Ramya: ಮಧ್ಯರಾತ್ರಿ 3ಕ್ಕೆ ಪಟಾಕಿ ಸದ್ದು, ಸುಪ್ರೀಂ ಆದೇಶ ನೆನಪಿಸಿದ ನಟಿ ರಮ್ಯಾ, ಶಿವಮೊಗ್ಗ ದಸರಾ ಆನೆ ಸಂಕಷ್ಟಕ್ಕೆ ಕಳವಳ!

ಬೆಂಗಳೂರು: ಸುಪ್ರೀಂ ಕೋರ್ಟ್‌ ಆದೇಶವಿದ್ದರೂ ಸಹಿತ ರಾತ್ರಿಯಿಡೀ ಪಟಾಕಿ ಸಿಡಿಸಿ, ಧ್ವನಿ ವರ್ಧಕ ಬಳಸಿ ಇತರರಿಗೆ ತೊಂದರೆ ಮಾಡಿದ್ದಕ್ಕೆ ಮಾಜಿ ಸಂಸದೆ ಮತ್ತು ನಟಿ ರಮ್ಯಾ ಅವರು ಕಿಡಿ ಕಾರಿದ್ದಾರೆ. ಅಲ್ಲದೇ ದಸರಾ ಹಿನ್ನೆಲೆಯಲ್ಲಿ ಶಿವಮೊಗ್ಗದಲ್ಲಿ ಜಂಬೂ ಸವಾರಿ ನಡೆಯುವಾಗ ನಡೆದ ಘಟನೆಯ ಬಗ್ಗೆ, ಗಾಯಗೊಂಡ ಆನೆಯ ಆರೈಕೆ ಮಾಡದೇ ಮೆರವಣಿಗೆ ಮಾಡಲಾಗಿದೆ ಎಂದು ಅವರು ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ.

ಇಂದು ಗುರುವಾರ ಎಕ್ಸ್ ‌ಪೋಸ್ಟ್ ನಲ್ಲಿ ಪಟಾಕಿ ಹಾಗೂ ಕುಂಟುತ್ತಿರುವ ಆನೆ ವಿಡಿಯೋ ಪೋಸ್ಟ್ ಮಾಡಿರುವ ನಟಿ ರಮ್ಯಾ ಅವರು, ಮೇಲಿನ ಎರಡು ಘಟನೆಗಳ ಬಗ್ಗೆ ಅಸಮಾಧಾನ ಹೊರ ಹಾಕಿದ್ದಾರೆ. 'ಬೆಳಗಿನ ಜಾವ 3 ಗಂಟೆ ಸಮೀಪಿಸುತ್ತಿದೆ. ಬೆಂಗಳೂರಿನ ಫನ್ ವರ್ಲ್ಡ್ ನಲ್ಲಿ ಇನ್ನೂ ಪಟಾಕಿಗಳನ್ನು ಸಿಡಿಸಲಾಗುತ್ತಿದೆ. ಜೋರಾಗಿ ಸಂಗೀತ ಕೇಳಿ ಬರುತ್ತಿದೆ. ಸುಪ್ರೀಂ ಕೋರ್ಟ್ ರಾತ್ರಿ 10 ರಿಂದ ಬೆಳಿಗ್ಗೆ 6 ರವರೆಗೆ ಪಟಾಕಿಗಳನ್ನು ಸಿಡಿಸುವುದನ್ನು ನಿಷೇಧಿಸಿದೆ' ಹೀಗಿದ್ದರೂ ಇದಕ್ಕೆಲ್ಲಿದೆ ಬ್ರೇಕ್ ಎಂದು ಪ್ರಶ್ನಿಸಿದ್ದಾರೆ.

Ramya Slams

ವಿಶೇಷ ಅನುಮತಿ ಪಡೆದವರು ಸಹಿತ ಮಧ್ಯರಾತ್ರಿವರೆಗೆ ಧ್ವನಿವರ್ಧಕಗಳು ಮೊಳಗಿಸಲು ಅವಕಾಶ ಇರುವುದಿಲ್ಲ. ಕೆಲವು ಸಂದರ್ಭಗಳಲ್ಲಿ ಸ್ವಲ್ಪ ನಮ್ಯತೆ ಬೇಕು ಎಂದು ನನಗೆ ತಿಳಿದಿದೆ, ಆದರೆ ಇಷ್ಟು ತಡರಾತ್ರಿವರೆಗೆ ಅಲ್ಲ. ಫನ್‌ ವರ್ಲ್ಡ್ ಸುತ್ತಮುತ್ತ ಆಸ್ಪತ್ರೆಗಳಿವೆ, ಮನೆಗಳಿವೆ. ಅಲ್ಲಿ ಎಲ್ಲಡೆ ಹಿರಿಯ ನಾಗರಿಕರು ಮತ್ತು ಮಕ್ಕಳು ವಾಸಿಸುತ್ತಿದ್ದಾರೆ. ಈ ರೀತಿಯ ಚಟುವಟಿಕೆಗಳಿಂದ ನಿವಾಸಿಗಳಿಗೆ ತೊಂದರೆ ಆಗುತ್ತದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಜೊತೆಗೆ ಅವರು ಕ್ರಮ ಕೈಗೊಳ್ಳುವಂತೆ ಬೆಂಗಳೂರು ನಗರ ಪೊಲೀಸರು ಹಾಗೂ ಬೆಂಗಳೂರು ಉತ್ತರ ಉಪ ಪೊಲೀಸ್ ಆಯುಕ್ತರಿಗೆ ತಮ್ಮ ಪೋಸ್ಟ್ ಟ್ಯಾಗ್ ಮಾಡಿ ಈ ಬಗ್ಗೆ ಗಮನಿಸುವಂತೆ ಕೋರಿದ್ದಾರೆ.

ಶಿವಮೊಗ್ಗ ದಸರಾ ಘಟನೆ: ಆನೆಗೆ ಆರೈಕೆಯ ಅಗತ್ಯವಿತ್ತು! ರಮ್ಯಾ

ಒಂದೆಡೆ ಮೈಸೂರು ದಸರಾ ಅದ್ಧೂರಿಯಾಗಿ ನೆರವೇರಿತು. ಇನ್ನೊಂದೆಡೆ ಮಲೆನಾಡಿನ ಶಿವಮೊಗ್ಗದಲ್ಲಿ ದಸರಾ ಹಿನ್ನೆಲೆಯಲ್ಲಿ ನಡೆದ ಜಂಬೂ ಸವಾರಿ ವೇಳೆ ಆನೆಯೊಂದು ದಿಕ್ಕಾಪಾಲಾಗಿ ಓಡಾಡಿದೆ. ಈ ವೇಳೆ ಅಂಬಾರಿ ಕೆಳಗೆ ಬಿದ್ದಿದ್ದು, ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ಘಟನೆ ಸಂಬಂಧಿಸಿದಂತೆ ಪ್ರಾಣಿ ಪ್ರಿಯೆಯು ಆಗಿರುವ ನಟಿ ರಮ್ಯಾ ಅವರು ಒಂದಷ್ಟು ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ. 'ಈ ಆನೆ ಸೋಮಣ್ಣ, ಶಿವಮೊಗ್ಗದಲ್ಲಿ ಮೆರವಣಿಗೆಗಾಗಿ ಕೆಲವು ದಿನಗಳ ಹಿಂದಷ್ಟೇ ಶಿಬಿರದಿಂದ ತಂದ ಆನೆ. ಜನರಿಂದ ತುಂಬಿದ್ದ ಕಿರಿದಾದ ಬೀದಿಗಳಲ್ಲಿ ಅವನನ್ನು ಕರೆದೊಯ್ಯಲಾಯಿತು. ಭಯಭೀತರಾಗಿ ಮತ್ತು ಆತಂಕದಿಂದ ಅವನು ಹುಚ್ಚನಂತೆ ಓಡಿದ್ದಾನೆ. ಅದೃಷ್ಟವಶಾತ್ ಈ ಘಟನೆಯಲ್ಲಿ ಯಾರಿಗೂ ಗಾಯವಾಗಿಲ್ಲ. ಹಾಗಾಗಿದ್ದರೆ ಆನೆಗೆ ಶಿಕ್ಷೆ ನೀಡಲಾಗುತ್ತಿತ್ತು ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ಈ ಘಟನೆಗು ಮುನ್ನ ಆನೆ ಸೋಮಣ್ಣ ಕುಂಟುತ್ತಲೇ ದಸರಾದಲ್ಲಿ ಪಾಲ್ಗೊಂಡಿದ್ದ ವಿಡಿಯೋ ಅನ್ನು ರಮ್ಯಾ ಹಂಚಿಕೊಂಡಿದ್ದಾರೆ. ನೀವು ಸ್ಪಷ್ಟವಾಗಿ ನೋಡಬಹುದು. ಅವನು (ಸೋಮಣ್ಣ) ನೋವಿನಿಂದ ಬಳಲುತ್ತಿದ್ದಾನೆ. ಅವನನ್ನು ವೈದ್ಯಕೀಯ ಆರೈಕೆಗಾಗಿ ಕರೆದೊಯ್ಯಲು ಟ್ರಕ್ ವ್ಯವಸ್ಥೆ ಮಾಡಲು ಸಾಧ್ಯವಾಗಲಿಲ್ಲವೇ?. ಆರೈಕೆ ಬದಲು ದಸರಾದಲ್ಲಿ ಭಾಗಿಯಾಗುವಂತೆ ಮಾಡಲಾಗಿದೆ ಎಂದಿದ್ದಾರೆ.\

ಶಿಬಿರ ಆನೆಗಳನ್ನು ಮೆರವಣಿಗೆಗೆ ಅನುಮತಿಸಬೇಡಿ

ಅರಣ್ಯ ಸಚಿವ ರಾಮಲಿಂಗಾ ರೆಡ್ಡಿ ಅವರಿಗೆ ಟ್ಯಾಗ್ ಮಾಡಿರುವ ರಮ್ಯಾ, 'ನೀವು ಪ್ರಾಣಿಗಳನ್ನು ಎಷ್ಟು ಪ್ರೀತಿಸುತ್ತೀರಿ ಎಂದು ನನಗೆ ತಿಳಿದಿದೆ. ದಯವಿಟ್ಟು ಇದನ್ನು ತುರ್ತಾಗಿ ನೋಡಿ, ಏಕೆಂದರೆ ಸೋಮಣ್ಣನಿಗೆ ಈಗ ವೈದ್ಯಕೀಯ ಆರೈಕೆಯ ಅಗತ್ಯವಿದೆ. ಶಿಬಿರ ಆನೆಗಳನ್ನು ಇನ್ನು ಮುಂದೆ ಇಂತಹ ಮೆರವಣಿಗೆಗಳಿಗೆ ಅನುಮತಿಸಬಾರದು ಎಂದು ನಾನು ವಿನಂತಿಸುತ್ತೇನೆ. ಆನೆಗಳು ಮತ್ತು ಎಲ್ಲಾ ಪ್ರಾಣಿಗಳು ನಮ್ಮ ಸಹಾನುಭೂತಿ ಮತ್ತು ಸಹಾನುಭೂತಿಗೆ ಅರ್ಹವಾಗಿವೆ' ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.

ಈ ಮೂಲಕ ಶಿವಮೊಗ್ಗ ಘಟನೆಯಲ್ಲಿ ಆದ ಪ್ರಮಾದಕ್ಕೆ ಶಿಬಿರದ ಆನೆ, ಗಾಯಗೊಂಡಿತ್ತು. ಹೀಗಾಗಿ ದಸರಾ ಜಂಬೂ ಸವಾರಿಗೆ ಸೂಕ್ತವಲ್ಲದ ಆನೇ ತಂದಿದ್ದರಿಂದ ಈ ಅವಾಂತರವಾಗಿರಬಹುದು ಎಂದು ನಟಿ ರಮ್ಯಾ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+