ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಿಂಗಾಯತ ಧರ್ಮೀಯರ ರಾಷ್ಟ್ರೀಯ ಸಮಾವೇಶ, 5ನಿರ್ಣಯಗಳು

|
Google Oneindia Kannada News

Recommended Video

ಲಿಂಗಾಯತ ಧರ್ಮೀಯರ ರಾಷ್ಟ್ರೀಯ ಸಮಾವೇಶ , 5 ನಿರ್ಣಯಗಳು | Oneindia Kannada

ಬೆಂಗಳೂರು, ನವೆಂಬರ್ 20 : 'ವೀರಶೈವರು ನಮ್ಮ ತಂಟೆಗೆ ಬರದಿದ್ದರೆ ಒಳ್ಳೇದು. ನಮ್ಮ ಬಾಳೇವು ನಾವು ಮಾಡಿಕೊಳ್ತೇವೆ. ಸುಮ್ಮನೆ ನಮ್ಮ ಪಾಡಿಗೆ ನಮ್ಮನ್ನು ಬಿಟ್ಟುಬಿಡಿ. ಯಾಕೆ ನಮ್ಮನ್ನೂ ಜೊತೆಗೆ ಕಟ್ಟಿಕೊಂಡು ಬೀಳ್ತಿರಿ' ಎಂದು ಸಚಿವ ವಿಜಯ ಕುಲಕರ್ಣಿ ಹೇಳಿದರು.

ಲಿಂಗಾಯತ 'ಧರ್ಮ' ಇದು ಕೈ ಪಕ್ಷದ ಚುನಾವಣೆ 'ಮರ್ಮ'ಲಿಂಗಾಯತ 'ಧರ್ಮ' ಇದು ಕೈ ಪಕ್ಷದ ಚುನಾವಣೆ 'ಮರ್ಮ'

ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಭಾನುವಾರ ಲಿಂಗಾಯತ ಧರ್ಮೀಯರ ರಾಷ್ಟ್ರೀಯ ಸಮಾವೇಶ ನಡೆಯಿತು. ಸಮಾವೇಶದಲ್ಲಿ ಐದು ನಿರ್ಣಯಗಳನ್ನು ಮಂಡನೆ ಮಾಡಲಾಯಿತು.

ಸಮಾವೇಶದಲ್ಲಿ ಮಾತನಾಡಿದ ಜಲ ಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್, 'ಪ್ರತ್ಯೇಕ ಧರ್ಮದ ಮಾನ್ಯತೆಗಾಗಿ ನಡೆಸುತ್ತಿರುವ ಲಿಂಗಾಯತ ಚಳವಳಿಯ ನಾಯಕತ್ವ ವಹಿಸಿಕೊಳ್ಳಲು ಬಿಜೆಪಿ ಮುಖಂಡರಾದ ಬಿ.ಎಸ್.ಯಡಿಯೂರಪ್ಪ, ಜಗದೀಶ್ ಶೆಟ್ಟರ್ ಮುಂದೆ ಬಂದರೆ ಬಿಟ್ಟುಕೊಡಲು ಸಿದ್ಧ' ಎಂದರು.

ವೀರಶೈವ ಒಂದು ವ್ರತ, ಲಿಂಗಾಯತ ಸ್ವತಂತ್ರ ಧರ್ಮ!ವೀರಶೈವ ಒಂದು ವ್ರತ, ಲಿಂಗಾಯತ ಸ್ವತಂತ್ರ ಧರ್ಮ!

ಸಮಾವೇಶದಲ್ಲಿ ಪಾಲ್ಗೊಂಡಿದ್ದ ನಟ ಚೇತನ್, 'ನಾವು ಬ್ರಾಹ್ಮಣರ ವಿರೋಧಿಗಳಲ್ಲ, ಬ್ರಾಹ್ಮಣ್ಯದ ವಿರೋಧಿಗಳು. ಸಂಘಟನೆಯ ವಿರೋಧಿಗಳಲ್ಲ, ಸಂಘ ಪರಿವಾರದ ವಿರೋಧಿಗಳು. ಹಿಂದೂ ವಿರೋಧಿಗಳಲ್ಲ, ಹಿಂದುತ್ವದ ವಿರೋಧಿಗಳು' ಎಂದರು. ಸಮಾವೇಶದಲ್ಲಿ ಮಂಡಿಸಿದ ಐದು ನಿರ್ಣಯಗಳು..

ಕೇಂದ್ರಕ್ಕೆ ಶಿಫಾರಸು ಮಾಡಿ

ಕೇಂದ್ರಕ್ಕೆ ಶಿಫಾರಸು ಮಾಡಿ

ನಿರ್ಣಯ 1 : ಲಿಂಗಾಯತ ಪ್ರತ್ಯೇಕ ಧರ್ಮಕ್ಕಾಗಿ ಡಿ.30ರೊಳಗೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು.

ಅಲ್ಪ ಸಂಖ್ಯಾತರ ಮಾನ್ಯತೆ

ಅಲ್ಪ ಸಂಖ್ಯಾತರ ಮಾನ್ಯತೆ

ನಿರ್ಣಯ - 2 : ಸ್ವತಂತ್ರ ಧರ್ಮ ಮಾತ್ರವಲ್ಲದೆ ಧಾರ್ಮಿಕ ಅಲ್ಪ ಸಂಖ್ಯಾತರ ಮಾನ್ಯತೆ ನೀಡಲು ಮುಖ್ಯಮಂತ್ರಗಳು ಕ್ರಮ ಕೈಗೊಳ್ಳಬೇಕು.

ಸಾಂಸ್ಕೃತಿಕ ನಾಯಕ

ಸಾಂಸ್ಕೃತಿಕ ನಾಯಕ

ನಿರ್ಣಯ - 3 : ಬಸವಣ್ಣನನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಬೇಕು.

ಸುತ್ತೋಲೆ ರದ್ದುಗೊಳಿಸಬೇಕು

ಸುತ್ತೋಲೆ ರದ್ದುಗೊಳಿಸಬೇಕು

ನಿರ್ಣಯ - 4 : 2002ರಲ್ಲಿ ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ಹೊರಡಿಸಲಾದ ಸುತ್ತೋಲೆ ರದ್ದುಗೊಳಿಸಬೇಕು. ಲಿಂಗಾಯತ ಉಪ ಪಂಗಡಗಳು ಜಾತಿ ಪ್ರಮಾಣ ನೀಡುವಂತೆ ಕೋರುವ ಅರ್ಜಿಗಳನ್ನು ತಹಶೀಲ್ದಾರ್ ಮಾನ್ಯ ಮಾಡಬಹುದು ಎಂಬದು ಸುತ್ತೋಲೆ.

ಬಸವೇಶ್ವರರ ಹೆಸರು ಇಡಿ

ಬಸವೇಶ್ವರರ ಹೆಸರು ಇಡಿ

ನಿರ್ಣಯ -5 : ಕಲಬುರಗಿ ವಿಶ್ವವಿದ್ಯಾಲಯಕ್ಕೆ ಬಸವೇಶ್ವರ ಅವರ ಹೆಸರನ್ನು ಇಡಬೇಕು

English summary
The Lingayat Dharma Mahasabha on Sunday set December 30 as the deadline for the state government to make a recommendation to the Centre for for separate religion tag for Lingayats. Lingayat convention held in Bengaluru, National College Grounds.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X