ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಡಿಮೆ ಬಡ್ಡಿದರದಲ್ಲಿ ರೈತರಿಗೆ 20 ಲಕ್ಷ ಸಾಲ ಘೋಷಿಸಿದ ಸಿದ್ದರಾಮಯ್ಯ

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪ್ರತಿ ಮಹಿಳೆಗೆ 200 ಯೂನಿಟ್ ಉಚಿತ ವಿದ್ಯುತ್ ಮತ್ತು ಪ್ರತಿ ಮಹಿಳೆಗೆ ತಿಂಗಳಿಗೆ 2,000 ರೂ. ಭರವಸೆ ನೀಡಿದ ನಂತರ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಈಗ ಮತ್ತೆ ಅಚ್ಚರಿಯ ಘೋಷಣೆ ಮಾಡಿದ್ದಾರೆ.

|
Google Oneindia Kannada News

ಬೆಂಗಳೂರು, ಜನವರಿ 25: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪ್ರತಿ ಮಹಿಳೆಗೆ 200 ಯೂನಿಟ್ ಉಚಿತ ವಿದ್ಯುತ್ ಮತ್ತು ಪ್ರತಿ ಮಹಿಳೆಗೆ ತಿಂಗಳಿಗೆ 2,000 ರೂ. ಭರವಸೆ ನೀಡಿದ ನಂತರ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಈಗ ಮತ್ತೆ ಅಚ್ಚರಿಯ ಘೋಷಣೆ ಮಾಡಿದ್ದಾರೆ.

ಕೋಲಾರದಿಂದ ಕರ್ನಾಟಕ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವುದಾಗಿ ತಿಳಿಸಿರುವ ಸಿದ್ದರಾಮಯ್ಯ ಹಲವಾರು ಭರವಸೆಗಳ ಘೋಷಣೆ ಮಾಡುತ್ತಿದ್ದು, ತಾವು ಗೆದ್ದರೆ ಎಲ್ಲ ರೈತರಿಗೆ 20 ಲಕ್ಷದವರೆಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ವಿತರಿಸುವುದಾಗಿ ತಿಳಿಸಿದ್ದಾರೆ.

ಬಿಜೆಪಿ ಬೆಳೆಯಲು ಕಾರಣವೇ ಮಿಸ್ಟರ್ ಕುಮಾರಸ್ವಾಮಿ. ಹೀಗೆ ಸಿದ್ದರಾಮಯ್ಯ ಹೇಳಿದ್ಯಾಕೆ.?ಬಿಜೆಪಿ ಬೆಳೆಯಲು ಕಾರಣವೇ ಮಿಸ್ಟರ್ ಕುಮಾರಸ್ವಾಮಿ. ಹೀಗೆ ಸಿದ್ದರಾಮಯ್ಯ ಹೇಳಿದ್ಯಾಕೆ.?

ಸರ್ಕಾರದ ಸಹಕಾರಿ ಬ್ಯಾಂಕ್‌ಗಳಿಂದ ಶೂನ್ಯ ಬಡ್ಡಿದರದಲ್ಲಿ 3 ಲಕ್ಷ ರೂಪಾಯಿಗಳ ಅಲ್ಪಾವಧಿಯ ಬೆಳೆ ಸಾಲವನ್ನು 5 ಲಕ್ಷ ರೂಪಾಯಿಗಳಿಗೆ ಮತ್ತು 10 ಲಕ್ಷ ರೂಪಾಯಿಗಳ ದೀರ್ಘಾವಧಿ ಸಾಲವನ್ನು ಶೇಕಡಾ 3ರ ಬಡ್ಡಿದರದಲ್ಲಿ 20 ಲಕ್ಷಕ್ಕೆ ಹೆಚ್ಚಿಸಲಾಗುವುದು ಎಂದು ಕಾಂಗ್ರೆಸ್‌ ವತಿಯಿಂದ ನಡೆಯುತ್ತಿರುವ ಪ್ರಜಾಧ್ವನಿ ಯಾತ್ರೆಯಲ್ಲಿ ಘೋಷಿಸಿದರು.

ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನಿಂದ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲಾ ಅವರು ಚುನಾವಣೆಗೂ ಮುನ್ನ ಪಕ್ಷವು ಇಂತಹ ಚುನಾವಣಾ ಖಾತರಿ ಯೋಜನೆಗಳನ್ನು ಘೋಷಿಸುತ್ತಲೇ ಇರುತ್ತದೆ ಎಂದು ಸುಳಿವು ನೀಡಿದ್ದಾರೆ. ಕಾಂಗ್ರೆಸ್‌ನ ಯೋಜನೆಗಳನ್ನು ಸಮರ್ಥಿಸಿಕೊಂಡ ಅವರು, ನಾವು ಸರ್ಕಾರದಲ್ಲಿ ಶೇಕಡಾ 40 ರಷ್ಟು ಕಮಿಷನ್ ಅನ್ನು ಕೊನೆಗೊಳಿಸಿದರೆ ನಾವು 7,000 ಕೋಟಿ ರೂಪಾಯಿಗಳನ್ನು ಉಳಿಸಬಹುದು ಎಂದು ಹೇಳಿದರು.

ಸಿದ್ದರಾಮಯ್ಯನವರು ಜನರಿಗೆ ಕೊಟ್ಟಿದ್ದು ಅಕ್ಕಿ ಅಲ್ಲ, ಕೇವಲ ಚೀಲ: ಸಚಿವ ಕೆ.ಸುಧಾಕರ್‌ಸಿದ್ದರಾಮಯ್ಯನವರು ಜನರಿಗೆ ಕೊಟ್ಟಿದ್ದು ಅಕ್ಕಿ ಅಲ್ಲ, ಕೇವಲ ಚೀಲ: ಸಚಿವ ಕೆ.ಸುಧಾಕರ್‌

ಮುಸ್ಲಿಮರ ಬಗ್ಗೆ ಬಿಜೆಪಿ ಬಹಿರಂಗ ದ್ವೇಷ

ಮುಸ್ಲಿಮರ ಬಗ್ಗೆ ಬಿಜೆಪಿ ಬಹಿರಂಗ ದ್ವೇಷ

ಪ್ರಾದೇಶಿಕ ಪಕ್ಷ ಜೆಡಿಎಸ್‌ ಅನ್ನು ಬಿಜೆಪಿಯ ಬಿ ಟೀಮ್ ಎಂದು ಕರೆದಿದ್ದ ಸುರ್ಜೇವಾಲಾ ವಿರುದ್ಧ ವಾಗ್ದಾಳಿ ನಡೆಸಿದ ಜೆಡಿಎಸ್ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರನ್ನು ಬಿಜೆಪಿ ಮುಸ್ಲಿಮರನ್ನು ಬಹಿರಂಗವಾಗಿ ದ್ವೇಷಿಸುತ್ತಿದ್ದರೆ, ಜೆಡಿಎಸ್ ತೆರೆಮರೆಯಲ್ಲಿ ಮಾಡುತ್ತದೆ. ಜೆಡಿಎಸ್ ಅನ್ನು ನಂಬಬೇಡಿ ಎಂದು ನಾನು ಸಮುದಾಯದ ಜನರಲ್ಲಿ ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಜೆಡಿಎಸ್ ಮನೆ ಬಾಗಿಲಿಗೆ ಹೋಗಿತ್ತು

ಕಾಂಗ್ರೆಸ್ ಜೆಡಿಎಸ್ ಮನೆ ಬಾಗಿಲಿಗೆ ಹೋಗಿತ್ತು

2006ರಲ್ಲಿ ಎನ್‌. ಧರಂಸಿಂಗ್‌ ನೇತೃತ್ವದ ಕಾಂಗ್ರೆಸ್‌- ಜೆಡಿಎಸ್‌ ಮೈತ್ರಿ ಸರ್ಕಾರವನ್ನು ಪತನಗೊಳಿಸಿದ ಕುಮಾರಸ್ವಾಮಿ ಕೋಮುವಾದಿ ಬಿಜೆಪಿ ಜತೆಗೂಡಿ ಸಮ್ಮಿಶ್ರ ಸರ್ಕಾರ ರಚಿಸಿದ್ದರು. ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಲು ಕಾಂಗ್ರೆಸ್ ಜೆಡಿಎಸ್ ಮನೆ ಬಾಗಿಲಿಗೆ ಹೋಗಿದ್ದು, ಅವರು ಒಳ್ಳೆಯವರು ಎಂದು ಭಾವಿಸದೆ ಬಿಜೆಪಿಯನ್ನು ದೂರವಿಡಲು ಎಂಬುದಾಗಿ ಎಂದು ಹೇಳಿದರು.

164 ಭರವಸೆಗಳನ್ನು ನೀಡಿದ್ದ ಸಿದ್ದರಾಮಯ್ಯ

164 ಭರವಸೆಗಳನ್ನು ನೀಡಿದ್ದ ಸಿದ್ದರಾಮಯ್ಯ

ಬಿಜೆಪಿ ಹಾಗೂ ಕಾಂಗ್ರೆಸ್ ಸರ್ಕಾರಗಳ ಅವಧಿಯಲ್ಲಿ ನಡೆದಿರುವ ಎಲ್ಲ ಹಗರಣಗಳ ತನಿಖೆಗೆ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿ ರಚಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸವಾಲು ಹಾಕಿದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಸರ್ಕಾರ ರಚಿಸುವ ಮುನ್ನ 164 ಭರವಸೆಗಳನ್ನು ಸಿದ್ದರಾಮಯ್ಯ ನೀಡಿದ್ದರು, ಅದರಂತೆ ಅವರು ಎಲ್ಲ ಭರವಸೆಗಳನ್ನು ಈಡೇರಿಸಿದ್ದರು.

ಪರಸ್ಪರ ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಆಡಳಿತ ಆರೋಪ

ಪರಸ್ಪರ ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಆಡಳಿತ ಆರೋಪ

ಕರ್ನಾಟಕ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆಯಾಗುವ ಮೊದಲೇ ಎಲ್ಲ ರಾಜಕೀಯ ಪಕ್ಷಗಳು ತಮ್ಮ ಯಾತ್ರೆಗಳ ಮೂಲಕ ಪ್ರಚಾರ ಕಾರ್ಯ ಆರಂಭಿಸಿವೆ. ಬಿಜೆಪಿ ಹಾಗೂ ಪರಸ್ಪರ ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಆಡಳಿತ ಆರೋಪಗಳನ್ನು ಮಾಡುತ್ತಿವೆ. ಅಲ್ಲದೆ ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ಆದರೆ ಅವರು ಅಲ್ಲಿಂದ ನಿಲ್ಲುವುದಿಲ್ಲ ಎಂದು ಬಿಎಸ್‌ ಯಡಿಯೂರಪ್ಪ ತಿಳಿಸಿದ್ದಾರೆ. ಆದರೆ ಸಿದ್ದರಾಮಯ್ಯ ಈಗಾಗಲೇ ಕೋಲಾರ ಹೊರ ವಲಯದಲ್ಲಿ ಮನೆ ಬಾಡಿಗೆಯನ್ನು ಪಡೆದಿದ್ದಾರೆ. ಇದು ಬಿಜೆಪಿ ಅಭ್ಯರ್ಥಿಯಂದೇ ಪ್ರತಿಬಿಂಬಿತವಾಗಿರುವ ವರ್ತೂರು ಪ್ರಕಾಶ್‌ ಮನೆಗೆ ಹತ್ತಿರದಲ್ಲೇ ಇದೆ.

English summary
If Congress comes to power, 200 units of free electricity will be given to each woman and Rs 2,000 per month to each woman. After promising, Congress Legislature Party leader Siddaramaiah has now made a surprise announcement.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X