ಸಿದ್ದರಾಮಯ್ಯ ಸಂಪುಟದಲ್ಲಿ ಯಾರು ಬೆಸ್ಟ್, ಯಾರು ಲಾಸ್ಟ್?

ಬೆಂಗಳೂರು, ಜೂ. 09 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಪುಟದ ಸಚಿವರ ಮೌಲ್ಯ ಮಾಪನದ ವಿಚಾರದಲ್ಲಿ ಹಿಂದೊಮ್ಮೆ ಜಟಾಪಟಿ ನಡೆದಿತ್ತು. ಆದರೆ, ಈಗ ಸರ್ಕಾರ ಎರಡು ವರ್ಷ ಪೂರ್ಣಗೊಳಿಸಿರುವಾಗ ಸಚಿವರ ಮೌಲ್ಯ ಮಾಪನ ಮಾಡಲಾಗಿದ್ದು, ಆ ಪಟ್ಟಿಯನ್ನು ಹಿಡಿದುಕೊಂಡೇ ಸಿದ್ದರಾಮಯ್ಯ ದೆಹಲಿ ವಿಮಾನ ಹತ್ತಿದ್ದಾರೆ.

ಸಿದ್ದರಾಮಯ್ಯ ಸಂಪುಟದಲ್ಲಿ ಯಾವ ಸಚಿವರು ಬೆಸ್ಟ್‌, ಯಾರು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂಬುದು ಮುಖ್ಯಮಂತ್ರಿಗಳು ಮತ್ತು ಮತ ಹಾಕಿದ ರಾಜ್ಯದ ಜನರಿಗೆ ಗೊತ್ತು. ಸರಿಯಾಗಿ ಕೆಲಸ ಮಾಡದ ಸಚಿವರನ್ನು ಸಂಪುಟದಿಂದ ಕೈ ಬಿಟ್ಟು ಹೊಸ ಸಚಿವರಿಗೆ ಅವಕಾಶ ನೀಡಲಾಗುತ್ತದೆಯೇ? ಎಂಬ ಪ್ರಶ್ನೆಗೆ ಕಾಲವೇ ಉತ್ತರ ನೀಡಬೇಕು. [ಸಂಪುಟ ವಿಸ್ತರಣೆ : ದೆಹಲಿಗೆ ಹೊರಟ ಮುಖ್ಯಮಂತ್ರಿ ಸಿದ್ದರಾಮಯ್ಯ]

ಪಬ್ಲಿಕ್ ಟಿಬಿ ಸಿದ್ದರಾಮಯ್ಯ ಅವರು ನಡೆಸಿದ ಸಚಿವರ ಪರೀಕ್ಷೆ ಫಲಿತಾಂಶದ ವರದಿಯನ್ನು ಪ್ರಕಟಿಸಿದೆ. ಅಚ್ಚರಿ ಎಂಬಂತೆ ಸಂಪುಟದ ಬಹುತೇಕ ಸಚಿವರು ಜಸ್ಟ್ ಪಾಸ್ ಆಗಿದ್ದಾರೆ. ಉತ್ತಮ ಕೆಲಸ ಮಾಡಿದವರು, ಸರಿಯಾಗಿ ಕೆಲಸ ಮಾಡವರ ಪಟ್ಟಿಯೂ ಸಿದ್ಧವಾಗಿದ್ದು, ಈ ಪಟ್ಟಿ ಸಿಎಂ ಜೊತೆಗೆ ದೆಹಲಿಗೆ ಹೋಗಿದೆ.

6 ರಿಂದ 8 ಸಚಿವರು ಸರಿಯಾಗಿ ಕೆಲಸ ಮಾಡಿಲ್ಲ ಎನ್ನುತ್ತದೆ ಈ ಪರೀಕ್ಷೆಯ ವರದಿ. ಇವರನ್ನು ಸಂಪುಟದಿಂದ ಕೈ ಬಿಟ್ಟು ಹೊಸಬರಿಗೆ ಅವಕಾಶ ನೀಡುವ ಕುರಿತು ಸಿದ್ದರಾಮಯ್ಯ ಅವರು ಹೈ ಕಮಾಂಡ್ ನಾಯಕರ ಜೊತೆ ಚರ್ಚೆ ನಡೆಸುವ ಸಾಧ್ಯತೆ ಇದೆ. ಸಚಿವರ ಫಲಿತಾಂಶದ ವರದಿ ಇಲ್ಲಿದೆ ನೋಡಿ... [ಮಾಹಿತಿ ಕೃಪೆ : ಪಬ್ಲಿಕ್ ಟಿವಿ]

29 ಸಚಿವರು 2 ವರ್ಷದ ಸರ್ಕಾರ

29 ಸಚಿವರು 2 ವರ್ಷದ ಸರ್ಕಾರ

ಸಿದ್ದರಾಮಯ್ಯ ಅವರು ಸಂಪುಟದ ಎಲ್ಲಾ 29 ಮಂದಿ ಸಚಿವರ 2 ವರ್ಷದ ಕೆಲಸಗಳನ್ನು ನೋಡಿ ಅಂಕಪಟ್ಟಿ ತಯಾರಿಸಿದ್ದಾರೆ. ಸುಮಾರು 6 ರಿಂದ 8 ಮಂದಿ ಸಚಿವರು ಫೇಲ್ ಆಗಿದ್ದಾರೆ. ಫೇಲ್ ಆದ ಸಚಿವರನ್ನು ಕೈಬಿಡುವ ಬಗ್ಗೆ ಚಿಂತನೆ ನಡೆದಿದೆ ಎನ್ನಲಾಗಿದ್ದು, ಅಂತಿಮ ತೀರ್ಮಾನ ಹೊರಬಿದ್ದಿಲ್ಲ. ಇವರಲ್ಲಿ 5 ಮಂದಿ ಸಂಪುಟ ದರ್ಜೆ ಸಚಿವರು, 3 ಮಂದಿ ರಾಜ್ಯ ಸಚಿವರು ಸೇರಿದ್ದಾರೆ.

ಈ ಸಚಿವರುಗಳು ಫೇಲಂತೆ!

ಈ ಸಚಿವರುಗಳು ಫೇಲಂತೆ!

ಖಮರುಲ್ ಇಸ್ಲಾಂ (ಪೌರಾಡಳಿತ), ಶಾಮನೂರು ಶಿವಶಂಕರಪ್ಪ (ತೋಟಗಾರಿಕೆ), ಬಾಬುರಾವ್ ಚಿಂಚನಸೂರು (ಜವಳಿ ಸಚಿವ), ವಿನಯ್‍ಕುಮಾರ್ ಸೊರಕೆ (ನಗರಾಭಿವೃದ್ಧಿ), ವಿ.ಶ್ರೀನಿವಾಸ್ ಪ್ರಸಾದ್ (ಕಂದಾಯ), ಪರಮೇಶ್ವರ್ ನಾಯಕ್ (ಕಾರ್ಮಿಕ), ಕಿಮ್ಮನೆ ರತ್ನಾಕರ್ (ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ), ಅಭಯ್‍ಚಂದ್ರ ಜೈನ್ (ಯುವಜನ ಸೇವೆ ಮತ್ತು ಕ್ರೀಡೆ)

6 ಸಚಿವರು ಫಸ್ಟ್ ಕ್ಲಾಸ್‌

6 ಸಚಿವರು ಫಸ್ಟ್ ಕ್ಲಾಸ್‌

ಸಿದ್ದರಾಮಯ್ಯ ಅವರ ಮೌಲ್ಯಮಾಪನದ ಪ್ರಕಾರ ಕೇವಲ 6 ಮಂದಿ ಸಚಿವರು ಮಾತ್ರ ಫಸ್ಟ್ ಕ್ಲಾಸ್. ಇವರಲ್ಲಿ ಸಿದ್ದರಾಮಯ್ಯ ಅವರ ಪರಮಾಪ್ತರಾದ ಲೋಕೋಪಯೋಗಿ ಸಚಿವ ಎಚ್.ಸಿ.ಮಹದೇವಪ್ಪ ಅವರು ಸೇರಿದ್ದಾರೆ.
* ಎಚ್.ಕೆ.ಪಾಟೀಲ್ (ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್)
* ಎಚ್.ಸಿ.ಮಹದೇವಪ್ಪ (ಲೋಕೋಪಯೋಗಿ ಸಚಿವ)
* ರಾಮಲಿಂಗಾ ರೆಡ್ಡಿ (ಸಾರಿಗೆ)
* ಯು.ಟಿ.ಖಾದರ್ (ಆರೋಗ್ಯ ಮತ್ತು ಕುಟುಂಬ ಕಲ್ಯಾಣ)
* ದಿನೇಶ್‍ ಗುಂಡೂರಾವ್ (ಆಹಾರ ಮತ್ತು ನಾಗರೀಕ ಸರಬರಾಜು)
* ಎಚ್. ಆಂಜನೇಯ (ಸಮಾಜ ಕಲ್ಯಾಣ)

ಈ ಸಚಿವರು ಸೆಕೆಂಡ್ ಕ್ಲಾಸ್

ಈ ಸಚಿವರು ಸೆಕೆಂಡ್ ಕ್ಲಾಸ್

* ಟಿ.ಬಿ.ಜಯಚಂದ್ರ (ಕಾನೂನು ಮತ್ತು ಸಂಸದೀಯ ವ್ಯವಹಾರ)
* ಡಿ.ಕೆ.ಶಿವಕುಮಾರ್ (ಇಂಧನ)
* ಕೆ.ಜೆ.ಜಾರ್ಜ್ (ಗೃಹ)
* ಎಚ್.ಎಸ್.ಮಹದೇವ ಪ್ರಸಾದ್ ( ಸಹಕಾರ)
* ಡಾ.ಶರಣ ಪ್ರಕಾಶ್ ಪಾಟೀಲ್ (ವೈದ್ಯಕೀಯ ಶಿಕ್ಷಣ)

ಈ ಸಚಿವರು ಜಸ್ಟ್ ಪಾಸ್ ಅಂತೆ

ಈ ಸಚಿವರು ಜಸ್ಟ್ ಪಾಸ್ ಅಂತೆ

ಆರ್.ವಿ.ದೇಶಪಾಂಡೆ (ಉನ್ನತ ಶಿಕ್ಷಣ, ಪ್ರವಾಸೋದ್ಯಮ), ರಮಾನಾಥ ರೈ (ಅರಣ್ಯ), ಎಸ್.ಆರ್.ಪಾಟೀಲ್ (ಐಟಿ-ಬಿಟಿ), ಅಂಬರೀಶ್ (ವಸತಿ, ಎಂ.ಬಿ.ಪಾಟೀಲ್ (ಜಲಸಂಪನ್ಮೂಲ),ಸತೀಶ್ ಜಾರಕಿಹೊಳಿ (ಸಣ್ಣ ಕೈಗಾರಿಕೆ), ರೋಷನ್ ಬೇಗ್ (ವಾರ್ತಾ ಸಚಿವ), ಶಿವರಾಜ್ ತಂಗಡಗಿ (ಸಣ್ಣ ನೀರಾವರಿ, ಉಮಾಶ್ರೀ (ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ), ಕೃಷ್ಣಭೈರೇಗೌಡ (ಕೃಷಿ)

ಸಚಿವ ಸಂಪುಟ ಪುನಾರಚನರ ಆಗುತ್ತಾ?

ಸಚಿವ ಸಂಪುಟ ಪುನಾರಚನರ ಆಗುತ್ತಾ?

ಸಚಿವ ಸಂಪುಟ ಪುನಾರಚನೆ ಬಿಕ್ಕಟ್ಟು ಈಗ ಕ್ಲೈಮ್ಯಾಕ್ಸ್ ಹಂತಕ್ಕೆ ತಲುಪಿದೆ. ಪುನಾರಚನೆ ಆಗುವುದಾದರೆ ಜೂನ್ 18ರೊಳಗೆ ಇಲ್ಲವಾದಲ್ಲಿ ಬಿಬಿಎಂಪಿ ಚುನಾವಣೆ ನಂತರ ಎಂಬುದು ಸದ್ಯದ ಮಾಹಿತಿ. ಮುಂದಿನ ತೀರ್ಮಾಣ ದೆಹಲಿ ಭೇಟಿಯ ಬಳಿಕ ಪ್ರಕಟಗೊಳ್ಳುವ ಸಾಧ್ಯತೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+