ಸಿನಿಮಾಗಾಗಿ ಬಣ್ಣ ಹಚ್ಚಲಿದ್ದಾರೆ ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು, ಜೂನ್ 22: ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಸಿನಿಮಾವೊಂದರಲ್ಲಿ ಮುಖ್ಯಮಂತ್ರಿ ಪಾತ್ರವನ್ನು ನಿರ್ವಹಿಸಲಿದ್ದಾರೆ. ನಿರ್ಮಾಣ ಹಂತದಲ್ಲಿರುವ 'ಸಮ್ಮರ್ ಹಾಲಿಡೇಸ್' ಎಂಬ ಕನ್ನಡ -ಇಂಗ್ಲೀಷ್ ಸಿನಿಮಾದಲ್ಲಿ ಅವರು ಬಣ್ಣ ಹಚ್ಚಲಿದ್ದಾರೆ.

ಈ ಮೂಲಕ ಅಧಿಕಾರದಲ್ಲಿರುವಾಗಲೇ ಸಿನಿಮಾದಲ್ಲಿ ನಟಿಸಿದ ಮೊದಲ ಮುಖ್ಯಮಂತ್ರಿ ಎಂಬ ಕೀರ್ತಿಗೂ ಅವರು ಪಾತ್ರರಾಗಲಿದ್ದಾರೆ.

Siddaramaiah to play CM Siddaramaiah in Kannada-English film, 'Summer Holidays'

ಈ ಕುರಿತು 'ಸಿಎನ್ಎನ್ ನ್ಯೂಸ್ 18' ಗೆ ಪ್ರತಿಕ್ರಿಯೆ ನೀಡಿರುವ ಸಿನಿಮಾ ನಿರ್ದೇಶಕಿ ಕವಿತಾ ಲಂಕೇಶ್, "ಸಿದ್ದರಾಮಯ್ಯ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ. ಬುಧವಾರ ಈ ಕುರಿತು ನಮಗೆ ಖಚಿತ ಮಾಹಿತಿ ಸಿಕ್ಕಿದೆ. ಚಿತ್ರದಲ್ಲಿ ಯಾವುದೇ ರೀತಿಯಲ್ಲೂ ಅಶ್ಲೀಲ ಹಾಗೂ ಹಿಂಸಾತ್ಮಕ ಸನ್ನಿವೇಶಗಳು ಇರಬಾರದು ಎಂದಿದ್ದಾರೆ. ನಾವು ಅವರಿಗೆ ಸಿನಿಮಾದ ಕಥೆಯನ್ನು ವಿವರಿಸಿದ್ದೇವೆ. ನಂತರ ಅವರು ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ. ಈಗಾಗಲೇ ಶೇಕಡಾ 80 ಚಿತ್ರೀಕರಣ ಮುಗಿದಿದೆ. ಮುಖ್ಯಮಂತ್ರಿಗಳು ಯಾವಾಗ ಸಮಯ ನೀಡುತ್ತಾರೋ ಆಗ ನಾವು ಅವರ ಭಾಗವನ್ನು ಶೂಟ್ ಮಾಡಿ ಸಿನಿಮಾದ ಶೂಟಿಂಗ್ ಮುಗಿಸುತ್ತೇವೆ," ಎಂದು ಹೇಳಿದ್ದಾರೆ.

ಹಾಗಂಥ ಸಿದ್ದರಾಮಯ್ಯನವರಿಗೆ ನಟನೆ ಹೊಸದೇನೂ ಅಲ್ಲ. ಈ ಹಿಂದೆ ತಮ್ಮ ಕಾಲೇಜು ದಿನಗಳಲ್ಲಿ ನಾಟಕಗಳಲ್ಲಿ ಅವರು ಅಭಿನಯಿಸಿದ್ದರು. ಮತ್ತು ತಾವು ನಟನೆಯನ್ನು ಇಷ್ಟಪಡುವುದಾಗಿ ಸಿದ್ದರಾಮಯ್ಯ ಹೇಳಿದ್ದಾರೆ.

ಇನ್ನು ತಾವು ನಟನೆ ಮಾಡಲಿರುವ ಚಿತ್ರದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, "ಕವಿತಾ ತುಂಬಾ ಸಲ ಬಂದು ಕೇಳಿಕೊಂಡರು. ಕೊನೆಗೆ ನಾನು ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡೆ," ಎಂದಿದ್ದಾರೆ.

ಇದೇ ಸಿನಿಮಾದಲ್ಲಿ ಕವಿತಾ ಪುತ್ರಿ ಇಶಾ ಮೊದಲ ಬಾರಿಗೆ ನಟಿಸುತ್ತಿದ್ದಾರೆ. ಇಂದ್ರಜಿತ್ ಲಂಕೇಶ್ ಪುತ್ರ ಸಮರ್ಜಿತ್ ಕೂಡಾ ಸಿನಿಮಾದಲ್ಲಿರಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+