ಸೆ.1 ರಿಂದ 30ರ ತನಕ ಮತದಾರರ ಪಟ್ಟಿಗೆ ಹೆಸರು ಸೇರಿಸಿ
ಬೆಂಗಳೂರು, ಆಗಸ್ಟ್ 31 : ಮತದಾರರ ಪಟ್ಟಿಗೆ ಹೆಸರು ಸೇರಿಸಲು ಸೆಪ್ಟೆಂಬರ್ 1 ರಿಂದ 30ರ ತನಕ ಅವಕಾಶ ನೀಡಲಾಗಿದೆ. ಈ ಅವಕಾಶವನ್ನು ಕಳೆದುಕೊಳ್ಳಬೇಡಿ ಎಂದು ಚುನಾವಣಾ ಆಯೋಗ ಜನರಿಗೆ ಮನವಿ ಮಾಡಿದೆ.
ಚುನಾವಣಾ ಆಯೋಗ ಮತದಾರರ ಪಟ್ಟಿಯ ಪರಿಶೀಲನೆ ದೃಢೀಕರಣ, ಸೇರ್ಪಡೆ, ತೆಗೆದುಹಾಕುವಿಕೆ ಮತ್ತು ತಿದ್ದುಪಡಿಗೆ ಮುಂದಾಗಿದೆ. ಸೆಪ್ಟೆಂಬರ್ 1ರಂದು ಈ ಅಭಿಯಾನಕ್ಕೆ ಚಾಲನೆ ದೊರೆಯಲಿದೆ. ಸೆಪ್ಟೆಂಬರ್ 30ರ ತನಕ ಇದು ನಡೆಯಲಿದೆ.
ಬಿ. ಎಲ್. ಓಗಳಿಂದ ಮನೆ-ಮನೆ ಭೇಟಿ ನಡೆಯಲಿದ್ದು, ಮತದಾರರು ಸಂಬಂಧಿಸಿದ ದಾಖಲೆಗಳೊಂದಿಗೆ ಸಿದ್ಧರಾಗಿರಬೇಕು ಎಂದು ಚುನಾವಣಾ ಆಯೋಗ ಮನವಿ ಮಾಡಿದೆ. ಹೆಸರು ಸೇರ್ಪಡೆ ಮಾಡಲು ಸಹ ಇದು ಉತ್ತಮ ಅವಕಾಶವಾಗಿದೆ.

ಯಾವ-ಯಾವ ದಾಖಲೆಗಳು : ಮತದಾರರ ಪಟ್ಟಿಗೆ ಹೆಸರು ಸೇರಿಸಲು, ತಿದ್ದುಪಡಿಗಾಗಿ ಜನರು ಹಲವಾರು ದಾಖಲೆಗಳನ್ನು ಬಳಕೆ ಮಾಡಬಹುದಾಗಿದೆ. ದಾಖಲೆಗಳ ಪಟ್ಟಿ ಕೆಳಗಿನಂತಿದೆ.
ಭಾರತೀಯ ಪಾಸ್‌ಪೋರ್ಟ್, ಆಧಾರ್ ಕಾರ್ಡ್, ಸರ್ಕಾರಿ/ ಅರೆ ಸರ್ಕಾರಿ ನೌಕರರು ಹೊಂದಿರುವ ಗುರುತಿನ ಚೀಟಿ, ರೈತರ ಗುರುತಿನ ಚೀಟಿ, ಚಾಲನಾ ಪರವಾನಿಗೆ, ಪಡಿತರ ಚೀಟಿ, ಬ್ಯಾಂಕ್ ಪಾಸ್ ಪುಸ್ತಕ, ಚುನಾವಣಾ ಆಯೋಗ ಅನುಮೋದಿಸಿದ ಯಾವುದಾದರೂ ಇತರ ದಾಖಲೆ.
ಯಾವ-ಯಾವ ಅರ್ಜಿಗಳು : ನಮೂನೆ 8ರಲ್ಲಿ ತಿದ್ದುಪಡಿಗಾಗಿ ಹೆಸರು/ತಂದೆಯ ಹೆಸರು/ಲಿಂಗ/ಹುಟ್ಟಿದ ದಿನಾಂಕ/ವಿಳಾಸ/ಫೋಟೋ. ನಮೂನೆ 7ರಲ್ಲಿ ಸ್ಥಳ ಬದಲಾವಣೆ/ಮರಣ. ನಮೂನೆ 6ರಲ್ಲಿ ಸೇರ್ಪಡೆಗಾಗಿ ಹುಟ್ಟಿದ ದಿನಾಂಕ/ವಯಸ್ಸಿನ ದೃಢೀಕರಣ/ವಿಳಾಸ ದೃಢೀಕರಣ/2 ಪಾಸ್ ಪೋರ್ಟ್ ಅಳತೆಯ ಪೋಟೋಗಳು ಅಗತ್ಯ












Click it and Unblock the Notifications