Get well soon ಎಂದ ರೋಹಿಣಿ ಸಿಂಧೂರಿ: ಚಾಟಿಂಗ್ ಫೋಟೋ ಅಪ್ಲೋಡ್ ಮಾಡಿದ ಡಿ.ರೂಪಾ
ಡಿ ರೂಪಾ ವಿರುದ್ದ ಸರ್ಕಾರ ಮುಖ್ಯ ಕಾರ್ಯದರ್ಶಿಗೆ ರೋಹಿಣಿ ಸಿಂಧೂರಿ ದೂರು ನೀಡಿದ್ದಾರೆ.
ಬೆಂಗಳೂರು,ಫೆಬ್ರವರಿ20: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಐಪಿಎಸ್ ಅಧಿಕಾರಿ ಡಿ.ರೂಪಾ ಅವರ ನಡುವಿನ ಜಟಾಪಟಿ ಮತ್ತೆ ಮುಂದುವರೆದಿದೆ.
ಈ ಕುರಿತು ರೋಹಿಣಿ ಸಿಂಧೂರಿ ಪತಿ ಸುಧೀರ್ ರೆಡ್ಡಿ ಅವರು ಡಿ ರೂಪಾ ವಿರುದ್ದ ಕಿಡಿಕಾಡಿದ್ದು, ನಮ್ಮ ಕುಟುಂಬದ ಬಗ್ಗೆ ಅನಗತ್ಯವಾಗಿ ಮಾತನಾಡಬಾರದು. ರೋಹಿಣಿ ಸಿಂಧೂರಿಗೆ ಯಾವುದೇ ಪ್ರಚಾರ ಬೇಡ. ಅವರು ಯಾವುದೇ ಸಾಮಾಜಿಕ ಜಾಲತಾಣ ಸಹ ಬಳಕೆ ಮಾಡುತ್ತಿಲ್ಲ. ಪತ್ನಿಯ ಫೋಟೋಗಳು ರೂಪಾ ಅವರಿಗೆ ಸಿಕ್ಕಿದ್ದು ಹೇಗೆ? ಈ ರೂಪಾ ಅನ್ನೋರು ಯಾರು ಎಂದು ಪ್ರಶ್ನಿಸಿದ್ದರು.
ಇನ್ನೂ ಈ ಆರೋಪದ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ರೋಹಿಣಿ ಸಿಂಧೂರಿ, ನನ್ನ ವಿರುದ್ದ ಆರೋಪ ಮಾಡಿದ್ದುಸರಿಯಲ್ಲ. ವೈಯಕ್ತಕ ತೇಜೋವಧೆ ಮಾಡುವುದು ಸರಿಯಲ್ಲ. ಕೆಲಸಕ್ಕೆ ಸಂಬಂಧಿಸಿದ್ದನ್ನ ಬೇಕಿದ್ದರೇ ಕೇಳಲಿ. ಇದನ್ನಇಲ್ಲಿಗೆ ಬಿಡಲ್ಲ. ಕಾನೂನು ಹೋರಾಟ ಮಾಡುವೆ. ಕಾನೂನಿನ ಮೂಲಕ ಕಠಿಣ ಕ್ರಮಕ್ಕೆ ಮುಂದಾಗುತ್ತೇವೆ. ರೂಪಾ get well soon ಎಂದು ಟಾಂಗ್ ಕೊಟ್ಟಿದ್ದರು.

ಇದೀಗ ರೋಹಿಣಿ ಸಿಂಧೂರಿ ಅವರ ಟಾಂಗ್ ಗೆ ಮತ್ತೆ ಫೇಸ್ ಬುಕ್ ನಲ್ಲಿ ಡಿ ರೂಪಾ ಕುಟುಕಿರುವ ರೂಪಾ ಅವರು, Get well soon ಅಂತಾ ನನಗೆ ಹೇಳಿದ್ದಾರಲ್ಲ ಪ್ರೆಸ್ ನಲ್ಲಿ ಇವತ್ತು ರೋಹಿಣಿ ಸಿಂಧೂರಿ , ಅವರ deleted ನಗ್ನ ಚಿತ್ರಗಳ ಬಗ್ಗೆ ಮಾತಾಡ್ತಾರಾ. ನಂಬರ್ ಅವರದೇ ಅಲ್ಲವಾ. ಐಎಎಸ್ ಅಧಿಕಾರಿ ನಗ್ನ ಚಿತ್ರ, ಕಳಿಸಬಹುದ? ಎಂದು ಡಿ ರೂಪಾ ಪ್ರಶ್ನಿಸಿದ್ದಾರೆ.
ಈ ರೀತಿಯ ಪಿಕ್ಸ್ ಕಳಿಸಿದ್ದು ಯಾವ ಕಾರಣಕ್ಕಾಗಿ. ಸಂಧಾನಕ್ಕೆ? ಅವರ ಮೇಲಿನ ಆರೋಪ prove ಆಗಿರುವ preliminary inquiry ವಿಷಯದಲ್ಲಿ ಮುಂದೆ ಶಿಕ್ಷೆ ಆಗದಂತೆ ತಡೆಯಲು? ಯಾವುದು? ಅವರೇ ಉತ್ತರಿಸಬೇಕು. Get well soon ಅಂತಾ ಹೇಳುವುದರ ಮೂಲಕ mental illness ಬಗ್ಗೆ ಅವರ ಅಭಿಪ್ರಾಯ ಎಷ್ಟು cheap ಅಂತಾ ತೋರಿಸುತ್ತದೆ ಎಂದು ಕಿಡಿಕಾರಿದ್ದಾರೆ.

ಸರ್ಕಾರ ಮುಖ್ಯ ಕಾರ್ಯದರ್ಶಿಗೆ ದೂರು ಕೊಟ್ಟ ರೋಹಿಣಿ ಸಿಂಧೂರಿ
ಈ ಕುರಿತು ವಿಧಾನಸೌಧದಲ್ಲಿ ಮಾತನಾಡಿದ ರೋಹಿಣಿ ಸಿಂಧೂರಿ, ಸರ್ಕಾರಿ ಅಧಿಕಾರಿಗಳು,ನೌಕರರು ಮೀಡಿಯಾ ಮುಂದೆ ಬರಬಾರದು ಅಂತ ಇದೆ. ಹಾಗಾಗಿ ನಾನು ಮಾತನಾಡಿಲ್ಲ, ರೂಪ ಅವರು ಇಲ್ಲಸಲ್ಲದ ಆರೋಪ ಮಾಡಿದ್ದಾರೆ. ಸಿಎಸ್‌ಗೆ ದೂರು ಕೊಡಲು ಬಂದಿದ್ದೇನೆ,ದೂರು ನೀಡಿದ್ದೇನೆ.
ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದ್ದಾರೆ. ನಾನು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿಲ್ಲ, ನಾನು ಸಿಎಸ್‌ಗೆ ವರದಿ ನೀಡಿದ್ದೇನೆ. ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಆರೋಪ ಮಾಡಬಾರದು ಎಂದು ಹೇಳಿದರು.












Click it and Unblock the Notifications