'ಸಿದ್ದರಾಮಣ್ಣನವರೇ ಯಡಿಯೂರಪ್ಪ ಅವರ ಮೇಲೆ ಆರೋಪ ಬಂದಾಗ ಏನು ಮಾಡಿದ್ರಿ?'

ವಿಜಯಪುರ, ಸೆಪ್ಟೆಂಬರ್‌ 26: ಸನ್ಮಾನ್ಯ ಸಿದ್ದರಾಮಣ್ಣ ನವರೇ ಯಡಿಯೂರಪ್ಪ ಅವರ ಮೇಲೆ ಆರೋಪ ಬಂದಾಗ ತನಿಖೆಗೆ ಹೋಗಬೇಕು. ರಾಜೀನಾಮೆ ಕೊಡಬೇಕೆಂದು ಆಗ್ರಹ ಮಾಡಿದ್ರಿ, ಅವರಿಗೆ ಒಂದು ನ್ಯಾಯ, ನಿಮಗೊಂದು ನ್ಯಾಯನಾ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಅವರು ಪ್ರಶ್ನಿಸಿದ್ದಾರೆ.

ಈ ಕುರಿತು ವಿಜಯಪುರದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ನಾವು ಪಾದಯಾತ್ರೆ ಮಾಡಿದ್ದು ವ್ಯಕ್ತಿ ಪರವಾಗಿ ಅಲ್ಲ.? ದ್ವೇಷ ದಿಂದ ಮಾಡಿರುವ ಪಾದಯಾತ್ರೆ ಅಲ್ಲ.? ರಾಜ್ಯದ ಸಂಪತ್ತು ಲೂಟಿ ಮಾಡಿದ್ದಾರೆ ಇದರ ಬಗ್ಗೆ ಜನರಿಗೆ ಅರಿವು ಮೂಡಿಸುವ ಕೆಲಸ ಮಾಡಿದ್ದೀವಿ, ಇವತ್ತು ಸಿದ್ದರಾಮಯ್ಯ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಟ್ಟು, ತನಿಖೆಗೆ ಸಹಕರಿಸಿ ಎಂದು ನಿಖಿಲ್ ಕುಮಾರಸ್ವಾಮಿ ಅವರು ಆಗ್ರಹಿಸಿದರು.

Resign Moral Responsibility And Cooperate With Investigation Said Nikhil Kumaraswamy

ಸಿದ್ದರಾಮಯ್ಯ ಅವರು ಹೇಳಿಕೆಗೆ ಪ್ರತಿಕ್ರಿಯೆಸಿದ ಅವರು, ನರಸಿಂಹ ಮೈನಿಂಗ್ ಇದೆಲ್ಲಾ ಹಳೆ ಕಥೆ. ಈ ಹಳೆ ಕಥೆ ಹಿಡಿದುಕೊಂಡು ತಿರುಚುತ್ತಿದ್ದಾರೆ. ಅವರ ಮೇಲೆ ಬಂದಿರುವ ಆರೋಪವನ್ನು ಮರೆಮಾಚುವ ಕೆಲಸ ಮಾಡುತ್ತಿದ್ದಾರೆ.ಸಿದ್ದರಾಮಯ್ಯ ಜವಾಬ್ದಾರರಿದ್ದಾರೆ. ರಾಜ್ಯದ ಜನತೆ ಕೇಳುತ್ತಿರುವ ಪ್ರಶ್ನೆಗೆ ಉತ್ತರಿಸಬೇಕು ಎಂದರು.

ಕಾಂಗ್ರೆಸ್ ನಾಯಕರಿಗೆ ಅವರ ಕಾಲದಲ್ಲಿ ಏನಾಯ್ತು.? ಇವರ ಮೇಲೆ ಸುಳ್ಳು ದಾಖಲೆ ಹುಟ್ಟಕುವುದು ಎಂದು ಸಮಯ ಕಳೆದಿದ್ದಾರೆ. 136 ಶಾಸಕರನ್ನ ಗೆಲ್ಲಿಸಿ ಅಧಿಕಾರ ಕೊಟ್ಟಿದ್ದಾರೆ. ಪಾದಯಾತ್ರೆ ಯಶಸ್ಸು ಇವರಿಗೆ ಸಹಿಸಲಾಗುತ್ತಿಲ್ಲ.ಆಡಳಿತ ಪಕ್ಷ ವಿರೋಧ ಪಕ್ಷಕ್ಕೆ ಪ್ರಶ್ನೆ ಕೇಳುವಂತ ಸನ್ನಿವೇಶ ಈ ರಾಜ್ಯ ದ ಇತಿಹಾಸದಲ್ಲಿ ಮೊದಲು ಎಂದು ನಿಖಿಲ್‌ ಕುಮಾರಸ್ವಾಮಿ ಕಿಡಿಕಾರಿದರು.

ದೇವೇಗೌಡರು ಪ್ರಧಾನ ಮಂತ್ರಿಗಳಾದ ಸಂದರ್ಭದಲ್ಲಿ ಆಲಮಟ್ಟಿ ಜಲಾಶಯಕ್ಕೆ ಸಾವಿರ ಕೋಟಿ ಅನುದಾನ ಕೊಟ್ಟಿರುವುದು ಇವತ್ತಿಗೂ ಮರೆಯುವುದಕ್ಕೆ ಆಗಲ್ಲ, ಈ ಭಾಗದ ಜನತೆಯ ಹೃದಯದಲ್ಲಿ ದಟ್ಟವಾಗಿ ನಿಂತಿದೆ ಎಂದರು.ಇವೆಲ್ಲವನ್ನು ನೋಡಿದಾಗ ಇಲ್ಲಿರುವ 8 ವಿಧಾನಸಭಾ ಕ್ಷೇತ್ರ ಗಳಲ್ಲಿ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಜನತಾದಳ ಪಕ್ಷ ಅತ್ಯಂತ ಪ್ರಭಾವ ಶಾಲಿಯಾಗಿ ಮುಂಬರುವ ಚುನಾವಣೆಯಲ್ಲಿ ನಾಲ್ಕಕ್ಕೆ ನಾಲ್ಕು ಕ್ಷೇತ್ರಗಳನ್ನು ಗೆಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜಮೀರ್ ಅಹಮದ್ ಬಳ್ಳಾರಿ ಉಸ್ತುವಾರಿ ಎನ್ನುವ ಕಾರಣಕ್ಕೆ ನಟ ದರ್ಶನ್ ಬಳ್ಳಾರಿ ಜೈಲಿಗೆ ಶಿಫ್ಟ್ ವಿಚಾರಕ್ಕೆ ಮಾತನಾಡಿದ ಅವರು ; ಕಾನೂನಿಗಿಂತ ದೊಡ್ಡವರು ಯಾರು ಇಲ್ಲ. ಎಷ್ಟೇ ಬಲಿಷ್ಠ, ಪ್ರಭಾವಿಗಳಿದ್ದರು ಈ ನೆಲದ ಕಾನೂನಿಗೆ ತಲೆಬಾಗಬೇಕು. ಅಂತಿಮವಾಗಿ ಕಾನೂನು ಇದೆ.ಕೋರ್ಟ್ ಇದೆ ಸೂಕ್ತ ಕ್ರಮ ಕೈಗೊಳ್ತಾರೆ ಎಂದು ನಿಖಿಲ್ ಕುಮಾರಸ್ವಾಮಿ ಅವರು ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+