ಕರಡಿಕಲ್ ದೇಗುಲದ ಬಳಿ ದಿಬ್ಬಣ ಮಾರಣ ಹೋಮ
ಬೆಂಗಳೂರು , ಡಿ.20 : ಆಗಿನ್ನೂ ಮದುವೆ ಮುಗಿಸಿಕೊಂಡು ಸಂಭ್ರಮದಿಂದ ತಮ್ಮ ಗ್ರಾಮದೆಡೆಗೆ ದಿಬ್ಬಣ ಹೊರಟ್ಟಿತ್ತು. ದುರ್ದೈವಿಗಳು ಪ್ರಯಾಣಿಸುತ್ತಿದ್ದ ಕ್ಯಾಂಟರ್ ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದಿದ್ದಲ್ಲದೇ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ 11 ಮಂದಿ ಮೃತಪಟ್ಟ ಘಟನೆ ಸೋಮವಾರ ಹೊನ್ನಾಳಿ ತಾಲೂಕಿನ ಕೆಂಚಿಕೊಪ್ಪ ತುಗ್ಗಲಹಳ್ಳಿ ಬಳಿ ಕರಡಿಕಲ್ ದೇವಸ್ಥಾನದ ಬಳಿ ಸಂಭವಿಸಿದೆ.
ಉರುಳಿ ಬಿದ್ದು ಡಿಕ್ಕಿ ಹೊಡೆದ ರಭಸಕ್ಕೆ ಸ್ಥಳದಲ್ಲೇ 6 ಮಂದಿ ಹಾಗೂ ಹೊನ್ನಾಳಿ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಒಬ್ಬ ಮೃತಪಟ್ಟಿದ್ದಾನೆ. ತೀವ್ರವಾಗಿ ಗಾಯಗೊಂಡು ದಾವಣಗೆರೆ ಆಸ್ಪತ್ರೆಗೆ ದಾಖಲಾಗಿದ್ದವರ ಪೈಕಿ ನಾಲ್ವರು ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ್ದಾರೆ. ಈ ಭೀಕರ ಅಪಘಾತದಲ್ಲಿ ಸುಮಾರು 20ಕ್ಕೂ ಅಧಿಕ ಮಂದಿಗೆ ತೀವ್ರ ಗಾಯಗಳಾಗಿದೆ.
ಮೃತರನ್ನು ಕೆ. ಮಹೇಶ್ವರಪ್ಪ (56), ಮುರಳಿ (9), ಹನುಮಂತ ರೆಡ್ಡಿ (62), ವೀರಭದ್ರಪ್ಪ (55), ಡಿ.ಜಿ.ಮಹದೇವಪ್ಪ ಗೌಡ (60) ಹಾಗೂ ಸಂತೋಷ್ (25) ಎಂದು ಗುರುತಿಸಲಾಗಿದೆ. ಮಾರ್ಗಮಧ್ಯದಲ್ಲಿ ಹಾಗೂ ದಾವಣಗೆರೆ ಆಸ್ಪತ್ರೆಯಲ್ಲಿ ಮೃತಪಟ್ಟರ ಗುರುತು ಇನ್ನೂ ಪತ್ತೆಯಾಗಿಲ್ಲ. ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ವೈದ್ಯರು ತಿಳಿಸಿದ್ದಾರೆ.
ತಾಲೂಕಿನ ಒಡೆಯರ ಹತ್ತೂರು ಗ್ರಾಮದ ವರ ಹಾಗೂ ಹರಿಹರ ತಾಲೂಕಿನ ಭಾನುವಳ್ಳಿ ಗ್ರಾಮದ ವಧುವಿನ ಮದುವೆ ತಾಲೂಕಿನ ಪವಿತ್ರ ಕ್ಷೇತ್ರ ತೀರ್ಥರಾಮೇಶ್ವರದಲ್ಲಿ ಸೋಮವಾರ ನೆರವೇರಿತು. ಈ ಮದುವೆಗೆಂದು ಕ್ಯಾಂಟರ್ ನಲ್ಲಿ ಸುಮಾರು 50ರಿಂದ 55 ಜನ ತೀರ್ಥರಾಮೇಶ್ವರಕ್ಕೆ ಬಂದಿದ್ದರು. ಮದುವೆ ಶಾಸ್ತ್ರ ಹಾಗೂ ಊಟ ಮುಗಿಸಿಕೊಂಡು ತಮ್ಮ ಗ್ರಾಮ ಹರಿಹರ ತಾಲೂಕಿನ ಭಾನುವಳ್ಳಿಗೆ ಹಿಂದಿರುಗುತ್ತಿದ್ದರು. ಕೆಂಚಿಕೊಪ್ಪ ಹಾಗೂ ತುಗ್ಗಲಹಳ್ಳಿ ಮಧ್ಯೆ ಕರಡಿಕಲ್ ದೇವಸ್ಥಾನದ ಬಳಿ ಕ್ಯಾಂಟರ್ ಪಲ್ಟಿಯಾಗಿ ಮರಕ್ಕೆ ಅಪ್ಪಳಿಸಿದ್ದರಿಂದ ಅಪಘಾತ ಸಂಭವಿಸಿದೆ.
ಸುದ್ದಿ ತಿಳಿಯುತ್ತಿದ್ದಂತೆಯೇ ಕೆಂಚಿಕೊಪ್ಪ ಸೇರಿದಂತೆ ಸುತ್ತಮುತ್ತಲ ಗ್ರಾಮದವರು ಹಾಗೂ ಪೊಲೀಸರು ಗಾಯಾಳುಗಳನ್ನು ಹೊನ್ನಾಳಿ ಆಸ್ಪತ್ರೆಗೆ ದಾಖಲು ಮಾಡಿದ್ದು, ಕೆಲವರನ್ನು ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆ ಆಸ್ಪತ್ರೆಗೆ ಸಾಗಿಸಲಾಗಿದೆ. ಹೊನ್ನಾಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉಡುಪಿ
ಬ್ರಹ್ಮಾವರ: ಡಿ.23 ರಂದು 10:20 ಗಂಟೆಗೆ ಉಡುಪಿ ತಾಲೂಕು ಆರೂರು ಗ್ರಾಮದ ಕುಂಜಾಲು ಹಂದಿಗೂಳಿ ಕ್ರಾಸ್ ನಲ್ಲಿ ಆರೋಪಿ ಪ್ರವೀಣ ಎಂಬಾತನು ಇನೋವಾ ಕಾರು ನಂಬ್ರ ಕೆಎ-20-ಪಿ-1500 ನ್ನು ಹೆಬ್ರಿ ಕಡೆಯಿಂದ ಬ್ರಹ್ಮಾವರ ಕಡೆಗೆ ವೇಗವಾಗಿ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಹಂದಿಗೂಳಿ ರಸ್ತೆಯಿಂದ ಮುಖ್ಯ ರಸ್ತೆಗೆ ಬರಲು ರಸ್ತೆಯಲ್ಲಿ ನಿಲ್ಲಿಸಿಕೊಂಡಿದ್ದ ಪಿರ್ಯಾದಿ ಶ್ರೀಮತಿ ಮನೀಷಾ (30) ಗಂಡ ಆನಂದ ಪೂಜಾರಿ ವಾಸ ದೇವಿ ನಿಲಯ, ಮದ್ಯಸ್ಥರಬೆಟ್ಟು ನೀಲಾವರ ಎಂಬವರು ಚಲಾಯಿಸುವ ಆಟೋರಿಕ್ಷಾ ನಂಬ್ರ ಕೆಎ-20-ಸಿ-9755 ಕ್ಕೆ ಡಿಕ್ಕಿ ಹೊಡೆದ ಪರಿಣಾಮವಾಗಿ ಪಿರ್ಯಾದಿದಾರರಿಗೆ ಹಾಗೂ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ರಂಜಿತ್ ಎಂಬವರಿಗೆ ಗಾಯವಾಗಿರುತ್ತದೆ
ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 313/2013 ಕಲಂ 279, 337 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಶಿವಮೊಗ್ಗ ಆನವಟ್ಟಿ;-ಹೋರಿ ತಿವಿದು ಸಾವು;
ಪಿರ್ಯಾದಿ ರಜಾಕ್ 60 ವರ್ಷ ವಾಸ; ಬಿಳಗಲಿ ಗ್ರಾಮ ಇವರ ತಂಗಿಯ ಮಗ ಮೃತ ಮೃತ;ದಾದಾಪೀರ್ ತಂದೆ ಮಹಬೂಬ್ ಅಲಿ ಸಾಬ್ 22 ವರ್ಷ ವಾಸ; ಕುರುಬಗೊಂಡ ಗ್ರಾಮ ಈತನು ಜಡೆಯಲ್ಲಿ ಹೋರಿ ಬೆದರಿಸುವ ಕಾರ್ಯಕ್ರಮಕ್ಕೆ ತನ್ನ ಹೋರಿಯನ್ನು ಬೆದರಿಸಿಕೊಂಡು ಹೋಗುತ್ತಿದ್ದಾಗ ಹಿಂದಿನಿಂದ ಮತ್ತೊಂದು ಹೋರಿ ತಿವಿದ ಕಾರಣ ತೀವ್ರವಾಗಿ ಪೆಟ್ಟು ಬಿದ್ದು ಮೃತ ಪಟ್ಟಿರುತ್ತಾನೆ.
ಪಿರ್ಯಾದಿ ರುದ್ರೇಶ ತಂದೆ ವರಣಚಾರಿ ವಾಸ; ಬೆಳಗುತ್ತಿ ಗ್ರಾಮ ಹೊನ್ನಾಳಿಇವನ ತಮ್ಮ ಮೃತ ವೀರಭದ್ರಾಚಾರಿ ಈತನು ಜಡೆಯಲ್ಲಿ ಹೋರಿ ಬೆದರಿಸುವ ಕಾರ್ಯಕ್ರಮ ನೋಡಲು ಹೋಗಿದ್ದು ಹೋರಿ ತಿವಿದ ಕಾರಣ ತೀವ್ರವಾಗಿ ತಲೆಗೆ ಪೆಟ್ಟು ಬಿದ್ದು ಶಿರಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿರುತ್ತಾನೆ.

ಕೋಲಾರ
ಟಾಟಾ ಸುಮೋ ವಾಹನ ಅಪಹರಣ: ವೇಮಗಲ್ ಪೊಲೀಸ್ ಠಾಣೆಯಲ್ಲಿ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಮಾಲೂರು ತಾಲ್ಲೂಕು, ಬೆಳ್ಳಾವಿ ಗ್ರಾಮದ ವಾಸಿ ಹರೀಶ್ ರವರ ಟಾಟಾ ಸುಮೋ ವಾಹನ ಸಂ-ಕೆಎ-೦೩, ಎನ್-9170 ರಲ್ಲಿ ಬೆಳ್ಳಾವಿಯಿಂದ ಚಿಂತಾಮಣಿಗೆ ಹೋಗುತ್ತಿದ್ದು. ಈ ಸಮಯದಲ್ಲಿ ಕೋಲಾರ ತಾಲ್ಲೂಕು, ಉರಟಿ ಅಗ್ರಾಹಾರ ಗೇಟ್ ಬಳಿ ಬಂದಾಗ ಟಾಟಾ ಸುಮೋವನ್ನು ಹಿಂಬಾಲಿಸಿಕೊಂಡು ಬರುತ್ತಿದ್ದ ಕಾರ್ ನಂ-ಟಿ.ಎನ್-19, ಹೆಚ್-4444 ವಾಹನದಲ್ಲಿ ಬಂದ ಅಪರಿಚಿತ 6 ಜನರು ಹರೀಶ್ ರವರನ್ನು ವಾಹನದಿಂದ ತಳ್ಳೀ ಟಾಟಾ ಸುಮೋ ವಾಹನವನ್ನು ಅಪಹರಿಸಿಕೊಂಡು ಹೋಗಿರುತ್ತಾರೆ.

ಚಿಕ್ಕಮಗಳೂರು
ಜೂಜಾಟ ಪ್ರಕರಣ ಎನ್‌ಆರ್‌ಪುರ ಪೊಲೀಸ್ ಠಾಣೆ ಮೊ.ಸಂ.179/2013 - ಕಲಂ: 87 ಕೆ.ಪಿ ಆಕ್ಟ್ - ನ.ರಾ.ಪುರ ವೃತ್ತ ನಿರೀಕ್ಷಕರವರಿಗೆ ಬಂದ ಖಚಿತ ಮಾಹಿತಿಯಂತೆ ಕಾನೂರು ಗ್ರಾಮದ ಕೆರೆಮನೆಯ ಬಸ್ ನಿಲ್ದಾಣದ ಹಿಂಭಾಗದಲ್ಲಿ ಯಾವುದೇ ಪರವಾನಗಿ ಇಲ್ಲದೆ ಇಸ್ವೀಟ್ ಜೂಜಾಟವಾಡುತ್ತಿದ್ದ ಆರೋಪಿಗಳಾದ 1) ವಿಜಯಕುಮಾರ್ 2] ಕೆ.ಎಂ. ಸತೀಶ 3] ಅಯ್ಯಪ್ಪ 4] ಚಂದ್ರಶೇಖರ 5] ಸಂದೀಪ 6] ಶಿವದಾಸ್ 7] ಪ್ರಮೋದ್ ವಿ ರವರುಗಳನ್ನು ಹಿಡಿದಿದ್ದು. ಪಂಚರ ಸಮಕ್ಷಮದಲ್ಲಿ ಒಟ್ಟು ಜೂಜಾಟವಾಡಲು ಬಳಸಿದ 52 ಇಸ್ಪೀಟ್ ಎಲೆಗಳು, ಒಟ್ಟು 4205/- ರೂಗಳು ಹಾಗೂ ಒಂದು ನ್ಯೂಸ್ ಪೇಪರ್‌ನ್ನು ಮಾನತ್ತುಪಡಿಸಿಕೊಂಡಿದ್ದಾಗಿರುತ್ತೆ.

ಚಿತ್ರದುರ್ಗ :ಅಸ್ವಾಭಾವಿಕ ಮರಣ ಪ್ರಕರಣ
ಹೊಟ್ಟೆನೋವಿನ ಬಾಧೆಯಿಂದ ನರಳುತ್ತಿದ್ದ ವ್ಯಕ್ತಿಯೊಬ್ಬರು ಜಿಗುಪ್ಸೆಗೊಂಡು ನೇಣು ಹಾಕಿಕೊಂಡು ಮೃತಪಟ್ಟಿರುವ ಘಟನೆ ತಾಲ್ಲೂಕಿನ ಕಿಟ್ಟದಹಟ್ಟಿ ಗ್ರಾಮದಲ್ಲಿ ನಿನ್ನೆ ಸಂಜೆ ನಡೆದಿದೆ. ಗ್ರಾಮದ ಲೋಕೇಶ (38) ಎಂಬುವವರು ಸುಮಾರು ಒಂದು ವರ್ಷಗಳಿಂದ ಹೊಟ್ಟೇನೋವಿನ ಬಾಧೆಯಿಂದ ನರಳುತ್ತಿದ್ದು, ಆಸ್ಪತ್ರೆಗಳಿಗೆ ತೋರಿಸಿಕೊಂಡರೂ ಗುಣಮುಖನಾಗಿರಲಿಲ್ಲ ಇದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು ನೇಣು ಹಾಕಿಕೊಂಡು ಮೃತಪಟ್ಟಿರುತ್ತಾರೆ ಎಂದು ದೂರು ಇದ್ದ ಮೇರೆಗೆ ಭರಮಸಾಗರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿರುತ್ತದೆ.












Click it and Unblock the Notifications