SSLC Results 2025: ಎಸ್‌ಎಸ್‌ಎಲ್‌ಸಿ ಫಲಿತಾಂಶ ಬಿಡುಗಡೆ ಅಪ್ಡೇಟ್ಸ್! ಡೇಟ್ಸ್, ವೆಬ್‌ಸೈಟ್, ಡೌನ್‌ಲೋಡ್ ವಿಧಾನ
ಬೆಂಗಳೂರು, ಏಪ್ರಿಲ್ 08: ಕರ್ನಾಟಕ ರಾಜ್ಯದಲ್ಲಿ ಪ್ರಸಕ್ತ 2025ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (KSEAB) ನಡೆಸಿತ್ತು. ಕಳೆದ ಮಾರ್ಚ್ 21 ರಿಂದ ಏಪ್ರಿಲ್ 4ರವರೆಗೆ ಸುಸೂತ್ರವಾಗಿ ಪರೀಕ್ಷೆಗಳು ನಡೆದಿದ್ದು, ಇದೀಗ ವಿದ್ಯಾರ್ಥಿಗಳು ಹಾಗೂ ಪೋಷಕರು SSLC ಫಲಿತಾಂಶದತ್ತ ಗಮನ ಹರಿಸಿದ್ದಾರೆ. ಹಾಗಾದರೆ SSLC Results 2025 ಬಿಡುಗಡೆ ಯಾವಾಗ, ದಿನಾಂಕ, ವೆಬ್‌ಸೈಟ್ ಮಾಹಿತಿ, ಫಲಿತಾಂಶ ನೋಡುವುದು/ಡೌನ್‌ಲೋಡ್ ಹೇಗೆ? ಎಂಬ ಪೂರ್ತಿ ವಿವರ ಇಲ್ಲಿದೆ.
ರಾಜ್ಯ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (KSEAB)ಯು ಜನವರಿ 10ರಂದು SSLC ಪರೀಕ್ಷಾ 2025 ವೇಳಾಪಟ್ಟಿ ಬಿಡುಗಡೆ ಮಾಡಿತ್ತು. ಅಂತಿಮ ಮತ್ತು ಅಧಿಕೃತ ವೇಳಾಪಟ್ಟಿಯನ್ನು ಮಂಡಳಿಯು ತನ್ನ ವೆಬ್‌ಸೈಟ್ ನಲ್ಲಿ ಪ್ರಕಟಿಸಿತ್ತು. ತದನಂತರ SSLC ವಿದ್ಯಾರ್ಥಿಗಳಿಗೆ ಪ್ರವೇಶ ಕಾರ್ಡ್ ಅನ್ನು KSEAB ವಿತರಿಸಿತ್ತು. ಅದರಂತೆ ಪರೀಕ್ಷೆಗಳು ನಿಗದಿತ ಕಾಲಮಿತಿಯಲ್ಲಿ ನಡೆದಿದ್ದು, ಒಟ್ಟು ಸುಮಾರು 08 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಅಂತಿಮ ಪ್ರಕ್ರಿಯೆಯಾದ ಫಲಿತಾಂಶ ಬಿಡುಗಡೆಯ ದಿನಕ್ಕಾಗಿ ಕಾಯಲಾಗುತ್ತಿದೆ.

ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶವು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (KSEAB) ಮೂಲಗಳ ಪ್ರಕಾರ ಇದೇ ಏಪ್ರಿಲ್ ತಿಂಗಳ ಅಂತ್ಯಕ್ಕೆ ಹಾಗೂ ಮೇ ಮೊದಲ ವಾರ ಬಿಡುಗಡೆ ಆಗುವ ಸಾಧ್ಯತೆ ಇದೆ. ಮೌಲ್ಯಮಾಪನ ಮಂಡಳಿಯೇ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ karresults.nic.in ಬಿಡುಗಡೆ ಮಾಡಲಿದೆ. ವಿದ್ಯಾರ್ಥಿಗಳು ಫಲಿತಾಂಶ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.
ಮುಂದಿನ ಕೆಲವೇ ವಾರಗಳಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟಗೊಳ್ಳಲಿದ್ದು, ವಿದ್ಯಾರ್ಥಿಗಳು ಡೌನ್‌ಲೋಡ್ ಮಾಡಲು ಏನು ಮಾಡಬೇಕು? ಅನುಸರಿಸಬೇಕಾದ ವಿಧಾನಗಳು ಇಲ್ಲಿವೆ.
SSLC ಫಲಿತಾಂಶ ಪರಿಶೀಲನೆ ಹೇಗೆ?
* ವಿದ್ಯಾರ್ಥಿಗಳು ಅಥವಾ ಪೋಷಕರು ಕರ್ನಾಟಕ SSLC ಪರೀಕ್ಷೆ ಫಲಿತಾಂಶ ನೋಡಲು ಈ ಕೆಳಗಿನ ಸೂಚನೆ ಪಾಲಿಸಬೇಕಿದೆ.
* ಮೊದಲು ನೀವು ಈ ಅಧಿಕೃತ ವೆಬ್‌ಸೈಟ್, ಲಿಂಕ್ https://karresults.nic.in/ ಗೆ ನೀಡಬೇಕು.
* ನಂತರ ಪರದೇಯಲ್ಲಿ ಕಾಣುವ 'ಎಸ್.ಎಸ್.ಎಲ್.ಸಿ' ಎಂಬ ಆಯ್ಕೆಯನ್ನು ಆಯ್ದುಕೊಳ್ಳಬೇಕು.
* 2025 ಪರೀಕ್ಷೆ -1 ರ ಫಲಿತಾಂಶ / SSLC 2025 ಪರೀಕ್ಷೆ - 1 ಫಲಿತಾಂಶ,' ಎಂಬ ವಿಭಾಗದಲ್ಲಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಅಥವಾ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ಎಂಬುದರ ಮೇಲೆ ಕ್ಲಿಕ್ ಮಾಡಬೇಕು.
* ಬಳಿಕ ಮುಂದಿನ ಪುಟಕ್ಕೆ ತೆರಳುತ್ತೀರಿ. ಅಲ್ಲಿ ನೀವು/ಪರೀಕ್ಷಾ ನೋಂದಣಿ ಸಂಖ್ಯೆ, ಮತ್ತು ಜನ್ಮ ದಿನಾಂಕದ ವಿವರ ಹಾಕಬೇಕು. ನಂತರ ಸಿಗುವ ತಾತ್ಕಾಲಿಕ ಅಂಕಪಟ್ಟಿಯನ್ನು ಡೌನ್‌ಲೋಡ್ ಮಾಡಿಕೊಳ್ಳಲು ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿದರೆ ಎಸ್‌ಎಸ್‌ಎಲ್‌ಸಿ ಫಲಿತಾಂಶ ಡೌನ್‌ಲೋಡ್ ಆಗುತ್ತಿದೆ. ಅದರ ಒಂದು ಪ್ರತಿ ಪಡೆಯಬೇಕಿದೆ.
ಇತ್ತೀಚಿನ ಅಪ್ಡೇಟ್ ಏನೆಂದರೆ ರಾಜ್ಯದ ಎಲ್ಲ 240 ಕೇಂದ್ರಗಳಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳ ಮೌಲ್ಯಮಾಪನ ಶುರುವಾಗಿದೆ. ಇತ್ತ ವಿದ್ಯಾರ್ತಿಗಳು ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ. ಏಪ್ರಿಲ್ ಅಂತ್ಯಕ್ಕೆ ಇಲ್ಲವೇ, ಮೇ ಮೊದಲ ವಾರ ಫಲಿತಾಂಶ ಪ್ರಕಟಗೊಳ್ಳಲಿದೆ ಎಂದು ಸರ್ಕಾರಿ ಮೂಲಗಳು ಮಾಹಿತಿ ನೀಡಿವೆ. ಹೆಚ್ಚಿನ ಮಾಹಿತಿಗೆ ನೀವು ಅಧಿಕೃತ karresults.nic.in ವೆಬ್‌ಸೈಟ್ ಪರಿಶೀಲಿಸುತ್ತೀರಿ..












Click it and Unblock the Notifications