ನನ್ನ ಸ್ವಾಭಿಮಾನಕ್ಕೆ ಧಕ್ಕೆ; ಸಿದ್ದರಾಮಯ್ಯ ಬಳಿ ರಾಜೀನಾಮೆ ಬೆದರಿಕೆ ಹಾಕಿದ ಶಾಸಕ! ಇಲ್ಲಿದೆ ಇನ್ ಸೈಡ್ ಸ್ಟೋರಿ

ಬೆಂಗಳೂರು, ಜುಲೈ 29: ಸರ್ಕಾರ ರಚನೆಯಾಗಿ ಎರಡು ಕಳೆದಿದ್ದು, ಸಿದ್ದರಾಮಯ್ಯ ಸರ್ಕಾರದಲ್ಲಿ ಸಚಿವರು ಹಾಗೂ ಶಾಸಕರ ನಡುವೆ ಅಸಮಾಧಾನ ಭುಗಿಲೆದ್ದಿದ್ದು, ಸಿದ್ದರಾಮಯ್ಯ ಅವರ ಬಳಿ ಅಹಂಕಾರಿ ಮಂತ್ರಿಯಿಂದ ನನ್ನ ಸ್ವಾಭಿಮಾನಕ್ಕೆ ಧಕ್ಕೆ ಆಗಿದೆ ಎಂದು ಹಿರಿಯ ಶಾಸಕ ಬಿ ಆರ್ ಪಾಟೀಲ್ ಅವರು ರಾಜೀನಾಮೆ ನೀಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ಕುರಿತು ಗುರುವಾರ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಬಿ ಆರ್‌ ಪಾಟೀಲ್ ಅವರು ಮುಖ್ಯಮಂತ್ರಿಗಳ ಬಳಿಯೇ ಅಸಮಾಧಾನ ತೋಡಿಕೊಂಡಿದ್ದಾರೆ ಎಂದು ಡೈಕನ್‌ ಹೈರಾಲ್ಡ್‌ ವರದಿ ಮಾಡಿದೆ.

Senior Karnataka MLA Threatens To Quit Citing Self-Respect

ಸಚಿವರು ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂದು ಪಾಟೀಲ್ ವಾಗ್ದಾಳಿ ನಡೆಸಿದ್ದಾರೆ ಎಂದು ಆಪ್ತ ಮೂಲಗಳು ತಿಳಿಸಿವೆ. ಪಾಟೀಲ್ ಹಾಗೂ ಇತರೆ ಶಾಸಕರು ಸಿಎಲ್‌ಪಿ ಸಭೆ ಕರೆಯುವಂತೆ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿ ಅಸಮಾಧಾನ ವ್ಯಕ್ತಪಡಿಸಿದ್ದರು. ತಮ್ಮ ಮಾತಿಗೆ ಕಡಿವಾಣ ಹಾಕಿದ್ದಾರೆ ಎಂಬುದು ಅವರ ಅಳಲು ತೋಡಿಕೊಂಡಿದ್ದಾರೆ.

ತಮಗೆ ಬರೆದಿರುವ ಪತ್ರದ ಅಗತ್ಯವೇನಿದೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದಾಗ, ಪಾಟೀಲ್ ತಮ್ಮ ಹಕ್ಕನ್ನು ಪ್ರತಿಪಾದಿಸಿದರು ಎಂದು ಮೂಲಗಳು ತಿಳಿಸಿವೆ. "ಆಂತರಿಕ ಪ್ರಜಾಪ್ರಭುತ್ವವಿದೆ" ಎಂದು ಅವರು ಹೇಳಿದರು. ಪಾಟೀಲ್ ಪತ್ರ ಸೋರಿಕೆಯಾಗಲು ಕಾರಣವೇನು ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಾಸಕರು, ಸೋರಿಕೆಗೆ ನಾನು ಹೊಣೆಯಲ್ಲ. ಸೋರಿಕೆಗೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ತಿಳಿಸಿದ್ದಾರೆ.

Senior Karnataka MLA Threatens To Quit Citing Self-Respect

ಇನ್ನೂ ಹಿರಿಯ ಶಾಸಕ ಬಿ ಆರ್ ಪಾಟೀಲ್ ಅವರು ಶಾಸಕರಾದ ವಿನಯ್ ಕುಲಕರ್ಣಿ, ಸಿ.ಎಸ್.ನಾಡಗೌಡ, ಹಮಪನಗೌಡ ಬಾದರ್ಲಿ, ಯಶವಂತರಾಯಗೌಡ ಪಾಟೀಲ್ ಮತ್ತಿತರರ ಬೆಂಬಲ ಪಡೆದಿದ್ದಾರೆ. ಇನ್ನೂ ಈ ವೇಳೆ ಬಿ ಆರ್ ಪಾಟೀಲ ಅವರು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಕಲಬುರಗಿ ಜಿಲ್ಲೆಯಲ್ಲಿ ನಿಯೋಜನೆಗೊಂಡಿರುವ ಅಧಿಕಾರಿಗಳ ವಿರುದ್ಧವೂ ದೂರು ನೀಡಿದ್ದಾರೆ ಎನ್ನಲಾಗಿದೆ.

ಶಾಸಕರ ಕುಂದುಕೊರತೆಗಳನ್ನು ಪರಿಹರಿಸಲು ಮಾಸಿಕ ಸಭೆ ನಡೆಸುವುದಾಗಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. ಆಗಸ್ಟ್‌ನಲ್ಲಿ ಮಂಡಳಿ ಮತ್ತು ನಿಗಮಗಳ ಶೇ 50ರಷ್ಟು ಹುದ್ದೆಗಳಿಗೆ ಶಾಸಕರನ್ನು ನೇಮಕ ಮಾಡುವುದಾಗಿ ಸಿಎಂ ಭರವಸೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಉಳಿದ ಶೇ 50ರಷ್ಟು ಮಂದಿ ಪಕ್ಷದ ಕಾರ್ಯಕರ್ತರಿಗೆ ನೀಡಲಾಗುವುದು ಎಂದು ತಿಳಿದು ಬಂದಿದೆ.

ಬಿ ಆರ್ ಪಾಟೀಲ್ ರಾಜೀನಾಮೆ ಬೆದರಿಕೆಯನ್ನು ಗೃಹ ಸಚಿವ ಜಿ.ಪರಮೇಶ್ವರ ನಿರಾಕರಿಸಿದ್ದಾರೆ. "ಅಂತಹುದೇನೂ ನಡೆದಿಲ್ಲ. ಬಿ ಆರ್‌ ಪಾಟೀಲ್‌ ಅವರು, ಖಾಸಗಿಯಾಗಿ ಯಾರಿಗಾದರೂ ಏನಾದರೂ ಹೇಳಿದ್ದಾರೋ ನನಗೆ ಗೊತ್ತಿಲ್ಲ ಎಂದು ತಿಳಿಸಿದ್ದಾರೆ. ಪತ್ರದ ವೈಫಲ್ಯದ ಬಗ್ಗೆ ಶಾಸಕರು ಸಿಎಂ ಬಳಿ ಕ್ಷಮೆಯಾಚಿಸಿದ್ದಾರೆ ಎಂದು ಪರಮೇಶ್ವರ ಹೇಳಿದರು. ಪತ್ರಗಳನ್ನು ಬರೆಯುವುದು ಅಥವಾ ಸಹಿ ಅಭಿಯಾನವನ್ನು ನಡೆಸದಂತೆ ಸಿಎಂ ಸಲಹೆ ನೀಡಿದ ನಂತರ ಶಾಸಕರು ಕ್ಷಮೆಯಾಚಿಸಿದ್ದಾರೆ ಎನ್ನಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+