ಜುಲೈ 2 ಬುಧವಾರ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಸಾಧ್ಯತೆ... School Holiday
ಶಾಲೆ & ಕಾಲೇಜುಗಳು ಈಗ ತಾನೇ ಶುರುವಾಗಿವೆ, ಆದರೆ ಪದೇ ಪದೇ ಶಾಲೆ ಮತ್ತು ಕಾಲೇಜುಗಳಿಗೆ ರಜೆ ಘೋಷಣೆ ಮಾಡುತ್ತಿರುವುದು ಒಂದು ಕಡೆ ಮಕ್ಕಳಿಗೆ ಅಂದ್ರೆ ವಿದ್ಯಾರ್ಥಿಗಳಿಗೆ ಖುಷಿ ನೀಡುತ್ತಿದೆ. ಆದರೆ, ಹೀಗೆಲ್ಲಾ ಪದೇ ಪದೇ ಶಾಲೆ ಮತ್ತು ಕಾಲೇಜುಗಳಿಗೆ ರಜೆ ಘೋಷಣೆ ಮಾಡುತ್ತಿರುವುದು ವಿದ್ಯಾರ್ಥಿಗಳ ತಂದೆ ಮತ್ತು ತಾಯಿ ಸೇರಿದಂತೆ ಪೋಷಕರಿಗೆ ಒಂದಷ್ಟು ಟೆನ್ಷನ್ ಕೊಡುತ್ತಿದೆ. ಹೀಗಿದ್ದಾಗಲೇ, ಜುಲೈ 2 ಬುಧವಾರ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಸಾಧ್ಯತೆ...
ಶಾಲಾ & ಕಾಲೇಜುಗಳಿಗೆ ಬೇಸಿಗೆ ರಜೆ ಅಂತಾನೇ 60 ದಿನ ಅಂದ್ರೆ ಸುಮಾರು 2 ತಿಂಗಳ ಕಾಲ ರಜೆಯನ್ನ ಘೋಷಣೆ ಮಾಡಲಾಗಿತ್ತು. ಹೀಗೆ 60 ದಿನಗಳ ಕಾಲ ರಜೆ ಎಂಜಾಯ್ ಮಾಡಿ ಮತ್ತೆ ಶಾಲಾ & ಕಾಲೇಜುಗಳಿಗೆ ವಿದ್ಯಾರ್ಥಿಗಳು ವಾಪಸ್ ಆಗಿದ್ದಾರೆ. ಕರ್ನಾಟಕ ಸೇರಿದಂತೆ ಇಡೀ ಇಂಡಿಯಾ ಪೂರ್ತಿ ಶಾಲಾ & ಕಾಲೇಜು ರೀ ಓಪನ್ ಅಂದ್ರೆ ಮತ್ತೆ ತೆರೆಯುವ ಮೂಲಕ ಮಕ್ಕಳಿಗೆ ಪಾಠ ಮಾಡಲು ಸಜ್ಜಾಗಿದ್ದವು. ಆದರೆ ಜೂನ್ ತಿಂಗಳಲ್ಲಿ ಪದೇ ಪದೇ ಕರ್ನಾಟಕದ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಆಗಿತ್ತು. ಇಂತಹ ಪರಿಸ್ಥಿತಿ ಮೀರಿ ಜುಲೈ ತಿಂಗಳಲ್ಲೂ ಶಾಲಾ & ಕಾಲೇಜುಗಳಿಗೆ ಭಾರಿ ದೊಡ್ಡ ಮಟ್ಟದಲ್ಲಿ ರಜೆ ಘೋಷಣೆ ಆಗಲಿದೆ!

ಜುಲೈ 2 ಬುಧವಾರ ಶಾಲಾ & ಕಾಲೇಜುಗಳಿಗೆ...
ರಜೆ.. ರಜೆ.. ರಜೆ... ಹಿಂಗೆ ಶಾಲಾ & ಕಾಲೇಜುಗಳಿಗೆ ರಜೆ ಸಿಕ್ಕರೆ ಮಕ್ಕಳಿಗೆ ಫುಲ್ ಖುಷಿ, ಆದರೆ ಹೀಗೆ ಶಾಲಾ & ಕಾಲೇಜುಗಳಿಗೆ ರಜೆ ಕೊಟ್ಟರೆ ಮಕ್ಕಳ ಪೋಷಕರಿಗೆ ಸಿಕ್ಕಾಪಟ್ಟೆ ತಲೆನೋವು ಎದುರಾಗಲಿದೆ. ಈ ಮಾತು ಯಾಕಪ್ಪಾ ಅಂದ್ರೆ ಶಾಲಾ & ಕಾಲೇಜುಗಳಿಗೆ ರಜೆ ಕೊಟ್ಟ ನಂತರ ಮಕ್ಕಳು ಮನೆಯಲ್ಲೇ ಇದ್ದರೆ, ಅಪ್ಪ & ಅಮ್ಮನಿಗೆ ಚಿಂತೆ ಶುರುವಾಗುತ್ತೆ ಅನ್ನೋ ಮಾತು ಇದೆ. ಹೀಗಿದ್ದಾಗಲೇ, ಜುಲೈ 2 ಬುಧವಾರ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಸಾಧ್ಯತೆ...
ಕರ್ನಾಟಕ ಬಂದ್ ಮಾಡಲು ಕಳೆದ ತಿಂಗಳು ಕನ್ನಡಪರ ಸಂಘಟನೆಗಳು ಪ್ಲಾನ್ ಮಾಡಿದ್ದವು, ಕನ್ನಡ & ಕನ್ನಡಿಗರ ಬಗ್ಗೆ ಮಾತನಾಡಿದ್ದ ಕಮಲ್ ಹಾಸನ್ ವಿರುದ್ಧ ಹೋರಾಟಕ್ಕೆ ಕನ್ನಡಪರ ಸಂಘಟನೆಗಳು ಜೂನ್ ತಿಂಗಳಲ್ಲಿ ಸಿದ್ಧತೆ ನಡೆಸಿದ್ದವು. ಆದರೆ, ಕೊನೇ ಕ್ಷಣದಲ್ಲಿ ಕನ್ನಡಪರ ಸಂಘಟನೆಗಳು ಕರ್ನಾಟಕ ಬಂದ್ ಮಾಡುವ ನಿರ್ಧಾರ ವಾಪಸ್ ಪಡೆದಿದ್ದವು. ಹೀಗಿದ್ದಾಗಲೇ ಶಾಲಾ & ಕಾಲೇಜುಗಳಿಗೆ ರಜೆ ಮಿಸ್ ಆಗಿತ್ತು. ಆದರೆ ಜುಲೈ ತಿಂಗಳಲ್ಲಿ ಶಾಲಾ & ಕಾಲೇಜುಗಳಿಗೆ ರಜೆ ನೀಡಲು ಮಳೆರಾಯ ಎಂಟ್ರಿಯಾಗಿದ್ದು, ನಮ್ಮ ಕರ್ನಾಟಕ ರಾಜ್ಯದ ಶಾಲಾ & ಕಾಲೇಜುಗಳಿಗೆ ಜುಲೈ 2 ಬುಧವಾರ ರಜೆ ಫಿಕ್ಸ್ ಆಗುತ್ತಿದೆ...
ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಸಾಧ್ಯತೆ...
ಹೌದು, ಜುಲೈ 2 ಬುಧವಾರದಿಂದ ಕರ್ನಾಟಕದ ರಾಜಧಾನಿ ಬೆಂಗಳೂರು ಸೇರಿದಂತೆ ಕರಾವಳಿ ಪ್ರದೇಶ ದಕ್ಷಿಣ ಕನ್ನಡ, ಮಂಗಳೂರು, ಉಡುಪಿ, ಉತ್ತರ ಕನ್ನಡ, ಮಲೆನಾಡು ಜಿಲ್ಲೆಗಳಾದ ಶಿವಮೊಗ್ಗ, ಕೊಡಗು ಸೇರಿ ಚಿಕ್ಕಮಗಳೂರು ಭಾಗದಲ್ಲೂ ಭಾರಿ ಮಳೆಯ ಮುನ್ನೆಚ್ಚರಿಕೆ ನೀಡಲಾಗಿದೆ. ಇದರ ಜೊತೆ ಹಾಸನ, ಮಂಡ್ಯ, ಮೈಸೂರು, ರಾಮನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲೂ ಜುಲೈ 2 ಬುಧವಾರ ನಂತರ ಭಾರಿ ಮಳೆಯಾಗುವ ಮುನ್ಸೂಚನೆ ಇದೆ. ಅದರಲ್ಲೂ ಹಲವು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಕೂಡ ಈಗ ಘೋಷಣೆ ಮಾಡಲಾಗಿದ್ದು, ಭಾರಿ ಮಳೆ ಸುರಿಯುವ ಮುನ್ಸೂಚನೆ ನೀಡಲಾಗಿದೆ.
ದಾವಣಗೆರೆ, ಚಿತ್ರದುರ್ಗ, ಹುಬ್ಬಳ್ಳಿ & ಧಾರವಾಡ ಸೇರಿ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ಸುರಿಯುವ ಎಚ್ಚರಿಕೆ ನೀಡಲಾಗಿದ್ದು ಕುಂದಾ ನಗರಿ ಬೆಳಗಾವಿ ಜಿಲ್ಲೆಯಲ್ಲೂ ಭಾರಿ ಮಳೆಯು ಆಗಲಿದೆ ಅಂತಾ ವಾರ್ನಿಂಗ್ ಕೊಡಲಾಗಿದೆ. ಭಾರಿ ಮಳೆ ಹಿನ್ನೆಲೆಯಲ್ಲಿ ಬಹುತೇಕ ಜಿಲ್ಲೆಗಳಿಗೆ ಜುಲೈ 2 ಬುಧವಾರ ಶಾಲಾ & ಕಾಲೇಜುಗಳಿಗೆ ರಜೆ ಫಿಕ್ಸ್ ಆಗಿದೆ. ಆದರೆ ಈ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಹೊರ ಬಿದ್ದಿಲ್ಲ, ಹೀಗಾಗಿ ಜುಲೈ 1 ಮಂಗಳವಾರ ರಜೆ ಬಗ್ಗೆ ಅಧಿಕೃತ ಮಾಹಿತಿ ಸಿಗುವ ಸಾಧ್ಯತೆ ದಟ್ಟವಾಗಿದೆ. ಮತ್ತೊಂದು ಕಡೆ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಿ ದೇವರೆ, ಅಂತಾ ವಿದ್ಯಾರ್ಥಿಗಳು ಕೂಡ ಇದೀಗ ಪ್ರಾರ್ಥನೆ ಮಾಡಬಹುದೋ ಏನೋ!












Click it and Unblock the Notifications