ರಾಜ್ಯದೆಲ್ಲೆಡೆ ಭಕ್ತಿ ಭಾವದ ಈದ್-ಉಲ್-ಫಿತ್ರ್ ಆಚರಣೆ
ಬೆಂಗಳೂರು, ಜೂನ್ 05: ರಾಜ್ಯದೆಲ್ಲೆಡೆ ಇಂದು ಸಂಭ್ರಮದ ಈದ್-ಉಲ್-ಫಿತ್ರ್ ಅನ್ನು ಮುಸ್ಲಿಂ ಸಮುದಾಯದವರು ಭಕ್ತಿ-ಭಾವದಿಂದ ಆಚರಣೆ ಮಾಡಿದರು.
ಒಂದು ತಿಂಗಳ ಕಾಲ ಪವಿತ್ರ ರಂಜಾನ್ ಉಪವಾಸ ವೃತ ಪೂರೈಸಿರುವ ಮುಸ್ಲಿಂ ಬಾಂಧವರು ಇಂದು ಬೆಳಿಗ್ಗೆಯೇ ಮಸೀದಿಗಳಿಗೆ ತೆರಳಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ, ಪರಸ್ಪರ ಶುಭ ಕೋರಿಕೊಂಡರು.
ಬಹಳ ಅಪರೂಪವಾಗಿ ರಾಜ್ಯದೆಲ್ಲೆಡೆ ಇಂದು ಒಂದೇ ದಿನ ಈದ್-ಉಲ್ ಫಿತ್ರ್ ಅನ್ನು ಆಚರಣೆ ಮಾಡಲಾಗುತ್ತಿದೆ. ನಿನ್ನೆ ರಾತ್ರಿ ಚಂದ್ರನ ದರ್ಶನವೂ ರಾಜ್ಯದೆಲ್ಲೆಡೆ ಒಂದೇ ಬಾರಿ ಆಗಿದ್ದರಿಂದ ಇಂದು ಎಲ್ಲೆಡೆ ಒಟ್ಟಿಗೆ ಆಚರಣೆ ಮಾಡಲಾಗುತ್ತಿದೆ.

ಸಾಮಾನ್ಯವಾಗಿ ಕರಾವಳಿಯ ಮುಸ್ಲಿಂರು ಕೇರಳದವರೊಂದಿಗೆ ಒಂದು ದಿನ ಮುಂಚಿತವಾಗಿ ರಂಜಾನ್ ಆಚರಿಸುತ್ತಿದ್ದರು. ಆದರೆ ಈ ಬಾರಿ ಚಂದ್ರ ದರ್ಶನದಿಂದಾಗಿ ಒಂದೇ ದಿನ ರಾಜ್ಯದೆಲ್ಲೆಡೆ ರಂಜಾನ್ ಆಚರಿಸುವಂತಾಗಿದೆ.
ರಂಜಾನ್ ಹಬ್ಬಕ್ಕೆ ಸಿಎಂ ಕುಮಾರಸ್ವಾಮಿ, ವಿಪಕ್ಷ ನಾಯಕ ಯಡಿಯೂರಪ್ಪ, ಮಾಜಿ ಸಿಎಂ ಸಿದ್ದರಾಮಯ್ಯ ಮುಂತಾದ ರಾಜಕೀಯ ಮುಖಂಡರು, ಸಿನಿಮಾ ನಟರು ಸಾಮಾಜಿಕ ಜಾಲತಾಣದ ಮೂಲಕ ಶುಭಾಶಯಗಳನ್ನು ಕೋರಿದ್ದಾರೆ.











Click it and Unblock the Notifications