ಬೆಂಗಳೂರಿನಲ್ಲಿ ಕಾಲೇಜು ವಿದ್ಯಾರ್ಥಿನಿ ಅಪಹರಣ
ಬೆಂಗಳೂರು,
ಫೆ.8: ನಗರದ ಕೋರಮಂಗಲದ ಜ್ಯೋತಿನಿವಾಸ್ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ನಾಪತ್ತೆಯಾಗಿದ್ದಾಳೆ ಎಂದು ಮೂಲಗಳು ತಿಳಿಸಿವೆ. ಆಂಧ್ರಪ್ರದೇಶ ಮೂಲದ ಜೈನಬ್ (16) ವಿದ್ಯಾರ್ಥಿನಿ ನಾಪತ್ತೆಯಾಗಿದ್ದಾಳೆ. ಶುಕ್ರವಾರ ಸಂಜೆ 7.30ರಿಂದ ನಾಪತ್ತೆಯಾಗಿದಾಳೆ ಎಂದು ಜೈನಬ್ ಪೋಷಕರು ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. id="toptextpromo"> id='are-slot-1' class='oiad oi-axt oiadv'>ಶುಕ್ರವಾರ
ರಾತ್ರಿ ಸುಮಾರು 10 ಗಂಟೆಯಲ್ಲಿ ತಂದೆ ಟಿ ಜವರಲಾಲ್ ಅವರಿಗೆ ಕರೆ ಮಾಡಿದ ಜೈನಬ್, ನನ್ನನ್ನು ಇಬ್ಬರು ಅಪರಿಚಿತ ವ್ಯಕ್ತಿಗಳು ಮುಂಬೈಗೆ ಕರೆತಂದಿದ್ದಾರೆ ಎಂದು ತಿಳಿಸಿದ್ದಾಳೆ. ಜೈನಬ್ ಳನ್ನು ಕಿಡ್ನಾಪ್ ಮಾಡಿದ್ದಾರೆ ಎಂದು ಪೋಷಕರು ಶಂಕಿಸಿದ್ದು, ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಉಳಿದಂತೆ ಉಡುಪಿ, ಚಿತ್ರದುರ್ಗ, ಶಿವಮೊಗ್ಗ, ತುಮಕೂರು ಜಿಲ್ಲೆಗಳಿಂದ ಬಂದಿರುವ ಕ್ರೈಂ ಸುದ್ದಿಗಳ ಕವರೇಜ್ ಮುಂದೆ ಓದಿ... id='are-slot-2' class='oiad oi-axt oiadv'>
ಮಲ್ಪೆ ಸಹಾಯಕ ಪೊಲೀಸ್ ಉಪನಿರೀಕ್ಷಕ ಸಾವು
ಮಲ್ಪೆ: ಪಿರ್ಯಾದಿದಾರರಾದ ಅನಿಲ್ ಕುಮಾರ್ (37) ತಂದೆ ಮೆಣ್ಪ ಸೇರಿಗಾರ ವಾಸ ಅಂಜಲಿ, ಶಂಕರನಾರಾಯಣ ದೇವಸ್ಥಾನದ ಬಳಿ ಕೊಡವೂರು ಗ್ರಾಮ ಎಂಬವರ ತಂದೆಯವರಾದ ಮೆಣ್ಪ ಸೇರಿಗಾರ ಪ್ರಾಯ 68 ವರ್ಷ (ನಿವೃತ್ತ ಪೊಲೀಸ್ ಅಧಿಕಾರಿ) ರವರು ದಿನಾಂಕ 07/02/2014 ರಂದು ಮಧ್ಯಾಹ್ನ 12:00 ಗಂಟೆಯಿಂದ 12:30 ಗಂಟೆಯ ಮಧ್ಯಾವಧಿಯಲ್ಲಿ ಕೊಡವೂರು ಗ್ರಾಮದ ಶಂಕರನಾರಾಯಣ ದೇವಸ್ಥಾನದ ಬಳಿ ಇರುವ ತನ್ನ ಮನೆಯಲ್ಲಿ ಕೋಣೆಯ ಛಾವಣಿಯಲ್ಲಿರವ ಹುಕ್ಸ್ ಗೆ ನೈಲಾನ್ ಹಗ್ಗದಿಂದ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ.
ಮೃತ ಮೆಣ್ಪ ಸೇರಿಗಾರ ರವರು ಖಾಯಿಲೆಯಿಂದ ಬಳಲುತ್ತಿದ್ದು ಇದೇ ಮಾನಸಿಕ ಚಿಂತೆಯಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ ಎಂಬುದಾಗಿ ಅನಿಲ್ ಕುಮಾರ್ ರವರು ನೀಡಿದ ದೂರಿನಂತೆ ಮಲ್ಪೆ ಠಾಣಾ ಅಸ್ವಾಭಾವಿಕ ಮರಣ ಸಂಖ್ಯೆ 07/2014 ಕಲಂ 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಕೋಲಾರ :ಎಸ್.ಸಿ/ಎಸ್.ಟಿ ದೌರ್ಜನ್ಯ ತಡೆ ಕಾಯ್ದೆ
ಗಲ್ ಪೇಟೆ ಪೊಲೀಸ್ ಠಾಣೆಯಲ್ಲಿ ಎಸ್.ಸಿ/ಎಸ್.ಟಿ ದೌರ್ಜನ್ಯ ತಡೆ ಕಾಯ್ದೆಯ ಅಡಿ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಕೋಲಾರ ನಗರ, ಹಳೇ ಬಸ್ ನಿಲ್ದಾಣದ ಬಳಿ ಸಂಭವಿಸಿರುತ್ತದೆ. ಕೋಲಾರ ತಾಲ್ಲೂಕು, ಐತರಸನಹಳ್ಳಿ ಗ್ರಾಮದ ವಾಸಿ ಗಂಗಾಧರ್ ರವರನ್ನು ಕೋಲಾರ ತಾಲ್ಲೂಕು, ತೊಂಡಾಲ ಗ್ರಾಮದ ವಾಸಿ ವೆಂಕಟರಾಮಪ್ಪ ಮತ್ತು ಇತರರು ಸೇರಿ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ, ಪ್ರಾಣ ಬೆದರಿಕೆ ಹಾಕಿ, ಜಾತಿ ನಿಂದನೆ ಮಾಡಿರುತ್ತಾರೆ.
ಈ ಗಂಗಾಧರ್ ರವರು ವೆಂಕಟರಾಮಪ್ಪ ರವರ ತಂಗಿಯನ್ನು ಚುಡಾಯಿಸಿದ್ದಾನೆಂಬ ವಿಚಾರದಲ್ಲಿ ಈ ಘಟನೆ ಸಂಭವಿಸಿರುತ್ತದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ 08152-243066 ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.![ಶಿವಮೊಗ್ಗ :ಬೆಂಕಿ ಆಕಸ್ಮಿಕ [ಕುಂಸಿ ಠಾಣೆ] ಶಿವಮೊಗ್ಗ :ಬೆಂಕಿ ಆಕಸ್ಮಿಕ [ಕುಂಸಿ ಠಾಣೆ]](https://imagesvs.oneindia.com/kn/img/2014/02/08-1391837814-shimoga-new.jpg)
ಶಿವಮೊಗ್ಗ :ಬೆಂಕಿ ಆಕಸ್ಮಿಕ [ಕುಂಸಿ ಠಾಣೆ]
ಹುಬ್ಬನ ಹಳ್ಳಿಯಲ್ಲಿ ಸುಮಾರು 60-70 ಸಾವಿರ ರೂ ಗಳ ಬೆಲೆಯ ಭತ್ತ ದ ಹುಲ್ಲು ಹಾಗೂ ಜೋಳದ ರವದಿಗೆ ಆಕಸ್ಮಿಕವಾಗಿ ಬೆಂಕಿ ಬಿದ್ದು ಸುಟ್ಟು ಹೋಗಿರುತ್ತದೆ ಈ ಬಗ್ಗೆ ಪಿರ್ಯಾದಿ ಲಕ್ಷ್ಮಣಪ್ಪ ತಂದೆ ಹನುಮಂತಪ್ಪ ವಾಸ ಹುಬ್ಬನಹಳ್ಳಿ ರವರು ಠಾಣೆಗೆ ದೂರು ನೀಡಿರುವರು

ಸರ್ಕಾರಿ ಬಸ್‍ಗೆ ಲಾರಿ ಡಿಕ್ಕಿ ಮೂವರಿಗೆ ಗಾಯ
ಮೊಳಕಾಲ್ಮೂರು, ನಂ: ಕೆಎ-37/ಎಫ್-273 ನೇ ಕೆಎಸ್‍ಆರ್‍ಟಿಸಿ ಬಸ್‍ಗೆ ನಂ: ಎಪಿ-02/ ಎಕ್ಸ್-216 ನೇ ಲಾರಿಯ ಚಾಲಕ ತನ್ನ ಲಾರಿಯನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ನಡೆಸಿಕೊಂಡು ಬಂದು ಡಿಕ್ಕಿ ಹೊಡೆಸಿದ ಪರಿಣಾಮ ಬಸ್‍ನ ಮುಂಭಾಗ ಜಖಂಗೊಂಡು ಹಲವರಿಗೆ ಪೆಟ್ಟುಗಳು ಬಿದ್ದು ರಕ್ತಗಾಯಗಳಾಗಿರುವ ಘಟನೆ ನಿನ್ನೆ ಸಂಜೆ ರಾಯಾಪುರ ಗೇಟ್ ಬಳಿ ಎಸ್‍ಹೆಚ್-19 ರಸ್ತೆಯಲ್ಲಿ ನಡೆದಿದೆ. ಬಸ್ ಚಾಲಕ ಸಿದ್ದಾಪುರ ವಾಸಿ ಸದಾಶಿವ (29), ಬಳ್ಳಾರಿ ವಾಸಿಗಳಾದ ಮಲ್ಲೇಶ (39), ಪೂರ್ಣಿಮ (29) ಮೂವರು ತೀವ್ರವಾಗಿ ಗಾಯಗೊಂಡಿದ್ದು, ಇತರರಿಗೆ ಸಣ್ಣಪುಟ್ಟ ಗಾಯಗಳಾಗಿರುತ್ತವೆ ಎಂದು ಇದ್ದ ದೂರಿನ ಮೇರೆಗೆ ಮೊಳಕಾಲ್ಮೂರು ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿರುತ್ತದೆ.

ಅರಸೀಕೆರೆ ಪೊಲೀಸ್ ಠಾಣಾ
07/02/2014 ರಂದು 6:15 ಗಂಟೆಗೆ ಜೂಲಪ್ಪನಪಾಳ್ಯ ಗ್ರಾಮದ ಈ .ಆನಂದ ಬಿನ್ ಲೇ|| ಈರಣ್ಣ ರವರು ನೀಡಿದ ದೂರಿನ ಸಾರಾಂಶವೇನೆಂದರೆ: ನಾನು ಕೆರೆಯ ನೀರನ್ನು ಬಿಟ್ಟುಕೊಂಡು ಗದ್ದೆಗೆ ನೀರನ್ನು ಹಾಯಿಸುತ್ತಿದ್ದೆ ಅಷ್ಟರಲ್ಲಿ ಲಿಂಗದಹಳ್ಳಿ ಗ್ರಾಮದ ಬೋವಿ ಜನಾಂಗದ ವೆಂಕಟೇಶ ಬಿನ್ ಅಂಜಿನಪ್ಪ, ಹನುಮಪ್ಪ ಬಿನ್ ಲೇ|| ಈರಣ್ಣ ರವರುಗಳು ನನಗೆ ನೀರು ಕಟ್ಟಬಾರದೆಂತ ನನ್ನನ್ನು ಅಡ್ಡಗಟ್ಟಿ ಸೂ* ಮಗನೇ , ಬೋ* ಮಗನೇ ಎಂತ ಅವಾಚ್ಯ ಶಬ್ದಗಳಿಂದ ಬೈಯ್ದು ವೆಂಕಟೇಶ ಎಂಬುವವನು ಕಾಲುವೆಯಲ್ಲಿ ಕೊರಳಪಟ್ಟಿ ಹಿಡಿದು ಮಲಗಿಸಿ ಕುತ್ತಿಗೆಯ ಮೇಲೆ ಕಾಲು ಇಟ್ಟುಕೊಂಡು ಹನುಮಪ್ಪ ಎಂಬುವವನು ನನ್ನ ಎರಡು ಕಾಲುಗಳನ್ನು ಹಿಡಿದು ಅದುಮಿಕೊಂಡಿದ್ದರು.
ಆಗ ನಾನು ಒದ್ದಾಡುತ್ತಾ ಕಿರುಚಾಡಿದಾಗ ಶ್ರೀನಿವಾಸ ಮತ್ತು ವೆಂಕಟೇಶಪ್ಪ ಇಬ್ಬರೂ ಬಂದು ನನ್ನನ್ನು ಅವರಿಂದ ಬಿಡಿಸಿ ಸಮಾಧಾನ ಪಡಿಸಿದರು, ಇದಾದ ಮೇಲೆ ಊರಿನ ಹಿರಿಯರಿಗೆ ವಿಚಾರ ತಿಳಿಸಿದ್ದು ನ್ಯಾಯಾ ಪಂಚಾಯ್ತಿಗೆ ಬರಲಿಲ್ಲ, ವೆಂಕಟೇಶ, ಮತ್ತು ಹನುಮಪ್ಪ ರವರುಗಳು ಇನ್ನೊಂದು ಸಾರಿ ನಮ್ಮ ತಂಟೆಗೆ ಬಂದರೆ ನಿನಗೆ ಜೀವ ಸಹಿತ ಬಿಡುವುದಿಲ್ಲವೆಂತ ಪ್ರಾಣ ಬೆದರಿಕೆ ಹಾಕಿರುತ್ತಾರೆ.












Click it and Unblock the Notifications