ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಳ್ಳಾರಿ: ಭಾರತ್‌ ಜೋಡೋ ಅಲ್ಲ, ಸೋನಿಯಾ ಗೆಲ್ಲಿಸಿದ್ದಕ್ಕೆ ಪ್ರಾಯಶ್ಚಿತ ಯಾತ್ರೆ- ರಾಮುಲು ಕಿಡಿ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 15: ಗಣಿ ನಾಡು ಬಳ್ಳಾರಿಯಲ್ಲಿ ನಡೆಸುತ್ತಿರುವ ಭಾರತ್ ಜೋಡೋ ಯಾತ್ರೆಯ ಬದಲಿಗೆ, ಪ್ರಾಯಶ್ಚಿತ ಯಾತ್ರೆ ನಡೆಸಬೇಕಿತ್ತು ಎಂದು ಸಚಿವ ಶ್ರೀರಾಮುಲು ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದ್ದಾರೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ನಾವು ನಡೆಸುತ್ತಿರುವುದು ಭಾರತ್ ಜೋಡೋಯಾತ್ರೆಯಲ್ಲ. ಬದಲಿಗೆ ನಮ್ಮ ತಾಯಿಯನ್ನು ಗೆಲ್ಲಿಸಿದ್ದಕ್ಕೆ ಜನಾದೇಶವನ್ನು ಧಿಕ್ಕರಿಸಿ ರಾಜೀನಾಮೆ ನೀಡಿದ್ದಕ್ಕೆ, ಅಧಿಕಾರದಲ್ಲಿ ಇದ್ದಾಗ ಏನು ಮಾಡದೆ ಮತದಾರರ ಕ್ಷಮೆ ಕೇಳುವ ಪ್ರಾಯಶ್ಚಿತ ಯಾತ್ರೆ ಮಾಡುತ್ತಿದ್ದೇವೆ ಎಂದು ಹೇಳಲು ಸಂಕೋಚ ಏಕೆ.? ಕಾಂಗ್ರೆಸ್ ನಾಯಕರೇ ಎಂದು ರಾಮುಲು ಪ್ರಶ್ನಿಸಿದ್ದಾರೆ.

ಬಾಗಲಕೋಟೆ: ಮುಖ್ಯಮಂತ್ರಿ ಆಗುವುದಕ್ಕೆ ಸಿದ್ದರಾಮಯ್ಯ ಅಯೋಗ್ಯ ವ್ಯಕ್ತಿ ಎಂದ ಈಶ್ವರಪ್ಪಬಾಗಲಕೋಟೆ: ಮುಖ್ಯಮಂತ್ರಿ ಆಗುವುದಕ್ಕೆ ಸಿದ್ದರಾಮಯ್ಯ ಅಯೋಗ್ಯ ವ್ಯಕ್ತಿ ಎಂದ ಈಶ್ವರಪ್ಪ

1999 ರ ಲೋಕಸಭಾ ಚುನಾವಣೆ ವೇಳೆ ಅಮೇಥಿಯಲ್ಲಿ ಸೋಲಬಹುದು ಎಂಬ ಭೀತಿಯಿಂದ ಬಳ್ಳಾರಿಗೆ ಓಡೋಡಿ ಬಂದು ರಾಜಕೀಯ ಪುರ್ನಜನ್ಮ ಪಡೆದಿದ್ದಕ್ಕೆ ಪ್ರತಿಯಾಗಿ, ಜಿಲ್ಲೆಯ ಜನತೆಯ ಬೆನ್ನಿಗೆ ಚೂರಿ ಹಾಕಿ ಹೋಗಿದ್ದ ಸೋನಿಯಾ ಗಾಂಧಿ ನೇತೃತ್ವದ ಕಾಂಗ್ರೆಸ್ ಪಕ್ಷದ 'ಭಾರತ್ ತೋಡೋ ಯಾತ್ರೆ'ಗೆ ಹಾರ್ದಿಕ ಸುಸ್ವಾಗತ! ಎಂದು ವ್ಯಂಗ್ಯವಾಡಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಬಳ್ಳಾರಿ ಕ್ಷೇತ್ರದಿಂದ ಗೆದ್ದು, ಸೌಜನ್ಯಕ್ಕಾದರೂ ಜನತೆಗೆ ಧನ್ಯವಾದಗಳನ್ನು ತಿಳಿಸದೇ, ದೆಹಲಿಯಿಂದಲೇ ರಾಜೀನಾಮೆ ಪತ್ರ ಬಿಸಾಕಿದ ಕಾಯಂ AICC ಅಧ್ಯಕ್ಷರ ಮುದ್ದಿನ ಪುತ್ರ, ಪಾದಯಾತ್ರೆಯ ಮೂಲಕ ಬಳ್ಳಾರಿಗೆ ಆಗಮಿಸುತ್ತಿರುವುದಕ್ಕೆ ನಿಮಗಿದೋ ಭವ್ಯ ಸ್ವಾಗತ ಎಂದು ಕುಹಕವಾಡಿದ್ದಾರೆ.

1000 ಕಿಮೀ ಕ್ರಮಿಸಿದ ಭಾರತ್ ಜೋಡೋ ಹೇಗಿತ್ತು..ಇಲ್ಲಿದೆ ಮಾಹಿತಿ1000 ಕಿಮೀ ಕ್ರಮಿಸಿದ ಭಾರತ್ ಜೋಡೋ ಹೇಗಿತ್ತು..ಇಲ್ಲಿದೆ ಮಾಹಿತಿ

ತಮ್ಮ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಏದುಸಿರು‌ ಬಿಡುತ್ತಾ ಕೈಲಾಗದಿದ್ದರೂ ಎದ್ದೋ ಬಿದ್ದನಂತೆ ಓಡುತ್ತಾ, ರಸ್ತೆಯಲ್ಲಿ ಬಸ್ಕಿ ಹೊಡೆಯುತ್ತಾ, ಹಾವು- ಮುಂಗುಸಿಯಂತೆ ಇದ್ದರೂ ,ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ ಎಂದು ಕ್ಯಾಮರಾ ಮುಂದೆ ಪೋಜು ನೀಡುವ ಕೆಪಿಸಿಸಿ ಮಹಾನ್ ನಾಯಕರೆಲ್ಲರಿಗೂ ಸುಸ್ವಾಗತ ಎಂದು ಕಾಂಗ್ರೆಸ್ ನಾಯಕರ ಕಾಲೆಳೆದಿದ್ದಾರೆ.

 3300 ಕೋಟಿ ರೂ.ಗಳ ಪ್ಯಾಕೇಜ್ ಏನಾಯಿತು?

3300 ಕೋಟಿ ರೂ.ಗಳ ಪ್ಯಾಕೇಜ್ ಏನಾಯಿತು?

ಬಳ್ಳಾರಿಜಿಲ್ಲೆಗೆ 3300 ಕೋಟಿ ರೂ.ಗಳ ಸುಳ್ಳು ಪ್ಯಾಕೇಜ್ ಅನ್ನು ನಿಮ್ಮ ಮಾತೃಶ್ರೀಯವರಾದ ಶ್ರೀಮತಿ ಸೋನಿಯಾ ಗಾಂಧಿಯವರು ಘೋಷಣೆ ಮಾಡಿದ್ದರು ಎಂಬುದನ್ನು ಮಾನ್ಯ ರಾಹುಲ್‌ ಗಾಂದಿಗೆ ನೆನಪಿಲು ಇಚ್ಛೇಸುತ್ತೇನೆ. ಏಕೆಂದರೆ, ನಿಮಗೆ ಮರೆವು ಜಾಸ್ತಿ.! ಎಂದು ರಾಹುಲ್ ಗಾಂಧಿಯವರಿಗೂ ಬಳ್ಳಾರಿ ಜಿಲ್ಲೆಯ ಉಸ್ತುವಾರಿ ಸಚಿವರಾಗಿರುವ ರಾಮುಲು ಬಿಸಿ ಮುಟ್ಟಿಸಿದ್ದಾರೆ.

ಬಳ್ಳಾರಿ ಜನತೆ ಸೋನಿಯಾಗಾಂದಿ ಘೋಷಿಸಿದ ಪ್ಯಾಕೇಜ್ ಬಂದೇ ಬರುತ್ತದೆ ಎಂದು ಜನ ಕಣ್ ಕಣ್ ಬಿಟ್ಟಿದ್ದೇ ಆಯಿತು, ಆದರೆ ಅದು ಎಲ್ಲಿಗೆ ಬಂತು? ಯಾವಾಗ ಬಂತು? ಯಾರಿಗೆ ಹೋಯಿತು? ಯಾರ ಜೇಬಿಗೆ ಸೇರಿತು? ಕಾಂಗ್ರೆಸ್‍ ನಾಯಕರ ಬಳಿ ಉತ್ತರ ಇದೆಯೇ?, ಸೋನಿಯಾಗಾಂಧಿ ಅವರು ಸ್ಪರ್ಧೆ ಮಾಡಿದಾಗ ಅವರ ಮೇಲಿನ ಪ್ರೀತಿ, ಅಭಿಮಾನದಿಂದ ಆಶೀರ್ವಾದ ಮಾಡಿದರು. ಗೆದ್ದ ಮೇಲೆ ಇಲ್ಲಿಗೆ ಎಷ್ಟು ಸಲ ಬಂದರು? ಕನಿಷ್ಟ ಪಕ್ಷ ಗೆಲ್ಲಿಸಿದ್ದಕ್ಕೆ ಮತದಾರರಿಗೆ ಸೌಜನ್ಯಕ್ಕಾದರೂ ಕೃತಜ್ಞತೆ ಹೇಳಿದ್ದಾರಾ? ಇದನ್ನು ಜನತೆಯ ಮುಂದೆ ಹೇಳಲು ಸಿದ್ದರಿದ್ದೀರಾ?ಎಂದು ಸವಾಲು ಹಾಕಿದ್ದಾರೆ.

 ಅಧಿಕಾರದಲ್ಲಿದ್ದಾಗ ಬಳ್ಳಾರಿಗೆ ಕಾಂಗ್ರೆಸ್ ಕೊಡುಗೆ ಏನು?

ಅಧಿಕಾರದಲ್ಲಿದ್ದಾಗ ಬಳ್ಳಾರಿಗೆ ಕಾಂಗ್ರೆಸ್ ಕೊಡುಗೆ ಏನು?

ಬಳ್ಳಾರಿ ಜಿಲ್ಲೆಗೆ ಸೋನಿಯಾ ಗಾಂಧಿ ಆಗಲಿ ಅಥವಾ ಕಾಂಗ್ರೆಸ್‌ನ ಕೊಡುಗೆ ಏನು ಎಂಬುದನ್ನು ಅವರ ಪುತ್ರ ರಾಹುಲ್‍ಗಾಂದಿ ಅವರೇ ತಮ್ಮ ಭಾಷಣದಲ್ಲಿ ಹೇಳಬೇಕು. ದೇಶ ಬೆಸೆಯುತ್ತೇನೆ ಎಂದು ಹೊರಟಿರುವ ಅವರಿಗೆ ಜಿಲ್ಲೆಯ ಜನ ಪಾಠ ಕಲಿಸಲಿದ್ದಾರೆ ಎಂಬುದನ್ನು ಮರೆಯಬಾರದು. ಕಡೆ ಪಕ್ಷ ಐದು ವರ್ಷಗಳ ಕಾಲ ಅಧಿಕಾರದಲ್ಲಿ ನಿಮ್ಮ ಕಾಂಗ್ರೆಸ್ ಪಕ್ಷ ಬಳ್ಳಾರಿಗೆ ಜಿಲ್ಲೆಗೆ ಕೊಟ್ಟ ಕೊಡುಗೆ ಏನು? ರಾಹುಲ್ ಗಾಂಧಿ ಅವರೇ? ನಿಮ್ಮ ಬೆಸುಗೆಯ ಯಾತ್ರೆಗೆ ಜನ ಬಗ್ಗೋದಿಲ್ಲ. ಅವರನ್ನು GRANTED FOR TAKEN ಮಾಡಿಕೊಂಡಿದ್ದೀರಾ? ಎಂದು ಆಕ್ರೋಶ ಹೊರಹಾಕಿದ್ದಾರೆ.

ಬಳ್ಳಾರಿ ಜಿಲ್ಲೆಗೆ ಸೋನಿಯಾ ಗಾಂಧಿ ಅವರು ಕೊಟ್ಟ ಕೊಡುಗೆ ಶೂನ್ಯ. ಅದನ್ನು ರಾಹುಲ್‌ ಗಾಂಧಿ ಮರೆತರೂ, ಜನ ಮರೆತಿಲ್ಲ. ಯಾತ್ರೆಯ ಮೂಲಕ ಮರೆ ಮಾಚಲು ಸಾಧ್ಯವಿಲ್ಲ. ಬಳ್ಳಾರಿ ಜಿಲ್ಲೆ ಅಭಿವೃದ್ದಿಯಲ್ಲಿ ಬಿಜೆಪಿ ಸರ್ಕಾರದ ಕೊಡುಗೆಯೇ ದೊಡ್ಡದು, ಅದು ಜಿಲ್ಲೆಯ ಜನರಿಗೂ ಗೊತ್ತಿದೆ. ಹಾಗಾಗಿ ರಾಹುಲ್‌ ಗಾಂಧಿ ಭಾರತ್‌ ಜೋಡೋ ಯಾತ್ರೆ ಮೂಲಕ ಬಂದು ಏನೇ ಮಾಡಿದರೂ ನಂಬುವುದಿಲ್ಲ. ಅವರಿಗೆ ವಾಸ್ತವದ ಮೇಲೆ ನಂಬಿಕೆಯೇ ಹೊರತು, ಬರೀ ನಾಟಕ ಮಾಡುವವರ ಮೇಲಲ್ಲ ಎಂದು ರಾಮುಲು ವಾಗ್ದಾಳಿ ನಡೆಸಿದ್ದಾರೆ.

 ಜಿಲ್ಲೆ ಅಭಿವೃದ್ಧಿಗೆ ನಯಾಪೈಸಾ ನೀಡದ ಸಿದ್ದರಾಮಯ್ಯ

ಜಿಲ್ಲೆ ಅಭಿವೃದ್ಧಿಗೆ ನಯಾಪೈಸಾ ನೀಡದ ಸಿದ್ದರಾಮಯ್ಯ

ಬಳ್ಳಾರಿ ಪಾದಯಾತ್ರೆ ನಡೆಸಿ ಮುಖ್ಯಮಂತ್ರಿ ಆದವರೂ ಕೂಡ ಜಿಲ್ಲೆಯ ಅಭಿವೃದ್ಧಿಗೆ ನಯಾಪೈಸೆ ಹಣ ಕೊಡದೆ, ಈಗ ಯಾವ ಮುಖ ಇಟ್ಟುಕೊಂಡು ಜನರ ಮುಂದೆ ಭಾಷಣ ಮಾಡುತ್ತಾರೆ.? ನಮ್ಮ ಜನ ಸ್ವಾಭಿಮಾನಿಗಳು, ಎಲ್ಲದಕ್ಕೂ ಹೌದು ಹುಲಿಯಾ , ಎನ್ನುವವರಲ್ಲ. ಅಥವಾ ಟಗರು ಟಗರು ಎಂದು ಜೈಕಾರ ಹಾಕುವವರೂ ಅಲ್ಲ ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ವಿರುದ್ದವೂ ಗುಡುಗಿದ್ದಾರೆ.

 ಸುಳ್ಳುಗಳಿಂದ ಬಳ್ಳಾರಿ ಜನರ ಮೋಡಿ ಅಸಾಧ್ಯ

ಸುಳ್ಳುಗಳಿಂದ ಬಳ್ಳಾರಿ ಜನರ ಮೋಡಿ ಅಸಾಧ್ಯ

ಕಾಂಗ್ರೆಸ್ ಎಂದರೆ ಸುಳ್ಳು ಭರವಸೆ ನೀಡುವ ರಾಜಕೀಯ ಪಕ್ಷ ಎಂಬುದು ಇತಿಹಾಸದಿಂದಲೇ ಋಜುವಾತಾಗಿದೆ. ಲೋಕಸಭಾ ಉಪ ಚುನಾವಣೆಯಲ್ಲಿ ಗೆದ್ದಾಗಲೂ ಎಂದಿನಂತೆ ಮತ್ತೆ ಮತದಾರರಿಗೆ ಅದೇ ಮೋಸ, ವಂಚನೆ ಜನತೆಯ ಮೂಗಿಗೆ ತುಪ್ಪ ಸವರಿದ್ದು. ಈಗ ಭಾರತ್ ಜೋಡೋ ನಾಟಕ ಮಾಡುತ್ತಿದ್ದಾರೆ. ಕಾಲ ಬದಲಾಗಿದೆ. ಸುಳ್ಳಿನ ಮೇಲೆ ರಾಜಕೀಯ ಮಾಡುವುದು, ಸಂತೆ ಭಾಷಣ ಮಾಡುವುದರಿಂದ ಮೋಡಿ ಮಾಡಲು ಸಾಧ್ಯವಿಲ್ಲ. ಮುಂಬರುವ ದಿನಗಳಲ್ಲಿ ಜನ ಜಿಲ್ಲೆಯಿಂದ ಕಾಂಗ್ರೆಸ್ ಪಕ್ಷದ ಬೇರುಗಳನ್ನು ಬುಡ ಸಮೇತ ಕಿತ್ತು ಹಾಕಲಿದ್ದಾರೆ ಎಂಬ ಸತ್ಯವನ್ನು ಕಾಂಗ್ರೆಸ್ ನಾಯಕರು ಮರೆಯಬಾರದು.! ಎಂದು ಶ್ರೀ ರಾಮುಲು ಎಚ್ಚರಿಕೆ ಕೊಟ್ಟಿದ್ದಾರೆ.

English summary
Transport minister B Sriramulu welcomes Bharat jodo yatra and Rahul Gandhi to Ballari with lot of Criticism,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X