RDPR Recruitment 2023: ಬೆಂಗಳೂರಿನಲ್ಲೇ ಸರ್ಕಾರಿ ಉದ್ಯೋಗ, ಅರ್ಜಿ ಸಲ್ಲಿಕೆಗೆ ಮಾಹಿತಿ ತಿಳಿಯಿರಿ
ಬೆಂಗಳೂರು, ಜೂನ್ 09: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಕರ್ನಾಟಕ (RDPR) ತನ್ನಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಪ್ರಕ್ರಿಯೆ ಆರಂಭಿಸಿದೆ. ಈ ಸಂಬಂಧ ಅರ್ಹ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸುವಂತೆ ಮನವಿ ಮಾಡಿದೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವ್ಯಾಪ್ತಿಯಲ್ಲಿ ವಿವಿಧ ಸ್ಟೇಟ್ ಕ್ವಾಲಿಟಿ ಮಾನಿಟರ್, ಕ್ವಾಲಿಟಿ ಮಾನಿಟರ್ ಹುದ್ದೆಗಳು ಖಾಲಿ ಇವೆ. ಈ ಹುದ್ದೆಗಳಿಗೆ ಅರ್ಹ ಆಸಕ್ತರು ಜೂನ್ 15ರೊಳಗೆ ಅರ್ಜಿ ಸಲ್ಲಿಸುವಂತೆ ಇಲಾಖೆ ಅಧಿಸೂಚನೆಯಲ್ಲಿ ತಿಳಿಸಿದೆ.

ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಇ-ಮೇಲ್ ಮೂಲಕ ಅರ್ಜಿ ಸಲ್ಲಿಸಬೇಕು. ಈ ಮೂಲಕ ನೀವು ಅಂದುಕೊಂಡಂತೆ ಸರ್ಕಾರ ಉದ್ಯೋಗ ಪಡೆದುಕೊಳ್ಳಬಹುದು. ಆಯ್ಕೆಯಾದವರಿಗೆ ಬೆಂಗಳೂರಿನಲ್ಲಿ ಪೋಸ್ಟಿಂಗ್ ಸಿಗಲಿದೆ.
ಅರ್ಹರು ಅರ್ಜಿ ಸಲ್ಲಿಸುವ ಮುನ್ನ ಹುದ್ದೆಗಳ ಸಂಪೂರ್ಣ ಮಾಹಿತಿ, ವೇತನ, ವಯೋಮಿತಿ, ಅರ್ಜಿ ಸಲ್ಲಿಕೆ ವಿಧಾನ ಸೇರಿದಂತೆ ಅಗತ್ಯ ಮಾಹಿತಿ ಇಲ್ಲಿ ತಿಳಿಯಬಹುದು. ಅಧಿಸೂಚನೆಯನ್ನು ಪೂರ್ತಿ ಓದಿಕೊಂಡೆ ಅರ್ಜಿ ಸಲ್ಲಿಸದರೆ ಒಳಿತು.
ಹುದ್ದೆಯ ಮಾಹಿತಿ
ಹುದ್ದೆ ಹೆಸರು- ಸ್ಟೇಟ್ ಕ್ವಾಲಿಟಿ ಮಾನಿಟರ್, ಕ್ವಾಲಿಟಿ ಮಾನಿಟರ್
ಶೈಕ್ಷಣಿಕ ಅರ್ಹತೆ- ಎಂಜಿನಿಯರಿಂಗ್
ಉದ್ಯೋಗದ ಸ್ಥಳ- ಬೆಂಗಳೂರು
ಅರ್ಜಿ ಸಲ್ಲಿಕೆ ಕೊನೆ ದಿನ- 2023 ಜೂನ್ 15

ಹುದ್ದೆಗೆ ಬೇಕಾದ ಶೈಕ್ಷಣಿಕ ಅರ್ಹತೆ ವಿವರ
ಸ್ಟೇಟ್ ಕ್ವಾಲಿಟಿ ಮಾನಿಟರ್ (ಸಿವಿಲ್) ಹುದ್ದೆಗೆ ಡಿಪ್ಲೊಮಾ, ಸಿವಿಲ್ ಎಂಜಿನಿಯರಿಂಗ್ನಲ್ಲಿ ಪದವಿ ಮಾಡಿರಬೇಕು.ಸ್ಟೇಟ್ ಕ್ವಾಲಿಟಿ ಮಾನಿಟರ್ (ಕೃಷಿ)- ಕೃಷಿ ವಿಜ್ಞಾನದಲ್ಲಿ ಪದವಿ, ಸ್ಟೇಟ್ ಕ್ವಾಲಿಟಿ ಮಾನಿಟರ್ (ತೋಟಗಾರಿಕೆ)- ಕೃಷಿ/ ತೋಟಗಾರಿಕೆ ವಿಜ್ಞಾನದಲ್ಲಿ ಪದವಿ, ಸ್ಟೇಟ್ ಕ್ವಾಲಿಟಿ ಮಾನಿಟರ್ (ಫಾರೆಸ್ಟ್ರಿ)- ಕೃಷಿ/ಫಾರೆಸ್ಟ್ರಿ ವಿಜ್ಞಾನದಲ್ಲಿ ಸೈನ್ಸ್ನಲ್ಲಿ ಪದವಿ ಪೂರ್ಣಗೊಳಿಸಬೇಕೆಂದು ಅಧಿಸೂಚನೆಯಲ್ಲಿ ಇಲಾಖೆ ತಿಳಿಸಿದೆ.
ವಯಸ್ಸು
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಕರ್ನಾಟಕ ನೇಮಕಾತಿ ಅಧಿಸೂಚನೆ ಪ್ರಕಾರ, ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳ ವಯಸ್ಸು ಗರಿಷ್ಠ 65 ವರ್ಷ ಮೀರಿರಬಾರದು. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗಿದೆ.
ಆಯ್ಕೆ ಪ್ರಕ್ರಿಯೆ ಹೇಗೆ
ಅರ್ಜಿ ಸಲ್ಲಿಕೆ ಬಳಿಕ ಅಭ್ಯರ್ಥಿಗಳು ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು. ಅಲ್ಲಿ ಆಯ್ಕೆಯಾದವರಿಗೆ ನೇರವಾಗಿ ಸಂದರ್ಶನ ಇರುತ್ತದೆ. ಉತ್ತೀರ್ಣರಾದವರಿಗೆ ಬೆಂಗಳೂರಿನಲ್ಲೇ ಪೋಸ್ಟಿಂಗ್ ದೊರೆಯಲಿದೆ ಎಂದು ಇಲಾಖೆ ಅಧಿಸೂಚನೆ ತಿಳಿಸಿದೆ. ವೇತನ ಎಷ್ಟೆಂದು ನಿಗದಿ ಆಗಿಲ್ಲ.
ಅರ್ಜಿ ಸಲ್ಲಿಕೆ ಹೇಗೆ
ಆಸಕ್ತ ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಕೇಳಿರುವ ಎಲ್ಲ ದಾಖಲೆಗಳ ಸಹಿತ ಇ-ಮೇಲ್ ಐಡಿ [email protected] ಗೆ ಜೂನ್ 15ರೊಳಗೆ ಕಳುಹಿಸಬೇಕು. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 080-22879464/ 080-22342163 ಗೆ ಸಂಪರ್ಕಿಸಬಹುದು.












Click it and Unblock the Notifications