ಬೆಂಗಳೂರು ಸಿನಿಮೋತ್ಸವದಲ್ಲಿ ತಪ್ಪದೇ ಈ ಸಿನಿಮಾ ನೋಡಿ

Posted By:
Subscribe to Oneindia Kannada

ಬೆಂಗಳೂರು,ಜನವರಿ, 29: ನೀವು ವಾರಾಂತ್ಯವನ್ನು ಮೋಜು ಮಸ್ತಿ ಜೊತೆಗೆ ಏನಾದರೂ ತಿಳಿದುಕೊಳ್ಳುವ ಪ್ರಯತ್ನ ಮಾಡಬೇಕೆಂದಿದ್ದಲ್ಲಿ ಬೆಂಗಳೂರಿನ ಒರಾಯನ್ ಮಾಲ್ ನಲ್ಲಿ ನಡೆಯುತ್ತಿರುವ 8ನೇ ಅಂತಾರಾಷ್ಟ್ರೀಯ ಸಿನಿಮೋತ್ಸದಲ್ಲಿ ಪಾಲ್ಗೊಳ್ಳಿ.

ಎಂಟನೇ ಅಂತಾರಾಷ್ಟ್ರೀಯ ಸಿನಿಮೋತ್ಸವಕ್ಕೆ ಹಿರಿಯ ನಟಿ, ರಾಜ್ಯಸಭೆ ಸದಸ್ಯೆ ಜಯಾಬಚ್ಚನ್ ಅವರು ಭರ್ಜರಿ ಚಾಲನೆ ನೀಡಿದ್ದು, ಮೈಸೂರಿನಲ್ಲಿ ಫಿಲ್ಮಿ ಸಿಟಿ ನಿರ್ಮಾಣಕ್ಕೆ ರಾಜ್ಯಸರ್ಕಾರ ಬೆಂಬಲ ನೀಡಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ನಟಿ ಜಯಮಾಲ, ನಟ, ವಸತಿ ಸಚಿವ ಅಂಬರೀಶ್ ಹೀಗೆ ನಾನಾ ಗಣ್ಯರ ದಂಡು ಅಲ್ಲಿ ಸೇರಿತ್ತು

ಈ ಸಿನಿಮೋತ್ಸದಲ್ಲಿ ಬಿ.ಎಸ್ ಲಿಂಗದೇವರು ನಿರ್ದೇಶನದ 'ನಾನು ಅವನಲ್ಲ ಅವಳು' (ಜ.31), ಇಸ್ತ್ ವಾನ್ ಝಾಬೊ ನಿರ್ದೇಶನದ 'ಮೆಸಿಸ್ಟೊ' (ಜ.31), ಜಸ್ಟಿನ್ ವೆಬ್ ಸ್ಟರ್ ನಿರ್ದೇಶನದ 'ಗಾಬೊ: ದ ಕ್ರಿಯೇಷನ್ ಆಫ್ ಗೇಬ್ರಿಯೆಲ್ ಗಾರ್ಸಿಯಾ ಮಾಕ್ವೇಜ್' (ಜ.30), ಮೃಣಾಲ್ ಸೇನ್ ನಿರ್ದೇಶನದ 'ಭುವನ್ ಶೋಮ್' (ಜ.30) ಈ ನಾಲ್ಕು ಸಿನಿಮಾಗಳು ನೋಡಲೇಬೇಕಾದವುಗಳು ಎಂದು ಹಲವಾರು ಮಂದಿಯಿಂದ ಅಭಿಪ್ರಾಯ ವ್ಯಕ್ತವಾಗಿದೆ.[ಸಿನಿಮೋತ್ಸವದ ಸುಂದರ ಕ್ಷಣಗಳ ಚಿತ್ರಗಳು]

ಭರ್ಜರಿಯಾಗಿ ಚಾಲನೆಗೊಂಡ ಸಿನಿಮೋತ್ಸದಲ್ಲಿ ಹಲವಾರು ರಂಜನೀಯ ಕಾರ್ಯಕ್ರಮಗಳು ನಡೆದವು. ಈ ಸಮಾರಂಭದ ಮಾಹಿತಿಯ ಜೊತೆ ದೇಶದಲ್ಲಿ ನಡೆದ ಇನ್ನಿತರ ಸುದ್ದಿಗಳನ್ನು ಪಿಟಿಐ ಫೋಟೋಗಳ ಮೂಲಕ ತಿಳಿದುಕೊಳ್ಳಿ.

ಸಿನಿಮೋತ್ಸದಲ್ಲಿ ಮಿಂಚಿದ ನೃತ್ಯಗಾರ್ತಿಯರು

ಸಿನಿಮೋತ್ಸದಲ್ಲಿ ಮಿಂಚಿದ ನೃತ್ಯಗಾರ್ತಿಯರು

ಬೆಂಗಳೂರಲ್ಲಿ ನಡೆಯುತ್ತಿರುವ 8ನೇ ಸಿನಿಮೋತ್ಸವದಲ್ಲಿ ವಿವಿಧ ದೇಶದ ನೃತ್ಯಗಳು ಪ್ರದರ್ಶನಗೊಂಡವು. ಈ ಸಿನಿಮೋತ್ಸವ ಕಲೆಗೂ ಪ್ರೋತ್ಸಾಹ ನೀಡಿತ್ತು. ಸಿನಿಮೋತ್ಸವದಲ್ಲಿ ಪಾಲ್ಗೊಂಡ ನೃತ್ಯಗಾರ್ತಿಯ ಭಂಗಿಯಿದು.

ಸೋಲಾರ್ ಕಮಿಷನ್ ಕಚೇರಿಗೆ ಧಾವಿಸಿದ ಸರೀತಾ

ಸೋಲಾರ್ ಕಮಿಷನ್ ಕಚೇರಿಗೆ ಧಾವಿಸಿದ ಸರೀತಾ

ಬಹುಕೋಟಿ ಸೋಲಾರ್ ಹಗರಣದಲ್ಲಿ ಭಾಗಿಯಾದ ಸರೀತಾ ಎಸ್ ನಾಯರ್ ಕೊಚ್ಚಿಯ ಸೋಲಾರ್ ಕಮಿಷನ್ ಕಚೇರಿಗೆ ಇಂದು ತೆರಳಿದರು. ಈ ಪ್ರಕರಣವನ್ನು ತ್ರಿಶೂರಿನ ವಿಜಿಲೆನ್ಸ್ ನ್ಯಾಯಾಲಯ ಕೈಗೆತ್ತಿಕೊಂಡಿದೆ. ಇದರಲ್ಲಿ ಕೇರಳ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಭಾಗಿಯಾಗಿರಬಹುದೆಂದು ಶಂಕಿಸಲಾಗಿದ್ದು, ಇವರ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ.['ಸೋಲಾರ್' ಸರಿತಾಗೆ ಗಿಣಿಪಾಠ ಹೇಳಿಕೊಟ್ಟ ಆಡಿಯೋ ಲೀಕ್]

ಮುಸಲ್ಮಾನರ ಹೊತ್ತಿಗೆ ನೋಡುತ್ತಿರುವ ರಾಹುಲ್

ಮುಸಲ್ಮಾನರ ಹೊತ್ತಿಗೆ ನೋಡುತ್ತಿರುವ ರಾಹುಲ್

ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ನವದೆಹಲಿಯ ದರ್ಗಾ ಹಜಾರತ್ ನಿಜಾಮುದ್ದೀನ್ ಆಲಿಯಾದಲ್ಲಿ ನಡೆದ ವಾರ್ಷಿಕ ಯುವರ್ಸ್ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಮುಸಲ್ಮಾನರೊಂದಿಗೆ ಸೇರಿ ಖುಷಿ ಪಟ್ಟರು.

ಸಾವಧಾನದ ಸ್ಥಿತಿಯಲ್ಲಿ ಟೆನ್ನಿಸ್ ತಾರೆಯರು

ಸಾವಧಾನದ ಸ್ಥಿತಿಯಲ್ಲಿ ಟೆನ್ನಿಸ್ ತಾರೆಯರು

ಸ್ವಿಟ್ಜರ್ಲೆಂಡಿನ ಮಾರ್ಟಿನ್ ಹಿಂಗೀಸ್ ಮತ್ತು ಭಾರತದ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಆಸ್ಟ್ರೇಲಿಯಾದ ಮೆಲ್ಬೋರ್ನ್ ನಲ್ಲಿ ಫೈನಲ್ ಡಬಲ್ಸ್ ನಡೆಯಿತು. ಆಗ ಇಬ್ಬರು ಅಪ್ಪಿಕೊಂಡು ಸಾವಧಾನಗೊಂಡಿದ್ದು ಹೀಗೆ

ಸಿನಿಮೋತ್ಸವದ ಕಿರುಹೊತ್ತಿಗೆ ಬಿಡುಗಡೆ

ಸಿನಿಮೋತ್ಸವದ ಕಿರುಹೊತ್ತಿಗೆ ಬಿಡುಗಡೆ

ಬೆಂಗಳೂರಲ್ಲಿ ನಡೆಯುತ್ತಿರುವ ಸಿನಿಮೋತ್ಸವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಯಮಾಲ, ವಸತಿ ಸವಿವ ಅಂಬರೀಶ್, ತೆಲುಗು ನಟ ವೆಂಕಟೇಶ್ ಭಾಗವಹಿಸಿ ಸಿನಿಮೋತ್ಸವದ ಕಿರುಹೊತ್ತಿಗೆ ಬಿಡುಗಡೆಗೊಳಿಸಿದರು

ಗ್ಯಾಂಗ್ ರೇಪ್ ಮತ್ತು ಕೊಲೆ ಪ್ರಕರಣದ ಆರು ಆರೋಪಿಗಳು

ಗ್ಯಾಂಗ್ ರೇಪ್ ಮತ್ತು ಕೊಲೆ ಪ್ರಕರಣದ ಆರು ಆರೋಪಿಗಳು

ಕೊಲ್ಕತ್ತಾದಲ್ಲಿ ನಡೆದ ಗ್ಯಾಂಗ್ ರೇಪ್ ಮತ್ತು ಕೊಲೆ ಪ್ರಕರಣದ ಆರು ಮಂದಿ ಆರೋಪಿಗಳನ್ನು ಸ್ಥಳೀಯ ನ್ಯಾಯಾಲಯಕ್ಕೆ ಶುಕ್ರವಾರ ಹಾಜರು ಪಡಿಸಲಾಯಿತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
8th Bengaluru International Film Festival inaugrated by actress Jaya Bachchan at Vidhan Soudha in Bengaluru. Congress Vice President Rahul Gandhi during the Annual Urs Celebration at Dargah Hazrat Nizamuddin Aulia in New Delhi, Solar scam accused Saritha S Nair arrives to appear at Solar commission office in Kochi
Please Wait while comments are loading...