#ಉತ್ತರಕೊಡಿಬಿಎಸ್‌ವೈ : ಸಿದ್ದರಾಮಯ್ಯರಿಂದ ಸಾಲು-ಸಾಲು ಪ್ರಶ್ನೆ!

Recommended Video

      ಟ್ವಿಟ್ಟರ್ ನಲ್ಲಿ ಬಿ ಎಸ್ ಯಡಿಯೂರಪ್ಪಗೆ ಸಾಲು ಸಾಲು ಪ್ರಶ್ನೆ ಕೇಳಿದ ಸಿದ್ದರಾಮಯ್ಯ | Oneindia Kannada

      ಬೆಂಗಳೂರು, ಅಕ್ಟೋಬರ್ 30 : ಬಿ.ಶ್ರೀರಾಮುಲು, ಪ್ರತಾಪ್ ಸಿಂಹ, ಜನಾರ್ದನ ರೆಡ್ಡಿ ಬಳಿಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿ.ಎಸ್.ಯಡಿಯೂರಪ್ಪ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಿದ ಕೊಡುಗೆ ಬಗ್ಗೆ ಪ್ರಶ್ನೆಗಳನ್ನು ಕೇಳಿದ್ದಾರೆ.

      ಸಿದ್ದರಾಮಯ್ಯ ಅವರು ಮಂಗಳವಾರ ತಮ್ಮ @siddaramaiah ಟ್ವಿಟರ್ ಖಾತೆಯಲ್ಲಿ #ಉತ್ತರಕೊಡಿಬಿಎಸ್‌ವೈ ಎಂಬ ಅಭಿಯಾನ ಆರಂಭಿಸಿದ್ದು, ಯಡಿಯೂರಪ್ಪ ಅವರಿಗೆ ಸಾಲು-ಸಾಲು ಪ್ರಶ್ನೆಗಳನ್ನು ಹಾಕಿದ್ದಾರೆ.

      ಉಪ ಚುನಾವಣಾ ಕಾರ್ಯದಲ್ಲಿ ಬ್ಯುಸಿಯಾಗಿರುವ ಸಿದ್ದರಾಮಯ್ಯ ಅವರು ಸಾಮಾಜಿಕ ಜಾಲತಾಣಗಳ ಮೂಲಕವೂ ವಿರೋಧ ಪಕ್ಷದವರಿಗೆ ಉತ್ತರ ಕೊಡುತ್ತಿದ್ದಾರೆ. ಸೋಮವಾರದಿಂದ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ಜೊತೆ ಜಟಾಪಟಿ ನಡೆಸುತ್ತಿದ್ದಾರೆ.

      ಕಳೆದ ವಾರ ಶಿವಮೊಗ್ಗದಲ್ಲಿ ಮಧು ಬಂಗಾರಪ್ಪ ಅವರ ಪರವಾಗಿ ಪ್ರಚಾರ ನಡೆಸಿದ್ದ ಸಿದ್ದರಾಮಯ್ಯ ಅವರು, ಯಡಿಯೂರಪ್ಪ ತವರು ನೆಲದಲ್ಲಿ ನಿಂತು, 'ಸುಳ್ಳೇ ಯಡಿಯೂರಪ್ಪ ಮನೆ ದೇವರು' ಎಂದು ಟೀಕಿಸಿದ್ದರು. ಈಗ ಟ್ವಿಟರ್‌ನಲ್ಲಿ ಪ್ರಶ್ನೆಗಳ ಬಾಣ ಬಿಟ್ಟಿದ್ದಾರೆ....

      ಸಿದ್ದರಾಮಯ್ಯ ಪ್ರಶ್ನೆ - 1

      ಬರಪರಿಹಾರ ನೀಡುವ ವಿಚಾರದಲ್ಲಿ ಕೇಂದ್ರ ಸರ್ಕಾರ ತಾರತಮ್ಯ ಮಾಡುವುದು ಏಕೆ?, ರಾಜಸ್ಥಾನ, ಗುಜರಾತ್, ಮಹಾರಾಷ್ಟ್ರಕ್ಕೆ ನೀಡಿದ ಅನುದಾನ ಎಷ್ಟು?, ರಾಜ್ಯಕ್ಕೆ ನೀಡಿದ್ದೆಷ್ಟು?

      ಸಿದ್ದರಾಮಯ್ಯ ಪ್ರಶ್ನೆ - 2

      ಲೋಕಸಭಾ ಪ್ರಣಾಳಿಕೆಯಲ್ಲಿ ಘೋಷಿಸಿದ ಬೆಲೆ ಯಾವ ರೈತರಿಗೆ ಸಿಕ್ಕಿದೆ? ರೈತ ನಾಯಕ ಯಡಿಯೂರಪ್ಪ ಅವರೇ ಎಂದು ಯಡಿಯೂರಪ್ಪ ಅವರನ್ನು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

      ಸಿದ್ದರಾಮಯ್ಯ ಪ್ರಶ್ನೆ - 3

      ರಾಷ್ಟ್ರೀಕೃತ ಬ್ಯಾಂಕ್ ಸಾಲ ಮನ್ನಾ, ಮಹದಾಯಿ ವಿವಾದ, ಬರಪರಿಹಾರ ಯಾವ ವಿಚಾರದಲ್ಲೂ ಸಹಾಯ ಮಾಡಲಿಲ್ಲ. ಸಂಸದರಾಗಿ ನಿವೇನು ಮಾಡಿದ್ದೀರಿ? ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.

      ಪುಸ್ತಕವನ್ನು ಓದಿಕೊಂಡು ಬನ್ನಿ

      ಪುಸ್ತಕವನ್ನು ಓದಿಕೊಂಡು ಬನ್ನಿ

      ಸೋಮವಾರದಿಂದ ಜನಾರ್ದನ ರೆಡ್ಡಿ ಅವರಿಗೆ ಹಲವು ಪ್ರಶ್ನೆಗಳನ್ನು ಸಿದ್ದರಾಮಯ್ಯ ಕೇಳಿದ್ದರು. ಮಂಗಳವಾರವೂ ಮತ್ತೊಂದು ಪ್ರಶ್ನೆ ಕೇಳಿದ್ದಾರೆ.

      ಬಿಜೆಪಿ ಕಿತ್ತೊಗೆಯಲು ಕರೆ

      ಬಿಜೆಪಿ ಕಿತ್ತೊಗೆಯಲು ಕರೆ

      ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿಯನ್ನು ಕಿತ್ತೊಗೆಯುವ ಹೋರಾಟವನ್ನು ಶಿವಮೊಗ್ಗದ ನೆಲದಿಂದಲೇ ಆರಂಭಿಸೋಣ ಎಂದು ಸಿದ್ದರಾಮಯ್ಯ ಜನರಿಗೆ ಕರೆ ನೀಡಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+