ಸಿದ್ದುಗೆ ಕ್ಷೇತ್ರ ಗೊಂದಲ; Siddaramaiah ಪಾಕಿಸ್ತಾನ, ಅಫ್ಘಾನಿಸ್ಥಾನ, ಬಾಂಗ್ಲಾಕ್ಕೆ ಹೋಗಿ ಸ್ಪರ್ಧಿಸಲಿ: ಆರ್ ಅಶೋಕ್
ಸಿದ್ದರಾಮಯ್ಯ ಗೆ ಕರ್ನಾಟಕದ 224 ಕ್ಷೇತ್ರಗಳು ಅವರಿಗೆ ಒಳ್ಳೆಯದಲ್ಲ ಎಂದು ಆರ್ ಅಶೋಕ್ ಹೇಳಿದರು.
ಬಳ್ಳಾರಿ, ಮಾರ್ಚ್ 18: ರಾಜ್ಯ ವಿಧಾನಸಭಾ ಚುನಾವಣಾ ಕಣ ರಂಗೇರಿದ್ದು, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕೋಲಾ=ರ ಕ್ಷೇತ್ರವನ್ನ ಆಯ್ಕೆ ಮಾಡಿಕೊಂಡಿದ್ರು. ಆದರೆ, ಕಾಂಗ್ರೆಸ್ ಹೈಕಮಾಂಡ್ ಕೋಲಾರದಲ್ಲಿ ಸ್ಪರ್ಧಿಸಲು ಗ್ರೀನ್ ಸಿಗ್ನಲ್ ನೀಡದೇ ಹಿನ್ನೆಲೆ ಮತ್ತಷ್ಟು ಕ್ಷೇತ್ರ ಗೊಂದಲ ಮುಂದುವರೆದಿದೆ.
ಇತ್ತ ಸಿದ್ದರಾಮಯ್ಯ ಕ್ಷೇತ್ರ ಗೊಂದಲದ ಕುರಿತು ಕಂದಾಯ ಸಚಿವ ಆರ್ ಅಶೋಕ್ ಮಾತನಾಡಿ, ಸಿದ್ದರಾಮಯ್ಯ ರಾಜ್ಯದ ಯಾವ ಕ್ಷೆತ್ರದಲ್ಲೂ ಸ್ಪರ್ಧಿಸಿದರು ಗೆಲ್ಲಲ್ಲ. ಸಿದ್ದರಾಮಯ್ಯ ಪಾಕಿಸ್ತಾನ ಅಥವಾ ಅಫ್ಘಾನಿಸ್ಥಾನ, ಬಾಂಗ್ಲಾದೇಶಕ್ಕೆ ಹೋಗಿ ಸ್ಪರ್ಧಿಸಲಿ ಎಂದು ವ್ಯಂಗ್ಯವಾಡಿದ್ದಾರೆ.

224 ಕ್ಷೆತ್ರದಲ್ಲಿ ಸಿದ್ದರಾಮಯ್ಯ ಸ್ಪರ್ಧೆ ಮಾಡೊಕೆ ಚಾನ್ಸೇ ಇಲ್ಲ. ಯಾಕಂದ್ರೆ ಎಲ್ಲೇ ಹೋದರು ಅವರು ಸೋಲ್ತಾರೆ, ಯಾವುದೇ ಒಂದು ಕ್ಷೇತ್ರದಲ್ಲಿ ನಿಂತಿಲ್ಲ. ಸಿದ್ದರಾಮಯ್ಯ ಈಗಾಗಲೇ ವರುಣಾ, ಚಾಮುಂಡೇಶ್ವರಿ ಸೋತಿದ್ದಾರೆ. ಈಗ ಬಾದಮಿ ಬಿಟ್ಟು ಓಡ್ ಬಂದಿದ್ದಾರೆ. ಕೋಲರದಲ್ಲೂ ಗೆಲ್ಲುವುದು ಕಷ್ಟವಿದೆ. ಅದ್ದರಿಂದ ಕರ್ನಾಟಕದ 224 ಕ್ಷೇತ್ರಗಳು ಅವರಿಗೆ ಒಳ್ಳೆಯದಲ್ಲ. ಸಿದ್ದರಾಮಯ್ಯ ಬೇರೆ ರಾಜ್ಯ ಅಥವಾ ಬೇರೆ ದೇಶಕ್ಕೆ ನೋಡಿಕೊಳ್ಳುವುದು ಒಳ್ಳೆಯದು ಎಂದು ಹೇಳಿದರು.
ಸಿದ್ದರಾಮಯ್ಯ ಅವರನ್ನ ಎಲ್ಲೂ ಸ್ಪರ್ಧಿಸಲು ಬಿಡಲ್ಲ, ಯಾಕಂದ್ರೆ ಅವರ ಪಕ್ಷದವರೆ ಅವರಿಗೆ ವಿಲ್ಲನ್. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಇದ್ದಾರೆ ಅವರೇ ಅವರನ್ನ ಸೋಲುಸ್ತಾರೆ ಎಂದು ಹೇಳಿದ ಅವರು, ಸೋಮಣ್ಣನವರ ಸಿಟ್ಟು 100 ಪರ್ಸೆಂಟ್ ಶಮನ ಆಗಿದೆ. ಯಾವುದೇ ಸಂದರ್ಭದಲ್ಲೂ ಪಕ್ಷ ಬಿಡೋ ಪ್ರಶ್ನೆಯೇ ಇಲ್ಲ. ಕೂಡ್ಲಿಗಿ ಶಾಸಕ ಗೊಪಾಲ ಕೃಷ್ಣ ಪಕ್ಷ ಬಿಡಲ್ಲ ಎಂದರು.

ರಾಜ್ಯದಲ್ಲಿ ವಿಜಯ ಸಂಕಲ್ಪ ಯಾತ್ರೆ ಮೂಲಕ ಜನ ಜಾಗೃತಿಯನ್ನ ಮಾಡುತ್ತಿದ್ದೇವೆ. 224 ಕ್ಷೆತ್ರಗಳನ್ನ ರೀಚ್ ಆಗಿರೋ ಯಾವುದಾದ್ರು ಪಕ್ಷ ಇದ್ರೆ ಅದು ಬಿಜೆಪಿ ಮಾತ್ರ. ಯಾಕಂದ್ರೆ ನಮ್ಮಲ್ಲಿ ಬಹಳಷ್ಟು ಜನ ರಾಜ್ಯ ಹಾಗೂ ಕೇಂದ್ರ ನಾಯಕರಿದ್ದಾರೆ, ಆದರೆ ಕಾಂಗ್ರೆಸ್ ಗೆ ಕೇವಲ ಇಬ್ಬರು ಮಾತ್ರ. ಕಾಂಗ್ರೆಸ್ ಗೆ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಬಿಟ್ಟರೇ ಮೂರನೇ ಲೀಡರ್ ಇಲ್ಲ. ಅವರು 224 ಕ್ಷೆತ್ರಕ್ಕೆ ಹೊಗಿಲ್ಲ, ಟಿಕೆಟ್ ಹಂಚಿಕೆಯಲ್ಲಿ ಬ್ಯೂಸಿ ಇದ್ದಾರೆ. ಕಾಂಗ್ರೆಸ್ ನವರು ಇಲ್ಲ ಸಲ್ಲದ ಆರೋಪ ಮಾಡುತ್ತಾರೆ.
ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮತ್ತೊಮ್ಮೆ ಅಧಿಕಾರದ ರುಚಿ ನೋಡಬೇಕು ಅಂತಾ ಕನಸು ಕಾಣ್ತಾ ಇದ್ದಾರೆ. 50 ವರ್ಷ ರಾಜ್ಯ ಆಳಿದರೆ, ಆದ್ದರಿಂದ ಜನ ಇವರ 50 ವರ್ಷ ನೋಡಿ ಬದಲಾವಣೆ ಮಾಡುತ್ತಾರೆ ಎಂದು ಹೇಳಿದರು.
ಇನ್ನೂ ಕುರಿತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಮಾತನಾಡಿ, ನನಗೆ ಅದರ ಬಗ್ಗೆ ಮಾಹಿತಿ ಇಲ್ಲ. ಈಗ ಅದರ ಬಗ್ಗೆ ಮಾತನಾಡಿದರೆ ವ್ಯಕ್ತಿಗತವಾಗಿ ತೆಗೆದುಕೊಳ್ಳುತ್ತಾರೆ. ಅದು ತಪ್ಪಾಗುತ್ತದೆ. ಆದರೆ ಒಂದಂತೂ ಸ್ಪಷ್ಟವಾಯಿತು. ಸಿದ್ದರಾಮಯ್ಯನವರಿಗೆ ಬಾದಾಮಿ, ಚಾಮುಂಡೇಶ್ವರಿ,ಕೋಲಾರ ಯಾವುದೂ ಸ್ಪಷ್ಟತೆ ಇಲ್ಲ ಎನ್ನುವುದು ಗೊತ್ತಾಯಿತು ಎಂದು ವ್ಯಂಗ್ಯವಾಡಿದ್ದಾರೆ.
ದೇಶ ಮೊದಲು ಎನ್ನುವ ನಂಬಿಕೆ ಕಾಂಗ್ರೆಸ್‌ಗೆ ಇಲ್ಲ. ಜಾತಿ ಮೊದಲು, ಕುಟುಂಬ ಮೊದಲು, ಮತ ಮೊದಲು ಎನ್ನುವ ತತ್ವ ಕಾಂಗ್ರೆಸ್‌ನದ್ದು. ವಿಭಜಿಸಿ ಆಳುವುದು ಕಾಂಗ್ರೆಸ್ ಪಕ್ಷದ ನೀತಿ. ಬಿಜೆಪಿ ಯಾವುದೇ ಯೋಜನೆಗಳಲ್ಲಿ ಜಾತಿ ತಾರತಮ್ಯ ಮಾಡಲಿಲ್ಲ. ಎಲ್ಲಾ ಅರ್ಹರಿಗೆ ಯೋಜನೆ ಲಾಭವಾಗುವಂತೆ ಮಾಡಿದ್ದೇವೆ ಎಂದರು












Click it and Unblock the Notifications