'ಸಿದ್ದರಾಮಯ್ಯ ಧರ್ಮ ವಿಭಜನೆ ಮೂಲಕ ರಾಜಕಾರಣ ಮಾಡುತ್ತಿದ್ದಾರೆ'

Recommended Video

      ಸಿದ್ದರಾಮಯ್ಯ ಒಡೆದು ಆಳುವ ರಾಜಕೀಯ ಮಾಡ್ತಿದ್ದಾರೆ, ಎಂದ ಎಚ್ ಡಿ ಕುಮಾರಸ್ವಾಮಿ | Oneindia Kannada

      ಚಿಕ್ಕಮಗಳೂರು, ಮಾರ್ಚ್ 19 : 'ಧರ್ಮ ವಿಭಜನೆಯ ಮೂಲಕ ಮುಖ್ಯಮಂತ್ರಿಗಳು ಒಡಕಿನ ರಾಜಕಾರಣ ಮಾಡುತ್ತಿದ್ದಾರೆ. ನಾಗಮೋಹನ್ ದಾಸ್ ಸಮಿತಿಯಿಂದ ತರಾತುರಿಯಲ್ಲಿ ವರದಿ ತರಿಸಿಕೊಂಡು ಕೇಂದ್ರಕ್ಕೆ ಶಿಫಾರಸು ಮಾಡಿದ್ದಾರೆ' ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದರು.

      ಸೋಮವಾರ ಚಿಕ್ಕಮಗಳೂರಿನಲ್ಲಿ ಮಾತನಾಡಿದ ಎಚ್.ಡಿ.ಕುಮಾರಸ್ವಾಮಿ, 'ಈವರೆಗೂ ಆ ವರದಿಯಲ್ಲಿ ಏನಿದೆ? ಎನ್ನುವುದರ ಬಗ್ಗೆ ಸಾರ್ವಜನಿಕರಿಗೆ ಮತ್ತು ಜನಪ್ರತಿನಿಧಿಗಳಿಗೆ ಗೊತ್ತಿಲ್ಲ. ಧರ್ಮದ ಸೂಕ್ಷ್ಮತೆ ಇರುವ ವಿಚಾರವನ್ನು ಸಮಾಜದ ಹಿರಿಯರು, ಸ್ವಾಮೀಜಿಗಳನ್ನು ಕೂರಿಸಿಕೊಂಡು ಚರ್ಚೆ ನಡೆಸಬೇಕಾಗಿತ್ತು' ಎಂದು ಸಲಹೆ ನೀಡಿದರು.

      'ಸರ್ಕಾರ ಜನರ ಸಮಸ್ಯೆಗಳನ್ನು ಬಗೆಹರಿಸುವ ಬದಲು ಧರ್ಮ ಸೂಕ್ಷ್ಮತೆ ವಿಚಾರದಲ್ಲಿ ಕೈ ಹಾಕಿದ್ದು ಸರಿಯಲ್ಲ. ಸರ್ಕಾರಕ್ಕೆ ಮುಂದಿನ ದಿನಗಳಲ್ಲಿ ಇದರ ಬಗ್ಗೆ ಪಶ್ಚಾತ್ತಾಪವಾಗಲಿದೆ' ಎಂದು ಕುಮಾರಸ್ವಾಮಿ ತಿಳಿಸಿದರು.

      Siddaramaiah has mastered in art of divide and rule says Kumaraswamy

      ಅಧಿಕಾರ ಯಾರಿಗೂ ಶಾಶ್ವತವಲ್ಲ : ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಮಂಜೇಗೌಡ ಫೋನ್ ಸಂಭಾಷಾಣೆ ಕುರಿತು ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ, ' ಅಧಿಕಾರ ಯಾರಿಗೂ ಶಾಶ್ವತವಲ್ಲ. ದೇವೇಗೌಡ ಮಕ್ಕಳು ಶಾಶ್ವತವಾಗಿ ಅಧಿಕಾರದಲ್ಲಿರಲು ಆಗುತ್ತದೆಯೇ?.

      'ಆ ಅಡಿಯೋದಿಂದ ಅವರ ಆಂತರ್ಯ ಗೊತ್ತಾಗುತ್ತಿದೆ. ಅವರೊಬ್ಬ ಭ್ರಷ್ಟ ಅಧಿಕಾರಿ ಅಂತಹವರಿಗೆ ಸಿಎಂ ರಕ್ಷಣೆ ನೀಡುತ್ತಿದಾರೆ ಅನ್ನೋದು ಮತ್ತೆ ಸಾಬೀತಾಗಿದೆ. ಅವರು ಯಾರನ್ನಾದರೂ ಅಭ್ಯರ್ಥಿಯಾಗಿ ಮಾಡಲಿ, ಎದುರಿಸುವ ಸಾಮರ್ಥ್ಯ ನಮಗಿದೆ' ಎಂದು ಹೇಳಿದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+