ್ಳರು ಮನೆಯ ಒಳಗೆ ಬಂದಿರಬಹುದೆಂದು ಮಲಗುವ ಕೊಠಡಿಗೆ ಹೋಗಿ ಅಲ್ಲಿದ್ದ ಗಾಡ್ರೇಜ್ ಬೀರಿನ ಬಾಗಿಲ ಬೀಗ ತೆಗೆಯಲು ಹೋದಾಗ ಬೀಗ ಬಾರದೆ ಇದ್ದು ಸರಿಯಾಗಿ ಗಮನಿಸಿದಾಗ ಯಾರೋ ಕಳ್ಳರು ಯಾವುದೋ ಆಯುಧದಿಂದ ಸದರಿ ಬೀರಿನ ಬಾಗಿಲನ್ನು ಮೀಟಿ ತೆಗೆದು ಅದರಲ್ಲಿಟ್ಟಿದ್ದ 1) ಒಂದು ಬಂಗಾರದ ಸರ 2) ಒಂದು ಬಂಗಾರದ ಉಂಗುರ 3) ಮಗುವಿನ ಒಂದು ಬಂಗಾರದ ಬಳೆ 4) ಸುಮಾರು 3000/- ರೂ ನಗದು ಹಣ ವನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ, ಕಳುವಾದ ಸ್ವತ್ತಿನ ಅಂದಾಜು ಬೆಲೆ 200000/- ರೂ ಗಳಾಗಿರುತ್ತೆ,

ಶಾಲಾ ಪ್ರವಾಸಕ್ಕೆ ಬಂದ ವಿದ್ಯಾರ್ಥಿನಿ, ಶಿಕ್ಷಕ ನೀರುಪಾಲು
ತಲಕಾಡು ಮತ್ತು ಸೋಮನಾಥಪುರ ದರ್ಶನ ಮುಗಿಸಿಕೊಂಡು ಶ್ರೀರಂಗಪಟ್ಟಣಕ್ಕೆ ಭಾನುವಾರ ಮಧ್ಯಾಹ್ನದ ಸುಮಾರಿಗೆ ಬಂದಾಗ ಮುಖ್ಯ ಶಿಕ್ಷಕ ಸತ್ಯನಾರಾಯಣ, ಕೆಲ ಪೋಷಕರು ಮತ್ತು ವಿದ್ಯಾರ್ಥಿಗಳು ಶ್ರೀರಂಗಪಟ್ಟಣದಲ್ಲೇ ಇಳಿದರೆ, ಬಸ್ಸನ್ನು ಅಲ್ಲಿಂದ ಸುಮಾರು ಒಂದು ಕಿ.ಮೀ. ದೂರದ ದೊಡ್ಡಪಾಳ್ಯದ ಬಳಿಗೆ ಚಾಲಕ ಮತ್ತು ಕ್ಲೀನರ್ ತಂದಿದ್ದರು.
ಹೆಣ್ಣುಮಕ್ಕಳು ಮತ್ತು ಗಂಡುಮಕ್ಕಳು ಬಹಿರ್ದೆಸೆಗೆಂದು ಬೇರೆ ಬೇರೆ ಕಡೆಗೆ ತೆರಳಿದ್ದಾರೆ. ಮಹಾಲಕ್ಷ್ಮಿ ಬಹಿರ್ದೆಸೆ ಮುಗಿಸಿಕೊಂಡು ಕಾವೇರಿ ನದಿಯ ದಡದಲ್ಲಿ ನೀರು ಮುಟ್ಟಲೆಂದು ಹೋದಾಗ ಕಾಲು ಜಾರಿ ಬಿದ್ದಿದ್ದಾಳೆ.
ನೀರಿಗೆ ಬಿದ್ದ ಕೂಡಲೇ ಆಕೆ ಕಿರುಚಿಕೊಂಡಿದ್ದು, ದೂರದಲ್ಲೇ ಇದ್ದ ಸಹ ಶಿಕ್ಷಕ ನರಸಿಂಹಯ್ಯ ರಕ್ಷಣೆಗೆಂದು ಧಾವಿಸಿದ್ದಾರೆ. ನುರಿತ ಈಜುಗಾರರೂ ಆಗಿದ್ದರೂ ನೀರಿಗೆ ಇಳಿಯುತ್ತಿದ್ದಂತೆ ಸುಳಿಗೆ ಸಿಲುಕಿ ಮೇಲೆ ಬರಲು ಸಾಧ್ಯವಾಗಿಲ್ಲ. ಕಿರುಚಾಟ ಕೇಳಿಸಿಕೊಂಡ ವಿದ್ಯಾರ್ಥಿಗಳು, ಚಾಲಕ ಮತ್ತು ಕ್ಲೀನರ್ ವೇಲ್‌ಗಳನ್ನು ಕಟ್ಟಿ ಶಿಕ್ಷಕನಿಗೆ ನೀಡಿದರಾದರೂ ಅದರ ಆಧಾರ ಪಡೆದು ಹೊರ ಬರಲು ಸಾಧ್ಯವಾಗಿಲ್ಲ. ಕೊನೆಗೆ ವಿದ್ಯಾರ್ಥಿನಿ ಜತೆ ನರಸಿಂಹಯ್ಯ ಕೂಡ ನೀರುಪಾಲಾಗಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆ ಮುಖ್ಯ ಶಿಕ್ಷಕ ಸತ್ಯನಾರಾಯಣ ಮತ್ತು ಕೆಲ ಪೋಷಕರೂ ಸ್ಥಳಕ್ಕೆ ಓಡಿ ಬಂದಿದ್ದಾರೆ.ತಕ್ಷಣವೇ ಶ್ರೀರಂಗಪಟ್ಟಣ ಪೊಲೀಸರಿಗೆ ವಿಷಯ ತಿಳಿಸಿದ್ದು, ಅಗ್ನಿ ಶಾಮಕದ ತಂಡದ ಜತೆ ಪೊಲೀಸರು ಸ್ಥಳಕ್ಕೆ ತಲುಪುವ ವೇಳೆಗೆ ಇಬ್ಬರೂ ಸಾವನ್ನಪ್ಪಿದ್ದರು. ನುರಿತ ಈಜುಗಾರರನ್ನು ಇಳಿಸಿ ಶವಗಳಿಗೆ ಶೋಧ ನಡೆಸಿದ್ದು, ರಾತ್ರಿ 12 ಗಂಟೆ ಸುಮಾರಿಗೆ ಮಹಾಲಕ್ಷ್ಮಿ ಶವ ಸಿಕ್ಕಿದೆ. ಶಿಕ್ಷಕ ನರಸಿಂಹಯ್ಯನ ಮೃತ ದೇಹಕ್ಕಾಗಿ ಇಂದು(ಜ.13) ಬೆಳಗ್ಗಿನಿಂದ ನುರಿತ ಈಜುಗಾರರು ಶೋಧ ನಡೆಸುತ್ತಿದ್ದಾರೆ.












Click it and Unblock the Notifications