ಬರಿದಾದ ಕೆಆರ್‍ಎಸ್, ಮಂಡ್ಯದಲ್ಲಿ ಬತ್ತಿದ ನದಿ, ಕೆರೆಗಳು
ಮಂಡ್ಯ, ಮೇ 15: ಕಾವೇರಿ ಕಣಿವೆ ವರುಣನ ಅವಕೃಪೆಗೊಳಗಾಗಿ ವಾಡಿಕೆಯ ಮಳೆಯಾಗದೆ ಕೆಆರ್‍ಎಸ್ ಭರ್ತಿಯಾಗದೆ ಹೋಗಿದ್ದರಿಂದ ಅದರ ಪರಿಣಾಮ ಮಂಡ್ಯ ಜಿಲ್ಲೆಗಾಗಿದೆ.
ಸದಾ ಹಸಿರಿನಿಂದ ಕಂಗೊಳಿಸುತ್ತಾ ರೈತರ ಬದುಕನ್ನು ಹಸನುಗೊಳಿಸಬೇಕಾಗಿದ್ದ ಜಮೀನುಗಳಲ್ಲಿ ಬರದ ಛಾಯೆ ಕಂಗೊಳಿಸುತ್ತಿದೆ. ಕೆರೆಗಳು ಒಣಗಿವೆ ನದಿಗಳು ಬತ್ತಿವೆ. [ಒಣಗಿದ ಕೆಆರ್‌ಎಸ್, ಆತಂಕದಲ್ಲಿ ಮಂಡ್ಯದ ಅನ್ನದಾತ]
ಹಣದ ವ್ಯಾಮೋಹಕ್ಕೆ ಬಿದ್ದ ಮನುಷ್ಯ ನದಿಯ ಒಡಲನ್ನು ಬಗೆದು ಮರಳನ್ನು ಹೊರತೆಗೆದು ಮಾರಾಟ ಮಾಡಿದ್ದರ ಪರಿಣಾಮವೇ ನದಿಗಳು ಒಣಗಿವೆ. ಅಷ್ಟೇ ಅಲ್ಲ ಅಂತರ್ಜಲದ ಕೊರತೆಯಿಂದ ಸುಮಾರು 159 ಕೆರೆಗಳು ಒಣಗಿ ನಿಂತಿವೆ. [ಹಿನ್ನೀರಿನಲ್ಲಿ ಹಳೆ ದೇಗುಲಗಳು ಪ್ರತ್ಯಕ್ಷ]

ಹಾಗೆ ನೋಡಿದರೆ ಮಂಡ್ಯದಲ್ಲಿ ಕಾವೇರಿ ಸೇರಿ ಐದು ನದಿಗಳು ಹರಿಯುತ್ತವೆ. ಅವುಗಳೆಂದರೆ ವೀರ ವೈಷ್ಣವಿ, ಶಿಂಷಾ, ಲೋಕಪಾವನಿ ಮತ್ತು ಹೇಮಾವತಿ ಇವು ಕಾವೇರಿಗೆ ಉಪನದಿಗಳು. ಮೊದಲೆಲ್ಲ ಈ ನದಿಗಳು ಬೇಸಿಗೆಯಲ್ಲಿ ಬತ್ತದೆ ಹರಿಯುತ್ತಿದ್ದವು. ಈ ಬಾರಿ ಈ ನದಿಗಳು ಒಣಗಿ ನಿಂತಿವೆ. [ಬಿರು ಬೇಸಿಗೆ, ಆಟದ ಮೈದಾನವಾದ ಕೆಆರ್ ಎಸ್ ಜಲಾಶಯ!]
ಕಾವೇರಿಯು ಶ್ರೀರಂಗಪಟ್ಟಣ, ಪಾಂಡವಪುರ ಮತ್ತು ಮಳವಳ್ಳಿ ತಾಲೂಕುಗಳಲ್ಲಿನ ಸಹಸ್ರಾರು ಹೆಕ್ಟೇರ್ ಪ್ರದೇಶಗಳಿಗೆ ನೀರೊದಗಿಸಿದರೆ, ನಾಗಮಂಗಲ, ಮದ್ದೂರು ಮತ್ತು ಮಳವಳ್ಳಿಯ ಜಮೀನುಗಳಿಗೆ ಶಿಂಷೆ ಅನ್ನದಾತೆ.[ಸಮೃದ್ಧ ಮಳೆಗಾಗಿ ತಲಕಾವೇರಿಯಲ್ಲಿ ವಿಶೇಷ ಪೂಜೆ]
ಉಳಿದಂತೆ ಕೆ.ಆರ್.ಪೇಟೆ ಮತ್ತು ನಾಗಮಂಗಲದಲ್ಲಿ ಹೇಮಾವತಿ, ವೀರ ವೈಷ್ಣವಿ ನಾಗಮಂಗಲ ಮತ್ತು ಮದ್ದೂರು ವ್ಯಾಪ್ತಿಗೆ, ಲೋಕಪಾವನಿಯು ನಾಗಮಂಗಲ, ಪಾಂಡವಪುರ ಮತ್ತು ಶ್ರೀರಂಗಪಟ್ಟಣದಲ್ಲಿ ಹರಿದು ರೈತರ ಬದುಕನ್ನು ಹಸನುಗೊಳಿಸುತ್ತಿದ್ದವು.

ಈ ನದಿಗಳೆಲ್ಲವೂ ತುಂಬಿ ಹರಿಯುತ್ತಿದ್ದಾಗ ಮಂಡ್ಯ ಹಸಿರಿನಿಂದ ನಳನಳಿಸುತ್ತಿತ್ತು. ಈ ಬಾರಿ ವೀರ ವೈಷ್ಣವಿ, ಲೋಕಪಾವನಿ ನದಿಗಳು ಬತ್ತಿವೆ. [ಬಕ್ಕ ಬರಿದಾದ ಕೆಆರ್‌ಎಸ್, ಕೊಡಗಿನಲ್ಲಿ ಮಳೆ ಸಿಂಚನ]
ಇದಕ್ಕೆಲ್ಲ ಈ ನದಿಗಳ ಒಡಲು ಬಗೆದು ಹೊರಕ್ಕೆ ಮರಳು ತೆಗೆಯುತ್ತಿರುವುದೇ ಕಾರಣ ಎಂದರೆ ತಪ್ಪಾಗಲಾರದು. ಕೆಲವರಿಗೆ ನದಿ ಬತ್ತಿರುವುದು ಇನ್ನಷ್ಟು ಅನುಕೂಲವೇ ಆಗಿದ್ದು, ಫಿಲ್ಟರ್ ಮರಳು ದಂಧೆಗೆ ಇದರಿಂದ ಸಹಕಾರಿಯಾಗಿದೆ.
ಪ್ರಸಕ್ತ ವರ್ಷದ ಬರ ಜನತೆಗೆ ತಕ್ಕ ಪಾಠ ಕಲಿಸಿದೆ. ಇನ್ನು ಮುಂದೆಯಾದರೂ ಜನ ಎಚ್ಚೆತ್ತುಕೊಂಡು ನದಿಯಿಂದ ಮರಳು ತೆಗೆಯುವುದನ್ನು ತಡೆಗಟ್ಟಬೇಕು. ಅಷ್ಟೇ ಅಲ್ಲ ಮಳೆಗಾಲದಲ್ಲಿ ವ್ಯರ್ಥವಾಗಿ ಹರಿದು ಹೋಗುವ ನದಿ ನೀರನ್ನು ಸುತ್ತಮುತ್ತಲ ಕೆರೆಗಳಿಗೆ ತುಂಬಿಸಿ ಅಂತರ್ಜಲ ಮಟ್ಟವನ್ನು ಹೆಚ್ಚಿಸುವಂತೆ ಮಾಡಬೇಕು. ಆದರೆ ಅದು ಸಾಧ್ಯವಾಗುತ್ತಾ ಎನ್ನುವುದೇ ಸದ್ಯದ ಪ್ರಶ್ನೆಯಾಗಿದೆ.
-
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
ಶೃಂಗೇರಿ ಮಠದಿಂದ ಶಾಲಾ ಮಕ್ಕಳಿಗೆ ಸುವರ್ಣಾವಕಾಶ: 'ರಾಮಾಯಣ ಪರೀಕ್ಷೆ' ಬರೆದು 50 ಸಾವಿರ ರೂ. ನಗದು ಗೆಲ್ಲಿ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
ಕರ್ನಾಟಕ PGCET 2026 ಅಧಿಸೂಚನೆ ಪ್ರಕಟ: ಎಂಬಿಎ ಸೇರಿ ವಿವಿಧ ಸ್ನಾತಕೋತ್ತರ ಪದವಿ ಪ್ರವೇಶಾತಿಗೆ ಮಾರ್ಚ್ 23 ರಿಂದ ಅರ್ಜಿ ಆಹ್ವಾನ -
ವಿಶ್ವಮಾತೆ ಎನ್ನುತ್ತಾ ಶ್ರೀಚಾಮುಂಡೇಶ್ವರಿಯ ಕನ್ನಡ ಹಾಡು ಹಂಚಿಕೊಂಡ ಪ್ರಧಾನಿ ಮೋದಿ -
ಮಾರ್ಚ್ 21ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ












Click it and Unblock the Notifications