SSLC Exam Results 2026: ಅಂಕಗಳಿಗಿಂತ ಜೀವನ ಮುಖ್ಯ - ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕ ಕಿವಿಮಾತು: ಭವ್ಯಾ ವಿಶ್ವನಾಥ್ ಬರಹ

SSLC Exam Results 2026: ಅಂಕಗಳಿಗಿಂತ ಜೀವನ ಮುಖ್ಯ - ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕ ಕಿವಿಮಾತು: ಮನಶ್ಶಾಸ್ತ್ರಜ್ಞೆ ಹಾಗೂ ಮಕ್ಕಳ ಸುರಕ್ಷತಾ ತರಬೇತುದಾರರಾದ ಭವ್ಯಾ ವಿಶ್ವನಾಥ್ ಅವರ ಬರಹ ಇಲ್ಲಿದೆ.

ಕಿವಿಮಾತು - ಮಕ್ಕಳೇ, Sslc Results 2026 ನಿಮ್ಮ ಪರೀಕ್ಷೆಯ ಫಲಿತಾಂಶವೇ ಹೊರತು, ನಿಮ್ಮ ಬದುಕಿನ ಫಲಿತಾಂಶವಲ್ಲ. ಬದುಕಿನಲ್ಲಿ ಇನ್ನು ಅನೇಕ ಪರೀಕ್ಷೆಗಳನ್ನು ನೀವು ಎದುರಿಸಬೇಕಾಗಿದೆ. ಇದು ಮೊದಲನೆಯದಷ್ಟೆ. ಉನ್ನತ ಮಟ್ಟದ ಮತ್ತು ಸರಾಸರಿ ಅಂಕಗಳನ್ನು ಗಳಿಸಿ ಉತ್ತೀಣ೯ರಾಗಿರುವ ವಿದ್ಯಾಥಿ೯ಗಳಿಗೆ ಅಭಿನಂದನೆಗಳು.

SSLC Results 2026

ಮಾನಸಿಕ ಸಿದ್ಧತೆಯಿರಲಿ

ಈ ಫಲಿತಾಂಶವೇ ಅಂತ್ಯವಲ್ಲ, SSLC ನಂತರ PUC ಪರೀಕ್ಷೆಯಿದೆ. ಮುಂದೆ ಈ ಫಲಿತಾಂಶಗಳು ಬದಲಾಗಬಹುದು, ಇಲ್ಲವೇ ಉತ್ತಮ ಫಲಿತಾಂಶವನ್ನು ನಿವ೯ಹಿಸುವ ಒತ್ತಡವೂ ಕೂಡ ಬರಬಹುದು. 10ನೇ ತರಗತಿಯ ಫಲಿತಾಂಶ ಉತ್ತಮವಾಗಿದ್ದು, ನಂತರ ಪಿಯುಸಿಯಲ್ಲಿ ಸಾಧರಣ ಫಲಿತಾಂಶವಾಗಬಹುದು ಅಥವಾ ಈಗ ಸಾಮಾನ್ಯ ಫಲಿತಾಂಶ ಪಡೆದಿರುವ ಮಕ್ಕಳು ಪಿಯಿಸಿನಲ್ಲಿ ಹೆಚ್ಚಿನ ಫಲಿತಾಂಶವನ್ನು ಪಡೆಯುವ ಸಾಧ್ಯತೆಯೂ ಇದೆ. ಒಟ್ಟಿನಲ್ಲಿ ಮಾನಸಿಕ ಸಿದ್ಧತೆಯೊಂದಿಗೆ, ಕೇವಲ ಅಂಕಗಳ ಮೇಲೆ ಗಮನ ಕೊಡದೇ, ಕಲಿಕೆಯ ಮೇಲೆ ಗಮನ ಹರಿಸಿ ಮುನ್ನಡೆಯಿರಿ.

ಮೊಬೈಲ್‌ನಿಂದ ದೂರ, ಏಕಾಗ್ರತೆಯೇ ಮಂತ್ರ: 625ಕ್ಕೆ 625 ಅಂಕ ಗಳಿಸಿದ ಮೈಸೂರಿನ SSLC ಟಾಪರ್ ಧನುಷ್ ಸಾಧನೆಯ ಗುಟ್ಟು
ಮೊಬೈಲ್‌ನಿಂದ ದೂರ, ಏಕಾಗ್ರತೆಯೇ ಮಂತ್ರ: 625ಕ್ಕೆ 625 ಅಂಕ ಗಳಿಸಿದ ಮೈಸೂರಿನ SSLC ಟಾಪರ್ ಧನುಷ್ ಸಾಧನೆಯ ಗುಟ್ಟು

ನಿಮ್ಮ ಮುಂದಿನ ಆಯ್ಕೆ ಹೀಗಿರಲಿ..

ಸ್ನೇಹಿತರ ಆಯ್ಕೆ, ಪೋಷಕರ ಆಸಕ್ತಿ ನಿಮ್ಮ ಆಯ್ಕೆಯಾಗುವುದಿಲ್ಲ. ನಿಮಗೆ ಸೂಕ್ತವಾದ ಆಯ್ಕೆಯನ್ನು ಮಾಡಿ. Science, Commerce ಮತ್ತು Arts ಯಾವುದೇ ಕ್ಷೇತ್ರವಾಗಲಿ, ನಿಮ್ಮ ಆಸಕ್ತಿ(ಅತೀ ಇಷ್ಟವಾದ ವಿಷಯ), ಕೌಶಲ್ಯಗಳು (ಸ್ಕಿಲ್ ಸೆಟ್ಸ್) ಮತ್ತು ಅಂಕಗಳು, ಈ ಮೂರು ಅಂಶಗಳು ಕೂಡುವಂತಹ ಕ್ಷೇತ್ರವನ್ನು ಆರಿಸಿಕೊಳ್ಳಿ. ಇದು ನಿಮಗೆ ಸೂಕ್ತವಾದ ಆಯ್ಕೆಯಾಗುತ್ತದೆ. ಇದರಿಂದ, ಶಿಕ್ಷಣದಿಂದಾಗುವ ಹೆಚ್ಚಿನ ಒತ್ತಡ, ಆತಂಕವನ್ನು ಕೂಡವನ್ನು ನಿಭಾಯಿಸಬಹುದು.

(Self assessment)- ಸ್ವಯಂ ಮೌಲ್ಯಮಾಪನ: ನಿಮ್ಮ ಆಸಕ್ತಿಗಳು, ಕೌಶಲ್ಯಗಳು ಮತ್ತು ನೆಚ್ಚಿನ ವಿಷಯಗಳನ್ನು ಗುರುತಿಸಿ.

(Research opportunities) - ಸಂಶೋಧನಾ ಅವಕಾಶಗಳು: ವೃತ್ತಿ ನಿರೀಕ್ಷೆಗಳು, ಉದ್ಯೋಗ ಅವಕಾಶಗಳು ಮತ್ತು ಭವಿಷ್ಯದ ಪ್ರವೃತ್ತಿಗಳನ್ನು ಅನ್ವೇಷಿಸಿ.

ಹಾಗೆಯೇ, ಅನುತ್ತೀರ್ಣರಾಗಿರುವ ವಿದ್ಯಾಥಿ೯ಗಳಿಗೂ ಕೂಡ "ಬೆಸ್ಟ್ ವಿಷಸ್, ಬೆಟರ್ ಲಕ್ ನೆಕ್ಸ್ಟ್‌ ಟೈಮ್". ಈ ಸಂದರ್ಭದಲ್ಲಿ, ನೀವೆಲ್ಲಾ ಹತಾಶೆಯಾಗಿರಬಹುದು, ಮಾನಸಿಕವಾಗಿ ಕುಗ್ಗಿರುತ್ತೀರ. ಇದೂ ಕೂಡ ಸಹಜವಾದ ಪ್ರತಿಕ್ರಿಯೆ. ಆದರೆ, ಭರವಸೆಯನ್ನ ಕಳೆದುಕೊಂಡು ಮೂಲೆ ಗುಂಪಾಗಬೇಡಿ. ನಿಮಗೆ ಇನ್ನೊಂದು ಅವಕಾಶವಿದೆ. ಧೈರ್ಯದಿಂದ ಮುನ್ನುಗ್ಗಿ. ಬೇಗನೆ ಎಚ್ಚತ್ತುಕೊಂಡು, ಸಿದ್ಧತೆ ನಡೆಸಿ. ನೆನಪಿರಲಿ, ನಿಮ್ಮ ಟೀಚರ್ ಮಾಗ೯ದಶ೯ನ ಮತ್ತು ಪೋಷಕರ ಬೆಂಬಲ ಸದಾ ನಿಮ್ಮೊಂದಿಗೆ ಇರುತ್ತದೆ. ನಿಂದನೆ, ಬೇಸರ, ಟೀಕೆ ಮಾತುಗಳಿಂದ ನಿಮಗೆ ನೋವಾದರೂ ಕೂಡ, ಇವುಗಳನ್ನೇ ಸವಾಲನ್ನಾಗಿ ತೆಗೆದುಕೊಂಡು, ಮುನ್ನಡೆಯಿರಿ. ಯಾರಿಗೂ ಪ್ರತ್ಯುತ್ತರ ನೀಡದೇ, ಅತಿಯಾದ ಕೋಪ ಹತಾಶೆಗೆ ಒಳಗಾಗದೇ, ಮೌನವಾಗಿ ಸಿದ್ಧತೆ ನಡೆಸಿ. ನಿಮ್ಮ ಗಮನ ಸಂಪೂಣ೯ವಾಗಿ ಮುಂದಿನ supplementary ಪರೀಕ್ಷೆಯ ಮೇಲಿರಲಿ. ನಿಮ್ಮ ತಪ್ಪುಗಳನ್ನು ತಿದ್ದಿಕೊಂಡು, ನಿಮ್ಮ ಓದುವ ಶೈಲಿ ಮತ್ತು ತಂತ್ರಗಳನ್ನು (Study Techniques) ಸುಧಾರಿಸಿಕೊಳ್ಳುವ ಪ್ರಯತ್ನ ನಿಮದಾಗಲಿ.

SSLC Result 2026: ಕನ್ನಡಕ್ಕೆ ಭರ್ಜರಿ ಜಯ, ಗಣಿತ-ಹಿಂದಿಯಲ್ಲೂ ಮುನ್ನಡೆ, ದಾಖಲೆ ಬರೆದ ಫಲಿತಾಂಶ
SSLC Result 2026: ಕನ್ನಡಕ್ಕೆ ಭರ್ಜರಿ ಜಯ, ಗಣಿತ-ಹಿಂದಿಯಲ್ಲೂ ಮುನ್ನಡೆ, ದಾಖಲೆ ಬರೆದ ಫಲಿತಾಂಶ

ಸೋಲಿನ ಪಾಠಗಳೊಂದಿಗೆ ಯಶಸ್ಸು ನಿಮ್ಮದಾಗಲಿ

ಸೋಲಿನಿಂದ ಹತಾಶೆಯಾಗಿ, ನಿಮ್ಮ ಸಾಮಥ್ಯ೯ವನ್ನು ನಿಂದಿಸಿಕೊಂಡು, ಸದಾ ಸೋಲನ್ನೇ ಮೆಲುಕು ಹಾಕುವುದರ ಬದಲು, ಸೋಲು ನಿಮಗೆ ಏನು ಕಲಿಸಿಕೊಳ್ಳಲು ಪ್ರಯತ್ನಿಸುತ್ತಿದೆ, ನೀವು ಕಲಿಯಬಹುದಾದ ಪಾಠವೇನು ಎನ್ನುವುದರ ಮೇಲೆ ನಿಮ್ಮ ಗಮನಹರಿಸಿ. ಸೋಲಿನ ಪಾಠಗಳೇ ನಿಮ್ಮ ಯಶಸ್ಸಿನ ದಾರಿಯ ಮೊದಲ ಮೆಟ್ಚಿಲು.

ಬದುಕು ಉದಾರ - ಸಂದೇಹವೇ ಬೇಡ!

ನೀವು ಸೋತಾಗಲೆಲ್ಲಾ, ಬದುಕು ನಿಮಗೆ ಮತ್ತೊಂದು ಅವಕಾಶ ನೀಡುತ್ತದೆ, ಇದು ಖಚಿತ. ಅವಕಾಶಗಳನ್ನು ಬಳಸಿಕೊಳ್ಳುವ ಸಂಕಲ್ಪ ಮತ್ತು ಮನಸ್ಸು ನಿಮಗಾಗಿರಬೇಕು. SSLC ನಂತರ PUC ಮತ್ತೊಂದು ಅವಕಾಶವಿದೆ. ಅವಕಾಶಗಳ ಸರಮಾಲೆಯೇ ನಿಮದು. ಪ್ರಯತ್ನ ಬಿಡಬೇಡಿ.

ಆಪತ್ತಿನಲ್ಲಿ ನಿಮ್ಮ ಮನೋಭಾವನೆ ಹೇಗಿರಬೇಕು ?

ಕ್ಯಾರೆಟ್ ಮತ್ತು ಮೊಟ್ಟೆಯನ್ನು ಬೇಯಿಸಿದರೇ, ಕ್ಯಾರೆಟ್ ಮೆತ್ತಗಾಗುತ್ತದೆ, ಮೊಟ್ಟೆ ಗಟ್ಟಿಯಾಗುತ್ತದೆ. ಕ್ಯಾರೆಟ್ ತನ್ನ ಗಡಸ್ಸನ್ನು ಮತ್ತು ಮೊಟ್ಟೆಯು ತನ್ನ ಮೃದತ್ವವನ್ನು ಕಳೆದುಕೊಳ್ಳುತ್ತವೆ. ಕಾಫಿ ಬೀಜವನ್ನು ನೀರಿನಲ್ಲಿ ಕುದಿಸಿದರೆ ನೀರಿಗೆ ಅದರ ಗಾಢವಾದ ಪರಿಮಳ ಬರುತ್ತದೆ. ಆಪತ್ತು ನಿಮ್ಮ ಬಾಗಿಲು ಬಡಿದರೆ, ನೀವು ಹೇಗೆ ಪ್ರತಿಕ್ರಿಯಿಸುತ್ತೀರಿ? ಕ್ಯಾರೆಟ್, ಮೊಟ್ಟೆ ಅಥವಾ ಕಾಫಿ ಬೀಜದಂತೆಯೋ...

Karnataka SSLC Results 2026: ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ; ರಾಜ್ಯದಲ್ಲಿ ಯಾವ ಜಿಲ್ಲೆ ಎಷ್ಟನೇ ಸ್ಥಾನ?
Karnataka SSLC Results 2026: ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ; ರಾಜ್ಯದಲ್ಲಿ ಯಾವ ಜಿಲ್ಲೆ ಎಷ್ಟನೇ ಸ್ಥಾನ?

ಎಳೆಯ ಮನಸ್ಸುಗಳು ಕನಸು ಕಾಣಬೇಕು!

ನಿಮ್ಮ ಕನಸುಗಳು ಮುಂದುವರೆಯಲಿ. ಈ ಕನಸುಗಳೇ ನಿಮ್ಮ ಬದುಕಿನ ನಕ್ಷೆಯಾಗುತ್ತದೆ. ಕನಸುಗಳೇ ನಿಮ್ಮ ಗುರಿಯನ್ನು ನಿಧ೯ರಿಸುತ್ತವೆ. ನಿಮ್ಮ ಭವಿಷ್ಯದ ಬಗ್ಗೆ ಕನಸು ಕಂಡು, ಪೂರೈಸಿಕೊಳ್ಳುವ ಹಾದಿಯನ್ನು ಹುಡುಕಿ.

ಅರಿವೇ ಗುರು !

ನಾನು ಯಾರು ? ನನ್ನ ಬದುಕಿನ ಉದ್ದೇಶವೇನು ? ನಾನು ಹೇಗೆ ಬದುಕಬೇಕು, ಬದುಕನ್ನು ಹೇಗೆ ರೂಪಿಸಿಕೊಳ್ಳಬೇಕೆಂದರೇ, ನಿಮ್ಮನ್ನು ನೀವು ಅರಿಯಬೇಕು. ನಿಮ್ಮ ಸಾಮಥ್ಯ೯, ದೌಬ೯ಲ್ಯಗಳನ್ನು ಅರಿಯಿರಿ. ಗೊಂದಲ ನಿಮ್ಮ ಆಸಕ್ತಿ ಅನಾಸಕ್ತಿಗಳೇನು ? ಇಷ್ಟಗಳೇನು ಕಷ್ಟಗಳೇನೆಂದು ಅರಿಯಿರಿ. ಈ ಅರಿವೇ ನಿಮ್ಮ ಯಶಸ್ಸಿನ ದಾರಿಗೆ ಕರೆದೊಯ್ಯುತ್ತದೆ.

ರ‍್ಯಾಂಕ್ ಪಡೆದವರೇ ಬುದ್ಧಿವಂತರು ಎಂಬ ಭ್ರಮೆ ಬೇಡ, ಫೇಲಾದರೆ ಜೀವನ ಮುಗಿದಿಲ್ಲ
ರ‍್ಯಾಂಕ್ ಪಡೆದವರೇ ಬುದ್ಧಿವಂತರು ಎಂಬ ಭ್ರಮೆ ಬೇಡ, ಫೇಲಾದರೆ ಜೀವನ ಮುಗಿದಿಲ್ಲ

Develop life Skill - ಜೀವನ ಕೌಶಲ್ಯಗಳು ಅಂಕಗಳಷ್ಟೇ ಮುಖ್ಯ. ಸಂವಹನ, ಕ್ರೀಯಾಶೀಲತೆ, ಸಮಯ ಪ್ರಜ್ಞೆ, ಒತ್ತಡ ನಿವ೯ಹಿಸುವ ಕೌಶಲ್ಯಗಳು ಮತ್ತು ಭಾವಕ್ಮಕ ಬುದ್ಧಿವಂತಿಕೆ ಮತ್ತು ಮುಂತಾದ ಕೌಶಲ್ಯವನ್ನು ಬೆಳೆಸಿಕೊಂಡರೇ ಭವಿಷ್ಯದಲ್ಲಿ ಬರುವ ಸವಾಲುಗಳನ್ನು ಯಶಸ್ವಿಯಾಗಿ ನಿವ೯ಹಿಸಬಹುದು.

ಮೌಲ್ಯ ಶಿಕ್ಷಣ

"ಶಿಕ್ಷಣ" ಜೀವನದಲ್ಲಿ ಬರುವ ಪ್ರಲೋಭನೆಗಳು, ತೊಂದರೆಗಳು ಮತ್ತು ಸವಾಲುಗಳನ್ನು ಎದುರಿಸುವುದು ಹೇಗೆ ಎಂಬುದನ್ನು ಕಲಿಸುವುದಿಲ್ಲ ಆದರೆ ಮೌಲ್ಯ ಶಿಕ್ಷಣ ಕಲಿಸುತ್ತವೆ. ಒಟ್ಟಾರೆ ಬೆಳವಣಿಗೆಯನ್ನು ನೀಡುತ್ತದೆ.

ಬರಹ: ಭವ್ಯಾ ವಿಶ್ವನಾಥ್

ಬೆಂಗಳೂರಿನಲ್ಲಿ ಆಪ್ತಸಮಾಲೋಚಕರಾಗಿರುವ ಭವ್ಯಾ ವಿಶ್ವನಾಥ್ ಅವರನ್ನು ಮೊಬೈಲ್ ಸಂಖ್ಯೆ 99457 43542 ಮೂಲಕ ಸಂಪರ್ಕಿಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+