'ಶಕ್ತಿ' ಯೋಜನೆ; ಮೊದಲ ದಿನ ಸಂಚಾರ ನಡೆಸಿದವರೆಷ್ಟು?

ಬೆಂಗಳೂರು, ಜೂನ್ 12: ಕರ್ನಾಟಕ ಸರ್ಕಾರದ 'ಶಕ್ತಿ' ಯೋಜನೆಗೆ ಭಾನುವಾರ ರಾಜ್ಯಾದ್ಯಂತ ಏಕಕಾಲಕ್ಕೆ ಚಾಲನೆ ಸಿಕ್ಕಿದೆ. ಮೊದಲ ದಿನವೇ 5,71,023 ಮಹಿಳಾ ಪ್ರಯಾಣಿಕರು ಯೋಜನೆಯಡಿ ಉಚಿತವಾಗಿ ಸರ್ಕಾರಿ ಬಸ್‌ಗಳಲ್ಲಿ ಸಂಚಾರ ನಡೆಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ 'ಶಕ್ತಿ' ಯೋಜನೆಗೆ ಜೂನ್ 11ರ ಭಾನುವಾರ ಬೆಂಗಳೂರಿನಲ್ಲಿ ಚಾಲನೆ ನೀಡಿದರು. ಏಕಕಾಲದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಯೋಜನೆಗೆ ಹಸಿರು ನಿಶಾನೆ ತೋರಿಸಲಾಯಿತು.

Women Passengers Traveled First Day

ಸಾರಿಗೆ ಇಲಾಖೆಯ ಅಂದಾಜಿನಂತೆ ಪ್ರತಿದಿನ ರಾಜ್ಯದಾದ್ಯಂತ ಸರ್ಕಾರಿ ಬಸ್‌ಗಳಲ್ಲಿ ಸುಮಾರು 82 ಲಕ್ಷ ಪ್ರಯಾಣಿಕರು ಸಂಚರಿಸುತ್ತಾರೆ. ಇದರಲ್ಲಿ ಕನಿಷ್ಠ 40 ಲಕ್ಷ ಮಹಿಳೆಯರು ಸೇರಿದ್ದಾರೆ. ಯೋಜನೆಗೆ ಭಾನುವಾರ ಬೆಳಗ್ಗೆ ಚಾಲನೆ ಸಿಕ್ಕಿದ್ದು, ಮೊದಲ ದಿನವೇ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.

ಎಷ್ಟು ಪ್ರಯಾಣಿಕರ ಸಂಚಾರ; ಭಾನುವಾರ ಶಕ್ತಿ ಯೋಜನೆಗೆ ಚಾಲನೆ ಸಿಕ್ಕಿದ ಬಳಿಕ 4 ರಸ್ತೆ ಸಾರಿಗೆ ನಿಗಮಗಳ ಬಸ್‌ನಲ್ಲಿ 5,71,023 ಮಹಿಳಾ ಪ್ರಯಾಣಿಕರು ಉಚಿತವಾಗಿ ಸಂಚಾರ ನಡೆಸಿದ್ದಾರೆ. (ಜೂನ್ 11ರಂದು ಮಧ್ಯಾಹ್ನ 1 ರಿಂದ ಮಧ್ಯರಾತ್ರಿ 1 ಗಂಟೆಯ ತನಕ).

Women Passengers Traveled First Day

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್‌ಟಿಸಿ)ಯಲ್ಲಿ 1,93,831, ಬಿಎಂಟಿಸಿಯಲ್ಲಿ 2,01,2015, ವಾಕರಸಾ ಸಂಸ್ಥೆಯಲ್ಲಿ 1,22,354 ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ 53,623 ಜನರು ಸಂಚಾರ ನಡೆಸಿದ್ದಾರೆ.

ಜೂನ್ 11ರ ಮಧ್ಯಾಹ್ನ 1 ಗಂಟೆಯ ನಂತರ ಸಂಚಾರ ಆರಂಭಿಸಿದ ಬಸ್‌ಗಳು ಇನ್ನೂ ಸಹ ಟ್ರಿಪ್ ಮುಗಿಸಿಲ್ಲ. ಇಂದು ಸಂಜೆ / ರಾತ್ರಿ ಬಸ್‌ಗಳು ವಾಪಸ್ ಆಗುವ ಕಾರಣ ಆ ವಾಹನದಲ್ಲಿ ಸಂಚಾರ ನಡೆಸಿದ ಪ್ರಯಾಣಿಕರ ಸಂಖ್ಯೆಯನ್ನು ಇದರಲ್ಲಿ ಸೇರಿಸಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಬೆಂಗಳೂರಿನಲ್ಲಿ ಸೋಮವಾರ ಪತ್ರಿಕಾಗೋಷ್ಠಿ ನಡೆಸಿದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, "ಮಹಿಳೆಯರು ಬಸ್‌ನಲ್ಲಿ ಸಂಚಾರ ನಡೆಸಲು ಮೂಲ ದಾಖಲೆಗಳನ್ನು ತೋರಿಸಬೇಕೆಂದು ಇಲ್ಲ. ಫೋಟೋ ಇರುವ ಗುರುತಿನ ಚೀಟಿಯ ಜೆರಾಕ್ಸ್ ಅಥವ ಮೊಬೈಲ್‌ನ ಡಿಜಿ ಲಾಕರ್‌ನಲ್ಲಿರುವ ದಾಖಲೆ ತೋರಿಸಿದರೂ ಸಾಕು" ಎಂದು ಸ್ಪಷ್ಟಪಡಿಸಿದರು.

ಸಾಮಾನ್ಯ ಸರ್ಕಾರಿ ಬಸ್‌ನಲ್ಲಿ ಸಂಚಾರ ನಡೆಸುವ ಮಹಿಳಾ ಪ್ರಯಾಣಿಕರಿಗೆ 'ಶಕ್ತಿ' ಯೋಜನೆಯಡಿ ಟಿಕೆಟ್ ನೀಡಲಾಗುತ್ತದೆ. ಆದರೆ ಹಣ ನೀಡುವಂತಿಲ್ಲ. ಎಲ್ಲಿಂದ, ಎಲ್ಲಿಗೆ, ಎಷ್ಟು ದರ ಎಂಬ ವಿವರವನ್ನು ಟಿಕೆಟ್ ಒಳಗೊಂಡಿದೆ. ಅಲ್ಲದೇ ಅದರಲ್ಲೇ ಪ್ರಯಾಣ ದರ ಶೂನ್ಯ ಎಂದು ನಮೂದು ಮಾಡಲಾಗಿದೆ. ಈ ಟಿಕೆಟ್ ಸಹಾಯದಿಂದ ಎಷ್ಟು ಜನರು ಸಂಚಾರ ಮಾಡಿದರು?, ಎಷ್ಟು ವೆಚ್ಚವಾಗುತ್ತಿತ್ತು ಎಂಬ ಮಾಹಿತಿ ಸಿಗಲಿದೆ.

ಶಕ್ತಿ ಯೋಜನೆಯಡಿ ಮಹಿಳೆಯರು ಆಧಾರ್ ಕಾರ್ಡ್, ಚುನಾವಣಾ ಆಯೋಗ ವಿತರಿಸಿರುವ ಮತದಾರರ ಗುರುತಿನ ಚೀಟಿ, ಚಾಲನಾ ಪರವಾನಿಗೆ ಪತ್ರ, ವಾಸಸ್ಥಳ ನಮೂದಿಸಿರುವ ಭಾರತ ಸರ್ಕಾರದ ಇಲಾಖೆಗಳು, ಭಾರತ ಸರ್ಕಾರದ ಸಾರ್ವಜನಿಕ ವಲಯದ ಉದ್ದಿಮೆ, ಸಂಸ್ಥೆಗಳು (ಪಿ.ಎಸ್.ಯು.ಎಸ್) ವಿತರಿಸಿರುವ ಗುರುತಿನ ಚೀಟಿ ಅಥವಾ ವಾಸಸ್ಥಳ ನಮೂದಿಸಿರುವಂತಹ ಕರ್ನಾಟಕ ಸರ್ಕಾರದ ಇಲಾಖೆಗಳು, ಕರ್ನಾಟಕ ಸರ್ಕಾರದ ಸಾರ್ವಜನಿಕ ವಲಯದ ಉದ್ದಿಮೆ, ಸಂಸ್ಥೆಗಳು ವಿತರಿಸಿರುವ ಗುರುತಿನ ಚೀಟಿ ಅಥವಾ ಕರ್ನಾಟಕ ಸರ್ಕಾರದ ಅಂಗವಿಕಲರ ಮತ್ತು ಹಿರಿಯ ನಾಗರೀಕ ಕಲ್ಯಾಣ ನಿರ್ದೇಶನಾಲಯದವರು ವಿತರಿಸಿರುವ ಗುರುತಿನ ಚೀಟಿ ತೋರಿಸಿ ಉಚಿತವಾಗಿ ಪ್ರಯಾಣ ಮಾಡಬಹುದಾಗಿದೆ.

ಮಹಿಳೆಯರು ಮೂರು ತಿಂಗಳು ದಾಖಲೆ ತೋರಿಸಿ, ಶೂನ್ಯ ಮೊತ್ತದ ಟಿಕೆಟ್ ಪಡೆದು ಸಂಚಾರ ನಡೆಸಬಹುದಾಗಿದೆ. ಬಳಿಕ ಸ್ಮಾರ್ಟ್‌ ಕಾರ್ಡ್‌ಗಳನ್ನು ವಿತರಣೆ ಮಾಡಲಾಗುತ್ತದೆ ಎಂದು ಸಾರಿಗೆ ಇಲಾಖೆ ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+