Ration Card: ಪಡಿತರ ಚೀಟಿ ಪಟ್ಟಿ 2025 ಬಿಡುಗಡೆ: ನಿಮ್ಮ ಹೆಸರು ಪರಿಶೀಲಿಸುವುದೇಗೆ ತಿಳಿಯಿರಿ
Ration Card: ಪ್ರಮುಖ ದಾಖಲೆಗಳಲ್ಲಿ ರೇಷನ್ ಕಾರ್ಡ್ ಕೂಡ ಒಂದಾಗಿದೆ. ಈಗಾಗಲೇ ರಾಜ್ಯದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ಹೊಸ ಕಾರ್ಡ್‌ಗೆ ಅರ್ಜಿ ಸಲ್ಲಿಕೆಗೆ ಅವಕಾಶ ಕಲ್ಪಿಸಿತ್ತು. ಇದೀಗ ಮತ್ತೆ ನಿಲ್ಲಿಸಿದೆ. ಈ ನಡುವೆಯೇ ಇದೀಗ ಗ್ರಾಮಾವಾರು ಪಡಿತರ ಚೀಟಿ ಪಟ್ಟಿ ಬಿಡುಗಡೆ ಮಾಡಲಾಗಿದೆ. ಹಾಗಾದ್ರೆ ಇದರಲ್ಲಿ ನಿಮ್ಮ ಹೆಸರು ಇದೆಯೇ ಎನ್ನುವುದನ್ನು ಪರಿಶೀಲಿಸುವುದೇಗೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ರಾಜ್ಯದಲ್ಲಿ ಹಿಂದಿನಿಂದಲೂ ಸಹ ಅರ್ಹರಲ್ಲದವರು ಸಹ ರೇಷನ್ ಕಾರ್ಡ್ ಹೊಂದಿದ್ದಾರೆ ಎನ್ನುವ ಆರೋಪಗಳು ಕೇಳಿಬಂದಿದ್ದವು. ಆದರೆ, ಇದೀಗ ಎಚ್ಚೆತ್ತ ಸರ್ಕಾರ ಇದಕ್ಕೆ ಬ್ರೇಕ್ ಹಾಕುವ ಕೆಲಸ ಮಾಡುತ್ತಿದೆ. ಈ ಮೂಲಕ ಅರ್ಹರಿಗೆ ಅನುಕೂಲಕ ಮಾಡಿಕೊಡಲು ಹೊರಟಿದೆ. ಈ ನಡುವೆಯೇ ಈಗ ಗ್ರಾಮವಾರು ಪಡಿತರ ಚೀಟಿ ಪಟ್ಟಿ 2025 ಬಿಡುಗಡೆ ಮಾಡಲಾಗಿದೆ. ಇದರಲ್ಲಿ ನಿಮ್ಮ ಹೆಸರು ಸೇರಿದೆಯೆ ಎಂಬುದನ್ನು ಸುಲಭವಾಗಿ ಪರಿಶೀಲಿಸುವ ವಿಧಾನ ಇಲ್ಲಿದೆ ನೋಡಿ.

ಹತ್ತಿರದ ಗ್ರಾಮ ಪಂಚಾಯತ್ ಅಥವಾ ನ್ಯಾಯಬೆಲೆ ಅಂಗಡಿಗೆ ಹೋಗದೇ ಅಧಿಕೃತ ವೆಬ್‌ಸೈಟ್ ಮೂಲಕ ಪಟ್ಟಿಯನ್ನು ಪರಿಶಿಲನೆ ಮಾಡಬಹುದು. ಹಾಗೆಯೇ ಡಿಬಿಟಿ ಸ್ಥಿತಿ ಹಾಗೂ ತಿದ್ದುಪಡಿ ಅರ್ಜಿಯ ಸ್ಥಿತಿಯನ್ನೂ ಹಂತ ಹಂತವಾಗಿ ಪರಿಶೀಲಿಸಬಹುದು. ಒಂದು ವೇಳೆ ಈ ವೆಬ್‌ಸೈಟ್ ಕಾರ್ಯನಿರ್ವಹಿಸದಿದ್ದರೆ ಹತ್ತಿರದ ಪಂಚಾಯತ್ ಕಚೇರಿಗೆ ಬೇಟಿ ನೀಡಿ ಮಾಹಿತಿ ಪಡೆಯಬಹುದಾಗಿದೆ.
ಪಡಿತರ ಚೀಟಿ ಡೌನ್‌ಲೋಡ್ ಮಾಡುವ ವಿಧಾನ
* Ahara Karnataka ಪೋರ್ಟಲ್‌ಗೆ ಭೇಟಿ ನೀಡಿ
* E-Services-E-Ration Card-Download Ration Card ಆಯ್ಕೆ ಮಾಡಿ
* ನಿಮ್ಮ ಪಡಿತರ ಚೀಟಿ ಸಂಖ್ಯೆಯನ್ನು ನಮೂದಿಸಿ
* ಆಧಾರ್ ಜೋಡನೆ ಮಾಡಿದ ಮೊಬೈಲ್‌ಗೆ ಒಟಿಪಿ ಬರಲಿದೆ
* ಆಗ ಪಿಡಿಎಫ್‌ನಲ್ಲಿ ಡೌನ್‌ಲೋಡ್ ಮಾಡಿ
ಡಿಬಿಟಿ ಸ್ಥಿತಿ ಪರಿಶೀಲಿಸುವುದೇಗೆ?
* Ahara Karnataka ವೆಬ್‌ಸೈಟ್‌ಗೆ ಹೋಗಿ
* E-Status-DBT Status ಆಯ್ಕೆ ಮಾಡಿ
* ನಿಮ್ಮ ವಿಭಾಗ ಅಂದರೆ ಯಾವ ಜಿಲ್ಲೆ ಎಂದು ಆಯ್ಕೆ ಮಾಡಿ
* ಪಡಿತರ ಚೀಟಿ ಸಂಖ್ಯೆ ನಮೂದಿಸಿದ ಬಳಿ ವಿವರ ಲಭ್ಯವಾಗಲಿವೆ
* DBT ಮೂಲಕ ಬಿಪಿಎಲ್ ಕುಟುಂಬಗಳಿಗೆ ನೀಡುವ ಯಾವುದೇ ಯೋಜನೆಯ ಹಣ ಈ ಮೂಲಕ ತಲುಪುತ್ತದೆ
ರೇಷನ್ ಕಾರ್ಡ್ ತಿದ್ದುಪಡಿ ಅರ್ಜಿ ಸ್ಥಿತಿ ಪರಿಶೀಲಿಸುವ ವಿಧಾನ
* ಅಧಿಕೃತ ವೇಬ್‌ಸೈಟ್‌ಗೆ ಭೇಟಿ ನೀಡಿ
* New/Existing RC Request Status ಆಯ್ಕೆ ಮಾಡಿ
* ನಿಮ್ಮೆ ಜಿಲ್ಲೆಯನ್ನು ಆಯ್ಕೆ ಮಾಡಿ
* ಒಟಿಪಿ ಅಥವಾ No-OTP ಆಯ್ಕೆ ಮಾಡಿ
* ಆರ್‌ಸಿ ಸಂಖ್ಯೆ ನಮೂದಿಸಿ ನಿಮ್ಮ ತಿದ್ದುಪಡಿ ಸ್ಥಿತಿಯನ್ನು ಪರಿಶೀಲಿಸಬಹುದು
ಪಡಿತರ ಚೀಟಿ ಪ್ರಮುಖ ದಾಖಲೆಗಳಲ್ಲಿ ಒಂದಾಗಿದ್ದು, ಇದನ್ನು ಪರೀ ರೇಷನ್ ಪಡೆಯಲಷ್ಟೇ ಬಳಸುವುದಿಲ್ಲ. ಯಾವುದೇ ಸರ್ಕಾರಿ ಸೌಲಭ್ಯಗಳಿಗೆ ಅರ್ಜಿ ಸಲ್ಲಿಕೆಗೆ ಕಡ್ಡಾಯವಾಗಿ ಬೇಕೇ ಬೇಕಾಗುತ್ತದೆ. ಇದರಲ್ಲೂ ಹಲವು ವಿಧಗಳಿವೆ. ಅದರಲ್ಲೂ ಎಪಿಎಲ್ ಹಾಗೂ ಬಿಪಿಎಲ್ ಕಾರ್ಡ್‌ಗಳನ್ನು ಹೊಂದಿದವರೇ ಹೆಚ್ಚಾಗಿದ್ದಾರೆ. ಬಡತನದ ರೇಖೆಗಿಂತ ಕೆಳಗಿರುವರರಿಗೆ ಅನುಕೂಲ ಆಗಲಿ ಎನ್ನುವ ಉದ್ದೇಶದಿಂದ ಅವರಿಗೆ ಬಿಪಿಎಲ್ ಕಾರ್ಡ್‌ಗಳನ್ನು ನೀಡಲಾಗುತ್ತದೆ. ಇದನ್ನು ಬರೀ ಪಡಿತರ ಅಷ್ಟೇ ಅಲ್ಲದೆ, ಆಸ್ಪತ್ರೆ ಬಿಲ್‌ನಲ್ಲಿ ವಿನಾಯಿತಿ ಸೇರಿದಂತೆ ಸೇರಿದಂತೆ ಹಲವು ಸರ್ಕಾರಿ ಸೌಲಭ್ಯಗಳನ್ನು ಬಳಸಿಕೊಳ್ಳಲಾಗುತ್ತದೆ. ಆದ್ದರಿಂದ ಇದನ್ನು ಬಡವರಿಗೆ ನೀಡಲಾಗುತ್ತದೆ.












Click it and Unblock the Notifications