ಉಡುಪಿ : ಪ್ರೇಮಿಸಿ ವಂಚಿಸಿದ ಯುವಕನ ಬಂಧನ
ಉಡುಪಿ, ಜ.10: ಹಿಂದೂ ವಿದ್ಯಾರ್ಥಿನಿಯೊಬ್ಬಳನ್ನು ಫುಸಲಾಯಿಸಿ ಆಕೆಯೊಂದಿಗೆ ಅಶ್ಲೀಲ ಚಿತ್ರಗಳನ್ನು ತೆಗೆದು ಫೇಸ್ ಬುಕ್ ನಲ್ಲಿ ಹಾಕಿ ಮಾನ ಕಳೆದು ಪರಾರಿಯಾಗಿರುವ ಮಹಮ್ಮದ್ ಯಾಸಿರ್ ಎಂಬಾತನ ಬಂಧನಕ್ಕೆ ಭಜರಂಗಿಗಳು ಆಗ್ರಹಿಸಿದ್ದರು. ಶುಕ್ರವಾರ ಸಂಜೆ ವೇಳೆಗೆ 22 ವರ್ಷ ವಯಸ್ಸಿನ ಯುವಕ ಯಾಸೀರ್ ನನ್ನು ಬಂಧಿಸುವಲ್ಲಿ ಉಡುಪಿ ಪೊಲೀಸರು ಯಶಸ್ವಿಯಾಗಿದ್ದಾರೆ. ಯಾಸೀರ್ ಹಾಗೂ ಹುಡುಗಿಗೆ ಸುಮಾರು ಹತ್ತು ಹನ್ನೊಂದು ವರ್ಷಗಳ ಪರಿಚಯವಿದೆ ಎಂದು ಪೊಲೀಸರು ಹೇಳಿದ್ದಾರೆ.
ಈ ಪ್ರಕರಣದಿಂದ ಉಡುಪಿಯಲ್ಲಿಂದು ಉದ್ರಿಕ್ತ ಸ್ಥಿತಿ ನಿರ್ಮಾಣಗೊಂಡು ಬಜರಂಗದಳದ ಕಾರ್ಯಕರ್ತರು ಉಡುಪಿ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಮುಂದೆ ಜಮಾಯಿಸಿ ಆರೋಪಿಯನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿದ ಘಟನೆ ನಡೆಯಿತು.
ಕಟಪಾಡಿ ನಿವಾಸಿ ಮುಹಮ್ಮದ್ ಯಾಸೀರ್ ವಿದ್ಯಾರ್ಥಿನಿಯ ಜೀವನದಲ್ಲಿ ಚೆಲ್ಲಾಟವಾಡಿದ್ದಾನೆ. ಉಡುಪಿ ಕಾಲೇಜಿನ ವಿದ್ಯಾರ್ಥಿನಿ ಜತೆಗೆ ಸ್ನೇಹ ಬೆಳೆಸಿ, ಪ್ರೀತಿ ನಾಟಕವಾಡಿ ಆಕೆಗೆ ಜ್ಯೂಸ್ ಕುಡಿಯಲೆಂದು ಕರೆದೊಯ್ದು ಅದರಲ್ಲಿ ಅಮಲು ಪದಾರ್ಥ ಸೇರಿಸಿ ಮೈಮರೆಯುವಂತೆ ಮಾಡಿದ್ದಾನೆ. ನಂತರ ಆಕೆಯ ಜತೆ ಅಶ್ಲೀಲವಾಗಿ ವರ್ತಿಸಿ ಚಿತ್ರಗಳನ್ನು ತೆಗೆದಿದ್ದಾನೆ. ವಿದ್ಯಾರ್ಥಿನಿಗೆ ನಶೆ ಇಳಿದಾಗ ಈ ವಿಷಯ ಗೊತ್ತಾಗಿದೆ.
ಫೋಟೊಗಳನ್ನು ಡಿಲೀಟ್ ಮಾಡಬೇಕಾದರೆ ಒಂದಿಷ್ಟು ಹಣ ಕೊಡು ವಿದ್ಯಾರ್ಥಿನಿಯ ಮನೆಯ ಮೂರು ಲಕ್ಷ ರೂ. ಹಣವನ್ನು ಸಾಲ-ಶೂಲ ಮಾಡಿ ಹೊಂದಿಸಿ ಮುಹಮ್ಮದ್ ಯಾಸೀರ್ ಗೆ ನೀಡಿದ್ದಾರೆ. ದುಡ್ಡಿನ ರುಚಿ ಕಂಡ ಯಾಸೀರ್ ಇದನ್ನೇ ಕಸಬ್ ಮಾಡಿಕೊಂಡು ಮತ್ತೆ ಹತ್ತು ಲಕ್ಷ ರೂ. ಹಣದ ಬೇಡಿಕೆ ಮುಂದಿರಿಸಿದ್ದಾನೆ. ವ್ದಿದ್ಯಾರ್ಥಿನಿ ಮನೆಯವರು ದುಡ್ಡು ಕೊಡಲು ಒಪ್ಪದಿದ್ದಾಗ ಆಕೆಯ ಫೋಟೊಗಳನ್ನು ಸಾಮಾಜಿಕ ಜಾಲ ತಾಣ ಫೇಸ್ ಬುಕ್ ನಲ್ಲಿ ಹಾಕಿ ಮಾನ ಕಳೆದಿದ್ದಾನೆ.
ಯಾಸೀರ್ ಬಂಧನಕ್ಕೆ ಆಗ್ರಹಿಸಿ ಉಡುಪಿ ಎಸ್.ಪಿ. ಕಚೇರಿ ಮುಂದೆ ಭಜರಂಗ ದಳ ಕಾರ್ಯಕರ್ತರು ಧರಣಿ ನಡೆಸಿದರು. ಈ ರೀತಿ ಪ್ರಕರಣಗಳು ಜಿಲ್ಲೆಯಲ್ಲಿ ಮತ್ತೆ ಮತ್ತೆ ನಡೆಯುತ್ತಲೇ ಇದೆ ಕೂಡಲೇ ಕ್ರಮ ಜರುಗಿಸಿ, ಜಿಲ್ಲೆಗೆ ಎರಡು ಕೋಮಿಗೂ ಆಗುತ್ತಿರುವ ಅವಮಾನವನ್ನು ಸರಿಪಡಿಸಿ ಎಂದು ಪೊಲೀಸರಿಗೆ ಮನವಿ ಸಲ್ಲಿಸಿದ್ದರು.

ಕರ್ನಾಟಕದ ರಾಜ್ಯ ಕ್ರೈಂ ನ್ಯೂಸ್ ಕವರೇಜ್
ಯಾದಗಿರಿ: ಲಾರಿಯೊಂದು ಹರಿದ ಪರಿಣಾಮ ಮೂವರು ಕುರಿಗಾಹಿಗಳು ಹಾಗೂ ೩೦ಕ್ಕೂ ಹೆಚ್ಚು ಕುರಿಗಳು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಶಹಾಪುರ ತಾಲೂಕಿನಲ್ಲಿ ಸಂಭವಿಸಿದೆ. ಮೃತ ಕುರಿಗಾಹಿಗಳನ್ನು ಶಹಾಪುರ ತಾಲೂಕು ಸೈದಾಪುರ ಗ್ರಾಮದ ಲಿಂಗಪ್ಪ (30), ವೆಂಕಪ್ಪ (26) ಮತ್ತು ಮಡಿವಾಳಪ್ಪ (22) ಎಂದು ಗುರುತಿಸಲಾಗಿದೆ.
ಶುಕ್ರವಾರ ಬೆಳಗ್ಗೆ ಕುರಿಗಳನ್ನು ಮೇಯಿಸಲು ಹೋಗುತ್ತಿದ್ದ ಮೂವರು ಮದ್ರಕಿ ಕ್ರಾಸ್‌ನಲ್ಲಿ ರಸ್ತೆ ಬದಿ ಹೋಗುವಾಗ ಅತಿವೇಗವಾಗಿ ಬಂದ ಲಾರಿ ಕುರಿ ಮಂದೆ ಮೇಲೆ ಹರಿದಿದೆ. ಇದರಿಂದಾಗಿ ಮೂವರು ಕುರಿಗಾಹಿಗಳು ಸ್ಥಳದಲ್ಲೇ ಮೃತಪಟ್ಟರೆ, 30ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿವೆ.

ಮೊಬೈಲ್ ಮತ್ತು ಗಣಕಯಂತ್ರಗಳ ಕಳುವು
ದಿನಾಂಕ: 09.01.2014 ರಂದು ರಾತ್ರಿ ಯಾರೋ ಕಳ್ಳರು ಗಲ್ ಪೇಟೆ ಪೊಲೀಸ್ ಠಾಣಾ ಸರಹದ್ದಿನ ಕುಂಬಾರುಪೇಟೆ 1ನೇ ಅಡ್ಡರಸ್ತೆಯಲ್ಲಿರುವ ಶೈನ್ ಕಂಪ್ಯೂಟರ್ಸ ಮತ್ತು ಮೊಬೈಲ್ ಅಂಗಡಿಯ ಶೆಟ್ಟರ್ ಹೊಡೆದು ಒಳಗೆ ಪ್ರವೇಶ ಮಾಡಿ ಅಂಗಡಿಯಲ್ಲಿದ್ದ 2 ಲ್ಯಾಪ್ ಟಾಪ್ ಮತ್ತು ಮೊಬೈಲ್ ಗಳನ್ನು ಕಳುವು ಮಾಡಿಕೊಂಡು ಹೋಗಿರುತ್ತಾರೆ. ಕಳುವಾದ ಮಾಲಿನ ಮೌಲ್ಯ 24,900- ರೂಗಳೆಂದು ಸದರಿ ಅಂಗಡಿಯ ಮಾಲೀಕರಾದ ಅಲ್ತಾಪ್ ಪಾಷಾ ರವರು ಗಲ್ ಪೇಟೆ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿರುತ್ತಾರೆ. ಈ ಬಗ್ಗೆ ಗಲ್ ಪೇಟೆ ಠಾಣೆಯಲ್ಲಿ ದೂರ ದಾಖಲಾಗಿರುತ್ತದೆ.
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ 08152-243066ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

ಶಿವಮೊಗ್ಗ ಗ್ರಾಮಾಂತರ ಠಾಣೆ ಆತ್ಮ ಹತ್ತೆ ಪ್ರಕರಣ
ಮೃತ: ಪ್ರಶಾಂತ ಬಿನ್ ಲೇ. ಸುಭ್ರಮಣಿ ವಾಸ 21 ವರ್ಷ ವಾಸ ಹಸೂಡಿ ಗ್ರಾಮ ಪಿಟ್ಸ ಖಾಯಿಲೆ ಇದ್ದು ಮತ್ತು ಕುಡಿಯುವ ಹವ್ಯಾಸ ಇದ್ದು , ಈ ದಿನ ಕುಡಿದು ಬಂದಾಗ ಬುದ್ದಿ ಹೇಳಿದ್ದಕ್ಕೆ ಎಲ್ಲಾ ಮಾತ್ರೆಗಳನ್ನು ಒಟ್ಟಿಗೆ ತೆಗೆದುಕೊಂಡು ಮೃತಪಟ್ಟಿರುವನು

ಬಾಕಿ ರಾಜಧನ ಪಾವತಿ ಮಾಡದೇ ಇರುವುದು
"ಉಪನಿರ್ದೇಶಕರು, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ತುಮಕೂರು ರವರ ಪರವಾಗಿ ಪಿರ್ಯಾದಿ ಟಿ.ವೆಂಕಟೇಶ ರವರು ಜ.9ರಂದು ಠಾಣೆಗೆ ಹಾಜರಾಗಿ ಕೊಟ್ಟ ದೂರಿನ ಅಂಶವೇನೆಂದರೆ
‘ದಿನಾಂಕ 26-06-2009 ರಂದು ಮೇ!! ಜೀರೋಜಿ ಏಕ್ಸಿಂ ಪ್ರೈ.ಲಿ ನ ಪಾಲುದಾರರಾದ ಕೆ.ರಾಜುಗೌಡ ಬಿನ್ ಕೆಂಪೇಗೌಡ ಇವರಿಗೆ ಕುಣಿಗಲ್ ತಾ. ಹುಲಿಯೂರುದುರ್ಗ ಹೋಬಳಿ ಕೆ.ಜಿ ದೇವಪಟ್ಟಣ ಗ್ರಾಮದ ಸ.ನಂ.56 ರಲ್ಲಿ 16 ಎಕರೆ ಪ್ರದೇಶಕ್ಕೆ 10 ವರ್ಷದ ಅವಧಿಗೆ ಕಲ್ಲು ಗಣಿಗಾರಿಕೆಗೆ ಗುತ್ತಿಗೆ ಮಂಜೂರಾಗಿರುವುದು ಸರಿಯಷ್ಟೆ. ಬಾಕಿ ರಾಜಧನ ಪಾವತಿ ಮಾಡದೇ ಇರುವುದು, ಪರವಾನಗಿ ಪಡೆಯದೇ ಕಟ್ಟಡದ ಕಲ್ಲು ಉಪಖನಿಜವನ್ನು ಸಾಗಾಣಿಕೆ ಮಾಡಿರುವುದು ಹಾಗೂ ಸಾರ್ವಜನಿಕರ ದೂರಿನ ಹಿನ್ನಲೆಯಲ್ಲಿ ಕಲ್ಲು ಗಣಿ ಗುತ್ತಿಗೆ ಸಂಖ್ಯೆ 717 ಅನ್ನು ದಿನಾಂಕ :27-12-2013 ರಂದು ರದ್ದುಪಡಿಸಲಾಗಿತ್ತು.
ಅದರಂತೆ ದಿನಾಂಕ; 28-12-2013 ರಂದು ತಹಸೀಲ್ದಾರ್ ಕುಣಿಗಲ್ ಇವರೊಂದಿಗೆ ಜಂಟಿ ಸ್ಥಳ ತಪಾಸಣೆ ಮಾಡಿ ಗುತ್ತಿಗೆದಾರರ ಪ್ರತಿನಿಧಿಗೆ ಗುತ್ತಿಗೆ ಪ್ರದೇಶದಲ್ಲಿ ಯಾವುದೇ ಕಲ್ಲು ಗಣಿಗಾರಿಕೆ ಹಾಗೂ ಕ್ರಷರ್ ಘಟಕದಿಂದ ಯಾವುದೇ ಖನಿಜವನ್ನು ಸಾಗಾಣಿಕೆ ಮಾಡಬಾರದೆಂದು ತಿಳಿಸಿ ಮಹಜರ್ ಮಾಡಲಾಗಿತ್ತು. ಆದರೂ ಸಹ ದಿನಾಂಕ;08-01-2014 ರಂದು ದಾಸ್ತಾನನ್ನು ಪರಿಶೀಲಿಸಲಾಗಿ ಸದರಿಯವರ ಪ್ರಾಂಗಣದಲ್ಲಿ ಇದ್ದ ಕಟ್ಟಡ ಕಲ್ಲಿನ ದಾಸ್ತಾನಿನಲ್ಲಿ ಅಂದಾಜು 1000 (ಒಂದು ಸಾವಿರ) ಮೆಟ್ರಿಕ್ ಟನ್ ನಷ್ಟು ಕಟ್ಟಡದ ಕಲ್ಲು ಅಂದರೆ ಒಂದು ಮೆಟ್ರಿಕ್ ಟನ್ ಕಟ್ಟಡದ ಕಲ್ಲಿಗೆ ರೂ 400/- ರಂತೆ ಒಟ್ಟು ರೂ. 4,00,000 /- ಮೌಲ್ಯದ ಉಪ ಖನಿಜವನ್ನು ಪರವಾನಗಿ ಪಡೆಯದೇ ಖನಿಜವನ್ನು ಕಳ್ಳತನದಿಂದ ಸಾಗಾಣಿಕೆ ಮಾಡಿರುವುದು
ಐ.ಪಿ.ಸಿ ಕಲಂ 379 ರೀತ್ಯಾ ಹಾಗೂ ಕರ್ನಾಟಕ ಉಪ ಖನಿಜ ರಿಯಾಯಿತಿ ನಿಯಮಾವಳಿ -1994 ರ ಉಪ ನಿಒಯಮ 3(1) 42(1) 43(5) 44(3) ರ ನೇರ ಉಲ್ಲಂಘನೆಯಾಗಿದ್ದು,ಸರ್ಕಾರಿ ಆಸ್ತಿಯನ್ನು ಕಳ್ಳತನದಿಂದ ಸಾಗಿಸಿರುವ ಹಿನ್ನಲೆಯಲ್ಲಿ ಕೆ.ರಾಜುಗೌಡ ರವರ ವಿರುದ್ದ ಕಾನೂನು ರೀತ್ಯಾ ಕ್ರಮ

ತರೀಕೆರೆ ದೇವಾಲಯದಲ್ಲಿ ಕಳುವು
ತರೀಕೆರೆ ಪೊಲೀಸ್ ಠಾಣೆ ಮೊ.ಸಂ.02/2014 - ಕಲಂ: 457 380 ಐಪಿಸಿ - ಪಿರ್ಯಾದುದಾರರು ಕುಮಾರ್ ಅರ್ಚಕರು ಅಂತರಘಟ್ಟಮ್ಮ ದೇವಾಲಯಕ್ಕೆ ಎಂದಿನಂತೆ ಹೋದಾಗ ಹಾಕಿದ್ದ ಬೀಗ ಇಲ್ಲದೇ ಇದ್ದು ಬಾಗಿಲು ಸ್ವಲ್ಪ ತೆರೆದಿದ್ದನ್ನು ನೋಡಿ, ದೇವಾಲಯದ ಒಳಭಾಗಕ್ಕೆ ಹೋಗಿ ನೋಡಿದ್ದು ವಿಗ್ರಹದ ಮೇಲಿದ್ದ ಆಭರಣಗಳು ಇಲ್ಲದೇ ಇದ್ದು ಅಂತರಘಟ್ಟಮ್ಮ ದೇವರ ವಿಗ್ರಹಕ್ಕೆ ಅಳವಡಿಸಿದ್ದ 1) ಬಂಗಾರದ ಮೂರು ದುಂಡುನೇಯ ತಾಳಿಗಳು 2) ಬೆಳ್ಳಿಯ ಮುಖವಾಡ, ನಾಲ್ಕು ಛತ್ರಿಗಳನ್ನು ರಾತ್ರಿ ಸಮಯದಲ್ಲಿ ಯಾರೋ ಕಳ್ಳರು ದೇವಾಲಯದ ಬೀಗವನ್ನು ಮುರಿದು ಬಂಗಾರದ ಮತ್ತು ಬೆಳ್ಳಿಯ ಆಭರಣಗಳನ್ನು ಕಳವು ಮಾಡಿಕೊಂಡು ಹೋಗಿದ್ದಾಗಿರುತ್ತೆ. ಅಂದಾಜು ಬೆಲೆ 24.000/- ಇತ್ಯಾದಿ












Click it and Unblock the Notifications